Voting Booth Change: ಪಾಲಿಕೆ ಚುನಾವಣೆ: ಕೆಲವು ಮತಗಟ್ಟೆಗಳ ಹೆಸರು, ವಿಳಾಸ ಬದಲಾವಣೆ- ಎಲ್ಲಿ, ಯಾಕೆ ಗೊತ್ತಾ?
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ-2022ಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಇರುವ ಮತಗಟ್ಟೆ ಹೆಸರು ಮತ್ತು ವಿಳಾಸವನ್ನು ಮರು ನಾಮಕರಣ ಮತ್ತು ವಿಂಗಡಣೆ ಮಾಡಿ ಅದೇ ಅವರಣದಲ್ಲಿನ ಬೇರೆ ಕೊಠಡಿಯಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ. ಇತ್ತೀಚಿಗೆ ಸತತವಾಗಿ ಸುರಿದ ಮಳೆಯಿಂದಾಗಿ ಕೆಲವು ಸರಕಾರಿ, ಖಾಸಗಿ ಶಾಲೆಗಳಲ್ಲಿ ಸ್ಥಾಪಿಸಲಾದ ಮತಗಟ್ಟೆ ಕೇಂದ್ರಗಳಲ್ಲಿ ಮೇಲ್ಛಾವಣಿ ಸೋರುತ್ತಿದ್ದು, ಶಿಥಿಲಗೊಂಡಿವೆ. ಕೆಲವೊಂದು ಮತದಾನ ಕೇಂದ್ರಗಳ ವಿಳಾಸದಲ್ಲಿ ಇಲಾಖೆಯಿಂದ ಶಾಲೆಗಳಿಗೆ […]
Arunsingh Yatnal: ಅರುಣಸಿಂಗ್ ಬಗ್ಗೆ ಈಗ ಮಾತಾಡೊಲ್ಲ- ನಟ ಚೇತನ ನಾಲಾಯಕ್ ಎಂದ ಶಾಸಕ
ವಿಜಯಪುರ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್ ತಮ್ಮ ವಿರುದ್ಧ ನೀಡಿರುವ ಹೇಳಿಕೆಯ ಬಗ್ಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ನಯವಾಗಿಯೇ ಎಚ್ಚರಿಕೆ ನೀಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಂಥ, ಇಂಥ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನನಗೆ ಸಮಯ ಇಲ್ಲ ಎಂದು ಹೇಳಿದರು. ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ನನಗೆ ಬೇರೆ ಪ್ರತಿಕ್ರಿತೆ ನೀಡಲು ಸಮಯ ಇಲ್ಲ. ನಾನು ಯಾರನ್ನಾದರೂ ಬಿಡ್ತೀನಾ? ನಾನು ಯಾರ ಮನೆಗೂ ಹೋಗಿ ನಿಂತಿಲ್ಲ. ವೇದಿಕೆಯಲ್ಲಿ ಅಬ್ಬರಿಸುತ್ತೇನೆ. ನನ್ನ […]
Election Symbols: ಕಣದಲ್ಲಿರುವ 174 ಅಭ್ಯರ್ಥಿಗಳ ಹೆಸರು, ಅವರಿಗೆ ಸಿಕ್ಕಿರುವ ಚಿನ್ಹೆಗಳು ಯಾವವು ಗೊತ್ತಾ?
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡುಗಳಿಗೆ ಅ. 28 ರಂದು ಮತದಾನ ನಡೆಯುತ್ತಿದ್ದು, ಇದೀಗ ಅಂತಿಮವಾಗಿ 174 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ನಾನಾ ಪಕ್ಷಗಳ ಮತ್ತು ಪಕ್ಷೇತರರಿಗೆ ಚುನಾವಣೆ ಚಿನ್ಹೆಗಳನ್ನು ಹಂಚಿಕೆ ಮಾಡಲಾಗಿದ್ದು, ಯಾವ ವಾರ್ಡಿನಿಂದ ಯಾವ ಅಭ್ಯರ್ಥಿ ಸ್ಪರ್ಧಿಸಿದ್ದಾರೆ ಮತ್ತು ಅವರಿಗೆ ಹಂಚಿಕೆಯಾಗಿರುವ ಚುನಾವಣೆ ಚಿನ್ನೆಯ ವಿವರ ಬಸವ ನಾಡು ವೆಬ್ ಗೆ ಲಭ್ಯವಾಗಿದೆ. ವಾರ್ಡುಗಳ ಸಂಖ್ಯೆ, ಅಭ್ಯರ್ಥಿಯ ಹೆಸರು, ಪಕ್ಷ ಮತ್ತು ಹಂಚಿಕೆಯಾಗಿರು ಚಿನ್ನೆಯ ಮಾಹಿತಿ ಇಲ್ಲಿದೆ. ವಾರ್ಡ ಸಂಖ್ಯೆ […]
BJP Action: ಮಹಾನಗರ ಪಾಲಿಕೆ ಚುನಾವಣೆ- ಬಂಡಾಯ ಅಭ್ಯರ್ಥಿಗಳ ವಿರುದ್ಧ ಕಠಿಣ ಕ್ರಮ- 33 ವಾರ್ಡುಗಳಲ್ಲಿ ಬಿಜೆಪಿ ಗೆಲುವು ಖಚಿತ- ಆರ್. ಎಸ್. ಪಾಟೀಲ ಕೂಚಬಾಳ
ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಂಡಾಯವಾಗಿರುವ ಸ್ಪರ್ಧಿಸಿರುವ ಅಭ್ಯರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಚ್. ಪಾಟೀಲ ಕೂಚಬಾಳ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಶಿಸ್ತಿನ ಪಕ್ಷ. ಹೀಗಾಗಿ ಬಂಡಾಯವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ, ಕೆಲವರು ಕಣದಿಂದ ಹಿಂದೆ ಸರಿಯದಿರುವ ಹಿನ್ನೆಲೆಯಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದೆ. ಪ್ರಧಾನಿ […]
Corporation Election: 35 ವಾರ್ಡುಗಳಿಗೆ ಅಂತಿಮವಾಗಿ ಕಣದಲ್ಲಿ ಉಳಿದ 174 ಅಭ್ಯರ್ಥಿಗಳು- ಯಾವ ವಾರ್ಡಿನಲ್ಲಿ ಎಷ್ಟು ಜನ ಸ್ಪರ್ಧೆ? ಇಲ್ಲಿದೆ ಮಾಹಿತಿ
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗಿದೆ. ಈ ಚುನಾವಣೆಯಲ್ಲಿ ಈಗ ಒಟ್ಟು 35 ವಾರ್ಡುಗಳಲ್ಲಿ 174 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಎಲ್ಲ 35 ವಾರ್ಡುಗಳಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ 33 ಮತ್ತು ಜೆಡಿಎಸ್ 25 ವಾರ್ಡುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಯಾವ ವಾರ್ಡಿನಲ್ಲಿ ಎಷ್ಟು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ. ವಾರ್ಡುಗಳು ಮತ್ತು ಅಂತಿಮವಾಗಿ ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು 3 6 6 9 3 3 5 4 […]
BJP Dissidence: ಹಿಟ್ಲರ್ ಸಂಸ್ಕತಿ ತರಲು ಹೊರಟಿರುವ ವ್ಯಕ್ತಿಯಿಂದ ಬಿಜೆಪಿ ಟಿಕೆಟ್ ತಪ್ಪಿದೆ- ಯತ್ನಾಳ ಹೆಸರು ಹೇಳದೇ ವಾಗ್ದಾಳಿ ನಡೆಸಿದ ಬಂಡಾಯ ಅಭ್ಯರ್ಥಿ ರವಿಕಾಂತ ಬಗಲಿ
ವಿಜಯಪುರ: ಬಿಜೆಪಿಯಲ್ಲಿ ಹಿಟ್ಲರ್ ಸಂಸ್ಕೃತಿ ತರಲು ಹೊರಟಿರುವ ವ್ಯಕ್ತಿಯಿಂದಾಗಿ ತಮಗೆ ಬಿಜೆಪಿ ಟಿಕೆಟ್ ತಪ್ಪಿದ್ದು, ಬಿಜೆಪಿಗೆ ರಾಜೀನಾಮೆ ನೀಡಿ ಜನತಾ ನ್ಯಾಯಾಲಯದ ಮೊರೆ ಹೋಗುತ್ತಿರುವುದಾಗಿ ಬಿಜೆಪಿ ರೈತಮೋರ್ಚಾ ರಾಜ್ಯ ಕಾರ್ಯದರ್ಶಿ ರವಿಕಾಂತ ಬಗಲಿ ಹೇಳಿದ್ದಾರೆ. ವಿಜಯಪುರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಸರು ಹೇಳದೆ ತಮಗೆ ಟಿಕೆಟ್ ತಪ್ಪಲು ಹಿಟ್ಲರ್ ಮನೋಭಾವದ ವ್ಯಕ್ತಿಯೇ ಕಾರಣ ಎಂದು ವಾಗ್ದಾಳಿ ನಡೆಸಿದರು. ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 22 […]
Yatnal Upper Hand: ಬಸವ ನಾಡಿನಲ್ಲಿ ಯತ್ನಾಳರದ್ದೇ ಹವಾ- ಯಾರೇನೇ ಹೇಳಿದರೂ ಬಹುತೇಕ ಬೆಂಬಲಿಗರಿಗೆ ಟಿಕೆಟ್ ಕೊಡಿಸಿದ ಶಾಸಕ
ವಿಜಯಪುರ: ಯತ್ನಾಳ ಬಿಜೆಪಿ ಲೀಡರ್ ಅಲ್ಲ. ಅವರ ಮಾತಿಗೆ ಮಹತ್ವ ಕೊಡುವ ಅಗತ್ಯವೂ ಇಲ್ಲ. ಅವರು ರಾಜ್ಯ ಅಥವಾ ರಾಷ್ಟ್ರೀಯ ಕೋರ್ ಕಮಿಟಿಯಲ್ಲಿ ಇಲ್ಲ. ಅವರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ. ಅವರಿಗೆ ಹೇಳಿದರೂ ಸುಧಾರಿಸುತ್ತಿಲ್ಲ ಎಂದು ರವಿವಾರವಷ್ಟೇ ಹುಬ್ಬಳ್ಳಿಯಲ್ಲಿ ಹೇಳಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಅವರ ಮಾತಿಗೆ ಉಲ್ಟಾ ಎಂಬಂತೆ ವಿಜಯಪುರ ಜಿಲ್ಲೆಯ ಬಿಜೆಪಿಯಲ್ಲಿ ವಿದ್ಯಮಾನಗಳು ನಡೆದಿವೆ. ವಿಜಯಪುರ ಮಹಾನಗರ ಪಾಲಿಕೆಗೆ ಅ. 28 ರಂದು ಚುನಾವಣೆ ನಡೆಯುತ್ತಿದ್ದು, ಒಟ್ಟು 35ರಲ್ಲಿ 30 ವಾರ್ಡುಗಳು […]
MBP Tour: ಅ. 18, 19 ರಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ವಿಜಯಪುರ ಜಿಲ್ಲಾ ಪ್ರವಾಸ- ನಾನಾ ಕಾರ್ಯಕ್ರಮಗಳಲ್ಲಿ ಭಾಗಿ
ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಅ. 18 ಮತ್ತು 19 ರಂದು ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅ. 18 ಮಂಗಳವಾರ ಬೆ. 10ಕ್ಕೆ ತಿಕೋಟಾ ತಾಲೂಕಿನ ಟಕ್ಕಳಕಿ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿ ಆಯೋಜಿಸಲಾಗಿರುವ ರೈತ ಸಂಭ್ರಮ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಅ. 19 ರಂದು ಬುಧವಾರ ಬೆ. 9ಕ್ಕೆ ತಿಕೋಟಾದಲ್ಲಿ ನಗರೋತ್ಥಾನ್ ಯೋಜನೆಯಡಿಯಲ್ಲಿ ಸಿಸಿ ರಸ್ತೆ ಮತ್ತು ಡ್ರೇನ್ ಕಾಮಗಾರಿ ಭೂಮಿ ಪೂಜೆ ಸಲ್ಲಿಸಿ, ಬೆ. […]
RSS VHP Ramalingareddy: ಆರ್ ಎಸ್ ಎಸ್, ವಿ ಎಚ್ ಪಿ ಬ್ರಿಟೀಷರೊಂದಿಗೆ ಶಾಮೀಲಾಗಿತ್ತು- ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಆರೋಪ
ವಿಜಯಪುರ: ಆರ್ ಎಸ್ ಎಸ್ ಮತ್ತು ವಿ ಎಚ್ ಪಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟೀಷರೊಂದಿಗೆ ಶಾಮಿಲಾಗಿತ್ತು ಎಂದು ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಡೆಸುತ್ತಿರುವುದು ಭಾರತ್ ಜೋಡೋ ಯಾತ್ರೆಯಲ್ಲ. ಅದು ಭಾರತ್ ತೋಡೋ ಯಾತ್ರೆ ಎಂದು ಬಿಜೆಪಿ ಮುಖಂಡರು ಮಾಡುತ್ತಿರುವ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿರು. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. 1947 ರ ಮುಂಚೆ 547 ಕ್ಕೂ ಹೆಚ್ಚು ಸಣ್ಣ ಪುಟ್ಟ ರಾಜ್ಯಗಳಿದ್ದವು. ಆ ಎಲ್ಲ […]
Hijab Eshwarappa: ಇಸ್ಲಾಂ, ಖುರಾನ್ ನಲ್ಲಿ ಹಿಜಾಬ್ ಕಡ್ಡಾಯ ಇಲ್ಲ- ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ
ವಿಜಯಪುರ: ಹಿಜಾಬ್ ಇಸ್ಲಾಂ ಧರ್ಮದಲ್ಲಿ ಕಡ್ಡಾಯ ಇಲ್ಲ. ಕುರಾನ್ ನಲ್ಲಿಯೂ ಇಲ್ಲ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ. ವಿಜಯಪುದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ಕುರಿತು ಐದು ಅಥವಾ ಏಳು ಜನರ ಪೀಠದಲ್ಲಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇಡೀ ದೇಶವಷ್ಟೇ ಅಲ್ಲ, ವಿಶ್ವವೇ ಇತ್ತ ಕಡೆ ನೋಡುತ್ತೀತ್ತು. ಹಿಜಾಬ್ ಧರಿಸಬೇಕೋ ಬೇಡವೋ? ಸಮವಸ್ತ್ರವಾಗಿ ಬಳಸಬೇಕೋ ಬೇಡವೋ? ಇಸ್ಲಾಂ ನಲ್ಲಿ ಹಿಜಾಬ್ ಇದೆಯೋ ಇಲ್ಲವೋ ಎಂಬುದರ ಕುರಿತು […]