Horatti Win: ವಿಪ ಚುನಾವಣೆ- ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಬಸವರಾಜ ಹೊರಟ್ಟಿ ಭರ್ಜರಿ ಗೆಲುವು
ಬೆಳಗಾವಿ: ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಜೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬೆಳಗಾವಿಯ ಜ್ಯೋತಿ ಪಿಯು ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಬಸವರಾಜ ಹೊರಟ್ಟಿ ಅವರು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು 4669 ಮತಗಳ ಭಾರಿ ಅಂತರದಿಂದ ಸೋಲಿಸಿ ವಿಜಯ ಮಾಲೆ ಧರಿಸಿದ್ದಾರೆ. ಮತ ಎಣಿಕೆ ಮುಗಿದ ಬಳಿಕ ವಿಜಯಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾ ಬಿಸ್ವಾಸ್ ಗೆಲುವಿನ ಪ್ರಮಾಣ […]
MLC Counting: ವಿಪ ಚುನಾವಣೆ: ಬೆಳಗಾವಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ- ಮಧ್ಯಾಹ್ನ ವೇಳೆಗೆ ಫಲಿತಾಂಶ ಸಾಧ್ಯತೆ
ಬೆಳಗಾವಿ: ವಿಧಾನ ಪರಿಷತ(Legislative Council) ವಾಯುವ್ಯ ಶಿಕ್ಷಕರ(Northwest Teachers) ಮತ್ತು ಪದವೀಧರ(Graduates)ಹಾಗೂ ಪಶ್ಚಿಮ ಪದವೀಧರ(West Graduates) ಮತಕ್ಷೇತ್ರಕಗಳ ಮತ ಎಣಿಕೆ ಕಾರ್ಯ ಬೆಳಗಾವಿಯಲ್ಲಿ(Belagavi) ಆರಂಭವಾಗಿದೆ. ಇಲ್ಲಿಯ ಜ್ಯೋತಿ ಪಿಯು ಕಾಲೇಜಿನಲ್ಲಿರುವ ಮತ ಎಣಿಜೆ ಕೇಂದ್ರದಲ್ಲಿ ಬೆಳಗಾವಿ ವಲಯದ ಮೂರು ಸ್ಥಾನಗಳ ಮತ ಎಣಿಕೆ ನಡೆಯುತ್ತಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಇದೆ ಎಂದೇ ಅರ್ಥೈಸಲಾಗುತ್ತಿದೆ. ಬಿಜೆಪಿಯಿಂದ ಸ್ಪರ್ಧಿಸಿರುವ ಅರುಣ ಶಹಾಪುರ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ರಾಜಕೀಯವಾಗಿ […]
MLC Confidence: ಮೊದಲ ಸುತ್ತಿನಲ್ಲಿಯೇ ಗೆಲ್ಲುವೆ- ಅರುಣ ಶಹಾಪುರ ವಿಶ್ವಾಸ
ವಿಜಯಪುರ: ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಮತ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಜೂ. 15 ಬುಧವಾರ ಬೆಳಗಾವಿಯಲ್ಲಿ ಮತ ಎಣಿಕೆ ನಡೆಯಲಿದೆ. ಈ ಬಾರಿಯೂ ಶಿಕ್ಷಕ ಬಾಂಧವರು ತಮಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದು ಮೊದಲ ಸುತ್ತಿನಲ್ಲಿಯೇ ಆಯ್ಕೆಯಾಗುವುದಾಗಿ ಬಿಜೆಪಿ ಅಭ್ಯರ್ಥಿ ಮತ್ತು ವಿಧಾನ ಪರಿಷತ ಸದಸ್ಯ ಅರುಣ ಶಹಾಪುರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬವಸ ನಾಡು ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿನವರು ಸಾಕಷ್ಟು ಹಣ ಹಂಚಲು ಪ್ರಯತ್ನಿಸಿದರೂ ಕೂಡ […]
Voting Percentage: ಎಂ ಎಲ್ ಸಿ ಚುನಾವಣೆ: ಬಸವ ನಾಡಿನಲ್ಲಿ ಶಿಕ್ಷಕರ ಮತಕ್ಷೇತ್ರಕ್ಕೆ ಶೇ.80.15, ಪದವೀಧರ ಮತಕ್ಷೇತ್ರಕ್ಕೆ ಶೇ.62.36ರಷ್ಟು ಮತದಾನ
ವಿಜಯಪುರ: ವಿಧಾನ ಪರಿಷತ ವಾಯುವ್ಯ ಶಿಕ್ಷಕ ಮತ್ತು ಪದವೀಧರರ ಮತಕ್ಷೇತ್ರಗಳಿಗೆ ನಡೆದ ಚುನಾವಣೆ ವಿಜಯಪುರ ಜಿಲ್ಲಾದ್ಯಂತ ಶಾಂತಿಯುತವಾಗಿ ಮುಕ್ತಾಯವಾಗಿದೆ. ಶಿಕ್ಷಕರ ಕ್ಷೇತ್ರಕ್ಕೆ ಶೇ.80.15ರಷ್ಟು ಮತ್ತು ಪದವೀಧರ ಕ್ಷೇತ್ರಕ್ಕೆ ಶೇ. 62.36 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ. ಬೆಳಿಗ್ಗೆ ನಿಧಾನವಾಗಿ ಆರಂಭವಾದ ಮತದಾನ ಸಂಜೆಯ ವೇಳೆಗೆ ಬಿರುಸು ಪಡೆಯಿತು. ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಬೆಳಗಿನ 8 ರಿಂದ 10 ಗಂಟೆವರೆಗೆ ಶೇ.11.36ರಷ್ಟು, […]
MLC Voting: ಬಸವ ನಾಡಿನಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ- ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಎಂ ಎಲ್ ಸಿ
ವಿಜಯಪುರ: ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಗೆ ಮತದಾನ ಬಿಸಿಲೇರುತ್ತಿದ್ದಂತೆ ವೇಗ ಪಡೆದುಕೊಂಡಿದೆ. ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ವಿಜಯಪುರ ನಗರದಲ್ಲಿರುವ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 120 ರಲ್ಲಿ ಮತ ಚಲಾಯಿಸಿದ್ದಾರೆ. ಬೆಳಿಗ್ಗೆ ಮತಗಟ್ಟೆಗೆ ಆಗಮಿಸಿದ ಅವರು ಪಾಳಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮತಗಟ್ಟೆಯಿಂದ ಹೊರ ಬಂದ ಅವರು ಮತ ಹಾಕಿರುವ ಕುರುಹಾಗಿ ತಮ್ಮ ಬೆರಳಿಗೆ ಹಾಕಲಾಗಿರು ಶಾಹಿಯ ಗುರುತನ್ನು […]
MLC Election: ಬಸವ ನಾಡಿನಲ್ಲಿ ಮಂದಗತಿಯಲ್ಲಿ ಶಾಂತಿಯುತವಾಗಿ ಸಾಗಿರುವ ಮತದಾನ- ಡಿಸಿ, ಎಸ್ಪಿ ಪರಿಶೀಲನೆ
ವಿಜಯಪುರ: ವಿಧಾನ ಪರಿಷತ್ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಮತದಾನ ಆರಂಭವಾಗಿದೆ. ಮತದಾರರು ನಿಧಾನವಾಗಿ ಮತಗಟ್ಟೆಗಳಿಗೆ ಆಗಮಿಸುತ್ತಿದ್ದು ಮತದಾನ ಮಂದಗತಿಯಲ್ಲಿ ಸಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 8 ರಿಂದ ಆರಂಭವಾಗಿರುವ ಮತದಾನ ಸಂಜೆ 05 ಗಂಟೆಯ ವರೆಗೆ ನಡೆಯಲಿದೆ. ಮತ ಎಣಿಕೆ ಕಾರ್ಯವು ಬೆಳಗಾವಿಯ ಕ್ಲಬ್ ರೋಡ್ ನಲ್ಲಿರುವ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಜೂನ್ 15 ರಂದು ನಡೆಯಲಿದೆ. […]
MLC Election: ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಡೆಯಿಂದ ಹಣ ಹಂಚಿಕೆ ಆರೋಪ- ಡಿಸಿ, ಎಸ್ಪಿಗೆ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ದೂರು ಸಲ್ಲಿಕೆ
ವಿಜಯಪುರ: ವಿಧಾನ ಪರಿಷತ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಕಡೆಯವರಿಂದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಸೋಲಿನ ಹತಾಶೆಯಲ್ಲಿ ಹಣ ಹಂಚುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ ಸದಸ್ಯ ಮತ್ತು ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಡಿ. ಆನಂದ ಕುಮಾರ ಅವರಿಗೆ ದೂರು ಸಲ್ಲಿಸಿದ್ದಾರೆ. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮುಖಂಡರಾದ ಪ್ರಕಾಶ ಅಕ್ಕಲಕೋಟ ಮತ್ತು ವಿಜಯ ಜೋಶಿ ಅವರ ಜೊತೆ […]
MLC Election: ನಾಲ್ಕೂ ಸ್ಥಾನಗಳಲ್ಲಿ ಗೆಲುವು- ಆ್ಯಸಿಡ್ ಧಾಳಿಕೋರರ ವಿರುದ್ಧ ಕಠಿಣ ಕಾನುನು- ಸಿಎಂ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ: ಎಲ್ಲಕಡೆ ಬಿಜೆಪಿ ಪರವಾದ ಪ್ರತಿಕ್ರಿಯೆಯನ್ನು ಗಮನಿಸಿದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕೂ ಸ್ಥಾನ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ತೆರಳುತ್ತಿದ್ದು, ಇದುವರೆಗೂ ನಡೆದಿರುವ ಅಭಿಯಾನ ಮತ್ತು ಪ್ರತಿಕ್ರಿಯೆಗಳನ್ನು ಪರಿಗಣಿಸಿದರೆ ಭಿಜೆಪಿಗೆ ಗೆಲುವು ಖಚಿತ ಎಂಬ ವಿಶ್ವಾಸ ಮೂಡಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಆ್ಯಸಿಡ್ ದಾಳಿ ಮಾಡುವವರ ವಿರುದ್ಧ ಕಠಿಣ ಕಾನೂನು […]
Rajyasabga Election: ರಾಜ್ಯಸಭೆ ಚುನಾವಣೆ- ಮತದಾನ ಮಾಡಿದ ಸಿಎಂ ಬೊಮ್ಮಾಯಿ
ವಿಜಯಪುರ: ರಾಜ್ಯ ವಿಧಾನ ಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಹಕ್ಕು ಚಲಾಯಿಸಿದರು. ರಾಜ್ಯ ವಿಧಾನ ಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆ ಇದಾಗಿದೆ. ವಿಧಾನ ಸಭೆಯಲ್ಲಿರುವ ಮತಗಟ್ಟೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಹಕ್ಕು ಚಲಾಯಿಸಿದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕನ್ನಡ ಚಿತ್ರನಟ ಜಗ್ಹೇಶ ಮತ್ತು ಲೆಹೆರ್ ಸಿಂಗ್ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಕೇಂದ್ರ ಮಾಜಿ ಸಚಿವ […]
Rajyasabha Election: ಸಿದ್ಧರಾಮಯ್ಯ ಹಾಕಿರುವ ಮೂರನೇ ಕ್ಯಾಂಡಿಡೇಟ್ ರಾಜ್ಯ ಸಭೆ ಚುನಾವಣೆಯಲ್ಲಿ ಗೆಲ್ಲಲ್ಲ- ಎನ್. ರವಿಕುಮಾರ
ವಿಜಯಪುರ: ಸಿದ್ಧರಾಮಯ್ಯ ಅವರಿಗೆ ಡೌಟ್ ಇದೆ. ಅವರು ಹಾಕಿರುವ ಕ್ಯಾಂಡಿಡೇಟ್ ರಾಜ್ಯಸಭೆ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಸದಸ್ಯ ಎಸ್. ರವಿಕುಮಾರ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಮೋಸ ಮಾಡುವುದಕ್ಕಾಗಿ ಮತ್ತು ಅಲ್ಪ ಸಂಖ್ಯಾತರಿಗೆ ಆಸೆ ತೋರಿಸುವ ಸಲುವಾಗಿ ಗೆಲ್ಲುವ ಸೀಟು ಕೊಡುವುದಿಲ್ಲ. ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧಾರಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಅಲ್ಪಸಂಖ್ಯಾತರಿಗೆ ಮೊದಲನೇ ಸೀಟು ಯಾಕೆ ಕೊಡಲಿಲ್ಲ […]