Rambhapuri Jagadguri: ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ ಮುಖ್ಯ- ಶ್ರೀ ರಂಭಾಪುರಿ ಜಗದ್ಗುರು

ವಿಜಯಪುರ: ಜಾತಿಗಿಂತ ನೀತಿ(Policy rather than caste), ತತ್ವಕ್ಕಿಂತ ಆಚರಣೆ(Principle rather than principle) ಮುಖ್ಯವೆಂಬುದನ್ನು(Important) ಯಾರೂ ಮರೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು(Rambhapuri Dr Veerasomeshwar Jagadguru) ಅಭಿಪ್ರಾಯಪಟ್ಟಿದ್ದಾರೆ.  ಕನ್ನೂರು ಗುರುಮಠದಲ್ಲಿ ನಡೆದ ಲಿಂ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ 18ನೇ ವರ್ಷದ ಪುಣ್ಯಸ್ಮರಣೋತ್ಸವ, ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಾನವ ಜೀವನ ಉತ್ಕೃಷ್ಟವಾದುದು.  ಜನ್ಮ ಜನ್ಮಗಳ ಪುಣ್ಯಫಲದಿಂದ ಮಾನವ ಜೀವನ ಪ್ರಾಪ್ತವಾಗಿದೆ.  ಜಾತಿ ಧರ್ಮಗಳ ಮಧ್ಯೆ […]

ಬ್ರಹ್ಮದೇವರಮಡು ಗ್ರಾಮದಲ್ಲಿ ಬಲಭೀಮೇಶ್ವರ ಕಾತಿ೯ಕೋತ್ಸವ ಸಂಭ್ರಮ

ವಿಜಯಪುರ: ಸಿಂದಗಿ ತಾಲೂಕಿನ ಸುಕ್ಷೇತ್ರ ಬ್ರಹ್ಮದೇವನಮಡು ಗ್ರಾಮದ ಆರಾಧ್ಶ ದೈವ ಶ್ರೀ ಬಲಭೀಮೇಶ್ವರ ದೇವರ ಚಟ್ಟಿ ಕಾತಿ೯ಕೋತ್ಸವ ವಿಜೃಂಭಣೆಯಿಂದ ನಡೆಯಿತು.  ಕಾತಿ೯ಕೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ ಮತ್ತು ಹೂವಿನ ಅಲಂಕಾರ ಮಾಡಲಾಗಿತ್ತು.  ದೇವಸ್ಥಾನವನ್ನು ನಾನಾ ಬಣ್ಣದ ವಿದ್ಶುತ್ ದೀಪಾಲಂಕಾರ ಮಾಡಲಾಗಿತ್ತು.  ತಳಿರು, ತೋರಣಗಳ ಶೃಂಗಾರ ಗಮನ ಸೆಳೆಯಿತು.  ಈ ಕಾರ್ಯಕ್ರಮದಲ್ಲಿ ನಡೆದ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿ ಮೆರೆದರು. ರಾತ್ರಿ ಭಕ್ತರಿಗೆ ಭಜ್ಜಿ, ರೊಟ್ಟಿ ಪ್ರಸಾದ ವ್ಶವಸ್ಥೆ ಮಾಡಲಾಗಿತ್ತು.  ಇಡೀ […]

ವಿಜಯಪುರದಿಂದ ಕ್ಷೇತ್ರ ಮುರುಗೋಡಕ್ಕೆ ಪಾದಯಾತ್ರೆ ಹೊರಟ ಭಕ್ತರು

ವಿಜಯಪುರ: ಶ್ರೀ ಕ್ಷೇತ್ರ ಕೆಂಗೇರಿ ಮುರಗೋಡದಲ್ಲಿ ಡಿಸೆಂಬರ್ 18 ರಂದು ಶ್ರೀ ಚಿದಂಬರೇಶ್ವರ ಮಹಾಸ್ವಾಮಿಗಳ 264 ನೇ ಅವತಾರ ಜಯಂತೋತ್ಸವ ಅಂಗವಾಗಿ ಶ್ರೀ ಚಿದಂಬರೇಶ್ವರ ಕಲ್ಯಾಣ ರಥೋತ್ಸವ ವೈಭವದಿಂದ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸುಕ್ಷೇತ್ರ ಮುರಗೋಡಕ್ಕೆ ವಿಜಯಪುರದಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಚಿದಂಬರೇಶ್ವರ ಪಾದಯಾತ್ರೆ ಮಂಡಳಿಯಿಂದ ವಿಜಯಪುರ ನಗರದ ಚಿದಂಬರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಘವೇಂದ್ರ ಜೋಶಿ ಸಂಕನಾಳ, ಸೇವೆಯಲ್ಲಿ ಪಾದಯಾತ್ರೆ ಸೇವೆ ದೊಡ್ಡದು.  […]

ಅಂತಃಶಕ್ತಿ ಜಾಗೃತಗೊಳಿಸಿ ಜ್ಞಾನ ಸಂಪಾದಿಸಿ- ಎಸ್. ಎಸ್. ಬೀಳಗಿಪೀರ

ವಿಜಯಪುರ: ಪ್ರತಿಯೊಬ್ಬರೂ ತಮ್ಮಲ್ಲಿರುವ ಅಂತ:ಶಕ್ತಿಯನ್ನು ಜಾಗ್ರತಗೊಳಿಸಿ, ಜ್ಞಾನ ಸಂಪಾದಿಸಿ ಸಾರ್ಥಕ ಬದುಕು ಸಾಗಿಸಬೇಕು ಎಂದು ಕವಿ, ವಿಚಾರವಾದಿ ಡಾ. ಅಲ್ಲಮಾ ಇಕ್ಬಾಲ್ ಅವರ ಸಾಹಿತ್ಯದ ಸಾರವಾಗಿದೆ ಎಂದು ರಾಜ್ಯ ಸಹಕಾರ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಸ್. ಎಸ್. ಬೀಳಗಿಪೀರ ಹೇಳಿದ್ದಾರೆ.  ನಗರದ ಸಿಕ್ಯಾಬ್ ಸಂಸ್ಥೆಯ ಎ. ಆರ್. ಎಸ್ ಇನಾಮದಾರ ಮಹಿಳಾ ಮಹಾವಿದ್ಯಾಲಯದಲ್ಲಿ ಬಸವೇಶ್ವರ, ವಿವೇಕಾನಂದ, ಇಕ್ಬಾಲ್ ಹಾಗೂ ಅಂಬೇಡ್ಕರ ಪೀಠಗಳು ಹಾಗೂ ಕಾಲೇಜಿನ ಉರ್ದು ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ […]

ಡಿಸೆಂಬರ್ 14 ರಂದು ಭಗೀರಥ ಭಾರತ ಜನ ಕಲ್ಯಾಣ ಯಾತ್ರೆ ಆಗಮನ- ಜಕ್ಕಪ್ಪ ಯಡವೆ

ವಿಜಯಪುರ: ಡಿಸೆಂಬರ್ 9 ರಿಂದ ಭಾರತಾದ್ಯಂತ ಭಗೀರಥ ಭಾರತ ಜನ ಕಲ್ಯಾಣ ಯಾತ್ರೆ ಪ್ರಾರಂಭಗೊAಡಿದ್ದು, ಯಾತ್ರೆಯು ಡಿ. 14 ರಂದು ಬೆ. 10 ಗಂಟೆಗೆ ವಿಜಯಪುರ ನಗರಕ್ಕೆ ಆಗಮಿಸಲಿದೆ.  ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿಚೌಕ್, ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್, ಭಗೀರಥ ವೃತ್ತದಿಂದ ಶಿಕಾರಖಾನೆಯ ವೆಂಕಟೇಶ್ವರ ದೇವಸ್ಥಾನದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಪ್ಪಾರ ಸೇವಾ ಸಂಘದ ಅಧ್ಯಕ್ಷ ಜಕ್ಕಪ್ಪ ಯಡವೆ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಉಪ್ಪಾರ ಸಂಘದ ನೇತೃತ್ವದಲ್ಲಿ […]

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ: ಸೈನಿಕರಿಗೆ ಕೃತಜ್ಞತೆ ಸಲ್ಲಿಸಲು ಸಶಸ್ತ್ರ ಪಡೆಗಳ ಧ್ವಜ ಸದಾವಕಾಶ- ಡಿಸಿ ಟಿ. ಭೂಬಾಲನ್

ವಿಜಯಪುರ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಆಚರಿಸಲಾಯಿತು. ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಈ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಸಾಂಕೇತಿಕ ಧ್ವಜ ಬಿಡುಗಡೆಗೊಳಿಸಿ, ನಂತರ ಸಾಂಕೇತಿಕವಾಗಿ ಧ್ವಜ ಸ್ವೀಕರಿಸಿ, ದೇಣಿಗೆ ನೀಡುವುದರ ಮೂಲಕ ಸಾರ್ವಜನಿಕರಿಗೆ ಧ್ವಜಗಳನ್ನು ಮಾರಾಟ ಮಾಡಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು,ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ದೇಶದ ಎಲ್ಲ ಭಾಗಗಳಲ್ಲಿ ಪ್ರತಿ ವರ್ಷ ಇದೇ ದಿನ ಡಿ.7ರಂದು […]

ಸಿದ್ಧೇಶ್ವರ ಶ್ರೀಗಳ ಹಾಗೆ ಮಾನವ ಕುಲಕ್ಕೆ ಸ್ವಾಮಿಗಳಾಗಬೇಕು: ಪ್ರಕಾಶ ಆರ್. ಕೆ

ವಿಜಯಪುರ: ಜಾತಿಗೊಬ್ಬ ಸ್ವಾಮಿಗಳು ಆಗುವ ಬದಲು ಸಿದ್ಧೇಶ್ವರ ಶ್ರೀಗಳ ಹಾಗೆ ಮಾನವ ಕುಲಕ್ಕೆ ಸ್ವಾಮಿಗಳಾಗಬೇಕು.  ಯಾವುದೇ ಫಲಾಪೇಕ್ಷೆ, ಆಸೆ ಆಮೀಷಗಳಿಗೆ ಒಳಗಾಗದೇ ಎಲ್ಲಾ ಸಮಾಜಕ್ಕಾಗಿ ಒಳಿತನ್ನು ಬಯಸಿದ್ದವರೆಂದರೆ ನಡೆದಾಡುವ ದೇವರಾದ ನಮ್ಮ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಎಂದು ಗಾನಯೋಗಿ ಸಂಘದ ಮುಖಂಡ ಪ್ರಕಾಶ ಆರ್. ಕೆ ಹೇಳಿದರು. ನಗರದ ಹೊರ ವಲಯದ ಸಿಂದಗಿ ರಸ್ತೆಗೆ ಅಂಟಿಕೊಂಡಿರುವ ಬೈಪಾಸ್ ಅಂಡರ್‌ಗ್ರೌಂಡ ಗೋಡೆಗೆ ನಡೆದಾಡುವ ಶ್ರೀಗಳಾದ ಸಿದ್ಧೇಶ್ವರ ಶ್ರೀಗಳ ಛಾಯಾಚಿತ್ರವನ್ನು ಬಿಡಿಸಿ ಅವರು ಮಾತನಾಡಿದರು. ಇಡೀ ಜಗತ್ತಿನಲ್ಲಿ ಪ್ರವಚನ ಸಾರುವ […]

ಗುಮ್ಮಟ ನಗರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ 67ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಗೌರವ ಸಮರ್ಪಣೆ

ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಹಾಗೂ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ನಗರದ  ಅಂಬೇಡ್ಕರ್ ವೃತ್ತದಲ್ಲಿನ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಮಹಾದೇವ ಮುರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ,ಸಮಾಜ ಕಲ್ಯಾಣ ಇಲಾಖೆಯ […]

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಾಲೆಯಲ್ಲಿ ಕರ್ನಾಟಕ ಸಂಭ್ರಮ ಅಂಗವಾಗಿ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ

ವಿಜಯಪುರ: ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೊತ್ಸಾಹಿಸುವ ಅವಶ್ಯಕತೆ ಇದೆ ಎಂದು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಧ್ಯಕ್ಷ ಸುರೇಶ ದೇಸಾಯಿ ಅಭಿಪ್ರಾಯಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ವಿವೇಕನಗರದ ಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಆಯೋಜಿಸಿದ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕ ಹಾಗೂ ಕ್ರೀಡೆಯ ಜೊತೆಗೆ ಮಕ್ಕಳಿಗೆ ನಮ್ಮ ಕಲೆ ಸಂಸ್ಕೃತಿ ಸಾಹಿತ್ಯವನ್ನು ಪರಿಚಯಿಸುವುದರೊಂದಿಗೆ ಅವರಲ್ಲಿ ಅಡಗಿರುವ ಕಲಾ […]

ಮಾಜಿ ಸಚಿವ ಅಪ್ಪ ಪಟ್ಟಣಶೆಟ್ಟಿ ಅವರಿಂದ ಪ್ರತಿ ಸೋಮವಾರ ಅನ್ನದಾಸೋಹ- ಶಿವಾಜಿ ಚೌಕಿನಲ್ಲಿ ಬಸವಲಿಂಗ ಸ್ವಾಮೀಜಿ ಚಾಲನೆ

ವಿಜಯಪುರ: ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ನಗರದ ಶಿವಾಜಿ ಚೌಕಿನಲ್ಲಿ ಶ್ರೀ ಗಜಾನನ ಉತ್ಸವ ಮಹಾಮಂಡಳ ವತಿಯಿಂದ ಪ್ರತಿ ಸೋಮವಾರ ಅನ್ನದಾಸೋಹ ಸೇವೆ ಪ್ರಾರಂಭಿಸಿದ್ದಾರೆ. ಈ ಕಾರ್ಯಕ್ಕೆ ಜ್ಞಾನಯೋಗ್ರಾಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಅವರು, ಅನ್ನ ದಾಸೋಹ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ.  ವಿಜಯಪುರದ ಶಿವಾಜಿ ಚೌಕಿನಲ್ಲಿ ಇನ್ನು ಮುಂದೆ ಪ್ರತಿ ಸೋಮವಾರ ಅನ್ನದಾಸೋಹ ವ್ಯವಸ್ಥೆ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ.  ಜ್ಞಾನಯೋಗಾಶ್ರಮದಲ್ಲಿ ನಿರಂತರ ಅನ್ನ‌ಪ್ರಸಾದ ಇರುತ್ತದೆ.  ಅದೇ ರೀತಿ […]