ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು- ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ ನಲಪಾಡ

ವಿಜಯಪುರ: ಯುವ(Youth) ಕಾಂಗ್ರೆಸ್(Congress) ರಾಜ್ಯಾಧ್ಯಕ್ಷ(State President) ಮೊಹಮ್ಮದ ನಲಪಾಡ(Mohammad Nalapad) ಕೇಂದ್ರ ಮತ್ತು ರಾಜ್ಯ ಸರಕಾರಗಳ(Union and State Governments) ವಿರುದ್ಧ ಹರಿ ಹಾಯ್ದಿದ್ದಾರೆ.  ಗುಮ್ಮಟ ನಗರಿ ವಿಜಯಪುರದಲ್ಲಿ ಗ್ರಾಮ ದೇವತೆ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ಬೆಂಗಳೂರಿನಲ್ಲಿ ಯುವಕನ ಕೊಲೆಯ ವಿಚಾರ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಕುರಿತು ಖಾರವಾಗಿ ಪ್ರತಿಕ್ರಿಯಿಸಿದರು.  ಮುಖ್ಯಮಂತ್ರಿ ಮತ್ತು ಅರಗ ಜ್ಞಾನೇಂದ್ರ ಅವರು ಅರ್ಧ ಜ್ಞಾನ […]

ಧ್ವನಿವರ್ಧಕಗಳ ಬಳಕೆ ಮಾನದಂಡ ಎಲ್ಲ ಸಮುದಾಯದವರಿಗೂ ಒಂದೇ ಆಗಿರಲಿ- ಕೆಪಿಸಿಸಿ ವಕ್ತಾರ ಎಸ್. ಎಂ. ಪಾಟೀಲ ಗಣಿಹಾರ

ವಿಜಯಪುರ: ಆಜಾಂ(Azan) ಹೆಸರಿನಲ್ಲಿ(Name) ಧ್ವನಿವರ್ಧಕಗಳ(Loud Speakers) ಬಳಕೆ(Use) ಕುರಿತು ಸರಕಾರ(Government) ಅನುಸರಿಸುತ್ತಿರುವ ಮಾನದಂಡ ಎಲ್ಲ ಸಮುದಾಯದವರ ಲೌಡ್ ಸ್ಪೀಕರ್ ಬಳಕೆಗೂ ಅನ್ವಯಿಸಬೇಕು  ಎಂದು ಕೆಪಿಸಿಸಿ ವಕ್ತಾರ ಮತ್ತು ಅಲ್ಪಸಂಖ್ಯಾತರ ಮುಖಂಡ ಎಸ್. ಎಂ. ಪಾಟೀಲ ಗಣಿಹಾರ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆಯೇರಿಕೆ ಮುಂತಾದ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಬಿಜೆಪಿ ಮುಖಂಡರು ವಿನಾಕಾರಣ ವಿವಾದ ಸೃಷ್ಠಿಸುತ್ತಿದ್ದಾರೆ ಎಂದು ಆರೋಪಿಸಿದರು. ಧ್ವನಿವರ್ಧಕಗಳಿಂದ ಅಕ್ಕಪಕ್ಕದವರಿಗೆ ತೊಂದರೆಯಾಗುತ್ತಿದ್ದರೆ ಯಾವುದೇ ಧರ್ಮದವರಾಗಲಿ ಲೌಡ್ ಸ್ಪೀಕರ್ ಧ್ವನಿಯನ್ನು ಕಡಿಮೆ ಮಾಡುವ ಮೂಲಕ ಸಹಬಾಳ್ವೆ […]

ಬಿಜೆಪಿಗೆ ಮೂಲ ಕಾರ್ಯಕರ್ತರೇ ಜೀವಾಳ- ಚಂದ್ರಶೇಖರ ಕವಟಗಿ

ವಿಜಯಪುರ: ರಾಷ್ಟ್ರಭಕ್ತಿ(Patriotism) ಹಾಗೂ ಮೌಲ್ಯಯುತ(Valuable) ರಾಜಕಾರಣಕ್ಕೆ(Politics) ಬಿಜೆಪಿ(BJP) ಹೆಸರು ಅನ್ವರ್ಥಕ ಎಂದು ಬಿಜೆಪಿ ಬೆಳಗಾವಿ ಪ್ರಭಾರಿ ಚಂದ್ರಶೇಖರ ಕವಟಗಿ(Chandrashekhar Kawatagi) ಹೇಳಿದ್ದಾರೆ. ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ಬಿಜೆಪಿ ನೂತನ ಕಚೇರಿಯ ಸಭಾಂಗಣದಲ್ಲಿ ನಡೆದ ಬಿಜೆಪಿ ಸಂಸ್ಥಾಪನೆ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ದೇಶಾಭಿಮಾನವನ್ನೇ ಉಸಿರಾಗಿಸಿಕೊಂಡಿರುವ ಪಕ್ಷ.  ಇಲ್ಲಿರುವ ಕಾರ್ಯಕರ್ತರು ಒಂದೇ ವಿಚಾರ ಹೊಂದಿರುವ ಪರಿವಾರ’ದ ಸದಸ್ಯರು.  ಬಿಜೆಪಿ ದೇಶಭಕ್ತಿ, ಸ್ವದೇಶಿ ಸಿದ್ಧಾಂತಗಳನ್ನೇ ನೆಚ್ಚಿಕೊಂಡಿದೆ ಎಂದು ಹೇಳಿದರು. ಬಿಜೆಪಿ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ […]

ವಾಕ್ಚತುರ, ನಡೆ-ನುಡಿಯ ಮೂಲಕ ಜನಮನ ಗೆದ್ದಿರುವ ನಾಯಕನಿಗೆ ಎಂ ಎಲ್ ಸಿ ಟಿಕೆಟ್ ನೀಡಲು ಬೆಂಬಲಿಗರಿಂದ ಅಭಿಯಾನ

ವಿಜಯಪುರ: ವಿಧಾನ(Legislative) ಪರಿಷತ್(Council) ಚುನಾವಣೆ(Election) ಕಾವು(Heat) ಹೆಚ್ಚಾಗುತ್ತಿದೆ. ವಾಯುವ್ಯ ಶಿಕ್ಷಕರ(Teachers) ಮತ್ತು ಪದವೀಧರ ಕ್ಷೇತ್ರಗಳಿಗೆ ಬಿಜೆಪಿ ಈಗಾಗಲೇ ಹಾಲಿ ಎಂ ಎಲ್ ಸಿ ಗಳಿಗೆ ಟಿಕೆಟ್ ನೀಡಿದೆ. ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ಸಿನಲ್ಲಿ ಟಿಕೆಟ್ ಗಾಗಿ ಲಾಬಿ, ಒತ್ತಾಯಗಳು ಹೆಚ್ಚಾಗುತ್ತಿವೆ.  ಸಮಾಜ ಸೇವಕ, ಶೈಕ್ಷಣಿಕ ಚಿಂತಕ, ನ್ಯಾಯವಾದಿ ಮತ್ತು ರಾಜಕಾರಣೊಯೂ ಆಗಿರುವ ಸಂಗಮೇಶ ಬಬಲೇಶ್ವರ ಅವರಿಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಈ ಮುಲಕ ಕಾಂಗ್ತೆಸ್ ಹೈಕಮಾಂಡ್ ಮೇಲೆ ಒತ್ತಡ ತರುತ್ತಿದ್ದಾರೆ. […]

ಸಚಿವ ಈಶ್ವರಪ್ಪ ರಾಜಿನಾಮೆಗೆ ಆಗ್ರಹಿಸಿ ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ವಿಜಯಪುರ: ಸಚಿವ ಕೆ. ಎಸ್. ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ವಿಜಯಪುರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಜಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ನಗರದ ಡಾ. ಬಿ..ಆರ್. ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು. ಬಳಿಕ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಸಚಿವ ಈಶ್ವರಪ್ಪ ರಾಷ್ಟ್ರಧ್ವಜದ ಕುರಿತು ಮಾತನಾಡಿದ್ದು […]

ವಿಜಯಪುರ ನಗರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಅಬ್ದುಲ್ ಹಮೀದ್ ಮುಶ್ರಿಫ್ ಚಾಲನೆ

ವಿಜಯಪುರ: ವಿಜಯಪುರ ನಗರ ಮತಕ್ಷೇತ್ರದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಚಾನೆ ನೀಡಿದ್ದಾರೆ. ವಿಜಯಪುರ ನಗರದ ವಾರ್ಡ್ ಸಂಖ್ಯೆ 14ರಲ್ಲಿ ನಡೆದ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದ ಅವರು, ವಿಜಯಪುರ ನಗರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಪಕ್ಷವನ್ನು ಬಲಪಡಿಸಲು ಶ್ರಮಿಸಬೇಕು ಎಂದು ಹೇಳಿದರು. ಮಹಿಳೆಯರನ್ನು ಈ ಅಭಿಯಾನದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ.  ಬ್ಲಾಕ್ ಮಟ್ಟದಿಂದ ಹಿಡಿದು ವಿಧಾನಸಭೆ, ವಿಧಆನ ಪರಿಷತ್ ಹಾಗೂ ಸಂಸತ್ ಚುನಾವಣೆಗಳಲ್ಲೂ ಅವರಿಗೆ ಸ್ಥಾನ […]

ಎರಡನೇ ಬಾರಿ ಎಂ ಎಲ್ ಸಿ ಆಗಿ ಸುನೀಲಗೌಡ ಪಾಟೀಲ ಪ್ರಮಾಣ ವಚನ ಸ್ವೀಕಾರ- ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಕಾಂಗ್ರೆಸ್ ಮುಖಂಡರಿಂದ ಶುಭ ಕೋರಿಕೆ

ಬೆಂಗಳೂರು: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರ ಸಮ್ಮುಖದಲ್ಲಿ ಎರಡನೇ ಬಾರಿಗೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನ ಪರಿಷತ ಚುನಾವಣೆಯಲ್ಲಿ ಕಾಂಗ್ರೆಸ್‍ ಅಭ್ಯರ್ಥಿ ಸುನೀಲಗೌಡ ಪಾಟೀಲ ಮೊದಲ ಸುತ್ತಿನಲ್ಲಿಯೇ 3000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ, ಎರಡನೇ ಬಾರಿಗೆಆಯ್ಕೆಯಾಗಿದ್ದರು.  ಪ್ರಮಾಣ ವಚನ ಸ್ವೀಕರಿಸಿದ ನಂತರ ಸುನೀಲಗೌಡ ಪಾಟೀಲ ಸಭಾಪತಿ ಬಸವರಾಜ ಹೊರಟ್ಟಿ ಅವರ ಆಶೀರ್ವಾದ ಪಡೆದರು.   ಈ ಸಂದರ್ಭದಲ್ಲಿ ವಿಜಯಪುರ […]

ಯು. ಟಿ. ಖಾದರ, ನಲ್ಪಾಡ್ ಗೆ ಹೊಸ ಜವಾಬ್ದಾರಿ- ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್. ಎ. ಹುಸೇನ್ ಸ್ವಾಗತ

ಬೆಂಗಳೂರು: ಕ್ರೀಯಾಶೀಲ ಮತ್ತು ಸಜ್ಜನರೂ ಆದ ಶಾಸಕ ಯು.ಟಿ. ಖಾದರ್ ಅವರನ್ನು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕನನ್ನಾಗಿ ನೇಮಿಸಿರುವುದಕ್ಕೆ ಮತ್ತು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮೊಹಮ್ಮದ ನಲ್ಪಾಡ್ ಅವರಿಗೆ ಕೆ ಎಸ್ ಟಿ ಡಿ ಸಿ ಮಾಜಿ ಅಧ್ಯಕ್ಷ ಮತ್ತು ಕೆ ಪಿ ಸಿ ಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್‌ .ಎ.ಹುಸೇನ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ನೇಮಕಗಳಿಗಾಗಿ ಎಐಸಿಸಿಯ ಅಧ್ಯಕ್ಷೆ ಸೋನಿಯಾ ಗಾಂಧಿ, ಎಐಸಿಸಿ […]

ಕೆಪಿಸಿಸಿ ಪ್ರಚಾರ ಸಮಿತಿ ನೂತನ ಅಧ್ಯಕ್ಷ ಎಂ. ಬಿ. ಪಾಟೀಲ ಅವರಿಗೆ ಚಡಚಣ ಬ್ಲಾಕ್ ಕಾಂಗ್ರೆಸ್ ಮುಖಂಡರು, ಸಂಗಮೇಶ ಬಬಲೇಶ್ವರ ಅವರಿಂದ ಅಭಿನಂದನೆ ಸಲ್ಲಿಕೆ

ವಿಜಯಪುರ: ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.  ಈ ಹಿನ್ನೆಲೆಯಲ್ಲಿ ಸಂತಸದಲ್ಲಿರುವ ಕಾಂಗ್ರೆಸ್ ಮುಖಂಡರು ವಿಜಯಪುರದಲ್ಲಿರುವ ಎಂ. ಬಿ. ಪಾಟೀಲ ಅವರ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ. ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಡಿ. ಹಕ್ಕೆ, ಮಾಜಿ ಶಾಸಕ ವಿಠ್ಠಲ ಧೋ. ಕಟಕದೂಂಡ, ನ್ಯಾಯವಾದಿ ಪವಾರ, ಶಬ್ಬೀರ ನದಾಫ್, ಯುನೀಸ್ ಅಲಿ ಮಕಾಂದಾರ, ನಾರಾಯಣ ವಾಘಮೋರೆ, ನಾರಾಯಣ ವಾಘಮೂರೆ, […]

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ. ಬಿ. ಪಾಟೀಲ ನೇಮಕದಿಂದ ಪಕ್ಷಕ್ಕೆ ಆನೆಬಲ‌ ಬಂದಿದೆ- ಸಂಗಮೇಶ ಬಬಲೇಶ್ವರ

ವಿಜಯಪುರ: ಮಾಜಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿರುವುದರಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಕೆಪಿಸಿಸಿ ಸದಸ್ಯ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಎಂ. ಬಿ. ಪಾಟೀಲ ಅವರನ್ನು ನೇಮಕ ಮಾಡಿರುವ ಹೈಕಮಾಂಡ್ ಗೆ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರಭಾವಿ ನಾಯಕರಾಗಿರುವ ಅವರ […]