ಮೀಸಲಾತಿ ಹೋರಾಟಕ್ಕೆ ಯತ್ನಾಳ ಸಾಕಷ್ಟು ಕೊಡುಗೆ ನೀಡಿದ್ದಾರೆ- ಲಿಂಗಾಯಿತರಿಗೆ ಡಿಸಿಎಂ ನೀಡುವುದಾದರೆ ಪಂಚಮಸಾಲಿ ಸಮುದಾಯಕ್ಕ ಕೊಡಲಿ- ಕೂಡಲ ಸಂಗಮ ಸ್ವಾಮೀಜಿ
ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಒದಗಿಸಲು ವಿಷಯದಲ್ಲಿ ಶಾಸಕ ಬಸನಗೌಡ ಪಾಟೀಲ ತಮ್ಮ ಸರಕಾರದಲ್ಲಿ ನ್ಯಾಯ ಒದಗಿಸಿದ್ದಾರೆ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯತ್ನಾಳ ಅವರು ತಮ್ಮ ಸರಕಾರದ ಅವಧಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರಿಗೆ ನ್ಯಾಯ ಕೊಡಿಸಿದ್ದಾರೆ ಎಂದು ಹೇಳಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಮ್ಮ ಸರಕಾರದ ಅವಧಿಯಲ್ಲಿ ತಮ್ಮ ಸಮಾಜಕ್ಕೆ ಏನು ಕೊಡುಗೆ […]
ನಾನು ಯತ್ನಾಳ ಸ್ನೇಹಿತರಿಬ್ಬರೂ ಒಂದೇ ಇದ್ದೇವೆ- ಸೋಷಿಯಲ್ ಮೀಡಿಯಾದಲ್ಲಿ ತೇಜೋವಧೆ ಸಲ್ಲದು- ಸಂಸದ ರಮೇಶ ಜಿಗಜಿಣಗಿ
ವಿಜಯಪುರ: ಯತ್ನಾಳ ಮತ್ತು ನಾನು ಸ್ನೇಹಿತರು. ಇಂದು ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿಯೇ ಕುಳಿತಿದ್ದೇವೆ. ನಾವೆಲ್ಲ ಒಂದೇ ಇದ್ದೇವೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಬಿಜೆಪಿ ಜಿಲ್ಲಾ ಮಟ್ಟದ ಶಂಖನಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ತಾವು ಇಬ್ಬರೂ ಕಾರ್ಯಕ್ರಮದಲ್ಲಿ ಅಕ್ಕಪಕ್ಕದಲ್ಲಿಯೇ ಕುಳಿತಿದ್ದರೂ ಯಾಕೆ ಮಾತನಾಡಿಲ್ಲ? ಭಿನ್ನಮತ ಮುಂದುವರೆದಿದೆಯೇ ಎಂದು ಪತ್ರಕರ್ತರು ಕೇಳಿದಾಗ ಸಂಸದ ರಮೇಶ ಜಿಗಜಿಣಗಿ ಜಾಣತನದ ಉತ್ತರ ನೀಡಿದರು. ನಾವಿಬ್ಬರೂ […]
ಬಿಜೆಪಿ ಮುಳುಗಿದ ಹಡಗು- ಕರ್ನಾಟಕದಲ್ಲಿ ಗಂಟುಮೂಟೆ ಕಟ್ಟುವ ಸಮಯ ಬರಲಿದೆ- ಸಚಿವ ಎಂ ಬಿ ಪಾಟೀಲ ವಾಗ್ದಾಳಿ
ವಿಜಯಪುರ: ಬಿಜೆಪಿ ಮುಳುಗಿದ ಹಡಗು. ಕರ್ನಾಟಕದಲ್ಲಿ ಗಂಟುಮೂಟೆ ಕಟ್ಟುವ ಸಮಯ ಬರಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಸೈನಿಕ ಶಾಲೆಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಚೈತ್ರಾ ಕುಂದಾಪುರ ಅವರು ಬಿಜೆಪಿ ಟೆಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿರುವ ಆರೋಪ ಮತ್ತು ಇಂಥ ಪ್ರಕರಣಗಳಿಂದ ಉಂಟಾಗುತ್ತಿರುವ ವಿದ್ಯಮಾನಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ […]
ಸನಾತನ ಧರ್ಮ ಉಳಿದರೆ ಮಾತ್ರ ಹಿಂದುಗಳು, ದಲಿತರು, ಸಂವಿಧಾನ ಉಳಿಯಲು ಸಾಧ್ಯ- ಶಾಸಕ ಯತ್ನಾಳ
ವಿಜಯಪುರ: ಸನಾತನ ಧರ್ಮ ಉಳಿದರೆ ಮಾತ್ರ ಹಿಂದುಗಳು, ದಲಿತರು ಮತ್ತು ಸಂವಿಧಾನ ಉಳಿಯಲು ಸಾಧ್ಯ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಶಂಖನಾದ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಕರ್ನಾಟಕದ ಸಿಎಂ ಟ್ವೀಟ್ ಮಾಡಿ, ಮನುವಾದ ಮತ್ತು ಮನುಸ್ಮೃತಿ ಚರ್ಚೆ ಮಾಡುತ್ತಾರೆ. ನಾವು ಎಂದಾದರೂ ಮನುಸ್ಮೃತಿ ಬಗ್ಗೆ ಚರ್ಚೆ ಮಾಡಿದ್ದೇವಾ? ಸಂವಿಧಾನ ಬದಲು ಮಾಡುವುದಾಗಿ ಹೇಳಿದ್ದೀವಾ? ಎಂದು ಅವರು ಪ್ರಶ್ನಿಸಿದರು. ಮೀಸಲಾತಿ ಪ್ರಮಾಣ ಹೆಚ್ಚು ಮಾಡಿದ್ದೇ ಬಿಜೆಪಿ. […]
ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನೂತನ ಅಧ್ಯಕ್ಷರಾಗಿ ಕುಮಾರ ಚಂದ್ರಕಾಂತ ದೇಸಾಯಿ, ಉಪಾಧ್ಯಕ್ಷರಾಗಿ ಅಶೋಕ ಪಾಂಡಪ್ಪ ಲೆಂಕೆಣ್ಣವರ ಆಯ್ಕೆ
ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಕುಮಾರ ಚಂದ್ರಕಾಂತ ದೇಸಾಯಿ ಮತ್ತು ಉಪಾಧ್ಯಕ್ಷರಾಗಿ ಅಶೋಕ ಪಾಂಡಪ್ಪ ಲೆಂಕೆಣ್ಣವರ ಆಯ್ಕಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕುಮಾರ ಚಂದ್ರಕಾಂತ ದೇಸಾಯಿ(ಜೈನಾಪೂರ) ಪರ 11 ಮತಗಳು ಬಂದರೆ ಅವರ ಪ್ರತಿಸ್ಪರ್ಧಿ ಎಚ್. ಎಸ್. ಕೋರಡ್ಡಿ ಪರ 8 ಮತಗಳು ಬಂದವು. ಹೀಗಾಗಿ ಕುಮಾರ ಚಂದ್ರಾಕಾಂತ ದೇಸಾಯಿ ಮೂರು ಮತಗಳ ಅಂತರದಿಂದ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ ಪಾಂಡಪ್ಪ […]
ಧರ್ಮದ ವಿಚಾರಕ್ಕೆ ಕೈ ಹಾಕಿದ ವ್ಯಕ್ತಿ, ಪಕ್ಷ ಉಳಿಯಲ್ಲ- ಜೆಡಿಎಸ್ ಜೊತೆ ಮೈತ್ರಿ ಆದರೆ ಅಭ್ಯಂತರವಿಲ್ಲ- ಸಂಸದ ರಮೇಶ ಜಿಗಜಿಣಗಿ
ವಿಜಯಪುರ: ಧರ್ಮದ ವಿಚಾರದಲ್ಲಿ ಯಾರು ಕೈ ಹಾಕುತ್ತಾರೋ ಅವರು ಉಳಿಯುವುದಿಲ್ಲ. ಅವರ ಪಕ್ಷವೂ ಇರಲ್ಲ ಎಂದು ಬಿಜೆಸಿ ಸಂಸದ ರಮೇಶ ಜಿಗಜಿಣಗಿ ಎಚ್ಚರಿಕೆ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಹಿಂದೂ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವಮಾನಕಾರಿ ಹೇಳಿಕೆ ವಿಚಾರ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಸಣ್ಣ ಸಣ್ಣ ಹುಡುಗರು ಹೇಳಿಕೆ ನೀಡಿದ್ದಾರೆ. ಇಂದು ನಿನ್ನೆ ಮಂತ್ರಿಯಾಗಿದ್ದಾರೆ. ಇಂದಿರಾ ಗಾಂಧಿ, ರಾಜೀವ ಗಾಂಧಿ, ಸಂಜಯ ಗಾಂಧಿ ಕಾಲದಲ್ಲಿಯೂ ನೋಡಿದ್ದೇನೆ. ಧರ್ಮದ ವಿಷಯದಲ್ಲಿ ಯಾರು ಕೈ ಹಾಕುತ್ತಾರೆ […]
ಉದಯನಿಧಿ ಸ್ಟ್ಯಾಲಿನ್, ಡಾ. ಜಿ. ಪರಮೇಶ್ವರ, ಪ್ರಕಾಶ ರಾಜ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ತೀವ್ರ ವಾಗ್ದಾಳಿ- ಯಾಕೆ ಗೊತ್ತಾ?
ವಿಜಯಪುರ: ತಮಿಳುನಾಡು ಸಚಿವ ಉದಯನಿಧಿ ಸ್ಚಾಲಿನ್, ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಮತ್ತು ಬಹುಭಾಷಾ ನಟ ಪ್ರಕಾಶ ರಾಜ್ ವಿರುದ್ಧ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಖಂಡಿಸಿದ್ದಾರೆ. ಯಾವನ್ರೀ ಅವನು ಸ್ಟಾಲಿನ್? ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಉದಿಯನಿಧಿಗೂ ಸನಾತನ ಧರ್ಮಕ್ಕೂ ಏನು ಸಂಭಂದ? ಅವನೊಬ್ಬ ಅಯ್ಯೋಗ್ಯ, ಹುಚ್ಚ. ಸನಾತನ ಧರ್ಮ ಸಾವಿರಾರು ವರ್ಷಗಳಿಂದ […]
ಬಾಲ್ಯದಿಂದಲೇ ಕಾಂಗ್ರೆಸ್ ವಿರೋಧಿಯಾಗಿದ್ದೇನೆ- ಪಕ್ಷಾಂತರ ಮಾಡುವ ಪ್ರಶ್ನೆಯೇ ಇಲ್ಲ- ರಮೇಶ ಜಿಗಜಿಣಗಿ
ವಿಜಯಪುರ: ನಾನು ಹುಟ್ಟಿನಿಂದಲೂ ಕಾಂಗ್ರೆಸ್ ವಿರೋಧಿಯಾಗಿ ಬೆಳೆದಿದ್ದೇನೆ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ವಿರೋಧಿಯಾಗಿ ರಾಜಕಾರಣ ಮಾಡಿದ್ದೇನೆ. 45 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ಇನ್ನೇನು ವಯಸ್ಸಾಗಿದೆ. ಮತ್ತೆ ಪಾರ್ಟಿ ಚೇಂಜ್ ಮಾಡಿ ಏನು ರಾಜಕಾರಣ ಮಾಡುವುದಿದೆ? ಮಾಡುವುದಾದರೆ ನಮ್ಮ ವಂಶಕರು ಮಾಡಬೇಕಷ್ಟೇ ಎಂದು ಸ್ಪಷ್ಟಪಡಿಸಿದರು. ನಾನಂತೂ ಕಾಂಗ್ರೆಸ್ ಗೆ ಹೋಗಲ್ಲ. ಟಿಕೆಟ್ ಸಿಗದಿರಲು ನನಗೇನೂ ಇನ್ನೂ ವಯಸ್ಸಿನ […]
ನಂದಿ ಸಕ್ಕರೆ ಕಾರ್ಖಾನೆ ಚುನಾವಣೆ- ಕುಮಾರ ದೇಸಾಯಿ ಬಣದ 10, ಶಶಿಕಾಂತಗೌಡ ಪಾಟೀಲ ಬಣದ 7 ಜನರ ಆಯ್ಕೆ- ಯಾರಿಗೆ ಎಷ್ಟು ಮತ? ಇಲ್ಲಿದೆ ಮಾಹಿತಿ
ವಿಜಯಪುರ: ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ನಡೆದ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, 17 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ. ಈ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರು ಮತ್ತು ಅವರು ಪಡೆದಿರುವ ಮತಗಳ ಮಾಹಿತಿ ಇಲ್ಲಿದೆ. ಆಡಳಿತ ಮಂಡಳಿಯ ಅ ವರ್ಗದ ವಿಜೇತರು ಮತ್ತು ಪಡೆದ ಮತಗಳು ಕುಮಾರ ಚಂದ್ರಕಾಂತ ದೇಸಾಯಿ(ಜೈನಾಪೂರ)- 3893 ಶಶಿಕಾಂತಗೌಡ ಬಿಮನಗೌಡ ಪಾಟೀಲ(ಶಿರಬೂರ)- 3310 ಅಶೋಕ ಪಾಂಡಪ್ಪ ಲೆಂಕಣ್ಣನವರ- 3234 ಅದೃಶಪ್ಪ […]
ಏಳೆಂಟು ಸಂಸದರು ಚುನಾವಣೆಗೆ ಸ್ಪರ್ಧಿಸಲ್ಲ- ರಾಜ್ಯ ರಾಜಕೀಯದಲ್ಲಿ ಏನೋ ಗಡಿಬಿಡಿ ನಡೆಯುತ್ತಿದೆ- ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಸುಮಾರು ಏಳೆಂಟು ಜನ ಸಂಸದರು ಚುನಾವಣೆ ಕಣದಿಂದ ಹಿಂದೆ ಸರಿಯಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ವಿಜಯಪುರ ನಗರದಲ್ಲಿ ಸಿದ್ದಸಿರಿ ಸಂಸ್ಥೆಯ ಎಸ್ ಮಾರ್ಟ್ ಮಳಿಗೆಯನ್ನು ಉದ್ಘಾಟಿಸಿದ ಬಳಿಕ ಮಾದ್ಯಮದವರ ಜೊತೆ ಅವರು ಮಾತನಾಡಿದರು. ಲೋಕಸಭೆ ಟಿಕೆಟ್ ಹಂಚಿಕೆಯಲ್ಲಿ ಏನಾದರೂ ಬದಲಾವಣೆ ಆಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ನನಗೆ ಮಾಹಿತಿ ಇಲ್ಲ. ನನ್ನ ಮಾಹಿತಿಯ ಪ್ರಕಾರ ಏಳೆಂಟು ಜನ ಸಂಸದರು ತಾವಾಗಿಯೇ ಸ್ವಯಂ […]