BJP Felicitation: ಕಾರ್ಮಿಕರಿಗೆ ಸನ್ಮಾನಿಸಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ವಿಜಯೋತ್ಸವ ಆಚರಿಸಿದ ಕಾರಜೋಳ ಸಹೋದರರು

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ನಾಗಠಾಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಆದು ವಾರ್ಡುಗಳಲ್ಲಿ ಬಿಜೆಪಿ ಮೂರರಲ್ಲಿ ಗೆಲುವು ಸಾಧಿಸಿದೆ.  ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರಾದ ಕಾರಜೋಳ ಸಹೋದದರು ಈ ವಿಜಯೋತ್ಸವನ್ನು ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ವಿನೂತನವಾಗಿ ಆಚರಿಸಿದ್ದಾರೆ.  ಬಿಜೆಪಿ ಮುಖಂಡ ಡಾ. ಗೋಪಾಲಕಾರಜೋಳ ಮತ್ತು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ವಿಜಯಿ ಅಭ್ಯರ್ಥಿಗಳಾದ ರಶ್ಮಿ ಬಸವರಾಜ ಕೋರಿ, ಸುನಂದಾ ಸಂಗೋಂಡಪ್ಪ ಕುಮಸಿ ಮತ್ತು […]

Vote Counting: ವಾ. ನಂ. 15ರ ಫಲಿತಾಂಶ ಮೊದಲಿಗೆ ಪ್ರಕಟ- ವಾ. ನಂ. 21ರ ಫಲಿತಾಂಶ ಬಹುತೇಕ ಲಾಸ್ಟ್- ವಾರ್ಡವಾರು ಎಷ್ಟು ಸುತ್ತುಗಳ ಮತ ಎಣಿಕೆ ಗೊತ್ತಾ?

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆ ಮತ ಎಣಿಕೆ ಅ. 31 ರಂದು ಸೋಮವಾರ ನಗರದ ದರಬಾರ ಹೈಸ್ಕೂಲ್ ಮತ ಎಣಿಕೆ ಕೇಂದ್ರದಲ್ಲಿ ನಡೆಯಲಿದೆ.   ಈ ಮತ ಎಣಿಕೆಯಲ್ಲಿ ವಾರ್ಡ್ ಸಂಖ್ಯೆ 15ರ ಫಲಿತಾಂಶ ಬಹುತೇಕ ಮೊದಲಿಗೆ ಪ್ರಕಟವಾಗಲಿದೆ.  ವಾರ್ಡ್ ಸಂಖ್ಯೆ 21ರ ಫಲಿತಾಂಶ ಬಹುತೇಕ ಕೊನೆಗೆ ಪ್ರಕಟವಾಗಲಿದೆ.  ಇದಕ್ಕೆ ಏನು ಕಾರಣ ಎಂಬುದರ ಮಾಹಿತಿ ಇಲ್ಲಿದೆ. ಏಳು ಕೊಠಡಿಗಳಲ್ಲಿ ತಲಾ ಐದು ವಾರ್ಡುಗಳ ಮತ ಎಣಿಕೆ ಮತ ಎಣಿಕೆಗೆ ವಿಜಯಪುರ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು […]

Voting Percentage: ಶೇ‌ 55.17 ರಷ್ಟು ಮತದಾನ: ವಾರ್ಡವಾರು ಮಾಹಿತಿ‌ ಇಲ್ಲಿದೆ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಒಟ್ಟು ಶೇ. 55.25 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ವಾರ್ಡವಾರು ಮಾಹಿತಿ ಇಲ್ಲಿದೆ.    

Karjol Brothers Voting: ಡಾ. ಗೋಪಾಲ ಕಾರಜೋಳ, ಉಮೇಶ ಕಾರಜೋಳ ದಂಪತಿಯಿಂದ ಮತದಾನ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಮತದಾನ ಚುರುಕು ಪಡೆದುಕೊಂಡಿದ್ದು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಪುತ್ರರಾದ ಡಾ ಗೋಪಾಲ ಕಾರಜೋಳ ಮತ್ತು ಉಮೇಶ ಕಾರಜೋಳ ದಂಪತಿ ಸಮೇತ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿಜಯಪುರ ನಗದ ಮತ್ತು ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ವಾರ್ಡ್ ಸಂಖ್ಯೆ 12ರಲ್ಲಿ ಬರುವ ಸರಕಾರಿ ಶಾಲೆ ಸಂಖ್ಯೆ 37ರಲ್ಲಿರುವ ಮತಗಟ್ಟೆ ಸಂಖ್ಯೆ 98ರಲ್ಲಿ ಪತ್ನಿ ಡಾ. ನಿವೇದಿತಾ ಕಾರಜೋಳ ಜೊತೆ ಅಗಮಿಸಿದ ಡಾ. ಗೋಪಾಲ ಕಾರಜೋಳ ತಮ್ಮ ಹಕ್ಕು ಚಲಾಯಿಸಿದರು. ಈ […]

DC Family Voting: ಪತ್ನಿ ಶ್ವೇತಾ ಜೊತೆ ಆಗಮಿಸಿ ಮತದಾನ ಮಾಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಬಿರುಸಿನಿಂದ ಸಾಗಿದೆ. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಮ್ಮ ಪತ್ನಿ ಶ್ವೇತಾ ದಾನಮ್ಮನವರ ಜೊತೆ ವಿಜಯಪುರ ನಗರದ ಸರಕಾರಿ ಬಾಲಕರ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 219ರಲ್ಲಿ ಸದರಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಸರತಿ ಸಾಲಿನಲ್ಲಿ ನಿಂತು ದರಬಾರ ಶಾಲೆಯಲ್ಲಿ ಸ್ಥಾಪಿಲಾಗಿರುವ 219 ರ ಮತಗಟ್ಟೆಗೆ ತೆರಳಿ ತಮ್ಮ ಮತದಾನ ಹಕ್ಕನ್ನು ಚಲಾಯಿಸುವ ಮೂಲಕ ಮತದಾನ ಮಹತ್ವ ಸಾರಿದರು. ಮತಗಟ್ಟೆಗಳಿಗೆ ಭೇಟಿ ನೀಡಿದ ಡಿಸಿ, ಎಸ್ಪಿ ಚುನಾವಣೆ ಶಾಂತಿಯತವಾಗಿ […]

Yatnal Family Voting: ಕುಟುಂಬ ಸಮೇತ ಬಂದು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿದ ಶಾಸಕ ಯತ್ನಾಳ

ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ತಮ್ಮ ಮತದಾನ ಮಾಡಿದ್ದಾರೆ. ವಿಜಯಪುರ ನಗರದ ಎಸ್ ಎಸ್ ಹೈಸ್ಕೂಲ್ ಲಿನಲ್ಲಿರುವ ಮತಗಟ್ಟೆಗೆ ಕುಟುಂಬ ಸಮೇತ ಆಗಮಿಸಿದ ಅವರು, ತಮ್ಮ ಹಕ್ಕು ಚಲಾಯಿಸಿದರು.  ಪತ್ನಿ ಸುಜಾತಾ, ಮಕ್ಕಳಾದ ರಾಮನಗೌಡ ಮತ್ತು ಆದರ್ಶಗೌಡ ಜೊತೆ ಆಗಮಿಸಿದ ಅವರು ಮತ ಚಲಾಯಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. […]

Sunilgouda Patil Voting: ಎಂ ಎಲ್ ಸಿ ಸುನೀಲಗೌಡ ಪಾಟೀಲರಿಂದ ಮತದಾನ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಗೆ ಮತದಾನ ಬಿರುಸಿನಿಂದ ಸಾಗಿದ್ದು, ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿಜಯಪುರ ನಗರದ ವಾರ್ಡ ಸಂಖ್ಯೆ 11ರಲ್ಲಿ ಬರುವ ಮದ್ದಿನ ಖಣಿ ಬಳಿ ಇರುವ ಮತಗಟ್ಟೆಗಯಲ್ಲಿ ಸದರಿಯಲ್ಲಿ ನಿಂತ ಅವರು, ತಮ್ಮ ಪಾಳಿ ಬಂದ ನಂತರ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮತದಾರರ ಪಟ್ಟಿ ಗೊಂದಲ ವಿಚಾರ […]

Election Preparation: ಮಹಾನಗರ ಪಾಲಿಕೆ ಚುನಾವಣೆ: ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಡಿಸಿ, ಎಸ್ಪಿ

ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮತಪೆಟ್ಟಿಗೆ ಮತ್ತು ಮತದಾನಕ್ಕೆ ಅಗತ್ಯವಾಗಿರುವ ಇವಿಎಂ ಮತ್ತೀತರ ಸಲಕರಣೆಗಳನ್ನು ವಿತರಿಸುವ ಕೇಂದ್ರಕ್ಕೆ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಡಿ. ಆನಂದಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಸ್ಟರಿಂಗ್ ಕೇಂದ್ರವಾಗಿರುವ ವಿಜಯಪುರ ನಗರದ ವಿ. ವಿ. ದರಬಾರ ಕೇಂದ್ರಕ್ಕೆ ಭೇಟಿ ನೀಡಿ, ಶಾಂತಿಯುತ ಮತದಾನ ನಡೆಸಲು ತಮಗೆ ವಹಿಸಿದ ಜವಾಬ್ದಾರಿಯಿಂದ ಅತ್ಯಂತ ಸಮರ್ಥವಾಗಿ ನಿಭಾಯಿಸಬೇಕು.  ಚುನಾವಣೆ […]

Campaign Close: ಮಹಾನಗರ ಪಾಲಿಕೆ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ- ನಾನಾ ಬಡಾವಣೆಗಳಲ್ಲಿ ಪ್ರಚಾರ ನಡೆಸಿದ ಅಭ್ಯರ್ಥಿಗಳು

ವಿಜಯಪುರ: ಅ. 28ರಂದು ಶುಕ್ರವಾರ ನಡೆಯಲಿರುವ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಬಹಿರಂಗ ಪ್ರಚಾರ ಸಂಜೆ ಅಂಕೊಂಡಿದೆ. ಈ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೂ ಮುಂಚೆ ನಾನಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಂತಮ್ಮ ವಾರ್ಡುಗಳಲ್ಲಿ ಬಹಿರಂಗ ಪ್ರಚಾರ ನಡೆಸಿದರು. ವಿಜಯಪುರ ನಗರದ ವಾರ್ಡ್ ಸಂಖ್ಯೆ 32 ರಲ್ಲಿ ಪಕ್ಷೇತರ ಅಭ್ಯರ್ಥಿ ಹೇರಲಗಿ ಸಂಗಪ್ಪ ಬಸವರಾಜ ತಮ್ಮ ವಾರ್ಡ್ ವ್ಯಾಪ್ತಿಯ ಲಿಂಗೇಶ್ವರ ಗುಡಿ ಹತ್ತಿರ, ನವಿ ಗಲ್ಲಿ, ಬಣಗಾರ ಗಲ್ಲಿ, ಹಿರೇಮಠ ಗಲ್ಲಿ, ಕೊಪ್ಪದ ಗಲ್ಲಿ, […]

Election Vehicles: ಮಹಾನಗರ ಪಾಲಿಕೆ ಚುನಾವಣೆ: ಮತಗಟ್ಟೆ ಸಿಬ್ಬಂದಿಗಳು ಮಸ್ಟರಿಂಗ್ ಕೇಂದ್ರಕ್ಕೆ ತೆರಳಲು ವಾಹನ ವ್ಯವಸ್ಥೆ ಜಿಲ್ಲಾಧಿಕಾರಿ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ಅ. 28 ರಂದು ಮತದಾನ ನಡೆಯಲಿದ್ದು, ಸುವ್ಯವಸ್ಥಿತವಾಗಿ ಮತದಾನ ನಡೆಯುವ ದೃಷ್ಟಿಯಿಂದ ನಾನಾ ತಾಲೂಕುಗಳಿಂದ  ಅವಶ್ಯಕ ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಿ ಆದೇಶಿಸಲಾಗಿದ್ದು, ನಿಯೋಜಿತ ಮತಗಟ್ಟೆ ಸಿಬ್ಬಂದಿಗಳು ಮಸ್ಟರಿಂಗ್ ಕೇಂದ್ರಕ್ಕೆ ತೆರಳಲು  ಜಿಲ್ಲೆಯ ಆಯಾ ತಾಲೂಕುಗಳಿಂದ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ತಿಳಿಸಿದ್ದಾರೆ. ನಿಯೋಜಿತ ಮತಗಟ್ಟೆ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಮಸ್ಟರಿಂಗ್ ಕೇಂದ್ರವಾದ ವಿಜಯಪುರ ನಗರದ ವಿ.ಬಿ.ದರಬಾರ ಶಾಲೆಗೆ ತಲುಪಲು […]