ಬೆಂಗಳೂರಿನಲ್ಲಿ ಐಟಿ ಧಾಳಿ ಪ್ರಕರಣ- ಗುತ್ತಿಗೆದಾರರ ಬಳಿ ಸಿಕ್ಕ ಹಣ ಬಿಜೆಪಿಯ 40% ಕಮಿಷನ್ ಹಣವಿರಬೇಕು- ಎಂ. ಬಿ. ಪಾಟೀಲ ವ್ಯಂಗ್ಯ

ವಿಜಯಪುರ: ಬೆಂಗಳೂರಿನಲ್ಲಿ ಗುತ್ತಿಗೆದಾರರ ಮೇಲೆ ನಡೆದ ಐಟಿ ಧಾಳಿಯಲ್ಲಿ ಸಿಕ್ಕ ಹಣ ಬಿಜೆಪಿಯವರು 40% ಕಮಿಷನ್ ಸಂಗ್ರಹದ ಹಣವಿರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವ್ಯಂಗ್ಯವಾಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಣ ಕಾಂಗ್ರೆಸ್ ಪಂಚರಾಜ್ಯ ಚುನಾವಣೆಗೆ ಬಳಸಲು ಸಂಗ್ರಹಿಸಿ ಇಡಲಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ಐಟಿ ದಾಳಿಯಲ್ಲಿ ಸಿಕ್ಕ ಹಣ […]

ಅಸಮರ್ಪಕ ವಿದ್ಯುತ್ ಪೂರೈಕೆ, ಮಹಿಷಿ ದಸರಾ ವಿಚಾರ- ರಾಜ್ಯ ಸರಕಾರದ ವಿರುದ್ಧ ಮಾಜಿ ಸಚಿವ ಎಸ್. ಎ. ರಾಮದಾಸ ವಾಗ್ದಾಳಿ

ವಿಜಯಪುರ: ಸರಕಾರದ ಮುಂದಾಲೋಚನೆ ಕೊರತೆಯಿಂದಾಗಿ ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ ಎಂದು ಮಾಜಿ ಸಚಿವ ಎಸ್. ಎ. ರಾಮದಾಸ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಡ್ ಶೆಡ್ಡಿಂಗ್ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯೆ ನೀಡಿದರು. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದೇಶದಲ್ಲಿ ಕರ್ನಾಟಕದಲ್ಲಿಯೇ ಅತಿಹೆಚ್ಚು ಕರೆಂಟ್ ಉತ್ಪಾದನೆ ಆಗುತ್ತಿತ್ತು ಎಂದು ಹೇಳಿದ ಅವರು, ಆದರೆ ಈ ಸರಕಾರ ಬಂದ ಮೇಲೆ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ.  ಇದು ದುರ್ದೈವದ […]

ಸಿ ಎಂ ಇಬ್ರಾಹಿಂ ಜೆಡಿಎಸ್ ಬಿಡಲ್ಲ- ಜಿ. ಟಿ. ದೇವೇಗೌಡ

ವಿಜಯಪುರ: ಜೆ. ಡಿ. ಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಜೆಡಿಎಸ್ ತೊರೆಯುವುದಿಲ್ಲ ಎಂದು ಜಾತ್ಯತೀತ ಜನತಾ ದಳದ ಕೋರ್ ಕಮಿಟಿ ಅಧ್ಯಕ್ಷ ಜಿ. ಟಿ. ದೇವೇಗೌಡ ಹೇಳಿದ್ದಾರೆ. ವಿಜಯಪುರ ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೋಳ್ಳಲು ಆಗಮಿಸಿದ್ದ ಜೆಡಿಎಸ್ ಹಿರಿಯ ಮುಖಂಡರೂ ಆಗಿರುವ ಜಿ. ಟಿ. ದೇವೇಗೌಡ, ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಬಿಜೆಪಿ ಜೆಡಿಎಸ್ ಮೈತ್ರಿಯ ಕಾರಣದಿಂದ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಸಿ. ಎಂ. ಇಬ್ರಾಹಿಂ ಪಕ್ಷ […]

ಸಚಿವ ಎಂ. ಬಿ. ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ 7 ಜನ ಕಾರ್ಪೋರೇಟರ್ ಗಳು- ವಿಜಯಪುರ ಮಹಾನಗರಪಾಲಿಕೆಯಲ್ಲಿ ಈಗ ಕೈಗೆ ಬಹುಮತ

ಬೆಂಗಳೂರು: ವಿಜಯಪುರ ಮಹಾನಗರ ಪಾಲಿಕೆಯ 7 ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಬೆಂಗಳೂರಿನ ನಿವಾಸದಲ್ಲಿ ಬುಧವಾರ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯರಾದ ಅಶೋಕ ನ್ಯಾಮಗೌಡ, ವಿಮಲಾ ರಫೀಕ್ ಕಾನೆ, ಅಲ್ತಾಫ್ ಇಟಗಿ, ಜೆಡಿಎಸ್ ಸದಸ್ಯೆ ಸುಮಿತ್ರಾ ರಾಜು ಜಾದವ, ಎಂಐಎಂಐಎಂ ನ ಕೈಸರ್ ಇನಾಮದಾರ ಮತ್ತು ಸೂಫಿಯಾ ವಾಟಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪಾಲಿಕೆಯ ಮತ್ತೋರ್ವ ಸದಸ್ಯೆ ಕೂಡ ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದಾರೆ. ಆದರೆ, ಅವರು ಕಾರಣಾಂತರಗಳಿಂದ ಬಂದಿರಲಿಲ್ಲ. ಒಟ್ಟು […]

ಶಾಮನೂರು ಸಿಎಂ ಜೊತೆ ಮಾತನಾಡಬೇಕಿತ್ತು- ಇಬ್ರಾಹಿಂ ಕೈ ಸೇರ್ಪಡೆಯಾದರೆ ಸ್ವಾಗತ- ಸಚಿವ ಶಿವಾನಂದ ಎಸ್. ಪಾಟೀಲ

ವಿಜಯಪುರ: ಶಾಮನೂರು ಶಿವಶಂಕರಪ್ಪ ಪಕ್ಷದಲ್ಲಿ ಹಿರಿಯರಿದ್ದು ಏನೇ ವಿಷಯಗಳಿದ್ದರೂ ಮುಖ್ಯಮಂತ್ರಿಗಳಿಗೆ ಸಲಹೆ ಕೊಡಬಹುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಎ ಪಿ ಎಂ ಸಿ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಿಂಗಾಯತರಿಗೆ ಮಾನ್ಯತೆ ಸಿಗದ ಹಿನ್ನೆಲೆ ಶಾಮನೂರು ಶಿವಶಂಕರಪ್ಪ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು. ಶಾಮನೂರು ಶಿವಶಂಕರಪ್ಪ ಅವರು ಮುಖ್ಯಮಂತ್ರಿ ಅವರಿಗಿಂತಲೂ ಹಿರಿಯರಿದ್ದಾರೆ.  ಶಾಮನೂರು ಶಿವಶಂಕರಪ್ಪ ಅವರು ಸಿಎಂ ಗೆ ಸಲಹೆ ಕೊಡಬಹುದಾಗಿತ್ತು.  […]

ಎಲ್ಲ ಜಾತಿ, ಜನಾಂಗವನ್ನು ಕಾಂಗ್ರೆಸ್ ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷ- ಡಿಕೆಶಿ ಯಾಕೆ ಪತ್ರ ಬರೆದಿದ್ದಾರೆ ಗೊತ್ತಿಲ್ಲ- ಸಚಿವ ಸಂತೋಷ ಲಾಡ

ವಿಜಯಪುರ: ಕಾಂಗ್ರೆಸ್ ಎಲ್ಲ ಜಾತಿ ಮತ್ತು ಜನಾಗಂದವರನ್ನು ಸಮಾನವಾಗಿ ಒಟ್ಟಿಗೆ ಕರೆದುಕೊಂಡುವ ಹೋಗುವ ಧ್ಯೇಯ ಹೊಂದಿದೆ.  ಶಾಮನೂರು ಶಿವಶಂಕರಪ್ಪ ಯಾಕೆ ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲ ಜಾತಿಯ ಜನಾಂಗವನ್ನು ಸರಿಯಾಗಿ ಕರೆದುಕೊಂಡು ಹೋಗುವುದು ನಮ್ಮ ಕಾಂಗ್ರೆಸ್ ಸರಕಾರದ ಧ್ಯೇಯವಾಗಿದೆ ಎಂದು ಹೇಳಿದರು. ಲಿಂಗಾಯತರಿಗೆ ಸ್ಥಾನ‌ಮಾನ ಸಿಗದ ಬಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ […]

ಬ್ಯಾನರ್ ಪ್ರಕರಣ ಸಿಬಿಐಗೆ ವಹಿಸಲಿ- ಖೊಟ್ಟಿ ಮತದಾನದ ಕುರಿತು ಸಿದ್ದೇಶ್ವರ ದೇವಸ್ಥಾನದಲ್ಲಿ ಶಾಸಕರು ಪ್ರಮಾಣ ಮಾಡಲಿ- ಅಬ್ದುಲ್ ಹಮೀದ್ ಮುಶ್ರಿಫ್

ವಿಜಯಪುರ: ನಗರದಲ್ಲಿ ಇತ್ತೀಚೆಗೆ ಬ್ಯಾನರ್ ಹರಿದ ಪ್ರಕರಣ ಮತ್ತು ವಿಧಾನಸಭೆ ಚುನಾವಣೆ  ಸಂದರ್ಭದಲ್ಲಿ ನಡೆದ ಖೊಟ್ಟಿ ಮತದಾನ ಪ್ರಕರಣಗಳನ್ನು ಸಿಬಿಐ ತನಿಖೆ ಮಾಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ನಗರ ಶಾಸಕರು ಅನಾವಶ್ಯಕವಾಗಿ ಪಾಕಿಸ್ತಾನ ಹೆಸರಿನ ಮೇಲೆ ರಾಜಕೀಯ ಮಾಡುತ್ತಿದ್ದಾರೆ.  ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಚಿಂಚೋಳಿ, ಬೀದರ, ನಾಗಠಾಣ, ಸೇಡಂ ಸೇರಿದಂತೆ ಹಲವಾರು ಕಡೆಯಿಂದ ಜನರನ್ನು ಕರೆಯಿಸಿ ಖೊಟ್ಟಿ ಮತದಾನ ಮಾಡಿಸಿ ಗೆದ್ದಿದ್ದಾರೆ.  ಈ ಕುರಿತು ಸಾಕ್ಷಿ […]

ರಾಜ್ಯ ಸರಕಾರ ಹಿಂದೂ, ಲಿಂಗಾಯಿತ ವಿರೋಧಿ ನೀತಿ ಅನುಸರಿಸುತ್ತಿದೆ- ಶೆಟ್ಟರ, ಸವದಿಯಿಂದ ಬಿಜೆಪಿಗೆ ಹಿನ್ನೆಡೆಯಾಗಿಲ್ಲ- ಯತ್ನಾಳ

ವಿಜಯಪುರ: ರಾಜ್ಯದಲ್ಲಿ ಹಿಂದೂ ವಿರೋಧಿ ಮತ್ತು ಲಿಂಗಾಯಿತ ವಿರೋಧಿ ಸರಕಾರ ಅಧಿಕಾರಿದಲ್ಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನಲ್ಲಿ ಲಿಂಗಾಯಿತ ನಾಯಕರು ಮತ್ತು ಅಧಿಕಾರಿಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದು ಮಾಜಿ ಸಚಿವ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆಗೆ ಯತ್ನಾಳ ಬೆಂಬಲ ವ್ಯಕ್ತಪಡಿಸಿದರು. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ.  ಆದರೆ ನಾನು […]

ಕಾವೇರಿ ವಿವಾದ ಉಲ್ಬಣಿಸಲು ಡಿಸಿಎಂ ಕಾರಣ- ಚಿತ್ರ ನಟರು ಹೋರಾಟಕ್ಕೆ ಧುಮುಕಲಿ- ಜೆಡಿಎಸ್ ಜೊತೆ ಮೈತ್ರಿ ಸ್ವಾಗತಾರ್ಹ- ಯತ್ನಾಳ

ವಿಜಯಪುರ: ರಾಜ್ಯದಲ್ಲಿ ಕಾವೇರಿ ವಿವಾದ ಉಲ್ಪಣಿಸಲು ಜಲಸಂಪನ್ಮೂಲ ಸಚಿವ ಮತ್ತು ಡಿಸಿಎಂ ನೇರ ಕಾರಣ.  ಸಿನೇಮಾ ನಟರು ಸ್ವಯಂ ಪ್ರೇರಿತರಾಗಿ ಕಾವೇರಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು.  ಸಂಘಟನೆಗಳ ಹೋರಾಟಗಾರರು ತಮ್ಮ ವೈಯಕ್ತಿಕ ಪ್ರತಿಷ್ಠೆ ಬಿಟ್ಟು ಒಂದಾಗಿ ಹೋರಾಟ ಮಾಡಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.  ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನಲ್ಲಿ ರಾಜ್ಯದ ಸರಕಾರ ಸರಿಯಾಗಿ ವಾದ ಮಂಡಿಸದ ಪರಿಣಾಮ ಇಂದು ಕಾವೇರಿ ವಿಷಯದಲ್ಲಿ ಕರ್ನಾಟಕದಲ್ಲಿ ಭಯಾನಕ ಸ್ಥಿತಿ ಉಂಟಾಗಿದೆ.  ರಾಜ್ಯದ ಜಲಸಂಪನ್ಮೂಲ […]

ರಾಜ್ಯಕ್ಕೆ ಮೂರು ಜನ ಡಿಸಿಎಂ ಅಗತ್ಯವಿಲ್ಲ- ಸಿಎಂ, ಡಿಸಿಎಂ ಸಮರ್ಥರಿದ್ದಾರೆ- ಸಚಿವ ಶಿವಾನಂದ ಎಸ್. ಪಾಟೀಲ

ವಿಜಯಪುರ: ರಾಜ್ಯಕ್ಕೆ ಮೂರು ಡಿಸಿಎಂ ಗಳ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಯೂ ಸಮರ್ಥರಿದ್ದಾರೆ. ಉಪಮುಖ್ಯಮಂತ್ರಿಯೂ ಸಮರ್ಥರಿದ್ದಾರೆ. ಅವಶ್ಯಕತೆಗೆ ಅನುಗುಣವಾಗಿ ಹೈಕಮಾಂಡ್ ನಿರ್ಣಯ ಮಾಡಿದರೆ ಅದು ಹೈಕಮಾಂಡಿಗೆ ಬಿಟ್ಟಿದ್ದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಎ. ಪಿ. ಎಂ. ಸಿ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಧ್ಯಕ್ಕೆ ಹೊಸದಾಗಿ ಡಿಸಿಎಂ ಗಳ ಅವಶ್ಯಕತೆ ಇಲ್ಲ. ಐದರಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ ಎಂದು ಅವರು ಹೇಳಿದರು. ಸಾಮಾಜಿಕ ನ್ಯಾಯ […]