ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಡದಿಂದಾಗಿ ಕಣ್ಣೀರಿಟ್ಟಿದ್ದಾರೆ- ಸಂಗಮೇಶ ಬಬಲೇಶ್ವರ

ವಿಜಯಪುರ: ಕೂಡಲಸಂಗಮ ಜಗದ್ಗುರುಗಳು ಕೆಲವರ ಒತ್ತಡ ತಾಳಲಾರದೆ ಕಣ್ಣೀರಿಟ್ಟಿದ್ದಾರೆ ಎಂದು ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಆರೋಪಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ  ದೊರಕಿಸಿ ಕೊಡುವ ಮೂಲಕ ಸಮುದಾಯದ ಮಕ್ಕಳ ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿಗಾಗಿ ಐತಿಹಾಸಿಕ ಹೋರಾಟ ಮಾಡಿದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ಕಣ್ಣೀರಿನ ಶಾಪ ಸಮುದಾಯವನ್ನು ಹಾಗೂ ಸಮುದಾಯದ ಜಗದ್ಗುರುಗಳನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡವರಿಗೆ ತಟ್ಟದೇ ಬಿಡುವುದಿಲ್ಲ ಎಂದು […]

ಯುಗಾದಿ ದಿನ ಕಾಂಗ್ರೆಸ್ ಮೊದಲ ಪಟ್ಟಿ- ಸಿದ್ಧರಾಮಯ್ಯ ಪ್ರಚಾರದಿಂದ ಹೆಚ್ಚಿಗೆ ಲಾಭ- ರಾಹುಲ ಗಾಂಧಿ ಯುವಕರಿಗೆ ಸ್ಕೀಂ ಘೋಷಿಸಲಿದ್ದಾರೆ- ಎಂ. ಬಿ. ಪಾಟೀಲ

ವಿಜಯಪುರ: ಯುಗಾದಿಯಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಬಹುದು.  ಅಂದು ಬಹುಷಃ ನಾವು ಸಿಹಿ ಸುದ್ದಿ ಕೊಡುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.  ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮೊದಲ ಪಟ್ಟಿ ಯಾವಾಗ ಬಿಡುಗಡೆಯಾಗುಲಿದೆ ಎಂಬ ಪ್ರಶ್ನೆಗೆ ಯುಗಾದಿಯಂದು ಬಹುಷಃ ಸಿಹಿ ಸುದ್ದಿ ನೀಡುತ್ತೇವೆ ಎಂದು ಹೇಳುವ ಮೂಲಕ ಟಿಕೆಟ್ ಆಕಾಂಕ್ಷಿಗಳಲ್ಲಿ ಕುತೂಹಲ ಮತ್ತು ಆತಂಕ ಮೂಡಿಸಿದ್ದಾರೆ. ಮಾ. 20 ರಂದು ಬೆಳಗಾವಿಗೆ ರಾಹುಲ್ ಗಾಂಧಿ ಭೇಟಿ […]

ಕಾಂಗ್ರೆಸ್, ಪಾಕಿಸ್ತಾನದ ಭಾಷೆಗಳು ಒಂದೇ ಆಗಿವೆ- ತುಷ್ಠಿಕರಣಕ್ಕಾಗಿ ಎಸ್ ಡಿ ಪಿ ಐ ಪಿ ಎಫ್ ಐ ಜೊತೆ ಒಳ ಹೊಂದಾಣಿಕೆ ನಡೆಯುತ್ತಿದೆ- ಪ್ರಹ್ಲಾದ ಜೋಶಿ

ವಿಜಯಪುರ: ಕಾಂಗ್ರೆಸ್ಸಿನವರಿಗೆ ವಿದೇಶಿ ಶಕ್ತಿಗಳ ಮೇಲೆ ಬಹಳ ವಿಶ್ವಾಸವಿದೆ.  ಅದಕ್ಕಾಗಿ ರಾಹುಲ ಗಾಂಧಿ ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವದ ವಿರುದ್ಧ ಮಾತನಾಡಿದ್ದಾರೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅದೇ ರೀತಿ ಕಾಂಗ್ರೆಸ್ ಪಾರ್ಟಿಯವರು ಆರ್ಟಿಕಲ್ 370 ತೆಗೆದಾಗ ಪಾಕಿಸ್ತಾನ ಮತ್ತು ಅವರು ಕರಾಳ ದಿನ ಎಂದು ಹೇಳಿದ್ದರು.  ಪ್ರಜಾಪ್ರಭುತ್ವದಲ್ಲಿ ಮೋದಿ ಎಲೆಕ್ಟೆಡ್ ಲೀಟರ್.  ಇವರಂಗ ಸೆಲೆಕ್ಟೆಡ್ ಲೀಟರ್ ಅಲ್ಲ.  ಸೆಲೆಕ್ಟೆಡ್ ಲೀಡರ್ […]

ಎಸ್. ಆರ್. ಪಾಟೀಲರಿಗೆ ಕೊಡಲೇಬಾರದು- ದೇವರ ಹಿಪ್ಪರಗಿ ಕಾಂಗ್ರೆಸ್ ಒಂಬತ್ತು ಜನ ಟಿಕೆಟ್ ಆಕಾಂಕ್ಷಿಗಳ ಒಕ್ಕೊರಲಿನ ಆಗ್ರಹ

ವಿಜಯಪುರ: ಜಿಲ್ಲೆಯ ದೇವರ ಹಿಪ್ಪರಗಿ ಕಾಂಗ್ರೆಸ್ ಮುಖಂಡರು ಎಸ್. ಪಾಟೀಲ ವಿರುದ್ಧ ಸಿಡಿದೆದ್ದಿದ್ದಾರೆ.  ಮಾಜಿ ಸಚಿವ ಎಸ್. ಆರ್. ಪಾಟೀಲ ಅವರಿಗೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುತ್ತಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದು, ಇದಕ್ಕೆ ದೇವರ ಹಿಪ್ಪರಗಿ ಮತಕ್ಷೇತ್ರದ 9 ಜನ ಕಾಂಗ್ರೆಸ್ ಆಕಾಂಕ್ಷಿಗಳು ಸಿಡಿದೆದ್ದಿದ್ದಾರೆ. ಮಾಜಿ ಸಚಿವರು ಮತ್ತು ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷದ ಮಾಜಿ ನಾಯಕರೂ ಆಗಿರುವ ಬಾಗಲಕೋಟೆ ಜಿಲ್ಲೆಯ ಎಸ್. ಪಾಟೀಲ ಮತ್ತು ಜೆ. ಟಿ. ಪಾಟೀಲ ಮಧ್ಯೆ […]

ವಿಜಯಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳು ಗಾಣಿಗ ಸಮಾಜಕ್ಕೆ ಟಿಕೆಟ್ ನೀಡಲು ಸಮಾಜ ಮುಖಂಡರ ಆಗ್ರಹ

ವಿಜಯಪುರ: ವಿಜಯಪುರ ಜಿಲ್ಲೆಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಒಂದು ಮೀಸಲು ಕ್ಷೇತ್ರ ಹೊರತು ಪಡಿಸಿ ಇತರೆ ಕ್ಷೇತ್ರಗಳಲ್ಲಿ ಗಾಣಿಗ ಸಮಾಜಕ್ಕೆ ರಾಷ್ಟ್ರೀಯ ಪಕ್ಷಗಳು ಟಿಕೆಟ್ ನೀಡಬೇಕು ಎಂದು ಗಾಣಿಗರ ಸಮಾಜದ ಮುಖಂಡ ಎಂ. ಎಸ್. ಶಿರಾಡೋಣ ಹೇಳಿದರು. ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗಾಣಿಗ ಸಮುದಾಯದ ಜನಸಂಖ್ಯೆ ಹಾಗೂ ಮತದಾರರು ಹೆಚ್ಚಿನ ಪ್ರಮಾಣದಲ್ಲಿದೆ. ರಾಷ್ಟ್ರೀಯ ಪಕ್ಷಗಳು ಸಮುದಾಯದ ನಾಯಕರಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗಾಣಿಗ ಸಮಾಜದ ಜಿಲ್ಲಾ ಕಾರ್ಯಾಧ್ಯಕ್ಷ ಡಾ. […]

ಅನುಮತಿ ಪಡೆಯದೆ ಪ್ರಚಾರ ಫಲಕ ಅಳವಡಿಸಿದರೆ ಸೂಕ್ತ ಕ್ರಮ- ಪೌರಾಯುಕ್ತ ವಿಜಯಕುಮಾರ ಮೆಕ್ಕಳಕಿ ಎಚ್ಚರಿಕೆ

ವಿಜಯಪುರ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ- 2023 ಅಂಗವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು, ಬ್ಯಾನರ್‌ಗಳು, ಬಂಟಿಂಗ್ಸ್ ಮತ್ತು ಹೋರ್ಡಿಂಗ್ ಅಳವಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.  ಹೀಗಾಗಿ ಅನುಮತಿ ಪಡೆಯದೇ ಪ್ರಚಾರ ಫಲಕ ಅಳವಡಿಸಿದ್ದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಎಚ್ಚರಿಕೆ ನೀಡಿದ್ದಾರೆ.  ರಾಜಕೀಯ ಪಕ್ಷಗಳಿಗೆ ಅಥವಾ ವ್ಯಕ್ತಿಗಳಿಗೆ ಸಂಬಂಧಿಸಿದ ಜಾಹೀರಾತು ಫಲಕ, ಪ್ರಚಾರ ಫಲಕ, ಬ್ಯಾನರ್, ಬಂಟಿಂಗ್, ಮತ್ತು ಹೋರ್ಡಿಂಗ್ಸ್ ಗಳನ್ನು ಅಳವಡಿಸಲು ಮಹಾನಗರ […]

ಶಾಸಕರು ಮುಸ್ಲಿಮರೊಂದಿಗೆ ವ್ಯವಹಾರಿಕ ಸಂಬಂಧ ಹೊಂದಿದ್ದಾರೆ- ಕಾರಜೋಳ ಹೇಳಿಕೆ ನಿರಾಸೆ ಮೂಡಿಸಿದೆ- ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಮುಸ್ಲಿಮರ ಓಟ್ ನನಗೆ ಬೇಕಿಲ್ಲ ಎನ್ನುವ ಬಸನಗೌಡ ಪಾಟೀಲ ಯತ್ನಾಳ ತಮ್ಮ ತಂದೆಯ ಕಾಲದಿಂದಲೂ ಮುಸ್ಲಿಮರೊಂದಿಗೆ ಬ್ಯೂಸಿನೆಸ್ ಪಾರ್ಟನರ್ ಆಗಿದ್ದಾರೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಶಾಸಕರ ಹೆಸರು ಹೇಳದೇ ಆರೋಪಿಸಿದ್ದಾರೆ.  ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ಟೂರಿಸ್ಟ್ ಹೋಟೇಲಿನಲ್ಲಿ ಶಾಸಕರು ಅವರ ತಂದೆಯ ಕಾಲದಿಂದಲೂ ಮುಸ್ಲಿಮರೊಂದಿಗೆ ಬ್ಯೂಸಿನೆಸ್ ಪಾರ್ಟನರ್ ಆಗಿದ್ದಾರೆ.  ಅವರ ತಂದೆಯಿಂದ ಈಗ ಇವರಿಗೆ ಆ ಆಸ್ತಿ ಬಂದಿದೆ.  ಶಾಸಕರಿಗೆ ಅವರ ಮಾತುಗಳಲ್ಲಿ ಬದ್ಧತೆಯಿಲ್ಲ.  ಟಿಪ್ಪು ಸುಲ್ತಾನ್ ವಂಶಜರ ಜೊತೆ […]

ಅಳುವ ಗಂಡಸರನ್ನು ನಂಬಬಾರದು- ಬಸನಗೌಡ ಎಂ. ಪಾಟೀಲ

ವಿಜಯಪುರ: ಅಳುವ ಗಂಡಸರನ್ನು ನಂಬಬಾರದು ಎಂದು ಹಿರಿಯರು ಹೇಳಿದ್ದಾರೆ. ಆದರೆ, ಕೆಲವರು ಮದ್ಯ ಮಾರಾಟದಿಂದ ಜನರ ಜೀವನ ಹಾಳು ಮಾಡಿ ಈಗ ಎಲೆಕ್ಷನ್ ಹಿನ್ನೆಲೆಯಲ್ಲಿ ಅಳುತ್ತ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಎಂ. ಪಾಟೀಲ(ರಾಹುಲ್ ಪಾಟೀಲ) ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಅವರು ಕಳೆದ ಅನೇಕ ವರ್ಷಗಳಿಂದ ಮದ್ಯ ಮಾರಾಟ ಮಾಡುತ್ತ ಸಾಕಷ್ಟು […]

ಈ ಬಾರಿಯೂ ಕೇಸರಿ ಗುಲಾಲ್ ಹಾರಬೇಕು-ಯತ್ನಾಳ, ನಮ್ಮ ಅಭ್ಯರ್ಥಿ ಯತ್ನಾಳ 50 ಸಾವಿರ ಮತಗಳಿಂದ ಗೆಲ್ಲಿಸಬೇಕು- ಕಾರಜೋಳ

ವಿಜಯಪುರ: ಈ ಬಾರಿಯೂ ಗುಮ್ಮಟ ನಗರಿ ವಿಜಯಪುರದಲ್ಲಿ ಗುಲಾಲ್ ಹಾರಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ವಿಜಯಪುರ ನಗರದಲ್ಲಿ ನಡೆದ ರೋಡ್ ಶೋ ಬಳಿಕ ಸಭೆಯಲ್ಲಿ ಅವರು ಮಾತನಾಡಿದರು. ಬಹಳ ಸಂತೋಷವಾಗುತ್ತಿದೆ ನಿಮ್ಮೆಲ್ಲರ ಅಭಿಮಾನ, ನಿಮ್ಮಲ್ಲರ ಹಿಂದುತ್ವದ ಶಕ್ತಿ, ವಿಜಯಪುರ ಇಲ್ಲಿ ಛತ್ರಪತಿ ಶಿವಾಜಿ ಮಹಾರಾಜರ, ಮಹಾರಾಣಾ ಪ್ರತಾಪರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಡಾ. ಬಾಬಾಸಾಹೇಬ ಅಂಬೇಡ್ಕರ, ಅಹಿಲ್ಯಾಬಾಯಿ ಹೋಳ್ಕರ, ಮಹಾತ್ಮಾ ಬಸವೇಶ್ವರ ಎಲ್ಲರ ಊರಾಗಿ ಉಳಿಯಲಿದೆ.  […]

ಬಸವ ನಾಡಿನಲ್ಲಿ ಬಿಜೆಪಿ ಸರಕಾರ 10000 ಉದ್ಯೋಗ ಸೃಷ್ಟಿಯಾಗಲಿದೆ- ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ನಗರದಲ್ಲಿ ರಾಜ್ಯ ಸರkeರದ ದೂರದೃಷ್ಟಿಯ ಫಲದಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಿ ದ್ರಾಕ್ಷಾರಸ ಉತ್ಪಾದನೆ ಘಟಕ ಪ್ರಾರಂಭವಾಗಲಿದ್ದು ಇದರಿಂದ ಸುಮಾರು 10 ಸಾವಿರ ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಜಯಪುರ ನಗರ ಅಭಿವೃದ್ಧಿಗೆ  ಸಾವಿರ ಕೋಟಿಗೂ ಹೆಚ್ಚು ರೂಪಾಯಿ ಅನುದಾನ ನೀಡಿದ್ದು, ಇದರಿಂದ ಈ ಹಿಂದೆಂದಿಗಿಂತಲೂ ಹೆಚ್ಚು ಅಭಿವೃದ್ಧಿಯಾಗಿದೆ.  […]