ನಾ ನಾಯಕಿ ಸಮಿತಿ ರಚಿಸುವ ಮೂಲಕ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ- ಕಾಂತಾ ನಾಯಕ

ವಿಜಯಪುರ: ನಾ ನಾಯಕಿ ಎಂಬ ಸಮಿತಿ ರಚಿಸುವ ಮೂಲಕ ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಲಾಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ಹೇಳಿದರು.  ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಕಳೆದ ಒಂದೂವರೆ ವರ್ಷ ಹಿಂದೆ ನಾ ನಾಯಕಿ ಎಂಬ ಸಮಿತಿಗೆ ಚಾಲನೆ ನೀಡಿದ್ದಾರೆ.  ಈ ಸಮಿತಿಯ ಮೂಲಕ ಗ್ರಾಮೀಣ ಮತ್ತು ತಾಲೂಕು ಮಟ್ಟದ ಪ್ರತಿ ಹಂತದಲ್ಲಿಯೂ ಮಹಿಳೆಯರು ತಮ್ಮ ನಾಯಕತ್ವದ ಗುಣಗಳ ಮೂಲಕ ರಾಜಕೀಯಕ್ಕೆ ತರಲು ಶ್ರಮಿಸಲಾಗುತ್ತಿದೆ ಎಂದು […]

ಬಿಜೆಪಿ ಬಿಜಿನೆಸ್ ಜನತಾ ಪಾರ್ಟಿಯಾಗಿದೆ- ಜನರನ್ನು ಎರೋಪ್ಲೇನ್ ಹತ್ತಿಸುತ್ತಿದೆ- ಮಧು ಬಂಗಾರಪ್ಪ

ವಿಜಯಪುರ: ಬಿಜೆಪಿ ಬಿಜಿನೆಸ್ ಜನತಾ ಪಾರ್ಟಿಯಾಗಿದೆ.  ಜನರಿಗೆ ಏರೋಪ್ಲೇನ್ ಹತ್ತಿಸುತ್ತಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮತ್ತು ಮಾಜಿ ಶಾಸಕ ಮಧು ಬಂಗಾರಪ್ಪ ಟೀಕಿಸಿದ್ದಾರೆ.  ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಅಭಿವೃದ್ಧಿಯನ್ನು ಸಂಪೂರ್ಣಾಗಿ ಕಡೆಗಣಿಸಿದೆ.  ರಸ್ತೆ, ಚರಂಡಿ ಸೇರಿದಂತೆ ಎಲ್ಲ ಕಾಮಗಾರಿಗಳಲ್ಲಿ ಕಮಿಷನ್ ಹೊಡೆಯುತ್ತಿದೆ.  ಬಿಜೆಪಿಯವರು ದೇಶ ಆಳಲು ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಕಟೀಲ ಜಿಹಾದ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ.  […]

ಸಿಡಿ ಇಟ್ಟುಕೊಂಡೇ ಮಂತ್ರಿಯಾಗುತ್ತಾರೆ- ನಾ ಅಂಥ ಹಲ್ಕಾ ಕೆಲಸ ಮಾಡಲ್ಲ- ನಿರಾಣಿ ವಿರುದ್ಧ ಯತ್ನಾಳ ವಾಗ್ದಾಳಿ

ವಿಜಯಪುರ: ಸಿಡಿ ಇಟ್ಟುಕೊಂಡೇ ಇವರು ಮಂತ್ರಿಯಾಗುತ್ತಾರೆ, ನಾ ಅಂಥ ಹಲ್ಕಾ ಕೆಲಸ ಮಾಡಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಬಗ್ಗೆ, ಹರಿಹರ ಸ್ವಾಮೀಜಿ ಬಗ್ಗೆ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಗ್ಗೆ ಮಾತನಾಡಿದರೆ ಸರಿಯಿರಲ್ಲ ಎಂದು ಸಚಿವ ಮುರುಗೇಶ ನಿರಾಣಿ ಬೆಳಿಗ್ಗೆ ನೀಡಿರುವ ಎಚ್ಚರಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ಆಂವಾ ಏನ್ ಹೇಳುದ ಹೇಳಲಿ ಅಂತಾ ಹೇಳಿಕೆಗೆ ಉತ್ತರ ಕೊಡುವ ತಾಕತ್ತ ಇದೆ.  ನಮ್ಮ ಬಳಿಯೂ ಬಹಳ ಇದೆ.  […]

ಚುನಾವಣೆಯಲ್ಲಿ ಮತದಾರರು ಪಾಠ ಕಲಿಸಲಿದ್ದಾರೆ- ಯತ್ನಾಳ ಹೆಸರು ಹೇಳದೇ ಸಚಿವ ಮುರುಗೇಶ ನಿರಾಣಿ ವಾಗ್ದಾಳಿ

ವಿಜಯಪುರ: ಬಿ. ಎಸ್. ಯಡಿಯೂರಪ್ಪ, ಹರಿಹರ ಪೀಠಾಧೀಶರು ಮತ್ತು ತಮ್ಮ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡುತ್ತಿರುವ ಟೀಕೆಗಳಿಗೆ ಸಚಿವ ನಿರಾಣಿ ಯತ್ನಾಳ ಹೆಸರು ಹೇಳದೇ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ನನ್ನ ಬಗ್ಗೆ, ಸ್ವಾಮೀಜಿ ಬಗ್ಗೆ, ಸರಕಾರದ ಬಗ್ಗೆ ಒಬ್ಬರು ಹಗುರವಾಗಿ ಮಾತನಾಡುತ್ತಿದ್ದಾರೆ.  ಲಿಂ. ಸ್ವಾಮಿ ಸಿದ್ಧೇಶ್ವರ ಶ್ರೀಗಳ ನಾಡಿನಲ್ಲಿ ಇದ್ದರೂ ಅವರ ಹಾವಭಾವ, ಮಾತುಗಳಲ್ಲಿ ಬಲದಾವಣೆಯಾಗಿಲ್ಲ.  ಯಡಿಯೂರಪ್ಪ, ನಿರಾಣಿ, […]

ಪಂಚಮಸಾಲಿ ಮೀಸಲಾತಿ ವಿಚಾರ: ಪರ, ವಿರೋಧ ಕುರಿತು ಯಾವುದೇ ಹೇಳಿಕೆ ನೀಡದಂತೆ ಬಿಜೆಪಿ ಹೈಕಮಾಂಡ್ ಯತ್ನಾಳ ಬಾಯಿ ಮುಚ್ಚಿಸಿದೆ- ಡಿ. ಕೆ. ಶಿವಕುಮಾರ ಆರೋಪ

ವಿಜಯಪುರ: ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಏನಾದರೂ ಮಾತನಾಡಿದರೆ ಪಕ್ಷದಿಂದ ಉಚ್ಛಾಟಿಸುವುದಾಗಿ ಬಿಜೆಪಿ ಹೈಕಮಾಂಡ ಎಚ್ಚರಿಕೆ ನೀಡಿ ಅವರ ಬಾಯಿ ಮುಚ್ಚಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಕಾರ ಹೊರದಾಗಿ ಘೋಷಿಸಿರುವ ಮೀಸಲಾತಿ ವಿಚಾರ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದರು. ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬಾಯಿ ಮುಚ್ಚಿಸಿದೆ.  ಏನಾದ್ರೂ ಬಾಯಿ ತೆಗೆದರೆ ಪಾರ್ಟಿಯಿಂದ ಕಿತ್ತಾಕಿ ಬಿಡುತ್ತೇವೆ […]

ಡಿ. 30ರಂದು ಗುಮ್ಮಟ ನಗರಿಯಲ್ಲಿ ಕೃಷ್ಣಾ ಜನಾಂದೋಲನ ಸಮಾವೇಶ- ಎಂ. ಬಿ. ಪಾಟೀಲ

ವಿಜಯಪುರ: ಕೃಷ್ಣಾ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಬಿಜೆಪಿ ಸರಕಾರ ತೋರುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ಹಾಗೂ ಬಿಜೆಪಿ ಸರಕಾರದ ವೈಫಲ್ಯದ ಕುರಿತು ಕೃಷ್ಣಾ ಜಲಾಂದೋಲನ ಸಮಾವೇಶ ದಿ. 30 ರಂದು ಗುಮ್ಮಟ ನಗರಿ ವಿಜಯಪುರದಲ್ಲಿ ನಡೆಯಲಿದೆ. ಡಿ. 30ರಂದು ಶುಕ್ರವಾರ ಮ. 3ಕ್ಕೆ ವಿಜಯಪುರ ನಗರದ ದರ್ಬಾರ ಹೈಸ್ಕೂಲ್ ಮೈದಾನದಲ್ಲಿ ಈ ಸಮಾವೇಶ ನಡೆಯಲಿದೆ. ಇದರಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ, ಮಾಜಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ, […]

ಎಂ. ಬಿ. ಪಾಟೀಲ‌ ಕಾರ್ಯವೈಖರಿ ಮೆಚ್ಚಿ ಕಮಲ ತೊರೆದು ಕಾಂಗ್ರೆಸ್ ಸೇರಿದ ನೂರಾರು ಕಾರ್ಯಕರ್ತರು

ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಕಾರ್ಯವೈಖರಿಯನ್ನು ಮೆಚ್ಚಿ ಬಿಜ್ಜರಗಿ, ಅಳಗಿನಾಳ, ಘೋಣಸಗಿ ಗ್ರಾಮಗಳ ನಾನಾ ಸಮಾಜದ ಸುಮಾರು 200 ಜನ ಮುಖಂಡರು ಬಿಜೆಪಿ ತೊರೆದೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಬಿಜ್ಜರಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂ. ಬಿ. ಪಾಟೀಲ ಅವರ ಸಮ್ಮುಖದಲ್ಲಿ ಗಾಣಿಗ ಸಮಾಜ, ಜಂಗಮ ಸಮಾಜ, ಮರಾಠ ಸಮಾಜ, ಭೋವಿ ಸಮಾಜ, ಪಂಚಮಸಾಲಿ ಸಮಾಜ ಹಾಗೂ ತಳವಾರ ಸಮಾಜದ ನೂರಾರು ಜನ ಹಿರಿಯ ಮುಖಂಡರು ಮತ್ತು ಯುವಕರು ಕಾಂಗ್ರೆಸ್ಸಿಗೆ […]

ಡಿ. 30ಕ್ಕೆ ವಿಜಯಪುರದಲ್ಲಿ ರಾಜ್ಯ ಸರಕಾರ ಯುಕೆಪಿಗೆ ನೀಡಿರುವ ಕೊಡುಗೆಯನ್ನು ಬಿಚ್ಚಿಡುತ್ತೇವೆ- ಎಂ. ಬಿ. ಪಾಟೀಲ

ವಿಜಯಪುರ: ಡಿ. 30 ರಂದು ವಿಜಯಪುರದಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಹಿಂದಿನ ಕಾಂಗ್ರೆಸ್ ಸರಕಾರ ಮತ್ತು ಈಗಿನ ರಾಜ್ಯ ಸರಕಾರ ಕೃಷ್ಣಾ ಕಣಿವೆಯ ನೀರಾವರಿ ಯೋಜನೆಗಳಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಬಿಚ್ಚಿಡುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಲಮಟ್ಟಿ ಜಲಾಷಯದ ಎತ್ತರವನ್ನು 524.256 ಮೀ. ಗೆ ಹೆಚ್ಚಿಸುವ ಕುರಿತು ಮತ್ತು ನಮ್ಮ ಪಾಲಿನ 130 […]

ಶಿಸ್ತಿನ ಪಕ್ಷದಲ್ಲಿ ಸ್ವಾರ್ಥ ಹೆಚ್ಚಾದಾಗ ಆಂತರಿಕ ಕಚ್ಚಾಟ ಉಂಟಾಗುತ್ತದೆ- ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

ವಿಜಯಪುರ: ಶಿಸ್ತಿನ ಪಕ್ಷದಲ್ಲಿ ಸ್ವಾರ್ಥ ಹೆಚ್ಚಾದಾಗ ಆಂತರಿಕ ಕಚ್ಚಾಟ ಹೆಚ್ಚಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಚಿವರು ಮತ್ತು ಶಾಸಕರ ಮಧ್ಯೆ ನಡೆಯುತ್ತಿರುವ ಕಿತ್ತಾಟದಿಂದ ಬಿಜೆಪಿ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂಬ ಪ್ರಶ್ನೆಗೆ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು. ಎಲ್ಲ ಕಾಲದಲ್ಲಿ ಎಲ್ಲ ಪಕ್ಷಗಳಲ್ಲಿಯೂ ಆಂತರಿಕ ಕಿತ್ತಾಟ ಇದ್ದೆ ಇದೆ.  ನಮ್ಮ ಪಕ್ಷದಲ್ಲಿ ಬೇರೆ ಪಕ್ಷಗಳಿಗಿಂತ ಕಡಿಮೆ ಕಿತ್ತಾಟವಿದೆ.  ಹಿಂದೆ ವೀರಪ್ಪ ಮೋಯ್ಲಿ ಸಿಎಂ ಆಗಿದ್ದಾಗ, ಸಚಿವ […]

Land Acquisition: ವಿಜಯಪುರ ಜಿಲ್ಲೆಯ ಭೂಸ್ವಾಧೀನ ತಾರತಮ್ಯ ನಿವಾರಣೆಗೆ ಸಚಿವ ಸಂಪುಟ ನಿರ್ಣಯ: ಗೋವಿಂದ ಕಾರಜೋಳ

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3 ರಡಿ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಏಕರೂಪದ ಬೆಲೆ ನಿಗದಿಪಡಿಸಿ ಐತೀರ್ಪನ್ನು ರಚಿಸುವ ಮೂಲಕ ಪರಿಹಾರ ವಿತರಿಸಲು ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಮಹತ್ವದ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಕೃಷ್ಣಾ ನದಿಯ ಎಡದಂಡೆಯಲ್ಲಿ ಮುಳುಗಡೆಯಾಗಲಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ 14 ಗ್ರಾಮಗಳು ಕೊಲ್ಹಾರ ತಾಲ್ಲೂಕಿನ ಆರು ಗ್ರಾಮಗಳು, ನಿಡಗುಂದಿ ತಾಲ್ಲೂಕಿನ ಒಂಬತ್ತು ಗ್ರಾಮಗಳು ಮುಳುಗಡೆ ಹೊಂದುತ್ತಿವೆ. ಮುಳಗುಡೆ ಹೊಂದಲಿರುವ ಜಮೀನುಗಳ […]