ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವವರೆಗೆ ಯಾವುದೇ ತ್ಯಾಗಕ್ಕೂ ಸಿದ್ದ- ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ
ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಅನೇಕ ರೀತಿ ಹೋರಾಟ ಮಾಡಿದರೂ, ಯಾವುದೇ ಸರಕಾರ ಸರಿಯಾಗಿ ಸ್ಪಂಧಿಸಿಲ್ಲ. ಬೇಡಿಕೆ ಈಡೇರುವವರೆಗೂ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ತಿಕೋಟಾ ತಾಲೂಕಿನ ಕನಮಡಿ ಬಳಿಯ ಸುಕ್ಷೇತ್ರ ಗಡಿಭಾಗದಲ್ಲಿರುವ ಶ್ರೀ ಧರಿದೇವರ ದೇವಸ್ಥಾನದ ಬಳಿಯ ಪ್ರೌಢಶಾಲೆಯ ಆವರಣದಲ್ಲಿ ಇಷ್ಟಲಿಂಗ ಪೂಜೆಯೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆ, ಚನ್ನಮ್ಮ ಜಯಂತಿ ವಿಜಯೋತ್ಸವ ಹಾಗೂ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು […]
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಂ. ಬಿ. ಪಾಟೀಲರ ಪುತ್ರ ಬಸನಗೌಡ- ಶ್ಯಾಮನೂರು ಶಿವಶಂಕರಪ್ಪ ಮೊಮ್ಮಗಳು ಅಖಿಲಾ ಜೋಡಿ
ಬೆಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮತ್ತು ಆಶಾ ಎಂ. ಪಾಟೀಲ ಅವರ ಹಿರಿಯ ಪುತ್ರ ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಬಸನಗೌಡ ಪಾಟೀಲ ಅವರ ವಿವಾಹ ಹಿರಿಯ ಶಾಸಕ ಡಾ. ಶ್ಯಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳಾದ ಅಖಿಲಾ ಅವರೊಂದಿಗೆ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು. ಸಿದ್ದಗಂಗಾ ಸ್ವಾಮೀಜಿ, ಸುತ್ತೂರ ಸ್ವಾಮೀಜಿ, ಆದಿಚುಂಚನಗಿರಿ ಸ್ವಾಮೀಜಿ, ಬೇಲಿಮಠ ಸ್ವಾಮೀಜಿ, ಸೇರಿದಂತೆ ಪ್ರಮುಖ ಸ್ವಾಮೀಜಿಗಳ ಸಾನಿದ್ಯದಲ್ಲಿ ನಡೆದ […]
ನ. 24, 25 ರಂದು ಭಾವಸಾರ ಕ್ಷತ್ರೀಯ ಭವನ ಉದ್ಘಾಟನೆ- ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಭಾಗಿ
ವಿಜಯಪುರ: ನಗರದ ಭಾವಸಾರ ಕ್ಷತ್ರೀಯ ಸಮಾಜದ ನೂತನ ಸಾಂಸ್ಕೃತಿಕ ಭವನ ಉದ್ಘಾಟನೆ ಸಮಾರಂಭ ನ. 24 ಮತ್ತು 25 ರಂದು ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಭಾವಸಾರ ಕ್ಷತ್ರೀಯ ಸಮಾಜದ ಜಿಲ್ಲಾಧ್ಯಕ್ಷ ರಾಜೇಶ ದೇವಗಿರಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ನಗರದ ಬಿಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜ್ ಎದುರಿನ ಆನಂದ ನಗರದಲ್ಲಿ ರೂ. 2.65 ಕೋ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಭಾವಸಾರ ಕ್ಷತ್ರೀಯ ಸಮಾಜದ ಸಾಂಸ್ಕೃತಿಕ ಭವನವನ್ನು ನ.24 ರಂದು […]
ನ. 19ರಂದು ಡಾ. ಬಿದರಿ ಚೈಲ್ಡ್ ಅಕಾಡೆಮಿ ಲೋಕಾರ್ಪಣೆ
ವಿಜಯಪುರ: ನಗರದ ಚಿಕ್ಕಮಕ್ಕಳ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿಯವರ 40 ವರ್ಷಗಳ ವೈದ್ಯಕೀಯ ಸೇವೆಗೆ ಮತ್ತೋಂದು ಗರಿ ಸೇರ್ಪಡೆಯಾಗಲಿದ್ದು, ಎಚ್. ಟಿ. ಬಿದರಿ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಡಾ. ಬಿದರಿ ಚೈಲ್ಡ್ ಅಕಾಡೆಮಿ ಇದೇ ನ. 19 ರಂದು ರವಿವಾರ ಲೋಕಾರ್ಪಣೆಯಾಗಲಿದೆ. ಅಂದು ಸಂ. 5ಕ್ಕೆ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ, ಮುದ್ದೇಬಿಹಾಳ ಶಾಸಕ ಅಪ್ಪಾಜಿ ನಾಡಗೌಡ ಅವರು ಪಾಲ್ಗೋಳ್ಳಲಿದ್ದಾರೆ. ಅಲ್ಲದೇ, ಜಿಲ್ಲಾಧಿಕಾರಿ ಟಿ. […]
ಜೆಎಸ್ಎಸ್ ಆಸ್ಪತ್ರೆಯಲ್ಲಿ ವಿನೂತನ ಕಾರ್ಯಕ್ರಮ- ರೋಗಿಗಳೊಂದಿಗೆ ದೀಪಾವಳಿ ಆಚರಣೆ- ಶೈಲಜಾ ಪಾಟೀಲ ಯತ್ನಾಳ ಚಾಲನೆ
ವಿಜಯಪುರ: ಆಸ್ಪತ್ರೆ ಎಂದರೆ ಕೇವಲ ಆರೋಗ್ಯ ಸುಧಾರಣz ಕೇಂದ್ರಗಳಾಗುವುದಕ್ಕಿಂತ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವ ಶಕ್ತಿ ಕೇಂದ್ರಗಳಾಗಬೇಕು ಎಂದು ಶೈಲಜಾ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಜನ್ಮ ದಿನೋತ್ಸವ ಮತ್ತು ದೀಪಾವಳಿ ಅಂಗವಾಗಿ ಆಯೋಜಿಸಲಾಗಿದ್ದ ಆರೋಗ್ಯ ದೀಪೋತ್ಸವ ಹಾಗೂ ಮುತ್ಯದೆಯರಿಗೆ ಉಡಿ ತುಂಬುವ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯದ ಜೊತೆಯಲ್ಲಿ ಸಂಸ್ಕಾರ, ಸಂಸ್ಕೃತಿಯನು ಉಳಿಸುವ ಕಾಯಕವನ್ನು ಮಾಡಬೇಕು ಎನ್ನುವುದಕ್ಕೆ ನಮ್ಮ […]
ಶ್ರೀ ಸಿದ್ಧೇಶ್ವರ ಸಂಸ್ಥೆಯ ಗೋರಕ್ಷಾ ಕೇಂದ್ರದ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ
ವಿಜಯಪುರ: ಶ್ರೀ ಸಿದ್ಧೇಶ್ವರ ಸಂಸ್ಥೆಯ ಕಗ್ಗೋಡ ಶ್ರೀ ರಾಮನಗೌಡ ಬಾ ಪಾಟೀಲ(ಯತ್ನಾಳ) ಗೋ ರಕ್ಷಾ ಕೇಂದ್ರದ ಸಾವಯವ ಗೋ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಲಾಯಿತು. ನಗರದ ಶ್ರೀ ಸಿದ್ಧೇಶ್ವರ ದೇವಾಲಯದ ಪಕ್ಕದಲ್ಲಿ ಪ್ರಾರಂಭಿಸಲಾಗಿರುವ ಈ ಮಾರಾಟ ಮಳಿಗೆಯನ್ನು ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ ಮತ್ತು ಚೇರಮನ್ ಬಸಯ್ಯ ಎಸ್. ಹಿರೇಮಠ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಸ್. ಎಚ್. ದೇಸಾಯಿ, ಬಸವರಾಜ ಸುಗೂರ, ಕೋಶಾಶದ್ಯಕ್ಷ ಶಿವಾನಂದ ನೀಲಾ, ನಿರ್ದೇಶಕ ರಮೇಶ ಹಳ್ಳದ, ಸದಾಶಿವ ಗುಡ್ಡೋಡಗಿ, ಎಂ. […]
ಗುಮ್ಮಟ ನಗರಿಯಲ್ಲಿ ಟಿಪ್ಪು ಜಯಂತಿ ಸಂಭ್ರಮ- ಟಿ. ಎಸ್. ಎಸ್. ಸಂಘಟನೆಯಿಂದ ಆಯೋಜನೆ
ವಿಜಯಪುರ: ನಗರದ ಟಿಪ್ಪು ಸುಲ್ತಾನ ಸರ್ಕಲ್‌ನಲ್ಲಿ ಟಿ. ಎಸ್. ಎಸ್ ಸಂಘಟನೆಯ ವತಿಯಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ ಅವರ ಜಯಂತಿಯವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಮೈಸೂರು ಹುಲಿ ಟಿಪ್ಪು ಸುಲ್ತಾನ ಅವರ ಭಾವಚಿತ್ರಕ್ಕೆ ಸರ್ವಧರ್ಮಿಯರು ಒಗ್ಗೂಡಿ ಪುಷ್ಪಾರ್ಚನೆ ಸಲ್ಲಿಸಿ ಟಿಪ್ಪು ಧ್ವಜಾರೋಹಣ ನೆರವೇರಿಸಿ ಜೈಕಾರ ಹಾಕಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯ ಉರ್ದು ಪತ್ರಕರ್ತ ರಫೀ ಭಂಡಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ […]
ಅನಾಥಾಶ್ರಮ ಮಕ್ಕಳಿಗೆ ದೀಪಾವಳಿ ಗಿಫ್ಟ್ ನೀಡಿದ ವಿಜಯಪುರದ ನಾಗರಾಳೆ ಶಿಕ್ಷಣ ಸಂಸ್ಥೆ ಹಾರೈಕೆ
ವಿಜಯಪರ: ನಗರದ ನಾಗರಾಳೆ ಶಿಕ್ಷಣ ಸಂಸ್ಥೆ ವತಿಯಿಂದ ದೀಪಾವಳಿ ಅಂಗವಾಗಿ ನಗರದ ಬಾಗಲಕೋಟೆ ರಸ್ತೆಯ ಬಸವ ನಗರದಲ್ಲಿರುವ ಅನಾಥಾಶ್ರಮದ ಮಕ್ಕಳಿಗೆ ಸಿಹಿ ಮತ್ತು ಸ್ವೇಟರ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸಿದರಾಯ ಬಿ. ನಾಗರಾಳೆ, ಇಲ್ಲಿ ವಾಸವಾಗಿರುವ ಅನಾಥ ಮಕ್ಕಳಿಗೆ ಸ್ವೇಟರ್ ನೀಡಿದ್ದು ಅತೀವ ಸಂತಸವನ್ನುಂಟು ಮಾಡಿದೆ. ಈ ಎಲ್ಲ ಮಕ್ಕಳಿಗೆ ದೇವರು ಆರೋಗ್ಯವನ್ನು ನೀಡಲಿ. ದೀಪಾವಳಿ ಇವರ ಬಾಳಲ್ಲಿ ಹೊಸ ಹುಮ್ಮಸ್ಸನ್ನು ತರಲಿ ಎಂದು ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಕಾರ್ಮಿಕರ ಮತ್ತು […]
ವೀರಯೋಧ ಕಾಶೀರಾಯ ಬಮ್ಮನಳ್ಳಿ ಸ್ಮರಣಾರ್ಥ ಸರ್ವಧರ್ಮ ಸಮ್ಮೇಳನ- ದೇಶಪ್ರೇಮ ಬೆಳೆಸಿಕೊಳ್ಳಲು ಗೋವಿಂದ ಕಾರಜೋಳ ಕರೆ
ವಿಜಯಪುರ: ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ದೇಶಪ್ರೇಮ ಮೆರೆಯಬೇಕು. ಪ್ರತಿಯೊಬ್ಬ ಭಾರತೀಯರು ಯಾವುದೇ ಜಾತಿ-ಮತ ಪಂಥಗಳನ್ನು ಮೀರಿ ರಾಷ್ಟ್ರಪ್ರೇಮ ಬೆಳೆಸಿಕೊಂಡು, ಒಗ್ಗಟ್ಟಾಗಿ ಸುಭದ್ರ ದೇಶ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕರೆ ನೀಡಿದರು. ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಬಿಎಲ್‌ಡಿಇ ಸಂಸ್ಥೆಯ ನ್ಯೂ ಇಂಗ್ಲೀಷ್ ಹೈಸ್ಕೂಲ್ ಆವರಣದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತ್ಮಾತ್ಮರಾದ ವೀರಯೋಧ ಶೌರ್ಯಚಕ್ರ ಪ್ರಶಸ್ತಿ ಪುರಸ್ಕೃತ ಹವಲ್ದಾರ ಕಾಶೀರಾಯ ಬಮ್ಮನಳ್ಳಿ ಅವರ ಕಂಚಿನ ಪುತ್ಥಳಿ ಅನಾವರಣ ಹಾಗೂ […]
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರಫೀ ಬಂಡಾರಿ ಅವರಿಗೆ ಸನ್ಮಾನ
ವಿಜಯಪರ: ಪ್ರಸಕ್ತ ವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಡೇಲಿ ಸಾಲಾರ ಉರ್ದುು ದಿನಪತ್ರಿಕೆಯ ಹಿರಿಯ ಪತ್ರಕರ್ತ ರಫೀ ಭಂಡಾರಿ ಅವರನ್ನು ಅವರ ಅಭಿಮಾನಿಗಳು ಹಾಗೂ ನಾನಾ ಮುಖಂಡರು ಸನ್ಮಾನಿಸಿ ಗೌರವಿಸಿದರು. ನಗರದ ಗಗನ ಮಹಲ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಯು ವಿಹಾರ ಬಳಗದ ನಾನಾ ಸಮಾಜದ ಮುಖಂಡರು ಅತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಪೀ ಭಂಡಾರಿ, ತಮ್ಮ ಈ ಪ್ರಶಸ್ತಿಯನ್ನು ಭಾಷೆ ಮತ್ತು ಕೋಮು ಸೌಹಾರ್ಧತೆಗೆ ಸಮರ್ಪಿಸುವುದಾಗಿ ತಿಳಿಸಿದರು. ಹಿಂದೂ- ಮುಸ್ಲಿಂ ಸಮಾಜ […]