ಬಾಲಾಜಿ ಶುಗರ್ಸ್ ಮೇಲೆ ಎರಡನೇ ಬಾರಿ ಚುನಾವಣಾಧಿಕಾರಿಗಳ ಧಾಳಿ- ಸುಮಾರು ರೂ. 40 ಲಕ್ಷ ಮೌಲ್ಯದ ನಾನಾ ಗಿಫ್ಟ್ ಗಳು ವಶ
ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಬಾಲಾಜಿ ಶುಗರ್ಸ್ ಕಾರ್ಖಾನೆಯ ಮೇಲೆ ಚುನಾವಣಾಧಿಕಾರಿಗಳು ಎರಡನೇ ಬಾರಿ ಧಾಳಿ ನಡೆಸಿದ್ದು, ಮತ್ತೆ ಸುಮಾರು ರೂ. 40 ಲಕ್ಷ ಮೌಲ್ಯದ ನಾನಾ ಗಿಫ್ಟ್ ಐಟಂ ಗಳು ಪತ್ತೆಯಾಗಿವೆ. ಈ ಸಂದರ್ಭದಲ್ಲಿ ನೂರಾರು ಬಾಕ್ಸ್ ಗಳಲ್ಲಿ ಸಂಗ್ರಹಿಸಿ ಇಡಲಾಗಿದ್ದ ಗಿಫ್ಟ್ ಗಳನ್ನು ಪತ್ತೆ ಮಾಡಲಾಗಿದೆ. ಮಾ. 27 ರಂದು ರೂ. 2. 10 ಕೋ. ಮೊತ್ತದ ಗಿಫ್ಟ್ ಗಳು ಪತ್ತೆಯಾಗಿದ್ದವು. ಈ ವೇಳೆ, ಮಾಜಿ ಸಚಿವ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಎಸ್. ಆರ್. […]
ಚಡಚಣ ಪೊಲೀಸರ ಕಾರ್ಯಾಚರಣೆ- ಅಕ್ರಮವಾಗಿ ಸಾಗಿಸಲಾಗುತ್ತಿದ್ದ ರೂ. 27 ಲಕ್ಷ ಮೌಲ್ಯದ ಚಿನ್ನಾಭರಣ ವಶ
ವಿಜಯಪುರ: ದಾಖಲಾತಿ ಇಲ್ಲದೇ ಸಾಗಿಸಲಾಗುತ್ತಿದ್ದ ರೂ. 27 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಚಡಚಣ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗಡಿ ಭಾಗದ ಚಡಚಣದಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ದೇವರ ನಿಂಬರಗಿ ಬಳಿ ಧಾಳಿ ನಡೆಸಿದಾಗ ಕಾರಿನಲ್ಲಿ ತೆರಳುತ್ತಿದ್ದವರನ್ನು ವಿಚಾರಣೆ ನಡೆಸಿದಾಗ ದಾಖಲಾತಿ ಇಲ್ಲದೇ ಸಾಗಿಸಲಾಗುತ್ತಿದ್ದ 480 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ರೂ. 6 ಲಕ್ಷ ನಗದು ಸಹಿತ ಒಟ್ಟು ರೂ. 27 ಲಕ್ಷದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. MH- 13/AZ- 4201 ನಂಬರಿನ ಕಾರಿನಲ್ಲಿ ಈ ಹಣ […]
ಕಾಂಗ್ರೆಸ್ ಮೂರಂಕಿ ದಾಟಲ್ಲ- ಬಿಜೆಪಿ 120 ಸ್ಥಾನಗಳಿಸಲಿದೆ- ಕಮಲ ಪಡೆಯವರಾರೂ ಕೈ ಕಡೆ ಹೋಗಲ್ಲ- ಯತ್ನಾಳ
ವಿಜಯಪುರ: ಬಿಜೆಪಿಯಿಂದ ಕೆಲವು ಸಚಿವರು ಮತ್ತು ಶಾಸಕರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಲಿದ್ದಾರೆ ಎಂಬುದರ ಕುರಿತು ಬಸನಗೌಡ ಪಾಟೀಲ ಯತ್ನಾಳ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೋಗಿ ತಗ್ಗಿನಲ್ಲಿ ಯಾಕೆ ಬೀಳ್ತಾರೆ? ರಾತ್ರಿ ಕಂಡ ಭಾವಿ ಹಗಲಿನಲ್ಲಿ ಹೋಗಿ ಬಿದ್ದಂಗಾಗುತ್ತೆ. ಕಾಂಗ್ರೆಸ್ ಈಗ ಮತ್ತಷ್ಟು ಡೌನ್ ಆಗಿದೆ. ಮೂರ್ನಾಲ್ಕು ತಿಂಗಳ ಹಿಂದೆ ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಏರಿತ್ತು. 90 ರಿಂದ 95 ಸ್ಥಾನಗಳಲ್ಲಿ ಗೆಲ್ಲುವ ಸೂಚನೆಯಿತ್ತು. ಬಿಜೆಪಿ ಕೂಡ 90 ರಿಂದ 95 […]
ಅಪ್ಪು ಪಟ್ಟಣಶೆಟ್ಟಿ, ಗುರಲಿಂಗಪ್ಪ ಅಂಗಡಿ ಸೇರಿ ಎರಡ್ಮೂರು ಜನರಿಗೆ ಟಿಕೆಟ್ ಕೊಡಿ- ಬಣಜಿಗರ ಆಗ್ರಹ
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕನಿಷ್ಠ ಇಬ್ಬರಿಂದ ಮೂರು ಜನ ಬಣಬಣಜಿಗರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ 1.60 ಲಕ್ಷ ಬಣಜಿಗರಿದ್ದಾರೆ. ಜಿಲ್ಲೆಯ 8 ಮತಕ್ಷೇತ್ರಗಳಿಂದ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡಬೇಕು. ವಿಜಯಪುರ ನಗರದಲ್ಲಿಯೇ 35 ಸಾವಿರ ಬಣಜಿಗ ಸಮಾಜದವರಿದ್ದಾರೆ. ನಾನಾ ಮತಕ್ಷೇತ್ರಗಳಲ್ಲಿ ಕನಿಷ್ಠ 25 ಸಾವಿರ ಜನಸಂಖ್ಯೆಯಿದೆ. ಪ್ರತಿ ಮತಕ್ಷೇತ್ರದಿಂದ ಬಜಣಜಿಗ ಸಮಾಜದ […]
ಮೇ 10 ರಂದು ಚುನಾವಣೆ- ಮೇ 13 ರಂದು ಮತ ಎಣಿಕೆ
ವಿಜಯಪುರ: ಕೇಂದ್ರ ಚುನಾವಣೆ ಆಯೋಗ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಿದೆ. ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣೆ ಆಯೋ್ದ ಮುಖ್ಯ ಚುನಾವಣಾದಿಕಾರಿ ರಾಜೀವ ಕುಮಾರ ಈ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣೆ ಪ್ರಕ್ರಿಯೆಯ ಮಾಹಿತಿಇಲ್ಲಿದೆ. ಅಧಿಸೂಚನೆ- 13.04.2023 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ- 20.04.2023 ನಾಮಪತ್ರ ಪರಿಷ್ಕರಣೆ- 21.04.2023 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ- 24.04.2023 ಮತದಾನ- 10.05.2023(ಬುಧವಾರ) ಮತ ಎಣಿಕೆ- 13.05.2023(ಶನಿವಾರ) ಚುನಾಚಣೆ ಪ್ರಕ್ರಿಯೆ ಮುಕ್ತಾಯ- 15.05.2023.
ಸೌಮ್ಯ ರೀತಿ ಹೋರಾಟಕ್ಕೆ ಸ್ಪಂದಿಸದಿದ್ದರೆ ಉಗ್ರ ಹೋರಾಟ- ಒಳಮೀಸಲಾತಿ ವಿರುದ್ಧ ಶಾಸಕ ದೇವಾನಂದ ಚವ್ಹಾಣ ಆಕ್ರೋಶ
ವಿಜಯಪುರ: ರಾಜ್ಯ ಸರಕಾರ ಘೋಷಣೆ ಮಾಡಿರುವ ಒಳಮೀಸಲಾತಿಗೆ ವಿಜಯಪುರ ಜಿಲ್ಲೆಯ ನಾಗಠಾಣ(ಮೀ) ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಬಂಜಾರಾ ಸಮುದಾಯಕ್ಕೆ ಮೀಸಲಾತಿ ಪ್ರಮಾಣದಲ್ಲಿ ಕಡಿಮೆಯಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸರಕಾರ ಜೇನುಗೂಡಿಗೆ ಕಲ್ಲು ಹೊಡೆದಿದೆ. ಒಳ ಮೀಸಲಾತಿಯಿಂದ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು. ಬಂಜಾರ ಸಮುದಾಯದ ತಾಳ್ಮೇ ಪರೀಕ್ಷಿಸಬೇಡಿ. ಸರಕಾರಕ್ಕೆ ಎಚ್ಚರಿಕೆ ಕೊಡ್ತೀನಿ. ಬಂಜಾರ […]
ಒಳಮೀಸಲಾತಿ ಘೋಷಣೆ ಸಂತಸ ತರಿಸಿದೆ- ಬಿಜೆಪಿ ಸಂಸದ ರಮೇಶ ಜಿಗಜಿಣಗಿ
ವಿಜಯಪುರ: ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸಚಿವ ಸಂಪುಟ ನಿರ್ಧರಿಸಿರುವುದು ಅತ್ಯಂತ ಸಂತೋಷ ತರಿಸಿದೆ. ಇದು ಶೋಷಿತ ಜನರಿಗೆ ಅತೀವ ಸಂತೋಷ ತರಿಸಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮಾದಿಗ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ, ಮೀಸಲಾತಿಯ ಸಂಪೂರ್ಣ ಪ್ರಯೋಜನ ದೊರಕಿಲ್ಲ, ಹೀಗಾಗಿ ಒಳ ಮೀಸಲಾತಿ ಸೌಲಭ್ಯ ಕಲ್ಪಿಸುವುದು ಅಗತ್ಯವಾಗಿತ್ತು. ಈ ಹಿಂದೆ ಆಳಿದ ಸರ್ಕಾರಗಳು ಈ ನ್ಯಾಯಯುತ ಬೇಡಿಕೆ […]
ಒಳ ಮೀಸಲಾತಿಯಿಂದ ಬಂಜಾರಾ, ಭೋವಿ, ಕೊರಚ ಸಮುದಾಯಗಳಿಗೆ ಅನ್ಯಾಯ- ಕಾಂತಾ ನಾಯಕ ಆರೋಪ
ವಿಜಯಪುರ: ಒಳ ಮೀಸಲಾತಿಯಿಂದಾಗಿ ಬಂಜಾರಾ ಸಮಾಜ ಸೇರಿದಂತೆ ಭೋವಿ ಹಾಗೂ ಕೊರಚ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಬಿಜೆಪಿಯ ಈ ಹುನ್ನಾರದಿಂದಾಗಿ ಈ ಸಮುದಾಯಗಳ ಬೆನ್ನಿಗೆ ಚೂರಿ ಹಾಕುವಂಥ ಕೆಲಸವನ್ನು ಬಿಜೆಪಿ ಮಾಡುತ್ತಿರುವುದು ತಪ್ಪು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಿಜೆಪಿ ಸರಕಾರ ಯಾವಾಗಲೂ ಜನರ ಬೆನ್ನಿಗೆ ಚೂರಿ ಹಾಕುವಂಥ ಕೆಲಸವನ್ನು ಮಾಡುತ್ತಲೇ ಬಂದಿದೆ. ಬಿಜೆಪಿಯವರ ಆಟಕ್ಕೆ ಜನರು ಬಲಿಯಾಗುತ್ತಿದ್ದಾರೆ. ಈಗ […]
ಮುಂಬರುವ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿಗೆ ಟಿಕೆಟ್ ನೀಡಬೇಕು- ಡಾ. ಸರಸ್ವತಿ ಚಿಮ್ಮಲಗಿ
ವಿಜಯಪುರ: ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇನ್ನೂ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಇದಕ್ಕೆ ರಾಜಕೀಯ ಕ್ಷೇತ್ರವೂ ಹೊರತಾಗಿಲ್ಲ. ಮುಂಬರುವ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಬೇಕು ಎಂದು ಸಾಹಿತಿ ಮತ್ತು ಮಹಿಳಾಪರ ಹೋರಾಟಗಾರ್ತಿ ಡಾ. ಸರಸ್ವತಿ ಚಿಮ್ಮಲಗಿ ಹೇಳಿದ್ದಾರೆ. ನಗರದಲ್ಲಿ ಜ್ಞಾನದೀಪ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಯುಗದರ್ಶಿನಿ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮಹಿಳಾ ಸಬಲೀಕರಣ ಕುರಿತು […]
ಮೀಸಲಾತಿಯಲ್ಲಿ ನನ್ನ ಪಾತ್ರ ದೊಡ್ಡದಿದೆ- ಹೈಕಮಾಂಡಿಗೆ ನನ್ನ ಶಕ್ತಿ ಗೊತ್ತಾಗಿದೆ- ಕೂಡಲ ಸಂಗಮ ಶ್ರೀಗಳ ಮೇಲೆ ಯಾರೂ ಒತ್ತಡ ಹಾಕಿಲ್ಲ- ಯತ್ನಾಳ
ವಿಜಯಪುರ: ಮೀಸಲಾತಿ ಆಗಬೇಕಾದರೆ ನನ್ನ ದೊಡ್ಡ ಕೊಡುಗೆ ಇದೆ. ನಾನು ಎಲ್ಲ ಅಧಿಕಾರ ತ್ಯಾಗ ಮಾಡಿದ ಕಾರಣ ಹೈಕಮಾಂಡ್ ನನ್ನ ಜೊತೆ ಚರ್ಚಿಸಿ ನಮ್ಮ ಸಮಾಜ ಮೀಸಲಾತಿ ನೀಡಿದೆ. ಮಾತ್ರವಲ್ಲ ಇತರ ಸಮಾಜಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡಿಗೆ ಬಸನಗೌಡರ ಜನಪ್ರೀಯತೆ ಗೊತ್ತಾಗಿದೆ. ಅದಕ್ಕೆ ಮೀಸಲಾತಿ ಸಿಕ್ಕಿದೆ. ನಮಗೆಲ್ಲ ಮೀಸಲಾತಿ ನೀಡಬೇಕಾದರೆ, ಅದಕ್ಕೂ ಮೊದಲು ಎಸ್.ಸಿ.ಎಸ್.ಟಿ. ಜನಾಂಗಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳ […]