ಮಹಿಳೆಯರ ರಕ್ಷಣೆ, ಸಶಕ್ತಿಕರಣಕ್ಕೆ ಬಿಜೆಪಿ ಪ್ರಥಮ ಆದ್ಯತೆ ನೀಡಿದೆ- ಬಿಜೆಪಿ ಮಹಿಳಾ‌ ಜಿಲ್ಲಾಧ್ಯಕ್ಷೆ ಸಪ್ನಾ ಕಣಮುಚನಾಳ

ವಿಜಯಪುರ : ದೇಶದ ರಕ್ಷಣೆ ಹಾಗೂ ಅಭಿವೃದ್ಧಿಯ ಜೊತೆಗೆ ದೇಶದಲ್ಲಿ ಮಹಿಳೆಯರ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಬಿಜೆಪಿ ಪಕ್ಷ ಅಧಿಕಾರವಕಾಶ ಸಿಕ್ಕಾಗಲೆಲ್ಲಾ ಪ್ರಥಮ ಆದ್ಯತೆ ನೀಡಿ ಹಲವಾರು ಮಹಿಳಾಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಮಹಿಳಾ‌ ಸಶಕ್ತಿಕರಣಗೊಳಿಸಲು ಶ್ರಮಿಸುತ್ತಿದೆ ಎಂದು ಬಿಜೆಪಿ ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ ಸಪ್ನಾ ಕಣಮುಚನಾಳ ಹೇಳಿದ್ದಾರೆ.   ನಗರದ ಬಿಜೆಪಿ‌ ಚುನಾವಣಾ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಮಹಿಳಾ‌ ಮೊರ್ಚಾದ ಜಿಲ್ಲಾ ನೂತನ ಪದಾಧಿಕಾರಿಗಳ‌ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ […]

ದ್ರಾಕ್ಷಿನಾಡು ತಿಕೋಟಾದಲ್ಲಿ ಕಾಂಗ್ರೆಸ್ ಚುನಾವಣೆ ಕಹಳೆ- ಕಾಂಗ್ರೆಸ್ ನಾಯಕರಿಂದ ಸಾಮೂಹಿಕವಾಗಿ ಪ್ರಚಾರ

ವಿಜಯಪುರ: ಕಾಂಗ್ರೆಸ್ ಅಭ್ಯರ್ಥಿ ಪ್ರೊ ರಾಜು ಆಲಗೂರ ಪರ ಸಾಮೂಹಿಕ ಪ್ರಚಾರ ಮಾಡುತ್ತಿರುವ ಜಿಲ್ಲೆಯ ಸಚಿವರು, ಶಾಸಕರು ಮತ್ತು ಮುಖಂಡರು ಇಂದು ಮಂಗಳವಾರ ದ್ರಾಕ್ಷಿನಾಡು ತಿಕೋಟಾದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಜತ್ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ, ಜವಳಿ, ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ, ಮತ್ತು ಶಾಸಕರು ಸಾಮೂಹಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜನ ಎಸ್. ಲೋಣಿ, ಜಿಲ್ಲೆಯಲ್ಲಿ […]

ದೇಶದ ಸುರಕ್ಷತೆ, ಅಭಿವೃದ್ಧಿಗಾಗಿ ಮೋದಿಯನ್ನು ಮತ್ತೋಮ್ಮೆ ಪ್ರಧಾನಿ ಮಾಡೋಣ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರಿಂದ ದೇಶ ಸುರಕ್ಷಿತವಾಗಿದೆ.  ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಆಗುತ್ತಿದೆ. ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ತಮ್ಮ ಸೇವೆ ಮಾಡಲು ಬೆಂಬಲಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಮನವಿ ಮಾಡಿದರು. ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯ ವಾರ್ಡ 26ರ ವ್ಯಾಪ್ತಿಯ ದಿವಟಗೇರಿ ಗಲ್ಲಿಯಲ್ಲಿ ಬಿಜೆಪಿ ನಗರ ಮಂಡಲ ವತಿಯಿಂದ ವಿಜಯಪುರ ಲೋಕಸಭೆ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪ್ರಚಾರದ ಅಂಗವಾಗಿ ಆಯೋಜಿಸಲಾಗಿದ್ದ ಬಾವುರಾವ ದೇಶಪಾಂಡೆ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಅವರು ಮಾತನಾಡಿದರು. […]

ಏ. 26 ರಂದು ರಾಹುಲ ಗಾಂಧಿ ವಿಜಯಪುರದಲ್ಲಿ ಪ್ರಚಾರ- ಬೃಹತ್ ಕಾರ್ಯಕ್ರಮ ಆಯೋಜನೆ- ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಸಂಸದ ಮತ್ತು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ ಗಾಂಧಿ ಅವರು ಏಪ್ರಿಲ್ 26 ರಂದು ವಿಜಯಪುರ ಪ್ರವಾಸ ಕೈಗೊಳ್ಳುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಪ್ರಚಾರ ನಡೆಸಲಿದ್ದಾರೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 26 ರಂದು ಬೆಳಿಗ್ಗೆ 11ಕ್ಕೆ ನಗರದ ಸೋಲಾಪುರ ರಸ್ತೆಯಲ್ಲಿರುವ ಬಿ.ಎಲ್.ಡಿ.ಇ ನ್ಯೂಸ್ ಕ್ಯಾಂಪಸ್ ನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ.  […]

ದೀಪ ಆರುವಾಗ ಬಹಳ ಉರಿಯುತ್ತೆ ಎರಡೂ ಜಿಲ್ಲೆಗಳಲ್ಲಿ 2 ಗೊಡ್ಮೆಮ್ಮೆಗಳಿವೆ ಬಿಜೆಪಿ ಮುಖಂಡರ ವಿರುದ್ಧ ಸಚಿವ ಶಿವಾನಂದ ಎಸ್ ಪಾಟೀಲ ವಾಗ್ದಾಳಿ

ವಿಜಯಪುರ: ಬಿಜೆಪಿ ಸ್ಟಾರ್ ಪ್ರಚಾರಕ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ದೀಪ ಆರುವಾಗ ಬಹಳ ಉರಿಯುವಂತೆ ವರ್ತಿಸುತ್ತಿದ್ದಾರೆ.  ಮಂಗನಿಗೆ ಮದ್ಯ ಕುಡಿಸಿದಂತೆ ಮಾತನಾಡುತ್ತಾರೆ.  ಗಂಡಸ್ತನ ಇದ್ದರೆ ಲೋಕಸಭೆ ಚುನಾವಣೆಯ ನಂತರವೇ ವಿಜಯಪುರದಿಂದ ಸ್ಪರ್ಧೆ ಮಾಡೋಣ ಎಂದು ಸಚಿವ ಶಿವಾನಂದ ಎಸ್. ಪಾಟೀಲ ಸವಾಲು ಹಾಕಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿಜಯಪುರದಲ್ಲಿ ಒಬ್ಬ ಸ್ಟಾರ್ ಪ್ರಚಾರಕರಿದ್ದಾರೆ.  ದೀಪ ಆರುವಾಗ ಬಹಳ […]

ಕೈ ಸಚಿವ, ಶಾಸಕರಿಂದ ಒಗ್ಗಟ್ಟು ಪ್ರದರ್ಶನ- ಬಸವನಾಡಿನಿಂದ ಪ್ರೊ. ರಾಜು ಆಲಗೂರ ಪ್ರಚಾರಕ್ಕೆ ಚಾಲನೆ

ವಿಜಯಪುರ: ಜಿಲ್ಲೆಯ ಕಾಂಗ್ರೆಸ್ ಸಚಿವರು, ಶಾಸಕರು ಮತ್ತು ಮುಖಂಡರು ಒಗ್ಗಟ್ಟು ಪ್ರದರ್ಶನ ಮಾಡಿದ್ದು, ಬಸವಣ್ಣನ ತವರು ಬಸವನ ಬಾಗೇವಾಡಿಯಿಂದ ಕೈ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಎಂ. ಬಿ. ಪಾಟೀಲ, ಶಿವಾನಂದ ಎಸ್. ಪಾಟೀಲ, ಶಾಸಕರಾದ ಸಿ. ಎಸ್. ನಾಡಗೌಡ, ಯಶವಂತರಾಯಗೌಡ ವಿ. ಪಾಟೀಲ, ವಿಠ್ಠಲ ಧೋಂಡಿಬಾ ಕಟಕದೊಂಡ, ಅಶೋಕ ಮನಗೂಳಿ, ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮಾಜಿ ಶಾಸಕ ಶರಣಪ್ಪ ಸುಣಗಾರ, […]

ಲೋಕಸಭೆ ಚುನಾವಣೆ: ವಿಜಯಪುರದಲ್ಲಿ ಅಂತಿಮವಾಗಿ ಎಂಟು ಜನ ಕಣದಲ್ಲಿ

ವಿಜಯಪುರ: ಲೋಕಸಭೆ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂಪಡೆಯುವ ಅವಧಿ ಸೋಮವಾರ ಮುಕ್ತಾಯವಗಿದ್ದು, ಒಟ್ಟು 4 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ ತೆಗೆದುಕೊಂಡಿದ್ದು, ಅಂತಿಮವಾಗಿ ಕಣದಲ್ಲಿ ಎಂಟು ಅಭ್ಯರ್ಥಿಗಳು ಇದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಸಂಗಪ್ಪಾ ಹುಣಶಿಕಟ್ಟಿ, ಬಾಬುರಾಜೇಂದ್ರ ನಾಯಿಕ, ಭಾರತೀಯ ಜವಾನ್ ಕಿಸಾನ್ ಪಕ್ಷದ ಕುಲಪ್ಪಾ ಬಿ ಚವ್ಹಾಣ, ಬಿಎಸ್‌ಪಿ ಪಕ್ಷದ ಮಲ್ಲು ಹಾದಿಮನಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಕಣದಲ್ಲಿರುವ ಅಭ್ಯರ್ಥಿಗಳು 1. ಬಿಜೆಪಿ- ಭಾರತೀಯ ಜನತಾ ಪಕ್ಷದ ರಮೇಶ ಜಿಗಜಿಣಗಿ, 2. ಕಾಂಗ್ರೇಸ್‌- ರಾಜು ಆಲಗೂರ, 3. […]

ಕಿತ್ತೂರ, ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಎಲ್ಲ 12 ಸ್ಥಾನಗಳನ್ನು ಗೆಲ್ಲಲಿದೆ- ಎಚ್. ಕೆ. ಪಾಟೀಲ

ವಿಜಯಪುರ: ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಎಲ್ಲ 12 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಕಿತ್ತೂರು ಕರ್ನಾಟಕದ ಏಳು ಮತ್ತು ಕಲ್ಯಾಣ ಕರ್ನಾಟಕದ 5 ಸೇರಿದಂತೆ ಎಲ್ಲ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಸುಳ್ಳು […]

ಮೋದಿ ವಿಶ್ವಗುರುವಾಗಿದ್ದರೆ ಬೇರೆ ಪಾರ್ಟಿ ಜೊತೆ ಮೈತ್ರಿ ಯಾಕೆ ಬೇಕು? ಜನಾರ್ಧನ ರೆಡ್ಡಿ ಯಾಕೆ ಮರು ಸೇರ್ಪಡೆಯಾಗಬೇಕು- ಸಚಿವ ಸಂತೋಷ ಲಾಡ ಪ್ರಶ್ನೆ

ವಿಜಯಪುರ: ಮೋದಿ ವಿಶ್ವಗುರುವಾಗಿದ್ದರೆ ಬೇರೆ ಪಕ್ಷಗಳೊಂದಿಗೆ ಯಾಕೆ ಮೈತ್ರಿ ಮಾಡಿಕೊಳ್ಳಬೇಕು? ಜನಾರ್ಧನ ರೆಡ್ಡಿಯನ್ನು ಯಾಕೆ ಬಿಜೆಪಿಗೆ ಮರಳಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಸಚಿವ ಸಂತೋಷ ಲಾಡ ಪ್ರಶ್ನಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸುಳ್ಳು ಪ್ರಚಾರಗಳ ಮೂಲಕ ಮತಯಾಚಿಸುತ್ತಿದ್ದಾರೆ ಎಂದು ಆರೋಪಿಸಿದರು. ಮೋದಿ ಅವರು ವಿಶ್ವ ಗುರು ಅಂತಾರೆ.  ಹಾಗಿದ್ದರೆ ಬಿಜೆಪಿಯವರು ಜೆಡಿಎಸ್ ಜೊತೆ ಏಕೆ ಮೈತ್ರಿ ಮಾಡಿಕೊಂಡರು? ಜನಾರ್ಧನ ರೆಡ್ಡಿಯನ್ನು ಯಾಕೆ ಬಿಜೆಪಿಗೆ ವಾಪಸ್ ಸೇರಿಸಿಕೊಂಡರು? ಅವರಿಗೆ ಸೋಲುವ […]

Election: ಜಿಗಜಿಣಗಿ, ಆಲಗೂರ ಸೇರಿ 12 ಅಭ್ಯರ್ಥಿಗಳ ನಾಮಪತ್ರ ಸ್ವೀಕಾರ- 9 ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರ

ವಿಜಯಪುರ: ಲೋಕಸಭೆ ನಾಮಪತ್ರ ಪರಿಶೀಲನೆ ಪೂರ್ಣಗೊಂಡಿದ್ದು, ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ ಸೇರಿ 12 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರವಾಗಿದ್ದು, ಒಂಬತ್ತು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ.  ಏ. 19 ರಂದು ನಾಮಪತ್ರ ಸಲ್ಲಿಕೆ ಮುಕ್ತಾಯವಾಗಿದ್ದು, ಒಟ್ಟು 21 ಅಭ್ಯರ್ಥಿಗಳು 35 ನಾಮಪತ್ರ ಸಲ್ಲಿಸಿದ್ದರು.  ಈ ನಾಮಪತ್ರಗಳ ಪರಿಶೀಲನೆ ನಡೆಯಿತು.  ಈ ಸಂದರ್ಭದಲ್ಲಿ 12 ಅಭ್ಯರ್ಥಿಗಳ ಅಭ್ಯರ್ಥಿಗಳ ನಾಮಪತ್ರ ಸ್ವೀಕಾರವಾಗಿದ್ದು, ಒಂಬತ್ತು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿವೆ. ನಾಮಪತ್ರ ಸ್ವೀಕತವಾದ ಅಭ್ಯರ್ಥಿಗಳು, ಪಕ್ಷದ ಮಾಹಿತಿ. ಮಲ್ಲು ಹಾದಿಮನಿ- ಬಿಎಸ್ಪಿ ರಮೇಶ ಜಿಗಜಿಣಗಿ-ಬಿಜೆಪಿ ಹಣಮಂತರಾವ […]