ಬಿಜೆಪಿ ದುರಾಡಳಿತವನ್ನು ಕೊನೆಗಾಣಿಸಲು ಕಾಂಗ್ರೆಸ್ ಅವಶ್ಯಕತೆಯಿದೆ- ಜಿಲ್ಲೆನಲ್ಲಿ 2013ರಂತೆ ಈ ಸಲವೂ ಕೈ ಬಲಪಡಿಸಿ- ಯಶವಂತರಾಯಗೌಡ ವಿ. ಪಾಟೀಲ
ವಿಜಯಪುರ: ರಾಜ್ಯದಲ್ಲಿ ಬಿಜೆಪಿ ದುರಾಡಳಿತವನ್ನು ಕೊನೆಗಾಣಿಸಲು ಕಾಂಗ್ರೆಸ್ ಅವಶ್ಯಕತೆ ಇದೆ. 2013ರಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ಸನ್ನು ಬೆಂಬಲಿಸಿದಂತೆ ಈ ಬಾರಿಯೂ ಕೈ ಬಲಪಡಿಸಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಪ್ರಜಾಧ್ವನಿ, ಪ್ರಜೆಗಳ ಧ್ವನಿಯನ್ನು ಹೆಳುವ ಕೆಲಸ ಮಾಡುತ್ತಿದೆ. ಈಗಿನ ಸರಕಾರದ ಭಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಶುರುವಾಗಿದೆ. ಸಿದ್ದರಾಮಯ್ಯ ನೇತ್ರತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಎಲ್ಲೆಲ್ಲಿ ಹೋಗಿದೆ ಅಲ್ಲೆಲ್ಲ ಕಾಂಗ್ರೆಸ್ಸಿಗೆ ಬೆಂಬಲ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷದ […]
ರಾಜ್ಯದಲ್ಲಿ ಬಬಲೇಶ್ವರ ಮಾದರಿ ಕ್ಷೇತ್ರ ಮಾಡುವೆ- ಈ ಬಾರಿ ಒಂದೂವರೆ ಲಕ್ಷ ಓಟ್ ಪಡೆಯುವ ಗುರಿಯಿದೆ- ಎಂ. ಬಿ. ಪಾಟೀಲ
ವಿಜಯಪುರ: ರಾಜ್ಯದಲ್ಲಿ ಬಬಲೇಶ್ವರವನ್ನು ಮಾದರಿ ಮತಕ್ಷೇತ್ರವನ್ನಾಗಿ ಮಾಡುವೆ. ಈ ಬಾರಿ ಒಂದೂವರೆ ಲಕ್ಷ ಓಟ್ ಪಡೆಯುವ ಗುರಿಯಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಸರಕಾರದಲ್ಲಿ ಬಬಲೇಶ್ವರ ಮತಕ್ಶೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ತೃಪ್ತಿ ತಂದಿವೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ಕ್ಷೇತ್ರಾದ್ಯಂತ ನೀರಾವರಿ ಕೆಲಸ ಮಾಡಿದ್ದೇನೆ. ನನಗೆ ಯಾರ ಸರ್ಟಿಫಿಕೆಟ್ ಬೇಕಿಲ್ಲ. ತಾಯಂದಿರ ಆಶೀರ್ವಾದ ನನ್ನ […]
ನಾನಾಗಲಿ ಎಂಬಿಪಿಯಾಗಲಿ ಎಲ್ಓಸಿ ನೀಡಲು 5 ಪೈಸೆ ಲಂಚ ತಿಂದಿದ್ದರೆ ರಾಜಕೀಯದಿಂದ ನಿವೃತ್ತಿಯಾಗಿ ಸನ್ಯಾಸತ್ವ ಸ್ವೀಕರಿಸುತ್ತೇವೆ- ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ
ವಿಜಯಪುರ: ನಾನಾಗಲಿ ಅಥವಾ ಎಂ. ಬಿ. ಪಾಟೀಲ ಆಗಲಿ ಎಲ್ ಓ ಸಿ ನೀಡಲು ಐದು ಪೈಸೆ ಲಂಚ ತಿಂದಿದ್ದರೆ ರಾಜಕೀಯ ನಿವೃತ್ತಿಯಾಗಿ ಸನ್ಯಾಸತ್ವ ತೆಗೆದುಕೊಳ್ಳುತ್ತೇವೆ ಸಿದ್ಧರಾಮಯ್ಯ ಸವಾಲು ಹಾಕಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಈಗಿನ ಸರಕಾರ 40 ಪರ್ಸೆಂಟ್ ಲಂಚ ಪಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಆದರೆ, ಈವರೆಗೆ ಈ ಪ್ರಕರಣದಲ್ಲಿ ಯಾವುದೇ ಕ್ರಮವಾಗಿಲ್ಲ ಎಂದು ರಾಜ್ಯ ಸರಕಾರದ ಭ್ಷ್ರಷ್ಟಾಚಾರದ ವಿರುದ್ಧ […]
ಎಂ. ಬಿ. ಪಾಟೀಲ ವಿಧಾನಸಭೆ, ಸರಕಾರದಲ್ಲಿರಬೇಕು- ಅವರಿಗೆ ಮತ ಹಾಕಿದರೆ ನನಗೆ ಹಾಕಿದಂತೆ- ಎಲ್ಲ ಖಾತೆ ನಿರ್ವಹಿಸಬಲ್ಲ ಸಾಮರ್ಥ್ಯವಿದೆ- ಎಂಬಿಪಿ ಗುಣಗಾನ ಮಾಡಿದ ಸಿದ್ಧರಾಮಯ್ಯ
ವಿಜಯಪುರ: ಸಿದ್ಧರಾಮಯ್ಯ ಅವರ ಭಾಷಣವೆಂದರೆ ಬಹುತೇಕ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವುದು ಮತ್ತು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಹಾಗೂ ಮುಂದೆ ಅಧಿಕಾರಕ್ಕೆ ಬಂದರೆ ಕೈಗೊಳ್ಳುವ ಯೋಜನೆಗಳ ಬಗ್ಗೆ ಭರ್ಜರಿಯಾಗಿ ಭಾಷಣ ಮಾಡುವುದು ಮಾಮೂಲು. ಆದರೆ, ಇದೆಲ್ಲಕ್ಕಿಂತ ಭಿನ್ನವಾದ ಪ್ರಚಾರಕ್ಕೆ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಾಕ್ಷಿಯಾಯಿತು. ಬಬಲೇಶ್ವರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಜನಸಮೂಹ ಕಂಡು ಪುಳಕಿತರಾದ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ, ಈ ಕ್ಷೇತ್ರದ ಶಾಸಕ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. […]
ಎಲ್ಲಿಂದ ಸ್ಪರ್ಧಿಸಬೇಕು ಎಂದು ನಾನು ನಿರ್ಧರಿಸುವೆ, ಅವರಲ್ಲ- ಬಿ. ಎಸ್. ವೈಗೆ ಆಯುಷ್ಯ, ಆರೋಗ್ಯ ಸಿಗಲಿ- ಎಸ್. ಸಿದ್ಧರಾಮಯ್ಯ
ವಿಜಯಪುರ: ಮುಂಬರುವ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸಬೇಕು ಎಂದು ನಾನು ತೀರ್ಮಾನ ಮಾಡುತ್ತೇನೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತೆ. ಇದನ್ನು ಕೇಳಲು ಬಿ. ಎಸ್. ಯಡಿಯೂರಪ್ಪ ಯಾರು ಎಂದು ಮಾಜಿ ಸಿಎಂ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಯಮ್ಯ ಹೇಳಿದ್ದಾರೆ. ಕಾಂಗ್ರೆಸ್ ಕೈಗೊಂಡಿರುವ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಬಸವನಾಡು ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಅವರು, ದೇವರ ಹಿಪ್ಪರಗಿ ಕಾರ್ಯಕ್ರಮಕ್ಕೆ ತೆರಳುವ ಮುಂಚೆ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಬುಧವಾರ ವಿಧಾನ ಸಭೆಯಲ್ಲಿ ಮಾತನಾಡಿದ್ದ ಬಿ. ಎಸ್. […]
ಬಸವನ ಬಾಗೇವಾಡಿಯಲ್ಲಿ ಪ್ರಜಾಧ್ವನಿ ಯಾತ್ರೆ- ಶಾಸಕ ಶಿವಾನಂದ ಪಾಟೀಲ ಪರ ಭರ್ಜರಿ ಪ್ರಚಾರ ಕೈಗೊಂಡ ಸಿದ್ಧು, ಎಂಬಿಪಿ, ಪ್ರಕಾಶ ರಾಠೋಡ, ಯಶವಂತರಾಯಗೌಡ
ವಿಜಯಪುರ: ಬಸವಣ್ಣನವ ತವರು ಬಸವನ ಬಾಗೇವಾಡಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಭರ್ಜರಿಯಾಗಿ ಚಾಲನೆ ನೀಡಿದ್ದಾರೆ. ಬಸವನ ಬಾಗೇವಾಡಿ ಪಟ್ಟಣದ ಬಸವೇಶ್ವರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಹಾಗೂ ಇತರ ನಾಯಕರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಕೇಳಿದರು. ಮೂರು ತಾಸು ತಡವಾಗಿ ಬಂದಿದ್ದೇವೆ. ನಿಮ್ಮ ತಾಳ್ಮೆ, ಸಹನೆ, ಶಾಂತಿ ನೋಡಿದರೆ ಎಷ್ಟು ನಮಸ್ಕಾರ ಹೇಳಿದರೂ ಕಡಿಮೆ. ಸಮಯ […]
ಇನ್ನೊಂದು ತಿಂಗಳಲ್ಲಿ ಬಿಜೆಪಿ ಅಂಗಡಿ ಬಂದ್ ಆಗುತ್ತದೆ- ಕಾಂಗ್ರೆಸ್ ಅಧಿಕಾರಕ್ಕೆ ಬಂದು ಅಭಿವೃದ್ಧಿಗೆ ನಾಂದಿ ಹಾಡಲಿದೆ- ಎಂ. ಬಿ. ಪಾಟೀಲ
ವಿಜಯಪುರ: ಇನ್ನೊಂದು ತಿಂಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಬಿಜೆಪಿ ಅಂಗಡಿ ಬಂದ್ ಆಗಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಇಲ್ಲಿನ ಶಾಸಕರು ಮೊದಲು ದೇವರ ಹಿಪ್ಪರಗಿಯಲ್ಲಿ ಇದ್ದರು. ಇಲ್ಲಿಗೆ ಗುಳೆ ಬಂದಿದ್ದಾjz. ಮುಂದೆ ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ. ರಾಜಕಾರಣದಲ್ಲಿ ರಾಜಕೀಯವಾಗಿ ರಾಜಕಾರಣ ಮಾಡೋಣ. ಅವರದ್ದು ಒಂದು ಪಕ್ಷ, ನಮ್ಮದು ಒಂದು ಪಕ್ಷ ಇರುತ್ತದೆ. ಆದರೆ, ಪೊಲೀಸರನ್ನು […]
ಬೊಮ್ಮಾಯಿ ಆ್ಯಂಡ ಟೀಂ ಅಲಿಬಾಬಾ ಹಾಗೂ ಚಾಲೀಸ್ ಚೋರ್ ರೀತಿ ಇದೆ- ಸಿದ್ಧರಾಮಯ್ಯ- ಇದು ನನ್ನ ಕೊನೆಯ ಚುನಾವಣೆ- ಸಿ. ಎಸ್. ನಾಡಗೌಡ
ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಟೀಂ ಅಲಿಬಾಬಾ ಹಾಗೂ ಚಾಲೀಸ್ ಚೋರ್ ರೀತಿ ಇದೆ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿದ ಮಾತನಾಡಿದ ಅವರು, ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದರು. ಬೊಮ್ಮಾಯಿ ಆ್ಯಂಡ್ ಟೀಂ ಎಂದರೆ ಅಲಿಬಾಬಾ ಹಾಗೂ ಚಾಲೀಸ್ ಚೋರ್ ರೀತಿ ಇದೆ. ಪೊಲೀಸ್ ನೇಮಕಾತಿಯಲ್ಲಿ ಲಂಚ, ವರ್ಗಾವಣೆಯಲ್ಲಿ ಲಂಚ, ಓಲ್ಲಿ ಹೋದರೂ ಲಂಚಾ, ಲಂಚಾ […]
ಫೆ. 23ರಂದು ಬಬಲೇಶ್ವರದಲ್ಲಿ ಪ್ರಜಾಧ್ವನಿ ಯಾತ್ರೆ- ಆಧುನಿಕ ಭಗೀರಥನ ಪರ ಚುನಾವಣೆ ಪ್ರಚಾರಕ್ಕೆ ರಣಕಹಳೆ ಮೊಳಗಿಸಲಿರುವ ಸಿದ್ಧರಾಮಯ್ಯ
ವಿಜಯಪುರ: ಬಬಲೇಶ್ವರದಲ್ಲಿ ಫೆ. 23 ರಂದು ಗುರುವಾರ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪ್ರಜಾಧ್ವನಿ ನಡೆಯಲಿದ್ದು, ಮತಕ್ಷೇತ್ರದ 75 ಸಾವಿರ ಜನರು ಪಾಲ್ಗೊಳ್ಳುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಬಲೇಶ್ವರ ಬಸ್‍ಸ್ಟ್ಯಾಂಡ್ ಹತ್ತಿರದ ನಿಡೋಣಿ ರಸ್ತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 50 ಸಾವಿರ ಜನ ಕುಳಿತುಕೊಂಡು ನೋಡುವ ಬೃಹತ್ […]
ಶ್ರೀಹರಿ ಗೊಳಸಂಗಿಗೆ ಸಂದಿಗ್ಧತೆ- ಫೆ. 17 ಹೊರಡಿಸಲಾಗಿದ್ದ ಆದೇಶ ಫೆ. 18 ರದ್ದು- ಯಾವುದು ಗೊತ್ತಾ?
ವಿಜಯಪುರ: ಶ್ರೀಹರಿ ಗೊಳಸಂಗಿ ಅವರನ್ನು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮುಂದುವರೆಸಿ ಫೆ. 17 ರಂದು ಹೊರಡಿಸಲಾಗಿದ್ದ ಆದೇಶವನ್ನು ಮರುದಿನವೇ ರದ್ದು ಪಡಿಸಿ ಮತ್ತೋಂದು ಆದೇಶ ಹೊರಡಿಸಲಾಗಿದೆ. ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಮತ್ತು ಸದಸ್ಯರ ಅವಧಿಯನ್ನು ಫೆ. 17 ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಅಥವಾ ಸರಕಾರದ ಮುಂದಿನ ಆದೇಶದವರೆಗೆ ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆತ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಆದರೆ, ಇದೇ ಅಧೀನ ಕಾರ್ಯದರ್ಶಿ ಫೆ. 18ರಂದು ಮೊದಲಿನ ಆದೇಶವನ್ನು ರದ್ದುಪಡಿಸಿ ಮತ್ತೋಂದು […]