ಆ. 23 ರಿಂದ , 9, 10, ಪಿಯು ತರಗತಿಗಳು ಆರಂಭ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಹೈಸ್ಕೂಲ್ ಮತ್ತು ಪಿಯು ಕಾಲೇಜು ಭೌತಿಕ ತರಬೇತಿಗಳನ್ನು ಆ. 23 ರಿಂದ ಪುನಾರಂಭಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸ್ಥಿತಿಗತಿ ಕುರಿತು ಕೋವಿಡ್ ಟಾಸ್ಕಫೋರ್ಸ್ ಸಮಿತಿ ಮತ್ತು ಆರೋಗ್ಯ ಹಾಗೂ ಇತರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆ. 23 ರಿಂದ ಎರಡು ಹಂತಗಳಲ್ಲಿ ಶಾಲೆ, ಕಾಲೇಜುಗಳನ್ನು ಪುನಾರಂಭಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ 9 ರಿಂದ 12ನೇ ತರಗತಿಯ ಶಾಲೆ ಮತ್ತು […]

ಮಹಾರಾಷ್ಟ್ರ, ಕೇರಳ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಪ್ಯೂ, ರಾತ್ರಿ ಕರ್ಪ್ಯೂ ಒಂದು ಗಂಟೆ ಹೆಚ್ಚಳ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಮಹಾರಾಷ್ಟ್ರ ಮತ್ತು ಕೇರಳ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೆ ನಿರ್ಧರಿಸಿದೆ. ಅಲ್ಲದೆ, ರಾಜ್ಯಾದ್ಯಂತ ಈ ಮುಂಚೆಯಿದ್ದ ರಾತ್ರಿ ಕರ್ಪ್ಯೂವನ್ನು ಒಂದು ಗಂಟೆ ಹೆಚ್ಚುಗೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಮುಖ್ಯಮಂತ್ರಿ ಬೆಂಗಳೂರಿನಲ್ಲಿ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು, ಕೋವಿಡ್ ಟಾಸ್ಕ್ ಫೋರ್ಸ್, ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ […]

ಕಾನೂನು ವಿವಿ ವಿಜ್ಞಾನೇಶ್ವರ ಅಧ್ಯಯನ ಪೀಠದಿಂದ ವೆಬಿನಾರ ಕಾರ್ಯಕ್ರಮ- ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಬೆಂಗಳೂರು: ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಜ್ಞಾನೇಶ್ವರ ಅಧ್ಯಯನ ಪೀಠದ ವತಿಯಿಂದ ಆಯೋಜಿಸಲಾದ ಕರ್ನಾಟಕದಲ್ಲಿ ಮಿತಾಕ್ಷರ, ವಚನ, ದಾಸ ಮತ್ತು ಜಾನಪದ ಸಾಹಿತ್ಯದಲ್ಲಿ ಕಾನೂನಿನ ಸಮಾಜಮುಖಿ ಮೌಲ್ಯಗಳು: ಒಂದು ಪರಿಶೋಧನೆ ವೆಬಿನಾರ್ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆನ್ ಲೈನ್ ಮೂಲಕ ಬೆಂಗಳೂರಿನಲ್ಲಿ ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಚಿವರಾದ ವಿ. ಸೋಮಣ್ಣ, ಡಾ. ಕೆ. ಸುಧಾಕರ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನ್ಯಾ. ಶಿವರಾಜ ಪಾಟೀಲ, ನ್ಯಾ. ಬಿ. ಎನ್. ಕೃಷ್ಣ, ಕಾನೂನು ವಿವಿ […]

ಬರದ ನಾಡಿನ ಭಗೀರಥನಿಗೆ 30ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ಸನ್ಮಾನ- ಏಕೆ ಗೊತ್ತಾ?

ವಿಜಯಪುರ: ಬರದ ನಾಡಿನ ಭಗೀರಥ ಎಂದೇ ಖ್ಯಾತರಾಗಿರುವ ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರನ್ನು 30ಕ್ಕೂ ಹೆಚ್ಚು ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದ್ದಾರೆ. ವಿಜಯಪುರ ನಗರದ ಜಾಲಹಳ್ಳಿ ಮಠದಲ್ಲಿ ಜಿಲ್ಲೆಯ ಸರ್ವ ಮಠಾಧೀಶರ ಪರವಾಗಿ ಎಂ. ಬಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಎಂ. ಬಿ. ಪಾಟೀಲ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಕೈಗೊಂಡ ನೀರಾವರಿ ಯೋಜನೆಗಳು ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸಿ ಕೋಟಿ ವೃಕ್ಷ ಅಭಿಯಾನ ಆರಂಭಿಸಿ ಬರದ ನಾಡಿನಲ್ಲಿ ಅರಣ್ಯೀಕರಣಕ್ಕೆ […]

ಆ. 14 ರಂದು ಲೋಕ್ ಅದಾಲತ್‌ನಲ್ಲಿ ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ- ವಿಜಯಪುರ ಜಿಲ್ಲಾ ಪ್ರಧಾನ, ಸತ್ರ ನ್ಯಾಯಾಧೀಶ ಎಸ್. ಎನ್. ನಾಯಕ

ವಿಜಯಪುರ: ವಿಜಯಪುರ ಜಿಲ್ಲಾದ್ಯಂತ ಆ. 14 ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ. ಕಕ್ಷಿದಾರರಿಗೆ ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ ಎಂದು ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಎಸ್. ಎನ್ ನಾಯಕ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪರ್ಯಾಯ ವ್ಯಾಜ್ಯಗಳ ಕೇಂದ್ರದ ಸಭಾಂಗಣದಲ್ಲಿ ಆ. 14 ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ. ಕಕ್ಷಿದಾರರು ಇದರ ಸಂಪೂರ್ಣ ಉಪಯೋಗ […]

ಕೊಳ್ಳೆಗಾಲ ಶಾಸಕ ಎನ್. ಮಹೇಶ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ- ಇನ್ನಷ್ಟು ನಾಯಕರು ಬಿಜೆಪೆ ಸೇರಲಿದ್ದಾರೆ ಎಂದ ಸಿಎಂ

ಬೆಂಗಳೂರು: ಬಿಎಸ್ಪಿಯಿಂದ ಉಚ್ಛಾಟಿತರಾಗಿರುವ ಕೊಳ್ಳೆಗಾಲ ಶಾಸಕ ಎನ್. ಮಹೇಶ ಅಂತೂ ಇಂತೂ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಬಿಎಸ್ಪಿಯಿಂದ ಎನ್. ಮಹೇಶ ಅವರನ್ನು ಉಚ್ಛಾಟಿಸಲಾಗಿತ್ತು. ಈಗ ಎನ್. ಮಹೇಶ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಅವರು ಎನ್. ಮಹೇಶ ಅವರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ […]

ಎರಡು ದಿನಗಳಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ, ಈಗ ಕೊರೊನಾ, ಪ್ರವಾಹ ನಿರ್ವಹಣಗೆ ಜಿಲ್ಲೆಗಳ ಉಸ್ತುವಾರಿ ಹಂಚಿಕೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ ಸಚಿವರ ಸಭೆ ನಡೆಸಿದ್ದಾರೆ. ಇಲ್ಲದೇ, ಈ ಸಚಿವರಿಗೆ ಎರಡು ದಿನಗಳಲ್ಲಿ ಖಾತೆ ಹಂಚಿಕೆ ಮಾಡುವುದಾಗಿ ತಿಳಿಸಿದ್ದಾರೆ. ಅದಕ್ಕೂ ಮುಂಚೆ, ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಮತ್ತು ಪ್ರವಾಹ ಪರಿಹಾರ ಕಾರ್ಯ ಕೈಗೊಳ್ಳಲು ಎಲ್ಲ 29 ಸಚಿವರಿಗೆ ನಾನಾ ಜಿಲ್ಲೆಗಳ ಉಸ್ತುವಾರಿ ವಹಿಸಿದ್ದಾರೆ. ನೂತನ ಸಚಿವರು ಮತ್ತು ಕೊರೊನಾ ಹಾಗೂ ಪ್ರವಾಹ ನಿಯಂತ್ರಣ ಮತ್ತು ಪರಿಹಾರ ಕಾರ್ಯ ಉಸ್ತುವಾರಿಗಳಿಗಾಗಿ ಅವರಿಗೆ ಹಂಚಿಕೆ ಮಾಡಲಾಗಿರುವ ಜಿಲ್ಲೆಗಳ ಮಾಹಿತಿ ಇಲ್ಲಿದೆ. […]

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ 29 ಸಚಿವರ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದಲ್ಲಿ 29 ಜನ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.  29 ಜನ ನೂತನ ಸಚಿವ ಪಟ್ಟಿ ಇಲ್ಲಿದೆ. ನೂತನ ಸಚಿವರ ಪಟ್ಟಿ 1. ಗೋವಿಂದ ಕಾರಜೋಳ 2. ಕೆ. ಎಸ್. ಈಶ್ವರಪ್ಪ 3. ಆರ್. ಅಶೋಕ 4. ಡಾ. ಅಶ್ವಥ ನಾರಾಯಣ 5. ಬಿ. ಶ್ರೀರಾಮುಲು 6. ವಿ. ಸೋಮಣ್ಣ 7. ಜೆ. ಸಿ. ಮಾಧುಸ್ವಾಮಿ […]

29 ಜನರಿಗೆ ಸಚಿವ ಸ್ಥಾನ, ಡಿಸಿಎಂ ಇಲ್ಲ, ವಿಜಯೇಂದ್ರಗೂ ಅವಕಾಶವಿಲ್ಲ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ 29 ಜನರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸಂಪುಟದಲ್ಲಿ ಡಿಸಿಎಂ ಇರುವುದಿಲ್ಲ. ಬಿ. ವೈ. ವಿಜಯೇಂದ್ರ ಅವರಿಗೂ ಸಚಿವ ಸ್ಥಾನ ಇಲ್ಲ ಎಂದು ಸ್ಪಷ್ಟಪಡಿಸಿದರು. ಈ ಬಾರಿ ಅನುಭವ ಹಾಗೂ ಹೊಸಶಕ್ತಿಗಳ ಸಮ್ಮಿಶ್ರ ಸಚಿವ ಸಂಪುಟ ಕಾರ್ಯ ನಿರ್ವಹಿಸಲಿದೆ. 7 ಜನ ಒಬಿಸಿ, 3 ಜನ ಎಸ್.ಸಿ., ಓರ್ವ ಎಸ್. […]

ಸಚಿವ ಸಂಪುಟ ಸೇರಲಿರುವ 26 ಶಾಸಕರ ಪಟ್ಟಿ ಇಲ್ಲಿದೆ

ಬೆಂಗಳೂರು: ರಾಜ್ಯ ಸಚುವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಮಾಣ ವಚನ ಸ್ವೀಲರಿಸಲು ಆಗಮಿಸುವಂತೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಸಕರಿ ಕರೆ ಮಾಡಿ ಆಹ್ವಾನಿಸಿದ್ದಾರೆ. ಸಿಎಂ ಕರೆ ಮಾಡಿ ತಿಳಿಸಿರುವ ಈವರೆಗಿನ 26 ಶಾಸಕರ ಪಟ್ಟಿ .ಎಸ್.ಈಶ್ವರಪ್ಪ ಆರ್.ಅಶೋಕ್ ಅರವಿಂದ ಲಿಂಬಾವಳಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಬಿ.ಶ್ರೀ ರಾಮುಲು ಉಮೇಶ್ ಕತ್ತಿ ಬಿ.ಸಿ.ಪಾಟೀಲ್ ಎಸ್.ಟಿ.ಸೋಮಶೇಖರ್ ಡಾ.ಕೆ.ಸುಧಾಕರ್ ಬೈರತಿ‌ ಬಸವರಾಜ ಮುರುಗೇಶ್ ನಿರಾಣಿ ಶಿವರಾಂ ಹೆಬ್ಬಾರ್ ಶಶಿಕಲಾ ಜೊಲ್ಲೆ ಕೆ.ಸಿ ನಾರಾಯಣಗೌಡ ಸುನಿಲ್ ಕುಮಾರ್ ಅರಗ ಜ್ಞಾನೇಂದ್ರ ಗೋವಿಂದ್ […]