ಫೆ. 23ರಂದು ಬಬಲೇಶ್ವರದಲ್ಲಿ ಪ್ರಜಾಧ್ವನಿ ಯಾತ್ರೆ- ಆಧುನಿಕ ಭಗೀರಥನ ಪರ ಚುನಾವಣೆ ಪ್ರಚಾರಕ್ಕೆ ರಣಕಹಳೆ ಮೊಳಗಿಸಲಿರುವ ಸಿದ್ಧರಾಮಯ್ಯ

ವಿಜಯಪುರ: ಬಬಲೇಶ್ವರದಲ್ಲಿ ಫೆ. 23 ರಂದು ಗುರುವಾರ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪ್ರಜಾಧ್ವನಿ ನಡೆಯಲಿದ್ದು, ಮತಕ್ಷೇತ್ರದ 75 ಸಾವಿರ ಜನರು ಪಾಲ್ಗೊಳ್ಳುವ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಬಲೇಶ್ವರ ಬಸ್‍ಸ್ಟ್ಯಾಂಡ್ ಹತ್ತಿರದ ನಿಡೋಣಿ ರಸ್ತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 50 ಸಾವಿರ ಜನ ಕುಳಿತುಕೊಂಡು ನೋಡುವ ಬೃಹತ್ […]

ಅರಕೇರಿ ಗ್ರಾಂ. ಪಂ. ಗೆ ನೂತನ ಅಧ್ಯಕ್ಷರಾಗಿ ಅನುಸೂಯ ಗೋವಿಂದ ರಾಠೋಡ, ಉಪಾಧ್ಯಕ್ಷರಾಗಿ ಕುಸುಮಾ ಪ್ರಕಾಶ ರಾಠೋಡ ಅವಿರೋಧ ಆಯ್ಕೆ

ವಿಜಯಪುರ: ತಿಕೋಟಾ ತಾಲೂಕಿನ ಅರಕೇರಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅನುಸೂಯ ಗೋವಿಂದ ರಾಥೋಡ ಮತ್ತು ಉಪಾಧ್ಯಕ್ಷರಾಗಿ ಕುಸುಮಾ ಪ್ರಕಾಶ್ ರಾಥೋಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಥೋಡ, ಜಿಓಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ನಿಂಗರಾಜ ಬೆಳ್ಳುಬ್ಬಿ, ಮಾಜಿ ಮಂಡಲ್ ಪ್ರಧಾನ ಸಿದ್ದಣ್ಣ ಸಕ್ರಿ, ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹುಸೇನಸಾಬ ಮನಗೂಳಿ, ಗೋವಿಂದ ರಾಥೋಡ, ಸುರೇಶ ಭಂಡಾರಿ, ಸೀತಾರಾಮ ರಾಠೋಡ ಮುಂತಾದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ನೂತನ […]

ರಶ್ಮಿ ಪಾಟೀಲ ವಿಜಯಪುರ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ನೇಮಕ

ವಿಜಯಪುರ: ವಿಜಯಪುರ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ನೂತನ ಅಧ್ಯಕ್ಷರನ್ನಾಗಿ ಪತ್ರಕರ್ತೆ ರಶ್ಮಿ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರ ಆದೇಶದ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಲೀಲಾದೇವಿ ಆರ್. ಪ್ರಸಾದ್ ಅವರು ನೇಮಕಾತಿ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್ ದೇಶದ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದೆ- ಉಮೇಶ ಕಾರಜೋಳ ಪ್ರತಿಕ್ರಿಯೆ

ವಿಜಯಪುರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್  ದೇಶದ ಪ್ರಗತಿಗೆ ಹೊಸ ಭಾಷ್ಯ ಬರೆಯಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ನಿರ್ಮಲಾ ಸೀತರಾಮನ್ ಅವರು, ಆದಾಯ ತೆರಿಗೆ ಪಾವತಿ ವಿಷಯವಾಗಿ ಜನಸಾಮಾನ್ಯರ ಹಿತವನ್ನು ಗಮನದರಲ್ಲಿಸಿಕೊಂಡು ಶ್ರೀಸಾಮಾನ್ಯನಿಗೆ ಯಾವುದೇ ತೆರಿಗೆ ಹೊರೆ ವಿಧಿಸದೇ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ವಿಸ್ತರಣೆ ಜೊತೆಗೆ […]

ಕಾಂಗ್ರೆಸ್ಸಿಗೆ ವಲಸಿಗರನ್ನು ಸೇರಿಸುವ ವಿಚಾರ ಹೈಕಮಾಂಡಿಗೆ ಬಿಟ್ಟಿದ್ದು- ಸಿಡಿ ವಿಚಾರ ಇಬ್ಬರು ವ್ಯಕ್ತಿಗಳ ನಡುವಿನ ವಿವಾದ- ಸತೀಶ ಜಾರಕಿಹೊಳಿ

ವಿಜಯಪುರ: ಕಾಂಗ್ರೆಸ್ ಬಿಟ್ಟವರು ವಾಪಸ್ ಬಂದ್ರೆ ಅವರನ್ನು ಸೇರಿಸಿಕೊಳ್ಳುವ ಅಥವಾ ಸೇರಿಸಿಕೊಳ್ಳದಿರುವ ಕುರಿತು ಹೈಕಮಾಂಡ್ ನಿರ್ಧರಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿ ತೊರೆದು ಈಗ ಮರುಸೇರ್ಪಡೆಯಾಗಲು ಬಯಸುವ ನಾಯಕರಿಗೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರದ ಕುರಿತು ಅವರು ಪ್ರತಿಕ್ರಿಯೆ ನೀಡದಿರ. ಯಾವ ನಾಯಕರು ಬೇಕು ಅಥವಾ ಬೇಡ ಎಂಬುದರ ಕುರಿತು ನಾವು ನಮ್ಮ ಅಭಿಪ್ರಾಯ ಹೇಳಬಹುದು.  ಆದರೆ, […]

ಹೈಕಮಾಂಡ್ ಸೂಚನೆ ಹಿನ್ನೆಲೆ ಬಿ ಎಸ್ ವೈ ವಿರುದ್ಧ ಸಾಫ್ಟ್ ಆಗಿದ್ದೇನೆ- ಸಿಎಂ ಬದಲಾವಣೆ ಇಲ್ಲ- ಚುನಾವಣೆಗೆ ಸಾಮೂಹಿಕ ನೇತೃತ್ವ- ಯತ್ನಾಳ

ವಿಜಯಪುರ: ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರುದ್ಧ ಮಾತನಾಡದೇ ಸಾಫ್ಟ್ ಆಗಿ ಇರುತ್ತೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಹೇಳಿದ ಮೇಲೆ ಸಾಫ್ಟ್ ಆಗಲೇ ಬೇಕಲ್ವಾ? ಎಲ್ಲದಕ್ಕೂ ಗುರ್ ಎನ್ನಲು ಬರುತ್ತಾ? ಕಾಂಪ್ರೈಮೈಸ್ ಎನ್ನಲು ಅವರ ಆಸ್ತಿ ನಾನು ಕಸಿದುಕೊಂಡಿಲ್ಲ.  ಏನೋ ರಾಜಕೀಯ ಸಂಘರ್ಷಗಳಿುತ್ತವೆ.  ಈಗ ಅವೆಲ್ಲದಕ್ಕೂ ವಿರಾಮ ಹೇಳಿದ್ದೇನೆ.  ಮಾಧ್ಯಮದವರೂ ಇನ್ನು ಮುಂದೆ ಯಡಿಯೂರಪ್ಪ ಅವರ ಬಗ್ಗೆ ಯಾವುದೇ ಪ್ರಶ್ನೆ […]

ಬಿಜೆಪಿ ಗೆಲುವಿಗೆ ಜನಪರ ಯೋಜನೆಗಳೇ ಶ್ರೀರಕ್ಷೆ- ಪ್ರಕಾಶ ಅಕ್ಕಲಕೋಟ

ವಿಜಯಪುರ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳೇ ಶ್ರೀರಕ್ಷೆಯಾಗಲಿವೆ ಎಂದು ಬಿಜೆಪಿ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ ಹೇಳಿದ್ದಾರೆ. ವಿಜಯಪುರ ನಗರದ ವಾ. ಸಂ. 33ರಲ್ಲಿ ಬರುವ ಬೂತ್ ಸಂಖ್ಯೆ 139 ಮತ್ತು 145ರ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನಪರ, ರೈತಪರ, ಕಾರ್ಮಿಕರ ಪರವಾದ ನೈಜವಾದ ಕಾಳಜಿ ಹೊಂದಿರುವ ಏಕೈಕ ಪಕ್ಷ ಬಿಜೆಪಿ, ದೇಶಾಭಿಮಾನ ಹಾಗೂ ಜನಸೇವೆಯೇ ಬಿಜೆಪಿಯೇ ಧ್ಯೇಯವಾಗಿದೆ.  ಈ ಹಿನ್ನೆಲೆಯಲ್ಲಿ […]

ಸಿಂದಗಿ ಜೆಡಿಎಸ್ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ‌ ಸೋಮಜಾಳ ನಿಧನ- ಎಚ್ಡಿಕೆ ಸಂತಾಪ- ಮುದ್ದೇಬಿಹಾಳ ಕಾರ್ಯಕ್ರಮ ನಾಳೆಗೆ ಮುಂದೂಡಿಕೆ

ವಿಜಯಪುರ: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಜಯಪುರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಕೈಗೊಂಡ ಸಂದರ್ಭದಲ್ಲಿಯೇ ಪಕ್ಷಕ್ಕೆ ಆಘಾತ ಎದುರಾಗಿದೆ. ಸಿಂದಗಿ ಮತಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜಾಳ(54) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ವಿಜಯಪುರ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಮಾಜಿ ಸಿಎಂ‌ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಅವರು ಪಾಲ್ಗೊಂಡಿದ್ದರು. ಅಲ್ಲದೇ, ನಂತರ ನಾಗಠಾಣ ಮತಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಶಿವಾನಂದ ಪಾಟೀಲ ಸೋಮಜಾಳ ಭಾಗಿಯಾಗಿದ್ದರು. ಸಂಜೆ […]

ನಿಮ್ಮ ಗ್ರಾಮಕ್ಕೆ ನಮ್ಮ ಆರೋಗ್ಯ ಸೇವೆ- ಕೊಲ್ಹಾರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ

ವಿಜಯಪುರ: ತಜ್ಞ ವೈದ್ಯರ ವೈದ್ಯಕೀಯ ತಂಡವನ್ನು ಗ್ರಾಮೀಣ ಪ್ರದೇಶಕ್ಕೆ ಕರೆದುಕೊಂಡು ಬಂದು ನಿಮ್ಮ ಗ್ರಾಮಕ್ಕೆ ನಮ್ಮ ಆರೋಗ್ಯ ಸೇವೆ ಕಾರ್ಯಕ್ರಮದಡಿ ಬಿ ಎಲ್ ಡಿ ಇ ಸಂಸ್ಥೆ ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ ಹೇಳಿದರು. ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಕೊಲ್ಹಾರದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು […]

ದೆಹಲಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನನ್ನ ಪರವಾಗಿ ನಿರ್ಣಯ ಬರಲಿದೆ- ಯಾವುದೇ ಭಯಕ್ಕೂ ಅಂಜುವ ಮಗ ನಾನಲ್ಲ- ಯತ್ನಾಳ

ವಿಜಯಪುರ: ದೆಹಲಿಯಲ್ಲಿ ನಡೆದಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನನ್ನ ಪರವಾಗಿ ನಿರ್ಣಯ ಬರಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಮತ್ತು ಬಿಜೆಪಿ ನಾಯಕರ ವಿರುದ್ಧ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ತಮಗೆ ನೋಟೀಸ್ ನೀಡಲಾಗಿದೆ ಎಂಬ ವದಂತಿಗಳ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿದರು. ತಮಗೆ ಬಿಜೆಪಿ ಹೈಕಮಾಂಡ್ ನೋಟಿಸ್ ನೀಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.  ಹೈಕಮಾಂಡ್ ನೊಟೀಸ್ ಕೊಡುವಂಥ ಅಪರಾಧವನ್ನು ನಾನೇನೂ ಮಾಡಿಲ್ಲ.  ಕೆಲವರು […]