JDS Candidates List: ವಿಜಯಪುರ ಜಿಲ್ಲೆಯ 7 ಜೆಡಿಎಸ್ ಅಭ್ಯರ್ಥಿಗಳ ಟಿಕೆಟ್ ಘೋಷಣೆ- ರಾಜ್ಯದ ಉಳಿದ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿ? ಇಲ್ಲಿದೆ ಮಾಹಿತಿ
ಬೆಂಗಳೂರು: 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರಕ್ಕೆ ಬರಲು ಜೆಡಿಎಸ್ ಈಗಾಗಲೇ ಕಾರ್ಯೋನ್ಮುಖವಾಗಿದ್ದು, ರಾಜ್ಯದ 224 ಕ್ಷೇತ್ರಗಳ ಪೈಕಿ 93 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ವಿಜಯಪುರ ನಗರ ಮತಕ್ಷೇತ್ರವನ್ನು ಹೊರತು ಪಡಿಸಿ ಉಳಿದ ಏಳು ಮತಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ವಿಜಯಪುರ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ. ಮುದ್ದೇಬಿಹಾಳ- ಡಾ. ಚನ್ನಬಸಪ್ಪ ಸಂಗಪ್ಪ ಸೋಲ್ಲಾಪುರ ದೇವರ ಹಿಪ್ಪರಗಿ- ರಾಜುಗೌಡ ಪಾಟೀಲ ಬಸವನ ಬಾಗೇವಾಡಿ- ಪರಮಾನಂದ ತನಿಖೆದಾರ ಬಬಲೇಶ್ವರ- ಬಸವರಾಜ […]
GP Honorarium: ಗ್ತಾ. ಪಂ. ಸದಸ್ಯರ ಮಾಸಿಕ ಗೌರವಧನ ಹೆಚ್ಚಳ ತೃಪ್ತಿಕರವಾಗಿಲ್ಲ- ಸುನೀಲಗೌಡ ಪಾಟೀಲ ಆಕ್ರೋಶ
ವಿಜಯಪುರ: ರಾಜ್ಯ ಸರಕಾರ ಗ್ರಾ. ಪಂ. ಜನಪ್ರತಿನಿಧಿಗಳ ಗೌರವ ಧನ ಹೆಚ್ಚಳ ಮಾಡಿದೆ. ಆದರೆ, ಇದು ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ ಎಂದು ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಗ್ರಾ. ಪಂ. ಜನಪ್ರತಿನಿಧಿಗಳಿಗೆ ಕೇರಳ ಮಾದರಿಯಲ್ಲಿ ಸೌಲಭ್ಯ ಒದಗಿಸಯವಂತೆ ಸದಸನ ಒಳಗೆ ಮತ್ತು ಹೊರಗೆ ಹಲವಾರು ಬಾರಿ ಧ್ವನಿ ಎತ್ತುತ್ತ ಹೋರಾಟ ನಡೆಸಿದ್ದೇನೆ. ಈಗ ರಾಜ್ಯ ಸರಕಾರ ಗೌರವ ಧನ […]
BSY Leadership: ಯಡಿಯೂರಪ್ಪ ಪ್ರಶ್ನಾತೀತ ನಾಯಕ- ಅವರ ನೇತೃತ್ವದಲ್ಲಿಯೇ ಚುನಾವಣೆ- 17 ಜನ ಶಾಸಕರು ಬಿಜೆಪಿಯಲ್ಲಿಯೇ ಇರುತ್ತೇವೆ- ಭೈರತಿ ಬಸವರಾಜ
ವಿಜಯಪುರ: ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಬಿಜೆಪಿಯ ಹಿರಿಯ ಪ್ರಶ್ನಾತೀತ ನಾಯಕರಾಗಿದ್ದಾರೆ. ಅವರ ಹಾಗೂ ಹಿರಿಯರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು. ಬಿ. ಎಸ್. ಯಡಿಯೂರಪ್ಪ ಅವರನ್ನು ಪಕ್ಷ ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಯಡಿಯೂರಪ್ಪ ಹಾಗೂ ಹಿರಿಯರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಮತ್ತೆ ಬಿಜೆಪಿಯನ್ನು ರಾಜ್ಯದಲ್ಲಿ ಮರುಸ್ಥಾಪಿಸುವ ಕೆಲಸವನ್ನು […]
ಶಿಕ್ಷಕರ, ವಿವಿಗಳ ಸಮಸ್ಯೆ ನಿವಾರಣೆಗೆ ಅದತ್ಯೆ ನೀಡುವಂತೆ ಮಾಜಿ ಎಂಎಲ್ಸಿ ಅರುಣ ಶಹಾಪುರ ಆಗ್ರಹ
ವಿಜಯಪುರ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಶಿಕ್ಷಕರ, ಶಾಲಾ-ಕಾಲೇಜುಗಳ ಮತ್ತು ವಿಶ್ವವಿದ್ಯಾಲಯಗಳ ನಾನಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ ಮಾಜಿ ಸದಸ್ಯ ಅರುಣ ಶಹಾಪುರ ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ -2020 ಜಾರಿಗೊಳಿಸಿದ ಮೊದಲ ರಾಜ್ಯ ಎಂದು ಕರ್ನಾಟಕ ಹೆಗ್ಗಳಿಕೆ ಪಡೆದುಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ […]
ವೀರಶೈವ ಮಹಾಸಭೆ ನಿರ್ಧಾರಕ್ಕೆ ಬದ್ಧ- ವಸಂತ ಋುತು ಬಂದಾಗ ಕಾಗೆ ಯಾವುದು? ಕೋಗಿಲೆ ಯಾವುದು ಗೊತ್ತಾಗುತ್ತೆ- ವಚನಾನಂದ ಸ್ವಾಮೀಜಿ
ವಿಜಯಪುರ: ಈ ಮಧ್ಯೆ, ದಾವಣಗೆರೆಯಲ್ಲಿ ವೀರಶೈವ ಮಹಾಸಭೆ ಮೂರು ದಿನಗಳ ಕಾಲ ನಡೆಯಲಿದೆ. ಈ ಸಭೆಯಲ್ಲಿ ಕೈಗೊಳ್ಳಲಾಗುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ತಿಳಿಸಿದ ವಚನಾನಂದ ಶ್ರೀಗಳು, ಮೂರನೇ ಪೀಠ ಮೂರಾಬಟ್ಟೆ ಎಂಬುದು ಯತ್ನಾಳ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು. ಮಾತನಾಡುವವರ ಬಗ್ಗೆ ಏನೂ ಮಾಡಲು ಆಗುವುದಿಲ್ಲ. ಅವರು ಮಾತಾಡುತ್ತಲೇ ಇರುತ್ತಾರೆ. ಬೈದವರೆನ್ನ ಬಂಧುಗಳೆನ್ನೆ. ಇದು ಬಸವ ಧರ್ಮ ಹೇಳುತ್ತದೆ. ಎತ್ತರದಲ್ಲಿ ಇರುವುದರ ಬಗ್ಗೆ ಎಲ್ಲರೂ ಮಾತಾಡುತ್ತಾರೆ. ನಾವು ನಮ್ಮ ಕೆಲಸ ಮಾಡುತ್ತಿರಬೇಕು ಎಂದು ವಚನಾನಂದ ಸ್ವಾಮೀಜಿ […]
ಹಮೀದ್ ಮುಶ್ರಿಫ್ ಜನಸಂಪರ್ಕ ಕಚೇರಿಯಲ್ಲಿ ಸೋನಿಯಾ ಗಾಂಧಿ ಜನ್ಮದಿನ ಆಚರಣೆ
ವಿಜಯಪುರ: ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಅವರ ಜನಸಂಪರ್ಕ ಕಚೇರಿಯಲ್ಲಿ ಸೋನಿಯಾ ಗಾಂಧಿ ಅವರ ಜನ್ಮದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಮೀದ್ ಮುಶ್ರಿಫ್, ಸೋನಿಯಾ ಗಾಂಧಿ ಜೀವನ ಆದರ್ಶಗಳನ್ನು ಶ್ಲಾಘಿಸಿದರು. ಅವರ ನೇತೃತ್ವದಲ್ಲಿ ಮತ್ತೆ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೆ ಬರುಲಿದೆ. ದೇಶಕ್ಕಾಗಿ ಹಲವಾರು ತ್ಯಾಗಗಳನ್ನು ಮಾಡಿರುವ ಸೋನಿಯಾ ಗಾಂಧಿ ಜೀವನ ಸಾಕಷ್ಟು ಏರಿಳಿತಗಳಿಂದ ಕೂಡಿದ್ದರೂ ಧೃತಿಗೆಡದೆ ಪಕ್ಷವನ್ನು ಬಲಿಷ್ಠಗೊಳಿಸುವ ಪ್ರಾಮಾಣಿಕ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಒಬ್ಬ ಮಹಿಳೆಯಾಗಿ ಒಂದು ರಾಷ್ಟ್ರೀಯ ಪಕ್ಷದ ಪರಮೋಚ್ಛ […]
Maha Yatnal: ಮಹಾರಾಷ್ಟ್ರದಿಂದ ದೇಶದಲ್ಲಿ ಆಶಾಂತಿ ಯತ್ನ- ರಾಜ್ಯದಲ್ಲಿ ಗುಜರಾತ್ ಮಾದರಿ ಟಿಕೆಟ್ ಹಂಚಿಕೆ ಸಾಧ್ಯತೆ- ನಟ ಚೇತನ ಹೆಸರೇದ ತೀವ್ರ ವಾಗ್ದಾಳಿ ನಡೆಸಿದ ಯತ್ನಾಳ
ವಿಜಯಪುರ: ಗಡಿ ವಿಚಾರದಲ್ಲಿ ಮಹಾರಾಷ್ಟ್ರ ದೇಶದಲ್ಲಿ ಅಶಾಂತಿ ಮೂಡಸುವ ಕಲಸ ಮಾಡುತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿನಗೆ ಮಾತನಾಡಿದ ಅವರು, ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಇದೇ ರೀತಿಯ ಕ್ಯಾತೆ ತೆಗೆಯುತ್ತ ಬಂದಿದೆ. ಮಹಾಜನ್ ವರದಿಯನ್ನು ಮಹಾರಾಷ್ಟ್ರ ಸರಕಾರ ಒಪ್ಪಿಲ್ಲ. ಮಹಾಜನ್ ಆಯೋಗವನ್ನ ರಚನೆ ಮಾಡಿಸಿದವರು ಮಹಾರಾಷ್ಟ್ರದವರು. ನಂತರ ಮಹಾಜನ್ ಆಯೋಗದ ವರದಿಗೆ ತಕರಾರು ಮಾಡಿದರು. ದೇಶದಲ್ಲಿ ಶಾಂತಿಯಿಂದ ಇರಬೇಕೆಂಬ ಇಚ್ಛೆ ಮಹಾರಾಷ್ಟ್ರದವರಿಗಿಲ್ಲ. ಕರ್ನಾಟಕ ಮಹಾರಾಷ್ಟ್ರ […]
Harihar Yatnal: ನಿರಾಣಿ ಸಚಿವರಾಗಲು ಪೀಠ ಕಟ್ಟಿದ್ದಾರೆ- ಹರಿಹರ ಶ್ರೀ ಬ್ರೋಕರ್- ಶಾಸಕ ಯತ್ನಾಳ
ವಿಜಯಪುರ: ಹರಿಹರ ಪಂಚಮಸಾಲಿ ಪೀಠಾಧೀಶ ವಚನಾನಂದ ಸ್ವಾಮೀಜಿ ಓರ್ವ ಬ್ರೋಕರ್ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಜೋಕರ್ ಪದ ಬಳಕೆ ಮಾಡಿರುವ ಪಚನಾನಂದ ಶ್ರೀಗಳ ವಿರುದ್ಧ ಹರಿಹಾಯ್ದರು. ಹರಿಹರ ಪೀಠದ ಸ್ವಾಮೀಜಿ ಬ್ರೋಕರ್ ಸ್ವಾಮಿ ಆಗಿದ್ದಾರೆ. ಹಣ ವಸೂಲಿ ಮಾಡುವುದು, ಮಂತ್ರಿ ಮಾಡಿ ಎಂದು ಹಣ ಕೇಳುವ ಕೆಲಸ ಮಾಡುತ್ತಾರೆ. ಮಂತ್ರಿ ಮಾಡಿ ಎಂದು ಬ್ರೋಕರ್ ಕೆಲಸ ಮಾಡುತ್ತಾರೆ […]
Congress Full List: ಕಾಂಗ್ರೆಸ್ಸಿನಿಂದ ಸ್ಪರ್ಧೆ ಬಯಸಿ 66 ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆ- ಇಲ್ಲಿದೆ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಮಾಹಿತಿ
ವಿಜಯಪುರ: 2023ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳಿಂದ ಕೆಪಿಸಿಸಿ ಅರ್ಜಿ ಆಹ್ವಾನಿಸಿದ್ದು ಕೊನೆಯ ದಿನಾಂಕವೂ ಮುಗಿದಿದೆ. ವಿಜಯಪುರ ಜಿಲ್ಲೆಯ ಎಂಟು ಕ್ಷೇತ್ರಗಳಿಂದ ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುವವರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಈ ಪಟ್ಟಿ ನೋಡಿದರೆ, ವಿಜಯಪುರ ನಗರದ ಮತಕ್ಷೇತ್ರದಲ್ಲಿ ಎಷ್ಟೋಂದು ಜನ ಆಕಾಂಕ್ಷಿಗಳಿದ್ದಾರೆ ಎಂದು ಎಲ್ಲರೂ ಹುಬ್ಬೇರಿಸುವಂತಾಗಿದೆ. ಮತಕ್ಷೇತ್ರವಾರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇಲ್ಲಿದೆ. 26. ಮುದ್ದೇಬಿಹಾಳ ಮತಕ್ಷೇತ್ರ ಮಲ್ಲಿಕಾರ್ಜುನ ಮದರಿ ಸಣ್ಯಪ್ಪ ಎಸ್. ಹುಲ್ಲೂರ ಸಿ. ಎಸ್.(ಅಪ್ಪಾಜಿ) […]
ಗಡಿ, ಜಲ, ಭಾಷೆ ವಿಚಾರದಲ್ಲಿ ಮೂರು ಪಕ್ಷದವರು ಒಗ್ಗಟ್ಟಾಗಿದ್ದೇವೆ- ವಿಜಯಪುರದಿಂದ ಅಲ್ಪಸಂಖ್ಯಾತರನ್ನು ಶಾಸಕನಾಗಿ ಮಾಡುವೆ- ಎಂ. ಬಿ. ಪಾಟೀಲ
ವಿಜಯಪುರ: ನೆಲ, ಜಲ, ಭಾಷೆ ವಿಚಾರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈ ಹಿಂದೆ ಮತ್ತು ಇಂದು ಒಂದಾಗಿದ್ದು, ಮುಂದೆಯೂ ಒಂದಾಗಿರುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ರಾಜಕೀಯ ಲಾಭಕ್ಕಾಗಿ ಈ ವಿವಾದವನ್ನು ಕೆದಕುತ್ತಿದೆ ಎಂದು ಟೀಕಿಸಿದರು. ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರಕಾರ ವಸತಿ ಯೋಜನೆಯಡಿ ಒಂದೂ ಮನೆಗಳನ್ನು ನಿರ್ಮಿಸಿಲ್ಲ. ಕೊರೊನಾ ಸಂದರ್ಭದಲ್ಲಿಯೂ ಸೂಕ್ತ ಪರಿಹಾರ ನೀಡಿಲ್ಲ. 40% […]