ಬಿಜೆಪಿ ಬೆನ್ನು ಹತ್ತಿದವರು ಉದ್ಧಾರವಾಗಿಲ್ಲ- ಅವರನ್ನು ಬೆಂಬಲಿಸಿ ಹಾಳಾದವರ ಪಟ್ಟಿ ನನ್ನ ಬಳಿಯಿದೆ- ಸುನೀಲಗೌಡ ಪಾಟೀಲ
ವಿಜಯಪುರ: ಬಿಜೆಪಿಯ ಬೆನ್ನುಹತ್ತಿದವರು ಯಾರೂ ಉದ್ಧಾರವಾಗಿಲ್ಲ. ಅವರನ್ನು ಬೆಂಬಲಿಸಿ ಹಾಳಾದವರ ಪಟ್ಟಿ ನನ್ನ ಬಳಿ ಇದೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಬಿಜೆಪಿ ದೌರ್ಜನ್ಯ ಮತ್ತು ಗೂಂಡಾಗಿರಿಯಿಂದ ಬೇಸತ್ತು ಕಾಂಗ್ರೆಸ್ಸಿಗೆ ಸೇರ್ಪಡೆಯಾದ ಹೊನವಾಡದವರ ವಸ್ತಿಯ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು. ಬಿಜೆಪಿಯವರನ್ನು ಬೆನ್ನು ಹತ್ತಿದವರು ಯಾರಾದರೂ ಉದ್ಧಾರವಾಗಿದ್ದರೆ ಅವರ ಹೆಸರು ಹೇಳಿ. ಅವರಿಂದ ಹಾಳಾದವರ ದೊಡ್ಡ ಪಟ್ಟಿಯೇ ನನ್ನ ಬಳಿ ಇದೆ. ಗ್ರಾ. ಪಂ. ಚುನಾವಣೆಯಲ್ಲಿ ಇವರಿಂದ ಬೆಂಬಲ ಪಡೆದು ಪರಾಜಿತರಾದ ಅಭ್ಯರ್ಥಿಗಳು ಸಾಲಗಾರರಾಗಿದ್ದಾರೆ. ಆದರೆ, ಇವರು ಮಾತ್ರ ಮೂರು ಚುನಾವಣೆಗೆ ಸ್ಪರ್ಧಿಸಿದ ನಂತರವೂ ಹೊಸದಾಗಿ ಹೊಲ ಖರೀದಿ ಮಾಡುತ್ತಿದ್ದಾರೆ. ದೊಡ್ಡ ವಾಹನ ಖರೀದಿಸುತ್ತಿದ್ದಾರೆ. ಇವರ ಮಕ್ಕಳು ರೂ. […]
ಬಿಜೆಪಿ ಜನರ ಬದುಕು ಕಟ್ಟುವ ಬದಲು ಭಾವನೆ ಕೆರಳಿಸುವ ಕೆಲಸ ಮಾಡಿದೆ ಮುಂದಿನ ಚುನಾವಣೆಯಲ್ಲಿ ಮನೆಗೆ ಹೋಗಲಿದೆ- ಎಂ. ಬಿ. ಪಾಟೀಲ
ವಿಜಯಪುರ, 19: ಬಿಜೆಪಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದೆಯೇ ಹೊರತು ಜನಸಾಮಾನ್ಯರ ಬದುಕು ಕಟ್ಟಿಕೊಡುವ ಕೆಲಸ ಮಾಡಲಿಲ್ಲ. ಭ್ರಷ್ಟ ರಾಜ್ಯ ಸರಕಾರದ ಪಾಪದ ಕೊಡ ತುಂಬಿ ಬಂದಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರು ಮನೆಗೆ ಹೋಗಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಮಾರ್ಚ್ 20ರ ನಂತರ ಏಪ್ರಿಲ್ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ […]
ಅರಕೇರಿ ಗ್ರಾಂ. ಪಂ. ಗೆ ನೂತನ ಅಧ್ಯಕ್ಷರಾಗಿ ಅನುಸೂಯ ಗೋವಿಂದ ರಾಠೋಡ, ಉಪಾಧ್ಯಕ್ಷರಾಗಿ ಕುಸುಮಾ ಪ್ರಕಾಶ ರಾಠೋಡ ಅವಿರೋಧ ಆಯ್ಕೆ
ವಿಜಯಪುರ: ತಿಕೋಟಾ ತಾಲೂಕಿನ ಅರಕೇರಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅನುಸೂಯ ಗೋವಿಂದ ರಾಥೋಡ ಮತ್ತು ಉಪಾಧ್ಯಕ್ಷರಾಗಿ ಕುಸುಮಾ ಪ್ರಕಾಶ್ ರಾಥೋಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಥೋಡ, ಜಿಓಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ನಿಂಗರಾಜ ಬೆಳ್ಳುಬ್ಬಿ, ಮಾಜಿ ಮಂಡಲ್ ಪ್ರಧಾನ ಸಿದ್ದಣ್ಣ ಸಕ್ರಿ, ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹುಸೇನಸಾಬ ಮನಗೂಳಿ, ಗೋವಿಂದ ರಾಥೋಡ, ಸುರೇಶ ಭಂಡಾರಿ, ಸೀತಾರಾಮ ರಾಠೋಡ ಮುಂತಾದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ನೂತನ […]
ನಾಥೋರಾಮ್ ಗೋಡ್ಸೆ, ವೀರ ಸಾವರಕರ ಪೂಜೆ ಮಾಡುವವರಿಂದ ಪಾಠ ಹೇಳಿಕೊಡುವ ಅಗತ್ಯವಿಲ್ಲ- ಅಮಿತ್ ಶಾ ವಿರುದ್ಧ ಸಿದ್ಧರಾಮಯ್ಯ ವಾಗ್ದಾಳಿ
ವಿಜಯಪುರ: ನಾಥೋರಾಮ್ ಗೋಡ್ಸೆ ಮತ್ತು ವೀರ್ ಸಾವರಕರ ಪೂಜೆ ಮಾಡುವವರು ನಮಗೇನು ಪಾಠ ಹೇಳಿಕೊಡುತ್ತಾರೆ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಆರಾಧನೆ ಮಾಡುವವರಿಗೆ ಮತ ಹಾಕಬೇಡಿ ಎಂದು ಮಂಗಳೂರಿನಲ್ಲಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾತಿಗೆ ತಿರುಗೇಟು ನೀಡಿದರು. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರನ್ನು ಕೊಂದು ಹಾಕಿದವರನ್ನು ಪೂಜಿಸುವ ಪಕ್ಷದ ಬಗ್ಗೆ ಏನು ಮಾಡಬೇಕು? […]
ನಾನೂ ಹಿಂದು, ನಮ್ಮಪ್ಪ ಹಿಂದು, ನನಗೆ ಸಿದ್ಧರಾಮಯ್ಯ ಎಂದು ಹೆಸರಿಟ್ಟಿದ್ದಾರೆ- ಸಿ. ಟಿ. ರವಿ ಹೇಳಿದಾಕ್ಷಣ ನಾನು ಮುಸ್ಲಿಮ್ ಆಗಿಬಿಡುತ್ತೇನಾ? ಸಿದ್ಧರಾಮಯ್ಯ ವಾಗ್ದಾಳಿ
ವಿಜಯಪುರ: ನಾನೂ ಹಿಂದು. ನಮ್ಮಪ್ಪನೂ ಹಿಂದು. ನನಗೆ ಸಿದ್ಧರಾಮಯ್ಯ ಎಂದು ಹೆಸರಿಟ್ಟಿದ್ದಾರೆ. ಸಿ. ಟಿ. ರವಿ ಹೇಳಿದಾಕ್ಷಣ ನಾನು ಮುಸ್ಲಿಂ ಆಗಿಬಿಡುತ್ತೇನಾ? ಎಂದು ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ನಾನು ಹಿಂದು. ನಮ್ಮಪ್ಪ ಹಿಂದು. ನಾನು ಹಿಂದು ಅಲ್ಲವಾ? ನಮ್ಮವ್ವ- ನಮ್ಮಪ್ಪ ಹಿಂದುಗಳಲ್ಲವಾ? ಸಿ.ಟಿ. ರವಿ ಹೇಳಿದ ಮಾತ್ರಕ್ಕೆ ನಾನು ಮುಸ್ಲಿಂನಾಗಿ ಬಿಡುತ್ತೇನಾ? […]
ರಶ್ಮಿ ಪಾಟೀಲ ವಿಜಯಪುರ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ನೇಮಕ
ವಿಜಯಪುರ: ವಿಜಯಪುರ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ನೂತನ ಅಧ್ಯಕ್ಷರನ್ನಾಗಿ ಪತ್ರಕರ್ತೆ ರಶ್ಮಿ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರ ಆದೇಶದ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಲೀಲಾದೇವಿ ಆರ್. ಪ್ರಸಾದ್ ಅವರು ನೇಮಕಾತಿ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
ಆಧುನಿಕ ಬಬಲೇಶ್ವರ, ಆಧುನಿಕ ಭಗೀರಥ, ನಿಮ್ಮ ಮನೆಯ ಮಗ, ನಮ್ಮ ಎಂ. ಬಿ. ಪಾಟೀಲ- ಪ್ರಚಾರಕ್ಕೆ ಬಸನಗೌಡ ಪಾಟೀಲ ಚಾಲನೆ
ವಿಜಯಪುರ: ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರದ ಕಾವು ತೀವ್ರವಾಗುತ್ತಿದ್ದು, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರ ಸ್ವಕ್ಷೇತ್ರ ಬಬಲೇಶ್ವರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ವಾಹನಕ್ಕೆ ಎಂ. ಬಿ. ಪಾಟೀಲರ ಪುತ್ರ ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ ಚಾಲನೆ ನೀಡಿದರು. ಈ ಬಾರಿ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಪ್ರಚಾರದ ಹೊಣೆಯನ್ನು ಮಾಜಿ ಸಚಿವ ಎಂ. ಬಿ. ಪಾಟೀಲ ಅವರಿಗೆ ವಹಿಸಲಾಗಿದ್ದು, ಅವರು ಈಗಾಗಲೇ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕ್ಯಾಂಪೇನ್ ಆರಂಭಿಸಿದ್ದಾರೆ. ಇತ್ತ […]
ಕೆಪಿಸಿಸಿ ಸ್ಕ್ರೀನಿಂಗ್ ಕಮಿಟಿಗೆ, ಡಿಕೆಶಿ, ಸಿದ್ಧು, ಎಂಬಿಪಿ ಸೇರಿ 11 ಪದಾಧಿಕಾರಿಗಳ ನೇಮಕ
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕೆಪಿಸಿಸಿ ಚುನಾವಣೆ ಸ್ಕ್ರೀನಿಂಗ್ ಕಮಿಟಿಗೆ ಡಿ. ಕೆ. ಶಿವಕುಮಾರ, ಎಸ್. ಸಿದ್ಧರಾಮಯ್ಯ ಮತ್ತು ಎಂ. ಬಿ. ಪಾಟೀಲ ಸೇರಿದಂತೆ 11 ಜನರನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿ ಸ್ಕ್ರೀನಿಂಗ್ ಕಮಿಟಿ ಪದಾಧಿಕಾರಿಗಳ ಪಟ್ಟಿ ಇಲ್ಲಿದೆ. ಅಧ್ಯಕ್ಷ 1. ಮೋಹನ ಪ್ರಕಾಶ ಸದಸ್ಯರು 1. ನೀರಜ್ ಡಾಂಗಿ 2. ಮೊಹಮ್ಮದ ಜಾವೇದ 3. ಸಪ್ತಗಿರಿ ಉಲಕ ಪದನಿಮಿತ್ಯ ಸದಸ್ಯರು 1. ಡಿ. ಕೆ. ಶಿವಕುಮಾರ 2. ಸಿದ್ಧರಾಮಯ್ಯ 3. ರಂದೀಪ್ ಸಿಂಗ್ ಸುರ್ಜೆವಾಲಾ 4. […]
ನಾವೆಲ್ಲರೂ ಪಕ್ಷ ಸೇರಿರದಿದ್ದರೆ ಪಕ್ಷ ಅಧಿಕಾರಕ್ಕೆ ಬರುತ್ತಿರಲಿಲ್ಲ- ಸರಕಾರದಲ್ಲಿ ನನ್ನ ಸಣ್ಣಪುಟ್ಟ ಕೆಲಸಗಳಾಗದಹಿನ್ನೆಲೆ ದೂರವಿದ್ದೇನೆ- ರಮೇಶ ಜಿಗಜಿಣಗಿ
ವಿಜಯಪುರ: ನಾವೆಲ್ಲ ಜನತಾ ಪರಿವಾರ ಬಿಟ್ಟು ಪಕ್ಷ ಸೇರಿರದಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನೂ ಸೇರಿದಂತೆ ಹಲವಾರು ಜನ ಜನತಾ ದಳದಲ್ಲಿ ಮುಂದುವರೆದಿದ್ದರೆ ಒಂದು ಸಲ ಕಾಂಗ್ರೆಸ್ ಮತ್ತೋಂದು ಸಲ ಜನತಾ ದಳ ಅಧಿಕಾರಕ್ಕೆ ಬರುತ್ತಿದ್ದವು. ಬಿಜೆಪಿ ಅಧಿಕಾರಕ್ಕೆ ಬರುತ್ತಿರಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು. ದಲಿತ ಸಿಎಂ ವಿಚಾರ ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕು ಎಂದು ನಾನು ಸಾಯುವವರೆಗೂ ಬೊಬ್ಬೆ ಹೊಡೆಯುತ್ತೇನೆ. ನಾನು ಜೀವನದಲ್ಲಿ […]
ಲೋಕಾಯುಕ್ತ ಸಿಪಿಐ ಮಹೇಂದ್ರಕುಮಾರ ನಾಯಕ ರಾಜೀನಾಮೆ- ನಾಗಠಾಣ(ಮೀ) ಕ್ಷೇತ್ರದಿಂದ ಸ್ಪರ್ಧೆ ನಿರೀಕ್ಷೆ
ವಿಜಯಪುರ: ನಿರೀಕ್ಷೆಯಂತೆ ಬಾಗಲಕೋಟೆ ಲೋಕಾಯಕ್ತ ಸಿಪಿಐ ಆಗಿರುವ ಮಹೇಂದ್ರುಕುಮಾರ ನಾಯಕ ತಮ್ಮ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈ ಕುರಿತು ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಪಿಐ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ಐನಾಪುರ ತಾಂಡದ ನಿವಾಸಿಯಾಗಿರುವ ಮಹೇಂದ್ರಕುಮಾರ ನಾಯಕ ರಾಜೀನಾಮೆ ಸಲ್ಲಿಸಿರುವ ಪ್ರತಿ ಬಸವನಾಡು ವೆಬ್ ಗೆ ಲಭ್ಯವಾಗಿದೆ. ರಾಜೀನಾಮೆ ಪತ್ರದ ಸಾರಾಂಶ ಈ ಪತ್ರದಲ್ಲಿ ಉಲ್ಲೇಖಿಸಿರುವಂತೆ, 04.09.2021 ರಂದು ಪೊಲೀಸ್ ನಿರೀಕ್ಷಕ(ಸಿವ್ಹಿಲ್) ಹುದ್ದೆಗೆ […]