Dasara Kanta Nayak: ದಸರಾ ಹಿನ್ನೆಲೆ-ನಾಗಠಾಣ ಮತಕ್ಷೇತ್ರದ ನಾನಾ ಕಡೆ ಮಹಿಳೆಯೊಂದಿಗೆ ಸಂವಾದ ನಡೆಸಿದ ಕಾಂತಾ ನಾಯಕ
ವಿಜಯಪುರ: ದಸರಾ ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ನಾಗಠಾಣ ಮತಕ್ಷೇತ್ರದ ನಾನಾ ಗ್ರಾಮಗಳಲ್ಲಿ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ನಾಗಠಾಣ ಮತಕ್ಷೇತ್ರದ ಬೊಮ್ಮನಳ್ಳಿ, ಚಡಚಣ ನಗರ, ರೇವತಗಾಂವ, ಶಿರಾಡೋಣ , ಕೋಂಕಣಗಾಂವ, ಜೀರಂಕಲಗಿ, ಟಾಕಳಿ, ಕೆರೂರ ಗ್ರಾಮಗಳಲ್ಲಿ ಅವರು ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಅಲ್ಲದೇ, ಅರಿಶಿನ ಕುಂಕುಮ ಕಾರ್ಯಕಮಗಳಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಪ್ರಮುಖರು ಮತ್ರು ಮಹಿಳೆಯು ಪಾಲ್ಗೊಂಡಿದ್ದರು.
JDS Yandigeri: ಯಂಡಿಗೇರಿಗೆ ಜೆಡಿಎಸ್ ನಲ್ಲಿ ಎರಡು ಜವಾಬ್ದಾರಿ ವಹಿಸಿದ ವರಿಷ್ಠರು
ವಿಜಯಪುರ: ಜೆಡಿಎಸ್ ಹಿರಿಯ ಮುಖಂಡ ಮತ್ತು ವಿಜಯಪುರ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರಿಗೆ ಪಕ್ಷದ ವರಿಷ್ಠರು ಎರಡು ಹೊಸ ಜವಾಬ್ದಾರಿ ನೀಡಿದ್ದಾರೆ. ಕಳೆದ ಜನವರಿಯಲ್ಲಷ್ಟೇ ವಿಜಯಪುರ ಜಿಲ್ಲಾಧ್ಯಕ್ಷ ಸ್ಥಾನದಿಂದ ಮಲ್ಲಿಕಾರ್ಜುನ ಯಂಡಿಗೇರಿ ಅವರನ್ನು ಬದಲಾಯಿಸಿ ಮಾಡಗಿ ಅವರಿಗೆ ನೂತನ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆ ಬಳಿಕ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಮಾಡಿದ್ದರೂ ಮಲ್ಲಿಕಾರ್ಜುಮ ಯಂಡಿಗೇರಿ ಅವರು ಸಕ್ರೀಯರಾಗಿರಲಿಲ್ಲ. ಹೊಸ ಜವಾಬ್ದಾರಿ ನೀಡಿದ ವರಿಷ್ಠರು ಈ ಮಧ್ಯೆ, ಸಿ. ಎಂ. ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಬಳಿಕ ಹಳೆಯ […]
Siddhu Kateel: ಸಿದ್ಧರಾಮಯ್ಯ ನರಹಂತಕ ಸಿಎಂ- ಮುಂದಿನ ಚುನಾವಣೆಯಲ್ಲಿ ಸನ್ಯಾಸತ್ವ ತೆಗೆದುಕೊಳ್ಳುತ್ತಾರೆ- ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ
ವಿಜಯಪುರ: ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ನರಹಂತಕ ಸಿಎಂ ಆಗಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಆರೋಪಿಸಿದ್ದಾರೆ. ವಿಜಯಪುರ ನಗರದಲ್ಲಿ ನಡೆದ ನಾಗಠಾಣ ಮತಕ್ಷೇತ್ರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನೀವು ನರಹಂತಕ ಹುಲಿ ಕಥೆ ಕೇಳಿದ್ದೀರೆ. ನರಹಂತಕ ಸಿಂಹದ ಕಥೆಯನ್ನೂ ಕೇಳಿದ್ದೀರಿ. ನರಹಂತಕ ವೀರಪ್ಪನ ಕಥೆಯನ್ನೂ ಕೇಳಿದ್ದೀರೆ. ಈ ರಾಜ್ಯದಲ್ಲಿ ನರಹಂತಕ ಸಿಎಂ ಇದ್ದರೆ ಅದು ಸಿದ್ಧರಾಮಯ್ಯ ಎಂದು ವಾಗ್ದಾಳಿ ನಡೆಸಿದರು. ಸಿದ್ಧರಾಮಯ್ಯ ಸಿಎಂ ಆಗಿದ್ದಾಗ 3000 ರೈತರ ಆತ್ಮಹತ್ಯೆಯಾಯಿತು. ಆಗ […]
Kateel Siddharamaiah: ಮೇಡಂ ಗೆ ಹಣ ನೀಡಿ ಸಿದ್ಧರಾಮಯ್ಯ ಸಿಎಂ ಆಗಿದ್ದಾರೆ- ಕೆ ಎಫ್ ಡಿ, ಎಸ್ ಡಿ ಪಿ ಐ, ಪಿ ಎಫ್ ಐ ವಿರುದ್ಧ ಕಠಿಣ ಕ್ರಮ- ನಳೀನ ಕುಮಾರ ಕಟೀಲ
ವಿಜಯಪುರ: ಸಿದ್ಧರಾಮಯ್ಯ ಹಣ ನೀಡಿ ಸಿಎಂ ಆಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಆರೋಪಿಸಿದ್ದಾರೆ. ವಿಜಯಪುರ ಜಿಲ್ಲಾ ಪ್ರವಾಸದಲ್ಲಿರುವ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿಜಯಪುರದಲ್ಲಿ ಮಾತನಾಡಿದರು. ಭ್ರಷ್ಟಾಚಾರದ ಆರೋಪದಡಿ ತಾವು ಜೈಲಿಗೆ ಹೋಗಬಾರದು ಎಂದು ಸಿದ್ಧರಾಮಯ್ಯ ಲೋಕಾಯುಕ್ತವನ್ನು ಮುಚ್ಚಿ ಹಾಕಿದ್ದರು. ಈಗ ಲೋಕಾಯುಕ್ತಕ್ಕೆ ಮತ್ತೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ. ಲೋಕಾಯುಕ್ತ ಮತ್ತೆ ಬರುತ್ತೆ. ಹಗರಣಗಳ ಬಗ್ಗೆ ಮತ್ತು ಪರ್ಸೆಂಟೇಜ್ ಬಗ್ಗೆ ಅವರು ಮಾತನಾಡುತ್ತಾರೆ. ಅವರಿಗೆ ಆ ಬಗ್ಗೆ ಮಾತನಾಡಲು ನೈತಿಕಕತೆಯಿಲ್ಲ. ಯೋಗ್ಯತೆಯಿಲ್ಲ […]
BJP Deenadayal Upadhyal: ಬಿಜೆಪಿ ಯುವ ಮೋರ್ಚಾ ವತಿಯಿಂದ ಪಂ. ದೀನದಯಾಳ ಉಪಾಧ್ಯಾಯ ಜಯಂತಿ ಆಚರಣೆ
ವಿಜಯಪುರ: ಪಂ.ದೀನದಯಾಳ ಉಪಾಧ್ಯಾಯ ಅವರ ಜಯಂತೋತ್ಸವವನ್ನು ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ಆಚರಿಸಲಾಯಿತು. ವಿಜಯಪುರ ನಗರದ ಆಲಕುಂಟೆ ನಗರದಲ್ಲಿ ಸಸಿಗಳನ್ನು ನೆಡುವ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೇ, ಪಂ.ದೀನದಯಾಳ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಎಲ್ಲರೂ ಪುಷ್ಪಾಂಜಲಿ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಪಂ. ದೀನದಯಾಳ ಉಪಾಧ್ಯಾಯ ಅವರು ಜನಕಲ್ಯಾಣ ಹಾಗೂ ದೇಶಭಕ್ತಿಯನ್ನೇ ಉಸಿರಾಗಿಸಿಕೊಂಡಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮುಖ್ಯವಾಹಿನಿಗೆ ಬರಬೇಕು ಎಂಬ ಸದುದ್ದೇಶ ಹೊಂದಿದ್ದ ಮಹಾನ್ […]
Parties Offer: ಬಿಜೆಪಿ ಕಾಂಗ್ರೆಸ್ಸಿನಿಂದ ಪಕ್ಷ ಸೇರಲು ಆಫರ್ ಬರ್ತಿವೆ- ನಾಗಠಾಣ ಮತಕ್ಷೇತ್ರದ ಅಭಿವೃದ್ಧಿಗೆ ಸಚಿವ ಕಾರಜೋಳ ಅಡ್ಡಿಯಾಗಿದ್ದಾರೆ- ಡಾ. ದೇವಾನಂದ ಚವ್ಹಾಣ ಆರೋಪ
ವಿಜಯಪುರ: ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಪಕ್ಷ ಸೇರುವಂತೆ ಆಫರ್ ಬಂದಿವೆ. ಆದರೆ, ಅವುಗಳ ಬಗ್ಗೆ ನಾನು ಇನ್ನೂವರೆಗೆ ತಲೆ ಕೆಡಿಸಿಕೊಂಡಿಲ್ಲ. ಈಗ ಜೆಡಿಎಸ್ ನಲ್ಲಿದ್ದೇನೆ. ಇಲ್ಲಿಯೇ ಮುಂದುವರೆಯುವ ನಿರ್ಧಾರವಿದೆ. ಮುಂದಿನ ನಿರ್ಧಾರ ಯಾರ ಕೈಯಲ್ಲಿಯೂ ಇಲ್ಲ ಎಂದು ವಿಜಯಪುರ ಜಿಲ್ಲೆಯ ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಸಮೀಪಿಸಿದಂತೆ ಬೇರೆ ಪಕ್ಷಗಳಿಂದ ಆಫರ್ ಬರ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್ಸಿನಿಂದ ಪಕ್ಷಕ್ಕೆ ಬರುವಂತೆ ಒತ್ತಡ […]
Corporation Mushriff: ಪಾಲಿಕೆ ಮೀಸಲಾತಿ ವಿರುದ್ಧ ಹಮೀದ ಮುಶ್ರಿಫ್ ಆಕ್ರೋಶ- ಸಿಎಂ ಯತ್ನಾಳ ಕೈಗೊಂಬೆಯಾಗಿದ್ದಾರೆ ಎಂದು ಆರೋಪ
ವಿಯಪುರ: ವಿಜಯಪುರ ಮಹಾನಗರ ಪಾಲಿಕೆಯ ವಾರ್ಡುಗಳ ಮೀಸಲಾತಿಯನ್ನು ಕಾಂಗ್ರೆಸ್ ಮುಖಂಡ ಹಮೀದ ಮುಶ್ರಿಫ್ ಖಂಡಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಸ್ವಾರ್ಥ ರಾಜಕಾರಣಕ್ಕಾಗಿ ಮೀಸಲಾತಿ ಪ್ರಕಟ ಮಾಡಿದೆ. ನಗರಾಭಿವೃದ್ಧಿ ಇಲಾಖೆಗೆ ಬಿಜೆಪಿ ಅಭಿವೃದ್ಧಿ ಕಚೇರಿ ಎಂದು ಹೆಸರಿಡಬೇಕು. ಬಿಜೆಪಿ ಶಾಸಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಾರ್ಡ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕಟ ಮಾಡಲಾಗಿದೆ. ಬಿಜೆಪಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಏಕೆ ಮೀಸಲಾತಿ ಹಂಚಿಕೆ ಮಾಡಿಲ್ಲ? ಎಂದು ಅವರುನಪ್ರಶ್ನಿಸಿದರು. ಮೀಸಲಾತಿ ಪ್ರಕಟಣೆಯಲ್ಲಿ ಮಾರ್ಗಸೂಚಿ ಪಾಲಿಸಿಲ್ಲ. ಮನಸ್ಸಿಗೆ ಬಂದಂತೆ […]
Corporation Category: ಮಹಾನಗರ ಪಾಲಿಕೆ ಚುನಾವಣೆ-ಹಲವು ವಾರ್ಡುಗಳ ಮೀಸಲಾತಿ ಬದಲಾವಣೆ
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡುಗಳಿಗೆ ಮೀಸಲಾತಿ ಪ್ರಕಟವಾಗಿದೆ. ಒಟ್ಟು 35 ವಾರ್ಡುಗಳಲ್ಲಿ ಈ ಮುಂಚೆ ಘೋಷಿಸಲಾದ ವಾರ್ಡುಗಳಲ್ಲಿ ಹಲವಾರು ವಾರ್ಡುಗಳಲ್ಲಿ ಮೀಸಲಾತಿ ಬದಲಾವಣೆ ಮಾಡಲಾಗಿದೆ. ಈಗ ಪರಿಷ್ಕೃತ ಮೀಸಲಾತಿ ಪ್ರಕಟವಾಗಿದೆ. ವಾ. ಸಂ. ಮೀಸಲಾತಿ ವಿವರ 1. ಹಿಂದುಳಿದ ವರ್ಗ- ಎ 2. ಹಿಂದುಳಿದ ವರ್ಗ ಎ 3. ಪರಿಶಿಷ್ಠ ಜಾತಿ ಮಹಿಳೆ 4. ಪರಿಶಿಷ್ಠ ಜಾತಿ 5. ಹಿಂದುಳಿದ ವರ್ಗ- ಎ 6. ಸಾಮಾನ್ಯ 7. ಸಾಮಾನ್ಯ 8.. ಹಿಂದುಳಿದ ವರ್ಗ-ಎ 9. […]
Congress Protest: ಗುಮ್ಮಟ ನಗರಿಯಲ್ಲಿ ಮೂಲಭೂತ ಸೌಕರ್ಯಗಳ ದುರವಸ್ಥೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಹದಗೆಟ್ಟ ರಸ್ತೆ, ಹೊರ ಚರಂಡಿ, ಒಳಚರಂಡಿ, ವಿದ್ಯುತ್ ದೀಪಗಳ ಅವ್ಯವಸ್ಥೆ ಖಂಡಿಸಿ ಅಬ್ದುಲ್ ಹಮೀದ್ ಮುಶ್ರೀಫ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ಹಮೀದ್ ಮುಶ್ರೀಫ್ ವಿಜಯಪುರ ನಗರಾದ್ಯಂತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಜನ ನರಳಾಡುವಂತಾಗಿದೆ. ನಗರದ ರಸ್ತೆಗಳು ಗುಂಡಿಗಳಿಂದ ತುಂಬಿದ್ದು, ಜನ ನಡೆದಾಡುವುದು ದುಸ್ತರವಾಗಿದೆ. ಹೊರ ಮತ್ತು ಒಳಚರಂಡಿ ವ್ಯೆವಸ್ಥೆ ಸರಿಯಾಗಿಲ್ಲ. ಇದರಿಂದಾಗಿ ರಸ್ತೆಗಳು ಅವ್ಯವಸ್ಥೆಯ ಅಗರವಾಗಿವೆ. ಅದರಲ್ಲಿ […]
ಗ್ರಾ. ಪಂ. ಸದಸ್ಯರ ಗೌರವಧನ ಹೆಚ್ಚಳ, ಜಲಜೀವನ ಮಿಷನ್ ಕುರಿತು ಸದನದಲ್ಲಿ ಮತ್ತೆ ಧ್ವನಿ ಎತ್ತಿದ ಎಂ ಎಲ್ ಸಿ ಸುನೀಲಗೌಡ ಪಾಟೀಲ ಹೇಳಿದ್ದೇನು ಗೊತ್ತಾ?
ವಿಜಯಪುರ: ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಮಾಸಿಕ ಗೌರವ ಧನ ಹೆಚ್ಚಳ ಮತ್ತು ಜಲಜೀವನ ಮಿಷನ್ ಯೋಜನೆಗೆ ಗ್ರಾ. ಪಂ. ನ 15ನೇ ಹಣಕಾಸಿನ ಅನುದಾನ ಬಳಕೆಯ ಕುರಿತು ವಿಜಯಪುರ ಮತ್ತು ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಮತ್ತೋಮ್ಮೆ ಸದನದಲ್ಲಿ ಧ್ವನಿ ಎತ್ತಿದ್ದಾರೆ. ಗ್ರಾ. ಪಂ. ಜನಪ್ರತಿನಿಧಿಗಳ ಮಾಸಿಕ ಗೌರವ ಧನ ಹೆಚ್ಚಳ ವಿಚಾರದ ಕುರಿತು ಸುನೀಲಗೌಡ ಪಾಟೀಲ ಅವರು ವಿಧಾನ ಪರಿಷತ್ತಿನಲ್ಲಿ ಕೇಳಿರುವ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ […]