ಸಿಂದಗಿ ಮತಕ್ಷೇತ್ರಕ್ಕೆ ಶಿವಾನಂದ ಪಾಟೀಲ ಸೋಮಜಾಳ ಪತ್ನಿ ವಿಶಾಲಾಕ್ಷಿಗೆ ಜೆಡಿಎಸ್ ಟಿಕೆಟ್- ಎಚ್. ಡಿ. ಕುಮಾರಸ್ವಾಮಿ ಘೋಷಣೆ
ವಿಜಯಪುರ: ಸಿಂದಗಿ ವಿಧಾನ ಸಭೆ ಕ್ಷೇತ್ರದ ಜೆಡಿಎಸ್ ಟಿಕೆಟ್ ನ್ನು ದಿ. ಶಿವಾನಂದ ಪಾಟೀಲ ಸೋಮಜಾಳ ಅವರ ಪತ್ನಿ ವಿಶಾಲಾಕ್ಷಿ ಅವರಿಗೆ ಘೋಷಣೆ ಮಾಡಲಾಗಿದೆ. ಈ ಮುಂಚೆ ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದ್ದ ಮಾಜಿ ಸೈನಿಕ ಶಿವಾನಂದ ಪಾಟೀಲ ಸೋಮಜಾಳ ಅವರು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ವಿಜಯಪುರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಿಂದಗಿಗೆ ಶ್ರದ್ಧಾಂಜಲಿ ಸಭೆಗೆ ಆಗಮಿಸಿದ್ದ ಎಚ್. ಡಿ. ಕುಮಾರಸ್ವಾಮಿ ಸಿಂದಗಿಯಲ್ಲಿ ನಡೆದ […]
ಕೇಂದ್ರ ಬಜೆಟ್ ದೇಶದ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದೆ- ಉಮೇಶ ಕಾರಜೋಳ ಪ್ರತಿಕ್ರಿಯೆ
ವಿಜಯಪುರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ದೇಶದ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ನಿರ್ಮಲಾ ಸೀತರಾಮನ್ ಅವರು, ಆದಾಯ ತೆರಿಗೆ ಪಾವತಿ ವಿಷಯವಾಗಿ ಜನಸಾಮಾನ್ಯರ ಹಿತವನ್ನು ಗಮನದರಲ್ಲಿಸಿಕೊಂಡು ಶ್ರೀಸಾಮಾನ್ಯನಿಗೆ ಯಾವುದೇ ತೆರಿಗೆ ಹೊರೆ ವಿಧಿಸದೇ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ವಿಸ್ತರಣೆ ಜೊತೆಗೆ […]
ಕೇಂದ್ರ ಬಜೆಟ್ ಕೇವಲ ಘೋಷಣೆಯ ಜನಪ್ರೀಯತೆ ಬಜೆಟ್- ದಿನಾವಶ್ಯಕ ಬೆಲೆಗಳ ಇಳಿಕೆಯಿಲ್ಲ- ಎಂ. ಬಿ. ಪಾಟೀಲ ಟೀಕೆ
ಬೆಂಗಳೂರು: ಕೇಂದ್ರ ಬಜೆಟ್ ಕೇವಲ ಘೋಷಣೆಯ ಜನಪ್ರೀಯತೆ ಬಜೆಟ್ ಆಗಿದೆ. ಈ ಬಜೆಟ್‍ನಲ್ಲಿ ಹೊಸ ವಿಚಾರಗಳು ಇಲ್ಲ. ಜನರಿಗೆ ಭಾರವಾಗಿರುವ ಪೇಟ್ರೋಲ್, ಡಿಸೇಲ್, ಪಡಿತರ ಎಣ್ಣೆ, ದಿನಬಳಕೆ ಗ್ಯಾಸ್‍ಗಳ ಬೆಲೆಯಲ್ಲಿ ಇಳಿಕೆ ಇಲ್ಲದಿರುವುದು ನಿರಾಸೆ ಮೂಡಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಸೇರಿಸಿರುವುದು ಸ್ವಾಭಾವಿಕ. ಏಕೆಂದರೆ ಅದು ರಾಷ್ಟ್ರೀಯ ಯೋಜನೆಗೆ ಸೇರಬೇಕಾದ ಎಲ್ಲ ಅರ್ಹತೆ […]
ಕಾಂಗ್ರೆಸ್ಸಿಗೆ ವಲಸಿಗರನ್ನು ಸೇರಿಸುವ ವಿಚಾರ ಹೈಕಮಾಂಡಿಗೆ ಬಿಟ್ಟಿದ್ದು- ಸಿಡಿ ವಿಚಾರ ಇಬ್ಬರು ವ್ಯಕ್ತಿಗಳ ನಡುವಿನ ವಿವಾದ- ಸತೀಶ ಜಾರಕಿಹೊಳಿ
ವಿಜಯಪುರ: ಕಾಂಗ್ರೆಸ್ ಬಿಟ್ಟವರು ವಾಪಸ್ ಬಂದ್ರೆ ಅವರನ್ನು ಸೇರಿಸಿಕೊಳ್ಳುವ ಅಥವಾ ಸೇರಿಸಿಕೊಳ್ಳದಿರುವ ಕುರಿತು ಹೈಕಮಾಂಡ್ ನಿರ್ಧರಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿ ತೊರೆದು ಈಗ ಮರುಸೇರ್ಪಡೆಯಾಗಲು ಬಯಸುವ ನಾಯಕರಿಗೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರದ ಕುರಿತು ಅವರು ಪ್ರತಿಕ್ರಿಯೆ ನೀಡದಿರ. ಯಾವ ನಾಯಕರು ಬೇಕು ಅಥವಾ ಬೇಡ ಎಂಬುದರ ಕುರಿತು ನಾವು ನಮ್ಮ ಅಭಿಪ್ರಾಯ ಹೇಳಬಹುದು. ಆದರೆ, […]
ಬಿ ಎಸ್ ವೈ ಮೇಲೆ ಕಲ್ಲೆಸೆದರೆ ಬಿಜೆಪಿಗೆ ಡ್ಯಾಮೇಜ್- ಹಿರಿಯರಾದ ಯತ್ನಾಳ ಬಗ್ಗೆ ಹೆಚ್ಚಿಗೆ ಹೇಳಲ್ಲ- ಬಿ. ವೈ. ವಿಜಯೇಂದ್ರ
ವಿಜಯಪುರ: ಬಿ. ಎಸ್. ಯಡಿಯೂರಪ್ಪ ಅವರಿಗೆ ಕಲ್ಲೆಸೆದರೆ ಅದರಿಂದ ಬಿಜೆಪಿಗೆ ಹೊಡೆತ ಬೀಳುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ನಾನು ಬೈಯ್ಯಲ್ಲ. ಹೈಕಮಾಂಡ್ ಸೂಚನೆ ಹಿನ್ನೆಲೆ ಬಿ. ಎಸ್. ಯಡಿಯೂರಪ್ಪ ಕುರಿತು ನಾನು ಸಾಪ್ಟ್ ಆಗಿದ್ದೇನೆ. ಅವರ ವಿರುದ್ಧ […]
ಹೈಕಮಾಂಡ್ ಸೂಚನೆ ಹಿನ್ನೆಲೆ ಬಿ ಎಸ್ ವೈ ವಿರುದ್ಧ ಸಾಫ್ಟ್ ಆಗಿದ್ದೇನೆ- ಸಿಎಂ ಬದಲಾವಣೆ ಇಲ್ಲ- ಚುನಾವಣೆಗೆ ಸಾಮೂಹಿಕ ನೇತೃತ್ವ- ಯತ್ನಾಳ
ವಿಜಯಪುರ: ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ಮಾತನಾಡದೇ ಸಾಫ್ಟ್ ಆಗಿ ಇರುತ್ತೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಹೇಳಿದ ಮೇಲೆ ಸಾಫ್ಟ್ ಆಗಲೇ ಬೇಕಲ್ವಾ? ಎಲ್ಲದಕ್ಕೂ ಗುರ್ ಎನ್ನಲು ಬರುತ್ತಾ? ಕಾಂಪ್ರೈಮೈಸ್ ಎನ್ನಲು ಅವರ ಆಸ್ತಿ ನಾನು ಕಸಿದುಕೊಂಡಿಲ್ಲ. ಏನೋ ರಾಜಕೀಯ ಸಂಘರ್ಷಗಳಿುತ್ತವೆ. ಈಗ ಅವೆಲ್ಲದಕ್ಕೂ ವಿರಾಮ ಹೇಳಿದ್ದೇನೆ. ಮಾಧ್ಯಮದವರೂ ಇನ್ನು ಮುಂದೆ ಯಡಿಯೂರಪ್ಪ ಅವರ ಬಗ್ಗೆ ಯಾವುದೇ ಪ್ರಶ್ನೆ […]
ಬಿಜೆಪಿ ಗೆಲುವಿಗೆ ಜನಪರ ಯೋಜನೆಗಳೇ ಶ್ರೀರಕ್ಷೆ- ಪ್ರಕಾಶ ಅಕ್ಕಲಕೋಟ
ವಿಜಯಪುರ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳೇ ಶ್ರೀರಕ್ಷೆಯಾಗಲಿವೆ ಎಂದು ಬಿಜೆಪಿ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ ಹೇಳಿದ್ದಾರೆ. ವಿಜಯಪುರ ನಗರದ ವಾ. ಸಂ. 33ರಲ್ಲಿ ಬರುವ ಬೂತ್ ಸಂಖ್ಯೆ 139 ಮತ್ತು 145ರ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನಪರ, ರೈತಪರ, ಕಾರ್ಮಿಕರ ಪರವಾದ ನೈಜವಾದ ಕಾಳಜಿ ಹೊಂದಿರುವ ಏಕೈಕ ಪಕ್ಷ ಬಿಜೆಪಿ, ದೇಶಾಭಿಮಾನ ಹಾಗೂ ಜನಸೇವೆಯೇ ಬಿಜೆಪಿಯೇ ಧ್ಯೇಯವಾಗಿದೆ. ಈ ಹಿನ್ನೆಲೆಯಲ್ಲಿ […]
ತಾಂಡಾಗಳಿಗೆ ಕಂದಾಯ ಗ್ರಾಮ ಮಾನ್ಯತೆ ಮಲ್ಲಿಕಾರ್ಜುನ ಖರ್ಗೆ ಕನಸಿನ ಕೂಸು- ಬಿಜೆಪಿ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ- ಎಂ ಎಲ್ ಸಿ ಪ್ರಕಾಶ ರಾಠೋಡ
ವಿಜಯಪುರ: ಲಂಬಾಣಿ ತಾಂಡಗಳು ಕಂದಾಯ ಗ್ರಾಮವಾಗಬೇಕು ಎನ್ನುವುದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕನಸಿನ ಕೂಸು. ಆದರೆ, ಬಿಜೆಪಿ ಇದರ ಕ್ರೆಡಿಟ್ ತೆಗೆದುಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಮತ್ತು ಕೆಪಿಸಿಸಿ ವಕ್ತಾರ ಪ್ರಕಾಶ ರಾಠೋಡ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಖರ್ಗೆ ಅವರ ಕನಸಿಗೆ ಪೂರ್ಣಶಕ್ತಿ ಬಂದಿದೆ. ಕಂದಾಯ ಗ್ರಾಮ ಘೋಷಣೆಗೆ ಎಲ್ಲಾ ಸಿದ್ಧತೆಗಳಾಗಿದ್ದರೂ ಬಿಜೆಪಿ ಕಳೆದ ಮೂರೂವರೆ ವರ್ಷದಿಂದ ತಾಂಡಾ ಜನರನ್ನು ಚಂಚಿಸಿದೆ. ಈಗ ಬಿಜೆಪಿ […]
ಸಿಎಂ ಆಗಿದ್ದರೂ ಸರಕಾರಿ ಬಂಗಲೆ ನೀಡಿರಲಿಲ್ಲ- ಸಿದ್ಧರಾಮಯ್ಯ ಹಾಡಿದ್ದೆ ಹಾಡೋ ಕಿಸಬಾಯಿ ದಾಸ- ಎಚ್ ಡಿ ಕೆ ವಾಗ್ದಾಳಿ
ವಿಜಯಪುರ: ಸಮ್ಮಿಶ್ರ ಸತಕಾರದಲ್ಲಿ ನಾನು ಸಿಎಂ ಆಗಿದ್ದಾಗ ಸರಕಾರಿ ಬಂಗಲೆ ನೀಡಿರಲಿಲ್ಲ. ಹೀಗಾಗಿ ವೆಸ್ಟೆಂಡ್ ಹೋಟೇಲಿನಲ್ಲಿರುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾನಾಡಿದ ಅವರು, ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಹಾಡಿದ್ದೇ ಹಾಡೋ ಕಿಸಬಾಯಿ ದಾಸ್. ಕಾಂಗ್ರೆಸ್ ಕೈಗೊಂಡಿರುವ ಪ್ರಜಾಧ್ವನಿ ಹೆಸರನ್ನು ಕಾಂಗ್ರೆಸ್ ಧ್ವನಿ ಎಂದು ಬದಲಾಯಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಸಿದ್ಧರಾಮಯ್ಯ ಅವರು ಜೆಡಿಎಸ್ ನ್ನು […]
ಬಸವನಾಡಿನಲ್ಲಿ ಬಿಜೆಪಿ ವತಿಯಿಂದ ಸ್ಟಿಕ್ಕರ್ ಅಂಟಿಸುವುದು, ಕರಪತ್ರ ಹಂಚಿಕೆಗೆ ಜೆ. ಪಿ. ನಡ್ಡಾ ಚಾಲನೆ
ವಿಜಯಪುರ: ನಗರದ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ್ಲಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಗೋಡೆಗೆ ಸ್ಟಿಕ್ಕರ್ ಅಂಟಿಸುವುದು ಮತ್ತು ಕರಪತ್ರ ಹಂಚಿಕೆ ಕಾರ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಚಾಲನೆ ನೀಡಿದರು. ವಿಜಯಪುರ ನಗರದ ವಾರ್ಡ್ ಸಂಖ್ಯೆ 12 ಮತ್ತು 10ರಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಸದಸ್ಯತ್ಯವ ಅಭಿಯಾನಕ್ಕೆ ಜೆ. ಪಿ. ನಡ್ಡಾ ಚಾಲನೆ ನೀಡಿದರು ವೈದ್ಯ ಡಾ. ರಾಚಪ್ಪನವರ ಅವರ ಮನೆಗೆ ಕಂಪೌಂಡ್ ಗೋಡೆಗೆ ಬಿಜೆಪಿ ಚಿನ್ಹೆಯಾದ ಕಮನಲದ ಸ್ಟಿಕ್ಕರ್ ಅಂಟಿಸಿದರು. […]