2ಎ ಮೀಸಲಾತಿ ಸಿಗುವವರೆಗೂ ವಿರಮಿಸುವುದಿಲ್ಲ- ಕೂಡಲ ಸಂಗಮ ಸ್ವಾಮೀಜಿ- ಝಳಕಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಿಂಗಪೂಜೆ ನಡೆಸಿ ಒತ್ತಾಯ
ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಮುಂಬರುವ ಲೋಕಸಭೆ ಚುನಾವಣೆಯೊಳಗೆ ಮೀಸಲಾತಿ ಘೋಷಿಸಿ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಸಮಾಜದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರಕಾರಕ್ಕೆ ಗಡುವು ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52ರಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡ ಅವರು, ಇಷ್ಟಲಿಂಗ ಪೂಜೆ ನೆರವೇರಿಸಿದ ಬಳಿಕ ಗ್ರಾಮದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. […]
ಗುಮ್ಮಟ ನಗರಿಯಲ್ಲಿ ಶೋ ರೋಂ ಮೇಲ್ಛಾವಣಿ ಮೇಲೆ 102 ಕಿ. ವ್ಯಾ. ಸೋಲಾರ್ ವಿದ್ಯುತ್ ಉತ್ಪಾದನೆ- ಎಲ್ಲಿ, ಅದರ ವಿಶೇಷತೆಗಳೇನು ಗೊತ್ತಾ?
ವಿಜಯಪುರ: ಬಸವ ನಾಡಿನಲ್ಲಿ ಇದೇ ಮೊದಲ ಬಾರಿಗೆ ಅಟೊ ಮೊಬೈಲ್ ಶೋ ರೂಂ ಒಂದು ಮೇಲ್ಛಾವಣಿ ಮೇಲೆ ಪ್ರತಿನಿತ್ಯ 102 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಸ್ವಾವಲಂಬಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ವಿಜಯಪುರ ನಗರದ ಆಲಮಟ್ಟಿ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರಲ್ಲಿರುವ ನಾರಾಯಣ ಹುಂಡೈ ಕಾರ್ಸ್ ಪ್ರೈವೆಲದ ಲಿಮಿಟೆಡ್ ಮಾಲಿಕರಾದ ಗೋವಿಂದ ಜೋಶಿ ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬಿಯಾಗಲು ಬೆಂಗಳೂರಿನ ಓ ಆರ್ ಬಿ ಎನರ್ಜಿ ಕಂಪನಿಯಿಂದ […]
ಆವಾಸ್ ಯೋಜನೆ ಅನುದಾನ ಬಿಡುಗಡೆ- ಜಿಪಿಎಸ್ ಮಾಡಿಸಲು ಅಧಿಕಾರಿಗಳಿಗೆ ಎಂ.ಎಲ್ಸಿ ಸುನೀಲಗೌಡ ಬಿ. ಪಾಟೀಲ ಸೂಚನೆ
ವಿಜಯಪುರ: ಬಬಲೇಶ್ವರ ಹಾಗೂ ತಿಕೋಟಾ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ 2021-22 ನೇ ಸಾಲಿನಲ್ಲಿ ವಸತಿ ರಹಿತರಿಗೆ ಮನೆ ಕಟ್ಟಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಆದ್ದರಿಂದ ಕೂಡಲೇ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಈ ಮನೆಗಳ ಜಿ.ಪಿ.ಎಸ್ ಮಾಡಿ, ಫಲಾನುಭವಿಗಳು ಮನೆಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಬಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತಿಕೋಟಾ ತಾಲೂಕಿನ ಅರಕೇರಿ, ಬಾಬಾನಗರ, ಬರಟಗಿ, ಬಿಜ್ಜರಗಿ, ಘೋಣಸಗಿ, ಹೊನವಾಡ, ಜಾಲಗೇರಿ, ಕನಮಡಿ, ಕೋಟ್ಯಾಳ, […]
ಬಡ ವಿದ್ಯಾರ್ಥಿಗಳು ವೈದ್ಯರಾಗುವ ಕನಸು ನನಸು ಮಾಡಲು ಸಹಾಯ ಹಸ್ತ ಚಾಚಿದ ಸಚಿವ ಎಂ. ಬಿ. ಪಾಟೀಲ
ವಿಜಯಪುರ: ನೀಟ್ ಪಾಸಾಗಿ ವೈದ್ಯಕೀಯ ಸೀಟು ಸಿಕ್ಕರೂ ಆರ್ಥಿಕ ಸಮಸ್ಯೆಯಿಂದಾಗಿ ಪರದಾಡುತ್ತಿದ್ದ ಇಬ್ಬರು ಬಡ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್. ಪ್ರವೇಶ ಪಡೆಯಲು ನೆರವಾಗುವ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ಸಹಾಯ ಹಸ್ತ ಚಾಚಿದ್ದಾರೆ. ಬಬಲೇಶ್ವರ ತಾಲೂಕಿನ ಸಂಗಾಪೂರ ಎಸ್. ಎಚ್. ಮತ್ತು ವಿಜಯಪುರ ತಾಲೂಕಿನ ಬರಟಗಿ ಗ್ರಾಮದ ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣ ವೆಚ್ಚವನ್ನು ಬಿ. ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಸಚಿವ ಎಂ. […]
ಮಾಧ್ಯಮಗಳಲ್ಲಿರುವ ಹತ್ತಾರು ಅವಕಾಶಗಳನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು- ಡಾ. ವಿಲಾಸ ನಾಂದೋಡಕರ
ವಿಜಯಪುರ: ಮಾಧ್ಯಮ ಒಂದು ಆಸಕ್ತಿದಾಯಕ ಕ್ಷೇತ್ರವಾಗಿದ್ದು, ಹತ್ತು-ಹಲವಾರು ಅವಕಾಶಗಳಿದ್ದು ನೀವೆಲ್ಲ ವಿದ್ಯಾರ್ಥಿಗಳು ಅದರ ಸದುಪಯೋಗಪಡೆಸಿಕೊಳ್ಳಬೇಕು ಎಂದು ಬೆಂಗಳೂರಿನ ಟಿವಿ9 ಕನ್ನಡ ಸುದ್ದಿವಾಹಿನಿಯ ಇನ್‌ಪುಟ್ ಮುಖ್ಯಸ್ಥ ಮತ್ತು ಮುಖ್ಯ ಕಾರ್ಯ ನಿರ್ವಾಹಕ ನಿರ್ಮಾಪಕ ಡಾ. ವಿಲಾಸ ನಾಂದೋಡ್ಕರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ವಿಜಯಪುರ ನಗರದ ಹೊರ ವಲಯದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮಹಿಳಾ ಮಿಡಿಯಾ ಕ್ಲಬ್ ಮತ್ತು ಐಎಎಸ್ ಅಧಿಕಾರಿ ಗಂಗೂಬಾಯಿ ಮಾನಕರ ಅವರು ತಮ್ಮ ಅಜ್ಜ ಮಲ್ಲಪ್ಪ […]
ನಾಟಕ ಮಾಡುವಾಗ ಕುಸಿದು ಬಿದ್ದ ಯುವ ಪೋಸ್ಟಮ್ಯಾನ್ ಸಾವು- ಕೊಟ್ಯಾಳದಲ್ಲೊಂದು ಹೃದಯ ವಿದ್ರಾವಕ ಘಟನೆ
ವಿಜಯಪುರ: ಊರಿನ ಜನರೆಲ್ಲ ಲೋಕಲ್ ನಾಟಕ ನೋಡುತ್ತ ಮನರಂಜನೆಯಲ್ಲಿದ್ದರು. ಮೇಲಾಗಿ ಗ್ರಾಮದ ಮುಕ್ತಾಂಕಾರ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಈ ನಾಟಕವನ್ನು ಸ್ಥಳೀಯವಾಗಿಯೇ ರಚಿಸಲಾಗಿತ್ತು. ಗ್ರಾಮದ ಯುವಕರೂ ನಾನಾ ಪಾತ್ರಗಳಲ್ಲಿ ನಟಿಸುತ್ತಿದ್ದರು. ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ಹೆಸರಿನ ಈ ನಾಟಕದ ನಾನಾ ದೃಷ್ಯಗಳು ಬಿರುಸಿನಿಂದ ಸಾಗಿದ್ದವು. ಮಧ್ಯರಾತ್ರಿ ಸುಮಾರು 12.30ರ ಹೊತ್ತಿಗೆ ಹಾಸ್ಯ ಕಲಾವಿದ ಬಂದು ಡ್ತಾನ್ಸ್ ಮಾಡುತ್ತಿದ್ದಾಗ ಎಲ್ಲರೂ ಕುತೂಹಲದಿಂದ ನಾಟಕ ವೀಕ್ಷಿಸುತ್ತಿದ್ದರು. ಆಗ, ಹಾಸ್ಯ ಕಲಾವಿದನ ಪಾತ್ರದಾರಿ ಕೈ ಮೇಲೆತ್ತಿ ಹಿಂಬದಿಯಿಂದ ದಿಢೀರಾಗಿ […]
ಗಣೇಶ ಚತುರ್ಥಿಗೆ ಅನುಮತಿ ಬೇಕಿಲ್ಲ- ಸನಾತನ ಧರ್ಮದ ಬಗ್ಗೆ ಸ್ವಾಮೀಜಿಗಳೂ ಧ್ವನಿ ಎತ್ತಲಿ- ಶಾಸಕ ಯತ್ನಾಳ
ವಿಜಯಪುರ: ಗಣೇಶ ಚತುರ್ಥಿಗೆ ಪೊಲೀಸರಿಂದ ಯಾವುದೇ ಅನುಮತಿ ಬೇಕಿಲ್ಲ. ಪೊಲೀಸರು ಒತ್ತಾಯ ಮಾಡಿದರೆ ಹೋರಾಟ ಮಾಡ್ತುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಠಾಣೆಗೆ ಶಾಂತಿ ಸಭೆಗೆ ಯಾರೂ ಹೋಗುವ ಅಗತ್ಯವಿಲ್ಲ. ಬೇರೆ ಧರ್ಮದ ಹಬ್ಬ ಇದ್ದಾಗ ಯಾವಾಗ ಶಾಂತಿ ಸಭೆ ಮಾಡುತ್ತಾರೆ. ನಗರದಲ್ಲಿ ಯಾರು ಗಣೇಶ ಪ್ರತಿಷ್ಠಾನಕ್ಕೆ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಪೊಲೀಸರೇ ನಿಮ್ಮ ಮಂಡಳಿ ಬಳಿ ಆಗಮಿಸಿ ಮಾಹಿತಿ ಕಲೆ ಹಾಕುತ್ತಾರೆ. ಅನುಮತಿ […]
ಗ್ರಾಮ ಲೆಕ್ಕಿಗರು ಪಂಚಾಯಿತಿಗಳಲ್ಲಿಯೇ ಕುಳಿತು ಕಾರ್ಯ ನಿರ್ವಹಿಸಬೇಕು: ಸಿಎಂ ಸಿದ್ಧರಾಮಯ್ಯ ಸೂಚನೆ
ಬೆಂಗಳೂರು : ಗ್ರಾಮ ಲೆಕ್ಕಿಗರು ಜನರ ಕೈಗೇ ಸಿಗುತ್ತಿಲ್ಲ. ಅವರು ಎಲ್ಲಿರುತ್ತಾರೆ ಎಂದು ಹುಡುಕಿಕೊಂಡು ಹೋಗುವುದೇ ಜನರಿಗೆ ಒಂದು ತಲೆ ನೋವಾಗಿದೆ. ಆದ್ದರಿಂದ ಗ್ರಾಮ ಲೆಕ್ಕಿಗರು ಗ್ರಾಮ ಪಂಚಾಯಿತಿಗಳಲ್ಲಿಯೇ ಕುಳಿತು ಕೆಲಸ ಮಾಡುವಂತಾಗಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಈ ರೀತಿ ಸೂಚನೆ ನೀಡಿದರು. ಗ್ರಾಮ ಲೆಕ್ಕಿಗರನ್ನು ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವಂತೆ ಮತ್ತು ಅವರಿಗೆ ಗ್ರಾಮ ಪಂಚಾಯಿತಿಗಳಲ್ಲಿಯೇ […]
ಶಿಕ್ಷಕರ ಗಳಿಕೆ ರಜೆ ಹೆಚ್ಚಿಸಿ ತಾರತಮ್ಯ ನಿವಾರಿಸಿ- 7ನೇ ವೇತನ ಆಯೋಗಕ್ಕೆ ಜಿಓಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ ಬ. ಕೊಣದಿ ಮನವಿ
ವಿಜಯಪುರ: ಶಿಕ್ಷಕರ ಹಾಗೂ ಸರಕಾರಿ ನೌಕರರ ಗಳಿಕೆ ರಜೆ ನಿಗದಿಯಲ್ಲಿ ತಾರತಮ್ಯವಾಗುತ್ತಿದ್ದು, ಶಿಕ್ಷಕರ ಗಳಿಕೆ ರಜೆ ಹೆಚ್ಚಿಸಿ ನ್ಯಾಯ ಒದಗಿಸುವಂತೆ ವಿಜಯಪುರ ಸರಕಾರಿ ನೌಕರರ ಸಹಕಾರಿ (ಜಿಓಸಿಸಿ) ಬ್ಯಾಂಕಿನ ನಿರ್ದೇಶಕ ಹಣಮಂತ ಬ. ಕೊಣದಿ 7ನೇ ವೇತನ ಆಯೋಗಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಶಿಕ್ಷಕರಿಗೆ 143 ರಜಾ ದಿನಗಳನ್ನು ನಿಗದಿ ಮಾಡಲಾಗಿದೆ. ಆದರೆ, ಸರಕಾರಿ ನೌಕರರಿಗೆ 150 ರಜಾ ದಿನಗಳನ್ನು ನಿಡಲಾಗಿದೆ. ಶಿಕ್ಷಕರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆ […]
ವಿಜಯಪುರ ನೂತನ ಎಸ್ಪಿಯಾಗಿ ಸೋನಾವಣೆ ರಿಷಿಕೇಶ ಭಗವಾನ ವರ್ಗಾವಣೆ
ವಿಜಯಪುರ: ವಿಜಯಪುರ ಜಿಲ್ಲಾ ನೂತನ ಎಸ್ಪಿಯಾಗಿ 2014ರ ಬ್ಯಾಚಿನ ಐಪಿಎಸ್ ಅಧಿಕಾರಿ ಸೋನಾವಣೆ ರಿಷಿಕೇಶ ಭಗವಾನ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿದೆ. ಇಂಟಲಿಜನ್ಸ್ ವಿಭಾಗದ ಎಸ್ಪಿಯಾಗಿದ್ದ ಸೋನಾವಣೆ ರಿಷಿಕೇಶ ಭಗವಾನ ಅವರನ್ನು ರಾಜ್ಯ ಸರಕಾರ ವಿಜಯಪುರ ಎಸ್ಪಿ ಹುದ್ದೆಗೆ ವರ್ಗಾವಣೆ ಮಾಡಿದೆ. ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ವಿಜಯಪುರ ಎಸ್ಪಿಯಾಗಿದ್ದ ಎಚ್. ಡಿ. ಆನಂದಕುಮಾರ ಅವರನ್ನು ನಾಗರಿಕ ಹಕ್ಕುಗಳು ಮತ್ತು ಜಾರಿ ನಿರ್ದೇಶನಾಲಯದ ಎಸ್ಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.