MLC Counting: ವಿಪ‌ ಚುನಾವಣೆ: ಬೆಳಗಾವಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ- ಮಧ್ಯಾಹ್ನ ವೇಳೆಗೆ ಫಲಿತಾಂಶ ಸಾಧ್ಯತೆ

ಬೆಳಗಾವಿ: ವಿಧಾನ ಪರಿಷತ(Legislative Council) ವಾಯುವ್ಯ ಶಿಕ್ಷಕರ(Northwest Teachers) ಮತ್ತು ಪದವೀಧರ(Graduates)ಹಾಗೂ ಪಶ್ಚಿಮ ಪದವೀಧರ(West Graduates) ಮತಕ್ಷೇತ್ರಕಗಳ ಮತ ಎಣಿಕೆ ಕಾರ್ಯ ಬೆಳಗಾವಿಯಲ್ಲಿ(Belagavi) ಆರಂಭವಾಗಿದೆ. ಇಲ್ಲಿಯ ಜ್ಯೋತಿ ಪಿಯು ಕಾಲೇಜಿನಲ್ಲಿರುವ ಮತ ಎಣಿಜೆ ಕೇಂದ್ರದಲ್ಲಿ ಬೆಳಗಾವಿ ವಲಯದ ಮೂರು ಸ್ಥಾನಗಳ ಮತ ಎಣಿಕೆ ನಡೆಯುತ್ತಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಇದೆ ಎಂದೇ ಅರ್ಥೈಸಲಾಗುತ್ತಿದೆ‌. ಬಿಜೆಪಿಯಿಂದ ಸ್ಪರ್ಧಿಸಿರುವ ಅರುಣ ಶಹಾಪುರ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ರಾಜಕೀಯವಾಗಿ […]

MLC Confidence: ಮೊದಲ‌ ಸುತ್ತಿನಲ್ಲಿಯೇ ಗೆಲ್ಲುವೆ- ಅರುಣ ಶಹಾಪುರ ವಿಶ್ವಾಸ

ವಿಜಯಪುರ: ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಮತ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಜೂ. 15 ಬುಧವಾರ ಬೆಳಗಾವಿಯಲ್ಲಿ ಮತ ಎಣಿಕೆ ನಡೆಯಲಿದೆ. ಈ ಬಾರಿಯೂ ಶಿಕ್ಷಕ ಬಾಂಧವರು ತಮಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದು ಮೊದಲ ಸುತ್ತಿನಲ್ಲಿಯೇ ಆಯ್ಕೆಯಾಗುವುದಾಗಿ ಬಿಜೆಪಿ ಅಭ್ಯರ್ಥಿ ಮತ್ತು ವಿಧಾನ ಪರಿಷತ ಸದಸ್ಯ ಅರುಣ ಶಹಾಪುರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬವಸ ನಾಡು ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿನವರು ಸಾಕಷ್ಟು ಹಣ ಹಂಚಲು ಪ್ರಯತ್ನಿಸಿದರೂ ಕೂಡ […]

Voting Percentage: ಎಂ ಎಲ್ ಸಿ ಚುನಾವಣೆ: ಬಸವ ನಾಡಿನಲ್ಲಿ ಶಿಕ್ಷಕರ ಮತಕ್ಷೇತ್ರಕ್ಕೆ ಶೇ.80.15, ಪದವೀಧರ ಮತಕ್ಷೇತ್ರಕ್ಕೆ ಶೇ.62.36ರಷ್ಟು ಮತದಾನ

ವಿಜಯಪುರ: ವಿಧಾನ ಪರಿಷತ ವಾಯುವ್ಯ ಶಿಕ್ಷಕ ಮತ್ತು ಪದವೀಧರರ ಮತಕ್ಷೇತ್ರಗಳಿಗೆ ನಡೆದ ಚುನಾವಣೆ ವಿಜಯಪುರ ಜಿಲ್ಲಾದ್ಯಂತ ಶಾಂತಿಯುತವಾಗಿ ಮುಕ್ತಾಯವಾಗಿದೆ.  ಶಿಕ್ಷಕರ ಕ್ಷೇತ್ರಕ್ಕೆ ಶೇ.80.15ರಷ್ಟು ಮತ್ತು ಪದವೀಧರ ಕ್ಷೇತ್ರಕ್ಕೆ ಶೇ. 62.36 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ವಿಜಯಪುರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ತಿಳಿಸಿದ್ದಾರೆ. ಬೆಳಿಗ್ಗೆ ನಿಧಾನವಾಗಿ ಆರಂಭವಾದ ಮತದಾನ ಸಂಜೆಯ ವೇಳೆಗೆ ಬಿರುಸು ಪಡೆಯಿತು.  ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಬೆಳಗಿನ 8 ರಿಂದ 10 ಗಂಟೆವರೆಗೆ ಶೇ.11.36ರಷ್ಟು, […]

MLC Voting: ಬಸವ ನಾಡಿನಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ- ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಎಂ ಎಲ್ ಸಿ

ವಿಜಯಪುರ: ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಗೆ ಮತದಾನ ಬಿಸಿಲೇರುತ್ತಿದ್ದಂತೆ ವೇಗ ಪಡೆದುಕೊಂಡಿದೆ. ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ವಿಜಯಪುರ ನಗರದಲ್ಲಿರುವ ಸರಕಾರಿ‌ ಬಾಲಕರ ಪ್ರೌಢ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 120 ರಲ್ಲಿ ಮತ ಚಲಾಯಿಸಿದ್ದಾರೆ. ಬೆಳಿಗ್ಗೆ ಮತಗಟ್ಟೆಗೆ ಆಗಮಿಸಿದ ಅವರು ಪಾಳಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮತಗಟ್ಟೆಯಿಂದ ಹೊರ ಬಂದ ಅವರು ಮತ ಹಾಕಿರುವ ಕುರುಹಾಗಿ ತಮ್ಮ ಬೆರಳಿಗೆ ಹಾಕಲಾಗಿರು ಶಾಹಿಯ ಗುರುತನ್ನು […]

MLC Election: ಬಸವ ನಾಡಿನಲ್ಲಿ ಮಂದಗತಿಯಲ್ಲಿ ಶಾಂತಿಯುತವಾಗಿ ಸಾಗಿರುವ ಮತದಾನ- ಡಿಸಿ, ಎಸ್ಪಿ ಪರಿಶೀಲನೆ

ವಿಜಯಪುರ: ವಿಧಾನ‌ ಪರಿಷತ್ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಮತದಾನ ಆರಂಭವಾಗಿದೆ. ಮತದಾರರು ನಿಧಾನವಾಗಿ ಮತಗಟ್ಟೆಗಳಿಗೆ ಆಗಮಿಸುತ್ತಿದ್ದು ಮತದಾನ ಮಂದಗತಿಯಲ್ಲಿ ಸಾಗಿದೆ‌. ವಿಜಯಪುರ ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ 8 ರಿಂದ ಆರಂಭವಾಗಿರುವ ಮತದಾನ ಸಂಜೆ 05 ಗಂಟೆಯ ವರೆಗೆ ನಡೆಯಲಿದೆ. ಮತ ಎಣಿಕೆ ಕಾರ್ಯವು ಬೆಳಗಾವಿಯ ಕ್ಲಬ್‌ ರೋಡ್‌‌ ನಲ್ಲಿರುವ ಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ಜೂನ್ 15 ರಂದು ನಡೆಯಲಿದೆ. […]

Election Training: ವಾಯವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಚುನಾವಣೆ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳಿಗೆ ತರಬೇತಿ

ವಿಜಯಪುರ: ರಾಜ್ಯ ವಾಯವ್ಯ(North West) ಶಿಕ್ಷಕರ(Teachers) ಮತ್ತು ಪದವೀಧರ ಮತಕ್ಷೇತ್ರಗಳ(Graduates) ಚುನಾವಣೆಗೆ(Election) ನಿಯೋಜನೆಯಾಗಿರುವ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ(Officers Training) ವಿಜಯಪುರ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಚುನಾವಣೆ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಆಯೋಗವು ಹೊರಡಿಸಿದ ಮಾರ್ಗಸೂಚಿಗೆ ಅನುಸಾರವಾಗಿ ಕಾರ್ಯ ನಿರ್ವಹಿಸಬೇಕು.  ಚುನಾವಣೆ ಹಿನ್ನೆಲೆಯಲ್ಲಿ ಬೇರೆ ಬೇರೆ ತಂಡಗಳನ್ನು ರಚಿಸಲಾಗಿದ್ದು, ಎಲ್ಲರು ಅವರವರ ಕೆಲಸ ಏನು ಎಂಬುದನ್ನು ಅರಿತು ಅದರಂತೆ ಕಾರ್ಯ ನಿರ್ವಹಿಸಬೇಕು.  […]

Loud Dpeakers Yatnal: ಧ್ವನಿವರ್ಧಕ ವಿಚಾರದಲ್ಲಿ ಸರಕಾರ ಕ್ರಮ ಕೈಗೊಳ್ಳದಿದ್ದರೆ ಪ್ರಮೋದ ಮುತಾಲಿಕ ಗೆ ನನ್ನ ಬೆಂಬಲ ಎಂದ ಶಾಸಕ ಯತ್ಬಾಳ

ವಿಜಯಪುರ: ಧ್ವನಿ ವರ್ಧಕಗಳ(Loud Speakers) ಬಳಕೆ(Use) ವಿಚಾರದಲ್ಲಿ ರಾಜ್ಯ ಸರಕಾರ(State Government) ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು. ಇಲ್ಲದಿದ್ದರೆ ಶ್ರೀರಾಮ ಸೇನೆ ಮುಖಂಡ(Shriramsene Leader) ಪ್ರಮೋದ ಮುತಾಲಿಕ ನಡೆಸಲು ಮುಂದಾಗಿರುವ ಅಭಿಯಾನವನ್ನು ಬೆಂಬಲಿಸುವುದಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnsl) ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವಸ್ಥಾನ ಮತ್ತು ಮಸೀದಿಗಳಲ್ಲಿ ಅನುಮತಿ ಇಲ್ಲದ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕು. ಶಬ್ದದ ವೇಗದ ಮಿತಿಯನ್ನು ಪರಿಶೀಲಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಸರಕಾರ ಅನುಮತಿ […]

Panchamasali Yatnal: ಯತ್ನಾಳರಿಂದ ಪಂಚಮಸಾಲಿ ಸಮಾಜದ ಹೆಸರು ದುರ್ಬಳಕೆ ಆರೋಪ- ಬಿಜೆಪಿಯಿಂದ ಉಚ್ಛಾಟಿಸಲು ವಿಜಯಪುರ ಪಂಚಮಸಾಲಿ ಮುಖಂಡರ ಆಗ್ರಹ

ವಿಜಯಪುರ: ವಿಜಯಪುರ(Vijayapura) ನಗರ(Vity) ಬಿಜೆಪಿ ಶಾಸಕ(BJP MLA) ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಪಂಚಮಸಾಲಿ(Panchamasali) ಸಮಾಜದ ಮುಖಂಡರು(Community Leaders) ಹರಿಹಾಯ್ದಿದ್ದಾರೆ.  ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿಯ ಪಂಚಮಸಾಲಿ ಮುಖಂಡರಾದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ಮತ್ತು ಮುಖಂಡ ಸುರೇಶ ಬಿರಾದಾರ, ಯತ್ನಾಳ ಪಂಚಮಸಾಲಿ ಸಮುದಾಯದ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಒಂದಿಲ್ಲೊಂದು ದಿನ ಸಮಾಜ ಇವರ ವಿರುದ್ಧ ವೈಲೆಂಟ್ ಆಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಶಾಸಕ ಯತ್ನಾಳ ಪಂಚಮಸಾಲಿ […]

ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿದೆ- ಚಿಕ್ಕೋಡಿ ಮೊದಲು ನೂತನ ಜಿಲ್ಲೆಯಾಗಲಿ- ಸಚಿವ ಉಮೇಶ ಕತ್ತಿ

ವಿಜಯಪುರ: ವಿಜಯಪುರ ಜಿಲ್ಲೆಗೆ(Vijayapura District) ಆದಷ್ಟು ಬೇಗ ಸಚಿವ ಸ್ಥಾನ(Ministership) ಸಿಗುತ್ತದೆ.  ಬಿಜೆಪಿ ಕಾರ್ಯಕಾರಿಣಿ‌(BJP Executive Committee Meeting) ಮುಗಿದ ಮೇಲೆ ಏ. 20ರ ನಂತರ ಸಚಿವ ಸ್ಥಾನ ಸಿಗಬಹುದು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ(District Incharge Miniater) ಸಚಿವ ಉಮೇಶ ಕತ್ತಿ(Umesh Katti) ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಈ ಮೂಲಕ ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸುಳಿವು ನೀಡಿದ್ದಾರೆ.  ಸಚಿವರು ತಿಳಿಸಿದರು. ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ  ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆ.  18 […]

ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು- ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ ನಲಪಾಡ

ವಿಜಯಪುರ: ಯುವ(Youth) ಕಾಂಗ್ರೆಸ್(Congress) ರಾಜ್ಯಾಧ್ಯಕ್ಷ(State President) ಮೊಹಮ್ಮದ ನಲಪಾಡ(Mohammad Nalapad) ಕೇಂದ್ರ ಮತ್ತು ರಾಜ್ಯ ಸರಕಾರಗಳ(Union and State Governments) ವಿರುದ್ಧ ಹರಿ ಹಾಯ್ದಿದ್ದಾರೆ.  ಗುಮ್ಮಟ ನಗರಿ ವಿಜಯಪುರದಲ್ಲಿ ಗ್ರಾಮ ದೇವತೆ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ಯುವಕನ ಕೊಲೆಯ ವಿಚಾರ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಕುರಿತು ಖಾರವಾಗಿ ಪ್ರತಿಕ್ರಿಯಿಸಿದರು.  ಮುಖ್ಯಮಂತ್ರಿ ಮತ್ತು ಅರಗ ಜ್ಞಾನೇಂದ್ರ ಅವರು ಅರ್ಧ ಜ್ಞಾನ […]