ನಾಗಠಾಣ ಮತಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ದೇವಾನಂದ ಚವ್ಹಾಣ ಪ್ರಚಾರ

ವಿಜಯಪುರ: ನಾಗಠಾಣ ಜೆಡಿಎಸ್ ಅಭ್ರ್ಥಿ ದೇವಾನಂದ ಚವ್ಹಾಣ ಮತಕ್ಷೇತ್ರ ವ್ಯಾಪ್ತಿಯ ವಿಜಯಪುರ ತಾಲೂಕಿನ ಹೇಗಡಿಹಾಳ, ಉಕುಮನಾಳ, ಕತಕನಹಳ್ಳಿ, ಹಾಲಹಳ್ಳಿ, ಶಿರಾಡೋಣ, ರೇವತಗಾಂವ, ದಸೂರ, ಉಮರಜ, ಗೋವಿಂದಪೂರ, ನಿವರಗಿ, ಹೊಳಿಸಂಖ, ಹತ್ತಳ್ಳಿ, ಹಾವಿನಾಳ, ಗೋಡಿಹಾಳ, ಬರಡೋಲ, ಬರಡೋಲ ತಾಂಡಾ, ಗ್ರಾಮಗಳಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಐದು ವರ್ಷಗಳಿಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು, ನಾಗಠಾಣ ಕ್ಷೇತ್ರದ ಪ್ರತಿಯೊಂದು ಕುಟುಂಬಗಳಿಗೆ ಅಭಿವೃದ್ಧಿ ಯೋಜನೆಗಳು ತಲುಪಿವೆ ಎಂದು ಹೇಳಿದರು. ಎಚ್‌. ಡಿ. ಕುಮಾರಸ್ವಾಮಿ ಅಧಿಕಾರಕ್ಕೆ […]

ಜಾತ್ಯತೀತ, ಪಕ್ಷಾತೀತವಾಗಿ ಕೆಲಸ ಮಾಡಿರುವ ಎಂ. ಬಿ. ಪಾಟೀಲರನ್ನು ಕೆಲಸ ಪರಿಗಣಿಸಿ ಮತಹಾಕಿ- ಆಶಾ ಎಂ. ಪಾಟೀಲ

ವಿಜಯಪುರ 29: ಎಂ. ಬಿ. ಪಾಟೀಲರು ಜಾತ್ಯತೀತ ಮತ್ತು ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಕೆಲಸಗಳನ್ನು ಪರಿಗಣಿಸಿ ಮತ ಹಾಕಬೇಕು ಎಂದು ಆಶಾ ಎಂ. ಪಾಟೀಲ ಕರೆ ನೀಡಿದ್ದಾರೆ. ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಮನೆ ಮನೆಗೆ ತೆರಳಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ವಿರೋಧಿಗಳಲ್ಲಿ ಈಗ ಪ್ರಸ್ಥಾಪಿಸಲು ಯಾವುದೇ ವಿಷಯಗಳಿಲ್ಲ. ಎಲ್ಲ ಅಸ್ತ್ರಗಳು ಮುಗಿದಿರುವ ಹಿನ್ನಲೆಯಲ್ಲಿ ಅಳುವ ಹೊಸ ನಾಟಕ ಶುರುವಿಟ್ಟುಕೊಂಡಿದ್ದಾರೆ. ಕಳೆದ ಮೂರು […]

80 ವರ್ಷ ಮೇಲ್ಪಟ್ಟ ಮತದಾರರ ಮನೆಯಿಂದ ಅಂಚೆ ಮತ ಪತ್ರದ ಮೂಲಕ ಮತದಾನ

ವಿಜಯಪುರ: ಜಿಲ್ಲೆಯ ಎಂಟು ವಿಧಾನಸಭೆ ಮತಕ್ಷೇತ್ರಗಳಲ್ಲಿ 80 ವರ್ಷ ಮೇಲ್ಪಟ್ಟ 3574, ವಿಶೇಷ ಚೇತನ 1078 ಮತದಾರರು ಮನೆಯಿಂದಲೇ ಅಂಚೆ ಮತ ಪತ್ರದ ಮೂಲಕ ಮತದಾನ ಮಾಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ ಒಟ್ಟು 38727 ಮತದಾರರು, 20273 ವಿಶೇಷಚೇತನ ಮತದಾರರಿಗೆ ಏ. 29 ರಿಂದ ಮೇ 1ರ ವರೆಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.  ಈ ಪೈಕಿ 80 ವರ್ಷ […]

ಯತ್ನಾಳ ದಿನಕ್ಕೆ ನಾಲ್ಕು ಬಾರಿ ವಿಷ ಕಾರುತ್ತಾರೆ- ಮತದಾರರು ತಕ್ಕಪಾಠ ಕಲಿಸುವ ಕಾಲ ಬಂದಿದೆ- ಎಂ. ಬಿ. ಪಾಟೀಲ

ವಿಜಯಪುರ: ಬಸನಗೌಡ ಪಾಟೀಲ ಯತ್ನಾಳ ದಿನಕ್ಕೆ ನಾಲ್ಕು ಬಾರಿ ವಿಷ ಕಾರುತ್ತಾರೆ ಎಂದು ಕೆ. ಪಿ. ಸಿ. ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ಯತ್ನಾಳ ಜಾತಿ, ಧರ್ಮಗಳ ಬಗ್ಗೆ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಮತ್ತು ರಾತ್ರಿ ವಿಷ ಕಾರುತ್ತಿದ್ದಾರೆ.  ನಿರಂತರವಾಗಿ ದ್ವೇಷವನ್ನು ಬಿತ್ತುವ, ಅವಮಾನಕರ ಮತ್ತು ಅಶ್ಲೀಲ ಹೇಳಿಕೆ ನೀಡುತ್ತ ಬಂದಿದ್ದಾರೆ.  ಬಾಯಿ ತೆರೆದರೆ ಬೆಂಕಿ ಉಗುಳುವಂತೆ ವಿಷ ಕಾರುತ್ತಿದ್ದಾರೆ […]

ಜಾತಿ ನೋಡಿ ಮತ ಹಾಕಬಾರದು- ಅಭಿವೃದ್ಧಿ ನೋಡಿ ವೋಟ್ ಹಾಕಬೇಕು- ಕಾಂತಾ ನಾಯಕ

ವಿಜಯಪುರ: ಮತ ಹಾಕುವಾಗ ಜಾತಿ ನೋಡಬಾರದು. ಅಭಿವೃದ್ಧಿ ಮಾಡುವ ಅಭ್ಯರ್ಥಿಯನ್ನು ನೋಡಿ ವೋಟ್ ಹಾಕಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ಹೇಳಿದರು. ನಾಗಠಾಣ ಮತಕ್ಷೇತ್ರದ ಕನ್ನೂರ ಗ್ರಾಮದಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಧೋಂಡಿಬಾ ಕಟಕದೊಂಡ ಪರ ಕೈಗೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಭ್ರಷ್ಟಾಚಾರದಲ್ಲಿ ಮತ್ತು ಜೆಡಿಎಸ್ ಜಾತಿ ರಾಜಕಾರಣದಲ್ಲಿ ನಿರತವಾಗಿವೆ. ಜನಪ್ರತಿನಿಧಿಗಳು ಕೇವಲ ಶುಭ ಮತ್ತು ಅಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ […]

ಏ.30ರಂದು ನಡೆಯುವ ನಮ್ಮ ನಡೆ ಮತಗಟ್ಟೆಯ ಕಡೆ ಮತದಾನ ಜಾಗೃತಿ ಕಾರ್ಯಕ್ರಮ- ಯಶಸ್ವಿಗೊಳಿಸಲು ಡಿಸಿ ಡಾ. ದಾನಮ್ಮನವರ ಕರೆ

ವಿಜಯಪುರ: ಏಪ್ರಿಲ್ 30 ರಂದು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಜರುಗುವ “ನಮ್ಮ ನಡೆ, ಮತಗಟ್ಟೆಯ ಕಡೆ” ಕಾರ್ಯಕ್ರಮದಲ್ಲಿ ಎಲ್ಲರೂ ಅತ್ಯುತ್ಸಾಹದಿಂದ ಭಾಗವಹಿಸಿ, ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವುದರ ಜೊತೆಗೆ ಮತದಾರರಲ್ಲಿ ಮತದಾನ ಅರಿವು ಮೂಡಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಕರೆ ನೀಡಿದರು. ಶುಕ್ರವಾರ  ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ  “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಈಗಾಗಲೇ ಮುಖ್ಯ ಚುನಾವಣಾಧಿಕಾರಿಗಳು ಈ ಕಾರ್ಯಕ್ರಮ ರೂಪರೇಷಗಳ […]

ಅಳುವುದರಿಂದ ಮತಗಳು ಬರುತ್ತಿದ್ದರೆ ಬಹಳ ಜನ ಮುಖ್ಯಮಂತ್ರಿಯಾಗುತ್ತಿದ್ದರು- ವಿಪ ಮಾಜಿ ಸದಸ್ಯ ಜಿ. ಕೆ. ಪಾಟೀಲ

ವಿಜಯಪುರ: ಅಳುವುದರಿಂದ ಮತಗಳು ಬರುವಂತಿದ್ದರೆ ಬಹಳ ಜನ ಮುಖ್ಯಮಂತ್ರಿಯಾಗುತ್ತಿದ್ದರು ಎಂದು ವಿಧಾನ ಪರಿಷತ ಮಾಜಿ ಸದಸ್ಯ ಜಿ. ಕೆ. ಪಾಟೀಲ ಹೇಳಿದ್ದಾರೆ. ತಿಕೋಟಾ ಪಟ್ಟಣದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಕೈಗೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಈ ಸಂದರ್ಭಲ್ಲಿ ಮತಯಾಚಿಸುವ ಕೆಲವರು ಅಳುತ್ತಾರೆ.  ಅಡ್ಡ ಬೀಳುತ್ತಾರೆ.  ಅಂಗಲಾಚುತ್ತಾರೆ.  ಈ ಮೂಲಕ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಾರೆ.  ಆದರೆ, ಇದು ಅರ್ಹತೆಯಾಗಬಾರದು. ಅಳುವುದರಿಂದ ಮತಗಳು ಬರುವಂತಿದ್ದರೆ ಬಹಳ ಜನ […]

ನಾಗಠಾಣ(ಮೀ) ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳೆ ಪರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಬಿರುಸಿನ ಪ್ರಚಾರ

ವಿಜಯಪುರ: ನಾಗಠಾಣ(ಮೀ) ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳೆ ಪರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಬಿರುಸಿನ ಪ್ರಚಾರ ನಡೆಸಿದರು.  ವಿಜಯಪುರ ತಾಲೂಕಿನ ಖತಿಜಾಪೂರ, ಜುಮನಾಳ, ಹಿಟ್ನಳ್ಳಿ, ಉತ್ನಾಳ, ಗ್ರಾಮಗಳಲ್ಲಿ ಅವರು ಮತಚಾನೆ ಮಾಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಷ್ಠೆಯಿಂದ ಪಕ್ಷವನ್ನು ಸಂಘಟಿಸಿದ ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿದೆ.  ಜನಪರ ನಿಲುವಿನ ಸಂಜೀವ ಐಹೊಳಿ‌ ಜನಸ್ಪಂದನೆಯ ಮನೋಭಾವವುಳ್ಳ ವ್ಯಕ್ತಿ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿದೆ.  ‌ಜನತೆ ಅವರಿಗೆ ಮತ ಹಾಕುವ ಮೂಲಕ […]

ಎಂ. ಬಿ. ಪಾಟೀಲ ಅಭಿಮಾನಿಯಿಂದ ವಿಜಯಪುರದಿಂದ ತಿಕೋಟಾ ಹಾಜಿ ಮಸ್ತಾನ್ ದರ್ಗಾವರೆಗೆ ಮೈಮೇಲೆ ಚಿತ್ರ ಬಿಡಿಸಿಕೊಂಡು ಪಾದಯಾತ್ರೆ

ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರು ಚುನಾವಣೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಲಿ ಎಂದು ಪ್ರಾರ್ಥಿಸಿ ಯುವಕನೋರ್ವ ವಿಜಯಪುರದಿಂದ ತಿಕೋಟಾ ಹಾಜಿಮಸ್ತಾನ ದರ್ಗಾವರೆಗೆ ಪಾದಯಾತ್ರೆ ಕೈಗೊಂಡು ಗಮನ ಸೆಳೆದಿದ್ದಾನೆ. ವಿಜಯಪುರ ನಗರದ ಸಕಾಫ್ ರೋಜಾ ನಿವಾಸಿ ಸಮೀರ ಜಾಗೀರದಾರ(36) ಗ್ಯಾರೇಜ್ ನಡೆಸುತ್ತಿದ್ದಾರೆ. ಎಂ. ಬಿ. ಪಾಟೀಲ ಅವರ ಕಟ್ಟಾ ಅಭಿಮಾನಿಯಾಗಿರುವ ಅವರು ವಿಜಯಪುರ ನಗರದ ಜೋಡ ಗುಮ್ಮಟದಿಂದ ತಿಕೋಟಾ ಹಾಜಿಮಸ್ತಾನ ದರ್ಗಾವರೆಗೆ ಪಾದಯಾತ್ರೆ ನಡೆಸಿದ್ದಾರೆ. ಈ ವಿಷಯ ತಿಳಿದು ದರ್ಗಾಕ್ಕೆ […]

ಅಮಿತ ಶಾ ಜೊತೆ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಕರ್ನಾಟಕ, ಮಹಾರಾಷ್ಟ್ರ ಕೆಲಸ ಮಾಡುತ್ತಿದ್ದಾರೆ- ಮಹಾರಾಷ್ಟ್ರ ಡಿಸಿ ಎಂದೇವೇಂದ್ರ ಫಡ್ನವೀಸ್

ವಿಜಯಪುರ: ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಇರುವ ಗಡಿ ವಿವಾದದ ಕುರಿತು ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಕ್ಕೆ ಎರಡೂ ರಾಜ್ಯಗಳ ಸಿಎಂ ಗಳು ಬದ್ಧರಾಗಿದ್ದಾರೆ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಜೊತೆ ನಡೆದ ಸಭೆಯಂತೆಯೇ ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.  ಮೀಸಲಾತಿ ಪರಿಷ್ಕರಣೆ, ಮುಸ್ಲಿಮರಿಗೆ ಮೀಸಲಾತಿ ಕಡಿತ ವಿಚಾರ […]