Shivanand Patil Yatnal: ಯತ್ನಾಳ ಎಂಪಿ ಆಗುವಾಗ ನಾನೂ ಜೊತೆಯಲ್ಲಿದ್ದೆ- ಯತ್ನಾಳ ಗೆ ಶಾಸಕ ಶಿವಾನಂದ ಪಾಟೀಲ ಹಾಕಿದ ಸವಾಲೇನು ಗೊತ್ತಾ?
ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಈ ಮುಂಚೆ ಸಂಸದರಾಗುವಾಗ ನಾನೂ ಬಿಜೆಪಿಯಲ್ಲಿ ಅವರ ಜೊತೆ ಇದ್ದೆ. ಈಗ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ಅವರೂ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ ತೋರಿಸಲಿ ಎಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಸವಾಲು ಹಾಕಿದ್ಸಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ತಮ್ಮ ಹಾಗೂ ತಮ್ಮ ಸಹೋದರನ ವಿರುದ್ಧ ಯತ್ನಾಳ ಹೆಸರು ಹೇಳದೆ ಮಾಡುತ್ತಿರುವ ಆರೊಪಗಳಿಗೆ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದರು. […]
Congress Protest: ಬಿಜೆಪಿಯಿಂದ ದ್ವೇಷ ರಾಜಕಾರಣ ಆರೋಪ- ಚಡಚಣದಲ್ಲಿ ಕೈ ಕಾರ್ಯಕರ್ತರಿಂದ ಪ್ರತಿಭಟನೆ
ವಿಜಯಪುರ: ಕೇಂದ್ರ ಸರಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಚಡಚಣ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಪ್ರಧಾನ ಕಾರ್ಯಕರ್ಶಿ ಕಾಂತಾ ನಾಯಕ, ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಡಿ. ಹಕ್ಕೆ, ನಾಗಠಾಣ ಬ್ಲಾಕ್ ಅಧ್ಯಕ್ಷ ಶಹಾಜಹಾನ ಮುಲ್ಲಾಮುಂತಾದವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಕೇಂದ್ರ ಬಿಜೆಪಿ ನೇತೃತ್ವದ ಸರಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಡಿ ಮೂಲಕ ಎಐಸಿಸಿ ಅಧ್ಯಕ್ಷೆ […]
Agnipath Shivanand Patil: ಉದ್ಯೋಗ ಅಭದ್ರತೆ ಕಾರಣ ಯುವಕರು ವಿರೋಧಿಸುತ್ತಿದ್ದಾರೆ- ಶಾಸಕ ಶಿವಾನಂದ ಪಾಟೀಲ
ವಿಜಯಪುರ: ಅಗ್ನಿಪಥ ಯೋಜನೆ ವಿಚಾರದಲ್ಲಿ ಯುವಕರಿಗೆ ಅಭದ್ರತೆ ಕಾಡುತ್ತಿದೆ. ಈ ಹೀಗಾಗಿ ಯುವಕರು ಆ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಶಿವಾನಂದ ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಗ್ನಿಪಥ ಯೋಜನೆ ಜಾರಿ ವಿಚಾರದಲ್ಲಿ ಸ್ವಲ್ಪ ಆತುರತೆಯಾಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಯುವಕರಿಗೆ ನಿರುದ್ಯೋಗ ಸಮಸ್ಯೆ ಕಳೆದ ಹೆಚ್ಚಾಗಿದೆ. ಈ ಬಗ್ಗೆ ಸ್ವತಃ ಬಿಜೆಪಿ ಸಂಸದ ವರುಣ ಗಾಂಧಿ ಅವರಂಥ ನಾಯಕರೇ ಹೇಳಿದ್ದಾರೆ. ಕೇಂದ್ರದಲ್ಲಿ 60 […]
PM Arrived: ಬೆಂಗಳೂರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿದ್ದಾರೆ. ಭಾರತೀಯ ವಾಯುಸೇನೆ ವಿಶೇಷ ವಿಮಾನದಲ್ಲಿ ಕರ್ನಾಟಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ಮತ್ತು ಇತರ ಅಧಿಕಾರಿಗಳು ಸ್ವಾಗತಿಸಿದರು. ವಿಮಾನದಿಂದ ಕೆಳಗಿಳಿದು ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಲು ಹೊದಿಸಿ ಸ್ವಾಗತಿಸಿದರು. ಅಲ್ಲದೇ, ಪ್ರಧಾನಿ ಅವರಿಗೆ ಪುಸ್ತಕವೊಂದನ್ನು ನೀಡಿದರು.
Modi Siddhu: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಿಂದ ಕೊರೊನಾ ಹರಡಲ್ವಾ? ಎಸ್. ಸಿದ್ಧರಾಮಯ್ಯ ವ್ಯಂಗ್ಯ
ವಿಜಯಪುರ: ಕಾಂಗ್ರೆಸ್‌ನವರು ಸಭೆ ಸಮಾರಂಭ ಮಾಡಿದರೆ ಕೊರೊನಾ ಬರುತ್ತದೆ ಎಂದು ಬಿಜೆಪಿ ಸರ್ಕಾರ ಹೇಳುತ್ತದೆ. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದರಿಂದ ಕೊರೊನಾ ಬರಲ್ವಾ ಎಂದು ವಿಧಾನ ಸಭೆ ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಗೌರಮ್ಮ ಮುತ್ತತ್ತಿ ಫೌಂಡೆಶನ್ ವತಿಯಿಂದ ಆಯೋಜಿಸಲಾಗಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಆಗಮಿಸಿದ್ದ ಅವರು ಹೆಲಿಪ್ಯಾಡ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕಾಂಗ್ರೆಸ್ಸಿನವರು ಸಮಾರಂಭ […]
Election Analyses: ಅರುಣ ಶಹಾಪುರ ಸೋಲು- ಕಾರಣಗಳು ಹತ್ತಾರು- ಎಲ್ಲೆಡೆ ನಡೆದಿದೆ ಬಿಸಿಬಿಸಿ ಚರ್ಚೆ
ವಿಜಯಪುರ: ವಿಧಾನ ಪರಿಷತ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಸೋಲು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. 22 ಜನ ಶಾಸಕರು, ಆರು ಜನ ಸಂಸದರು, ನಾಲ್ಕುಜನ ಸಚಿವರು, ಕೇಂದ್ರ ಮತ್ತು ರಾಜ್ಯದಲ್ಲಿ ಬೆಜೆಪಿ ಅಧಿಕಾರದಲ್ಲಿದ್ದರೂ ಅರುಣೋದಯವಾಗದೇ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶಮಾನವಾಗಿರುವುದು ಈಗ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ ಎಂದು ಸ್ವತಃ ಬಿಜೆಪಿ ವಲಯದಲ್ಲಿಯೇ ಚರ್ಚೆಗೆ ಕಾರಣವಾಗಿದೆ. ಅರುಣ ಶಹಾಪುರ ಸೋಲಿಗೆ ಕಾರಣಗಳನ್ನು ರಾಜಕೀಯ ತಜ್ಞರು ಮತ್ತು ವಿಶ್ಲೇಷಕರು […]
AAP Vijay Yatre: ಆಮ್ ಆದ್ಮಿ ಪಾರ್ಟಿ ಕಚೇರಿ ಉದ್ಘಾಟನೆ- ಬಿಬಿಎಂಪಿ ಚುನಾವಣೆಯಿಂದ ಆಪ್ ವಿಜಯಯಾತ್ರೆ ಆರಂಭ- ದಿಲೀಪ ಪಾಂಡೆ
ಬೆಂಗಳೂರು: ಆಮ್ ಆದ್ಮಿ ಪಕ್ಷದ ರಾಜ್ಯ ಕಚೇರಿ ಉದ್ಘಾಟನೆ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು.ಪ ಕ್ಷದ ರಾಜ್ಯ ಉಸ್ತುವಾರಿ ಹಾಗೂ ರಾಷ್ಟ್ರೀಯ ವಕ್ತಾರ ದಿಲೀಪ್ ಪಾಂಡೆ ಕಚೇರಿ ಉದ್ಘಾಟಿಸಿದರು. ಬೆಂಗಳೂರಿನ ಕುಮಾರ ಪಾರ್ಕ್ ವೆಸ್ಟ್‌ನಲ್ಲಿ ಆರಂಭವಾದ ಮೂತನ ನೂತನ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದಿಲೀಪ್ ಪಾಂಡೆ, ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ದೆಹಲಿ ಮತ್ತು ಪಂಜಾಬ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡ ಭರ್ಜರಿ ಬಹುಮತದೊಂದಿಗೆ ಎಎಪಿ ಅಧಿಕಾರಕ್ಕೆ ಬರಲಿದೆ. ಬಿಬಿಎಂಪಿ ಚುನಾವಣೆಯಿಂದಲೇ ಎಎಪಿಯ […]
Hukkeri Reaction: ಬೆಳಗಾವಿಯ ಜಿಲ್ಲೆಯಲ್ಲೀಗ ನಮ್ಮದೇ ಹವಾ- 2023ರಲ್ಲಿ ಕಾಂಗ್ರೆಸ್ ಪಾರುಪತ್ಯ- ಪ್ರಕಾಶ ಹುಕ್ಕೇರಿ
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಈಗ ಕಾಂಗ್ರೆಸ್ ಹವಾ ಜೋರಾಗಿದೆ. ಆರು ತಿಂಗಳಲ್ಲಿ ವಿಧಾನ ಪರಿಷತ್ತಿನ ಎರಡು ಸ್ಥಾನ ಗೆದ್ದಿದ್ದೇವೆ. 2023ರಲ್ಲಿ ಜಿಲ್ಲಾದ್ಯಂತ ಕಾಂಗ್ರೆಸ್ ಪಾರುಪತ್ಯ ಇರಲಿದೆ ಎಂದು ವಿಧಾನ ಪರಿಷತ್ ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಹೇಳಿದ್ದಾರೆ. ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಎಲ್ಲ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳು ಸೇರಿ ಕೆಲಸ ಮಾಡಿದ್ದಾರೆ. ಒಗ್ಹಟ್ಟಿನ ಫಲವಾಗಿ ಕಳೆದ ಆರು ತಿಂಗಳಲ್ಲಿ ವಿಧಾನ […]
Shahapur Reaction: ಸೋಲನ್ನು ಸ್ವೀಕರಿಸುತ್ತೇನೆ- ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ- ಅರುಣ ಶಹಾಪುರ
ಬೆಳಗಾವಿ: ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ನಡೆಸ ಚುನಾವಣೆಯಲ್ಲಿ ತಾವು ಸೋಲನ್ನು ಒಪ್ಪಿಕೊಂಡು ಮುಂದುವರೆಯುವುದಾಗಿ ಬಿಜೆಪಿ ಪರಾಜಿತ ಅಭ್ಯರ್ಥಿ ಅರುಣ ಶಹಾಪುರ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಫಲಿತಾಂಶ ಪ್ರಕಟವಾದ ಬಳಿಕ ಮಾತನಾಡಿದ ಅವರು, ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದ ಬಗ್ಗೆ ಜನ ನಂಬಿಕೆಯನ್ನು ಕಳೆದುಕೊಳ್ಳುವ ಸ್ಥಿತಿ ಇದ್ದಾಗಲೂ ನನಗೆ ಬೆಂಬಲಚಾಗಿ ನಿಂತು ಮತ ಹಾಕಿದ ಶಿಕ್ಷಕರು ಆಶಾವಾದ ಮೂಡಿಸಿದ್ದಾರೆ. ಹಣದ ಪ್ರಭಾವ ಮತ್ತು ರಾಜಕೀಯ ಶಡ್ಯಂತ್ರ ಮಧ್ಯೆಯೂ ಕೂಡ ನನ್ನ ಪರವಾಗಿ ನಿಂತು ಮತ ಚಲಾಯಿಸಿದ ಶಿಕ್ಷಕರಿಗೆ ಅಭಿನಂದನೆ […]
Hukkeri Win: ವಾಯುವ್ಯ ಶಿಕ್ಷಕರ ಮತಕ್ಷೇತ್ರದಿಂದ ಜಯಿಸಿ ಗೆಲುವಿನ ನಗೆ ಬೀರಿದ ಪ್ರಕಾಶ ಹುಕ್ಕೇರಿ
ಬೆಳಗಾವಿ: ವಿಧಾನ ಪರಿಷತ್ ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಜಯಿಸಿ ಗೆಲುವಿನ ನಗೆ ಬೀರಿದ್ದಾರೆ. ಬೆಳಗಾವಿಯ ಜ್ಯೋತಿ ಪಿ ಯು ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಆರಂಭದಿಂದಲೇ ಭರ್ಜರಿ ಮುನ್ನಡೆ ಸಾಧಿಸಿದ ಪ್ರಕಾಶ ಹುಕ್ಕೇರಿ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಅವರನ್ನು ನಿರೀಕ್ಷೆಯಂತೆ ಸೋಲುಣಿಸಿದ್ದಾರೆ. ಮೂರನೇ ಸುತ್ತಿನಲ್ಲಿ ಒಟ್ಟು 21402 ಮತಗಳಲ್ಲಿ ಮತಗಳ ಪೈಕಿ ಪ್ರಕಾಶ ಹುಕ್ಕೇರಿ 11460 ಮತಗಳನ್ನು ಪಡೆದರೆ ಅರುಣ ಶಹಾಪುರ 6406 ಮತ […]