ದಸರಾ ಅಂಗವಾಗಿ ಪಾರೇಖ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ
ವಿಜಯಪುರ: ನಾಡಹಬ್ಬ ದಸರಾ ಮತ್ತು ವಿಜಯ ದಶಮಿ ಅಂಗವಾಗಿ ನಗರದ ಜ್ಞಾನಯೋಗಾಶ್ರಮದ ಹತ್ತಿರ ಇರುವ ಪಾರೇಖ ನಗರದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಾಲಯದ ಬನ್ನಿಗಿಡದ ಪಲ್ಲಕ್ಕಿಯನ್ನು ಹೊತ್ತ ಬಡಾವಣೆಯ ಹಿರಿಯರು ಮತ್ತು ಯುವಕರು ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಹಿರಿಯರು, ಮಹಿಳೆಯರು ಮತ್ತು ಮಕ್ಕಳೂ ಕೂಡ ಪಲ್ಲಕ್ಕಿ ಉತ್ಸವದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡರು.
ನವರಾತ್ರಿ ಶುಭ ದಿನದಂದು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ಬಸವ ನಾಡಿನ ಪೋಷಕರು
ವಿಜಯಪುರ: ಹಿಂದೂ ಸಂಪ್ರದಾಯದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಶುಭ ದಿನಗಳಿಗಾಗಿ ಕಾಯುವ ಸಂಪ್ರದಾಯ ಹಿಂದಿನಂದಲೂ ಆಚರಣೆಯಿಂದ ಬಂದಿದೆ. ತಮ್ಮ ಮಕ್ಕಳು ವಿದ್ಯಾವಂತರಾಗಬೇಕು. ಬುದ್ದಿವಂತರಾಗಬೇಕು. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರಬೇಕು ಎಂದು ಆಶಿಸುವ ಪೋಷಕರು ಬಾಲ್ಯದಲ್ಲಿ ಅವರು ಅಕ್ಷರ ಕಲಿಯುವ ಅಥವಾ ಶಾಲೆಗೆ ಸೇರುವ ದಿನ ಶುಭವಾಗಿದ್ದರೆ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎಂಬ ನಂಬಿಕೆಯಿಂದ ಸ್ವಾಮೀಜಿಗಳು ಅಥವಾ ಅರ್ಚಕರು ಇಲ್ಲವೇ ಜ್ಯೋತಿಷಿಗಳು ಬಳಿ ಪಂಚಾಂಗ ಕೇಳುತ್ತಾರೆ. ಅದೇ ರೀತಿ, ಇಂಥ ಶುಭ ದಿನಗಳಿಗಾಗಿಯೂ ಭಾರತೀಯ ಸಂಪ್ರದಾಯದಲ್ಲಿ ಕೇವಲ […]
ಕಿತ್ತೂರು ರಾಣಿ ಚೆನ್ನಮ್ಮ ಅವರ ತತ್ವಾದರ್ಶಗಳು ದಾರಿದೀಪವಾಗಿವೆ- ಮಹಾದೇವ ಮುರಗಿ
ವಿಜಯಪುರ: ನಾಡು- ನುಡಿಗಾಗಿ, ಈ ದೇಶಕ್ಕಾಗಿ ಸಮಾಜದ ಸುಧಾರಣೆಗಾಗಿ, ಸ್ವಾಭಿಮಾನಕ್ಕಾಗಿ ಧೀರೋದಾತ್ತೆತೆಯಿಂದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮರಂತಹ ಮಹನೀಯರ ಆದರ್ಶ ವಿಚಾರಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಈ […]
ವಿಜಯಪುರ ರೈಲು ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಮಹಾಸ್ವಾಮಿಯವರ ನಾಮಕರಣ: ಅಭಿಪ್ರಾಯಗಳ ಆಹ್ವಾನ
ವಿಜಯಪುರ: ವಿಜಯಪುರ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಯವರ ನಾಮಕರಣ ಮಾಡಲು ಸಂಘ- ಸxಸ್ಥೆಗಳು, ಗಣ್ಯ ವ್ಯಕ್ತಿಗಳಿಂದ ಅರ್ಜಿಗಳು ಸ್ವೀಕೃತವಾಗಿವೆ. ಈ ಹಿನ್ನಲೆಯಲ್ಲಿ ವಿಜಯಪುರ ರೈಲು ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಮಹಾಸ್ವಾಮಿಯವರ ಹೆಸರು ನಾಮಕರಣ ಮಾಡಲು ಜಿಲ್ಲೆಯ ಪ್ರತಿನಿಧಿಗಳ, ಗಣ್ಯವ್ಯಕ್ತಿಗಳು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯವನ್ನು ಆಹ್ವಾನಿಸಲಾಗಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ವಿಜಯಪುರ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಯವರ ಹೆಸರನ್ನು ನಾಮಕರಣ ಮಾಡುವ ಕುರಿತು ಸ್ಪಷ್ಟ […]
ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ, ಬಸವೇಶ್ವರ ಜಿಲ್ಲೆ ನಾಮಕರಣ: ಅಭಿಪ್ರಾಯಗಳ ಆಹ್ವಾನ
ವಿಜಯಪುರ: ವಿಶ್ವಕ್ಕೆ ಸಮಾನತೆ ಸಾರಿದ ವಿಶ್ವಗುರು ಬಸವಣ್ಣನವರು ಜನಿಸಿದ ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ ಅಥವಾ ಬಸವೇಶ್ವರ ಜಿಲ್ಲೆ ಎಂದು ಮರು ನಾಮಕರಣ ಮಾಡಲು ಸಂಘ- ಸಂಸ್ಥೆಗಳು, ಗಣ್ಯ ವ್ಯಕ್ತಿಗಳಿಂದ ಅರ್ಜಿಗಳು ಸ್ವೀಕೃತವಾಗಿರುವೆ. ಈ ಹಿನ್ನಲೆಯಲ್ಲಿ ವಿಶ್ವ ಗುರು ಬಸವಣ್ಣನವರ ಹೆಸರನ್ನು ವಿಜಯಪುರ ಜಿಲ್ಲೆಗೆ ಮರು ನಾಮಕರಣ ಮಾಡಲು ಜಿಲ್ಲೆಯ ಪ್ರತಿನಿಧಿಗಳ, ಗಣ್ಯವ್ಯಕ್ತಿಗಳ ಹಾಗೂ ಸಾರ್ವಜನಿಕರಿಂದ ಅಭಿಪ್ರಾಯವನ್ನು ಆಹ್ವಾನಿಸಲಾಗಿದೆ. ಈ ಪ್ರಕಟಣೆಯ 15 ದಿನಗಳೊಳಗಾಗಿ ವಿಶ್ವಗುರು ಬಸವಣ್ಣನವರ ಹೆಸರನ್ನು ವಿಜಯಪುರ ಜಿಲ್ಲೆಗೆ ಮರು ನಾಮಕರಣ ಮಾಡುವ ಕುರಿತು […]
ಬಾಲ್ಯ ವಿವಾಹ ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ- ಸಂತೋಷ ಕುಂದರ್
ವಿಜಯಪುರ: ಬಾಲ್ಯ ವಿವಾಹ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಸಾರ್ವಜನಿಕ ಸಹಕಾರ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ಎಸ್. ಕುಂದರ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನೆ ವಿಜಯಪುರ ನಗರ ಮತ್ತು ಗ್ರಾಮೀಣ ಇವರ ಸಹಯೋಗದಲ್ಲಿ […]
ಬಸವ ನಾಡಿಗೆ ಬಂದ ಕಿತ್ತೂರು ಚನ್ನಮ್ಮ ವಿಜಯ ವೀರಜ್ಯೋತಿ ಯಾತ್ರೆ- ಅಧಿಕಾರಿಗಳು, ಗಣ್ಯರಿಂದ ಸ್ವಾಗತ
ವಿಜಯಪುರ: ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಹೋರಾಟ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಕಿತ್ತೂರು ಚನ್ನಮ್ಮ ಅವರು ಬ್ರಿಟಿಷ್ರ ವಿರುದ್ಧ ಹೋರಾಟ ನಡೆಸಿದರು. ಅವರ ಹೋರಾಟ, ತ್ಯಾಗ, ಬಲಿದಾನ ಹಾಗೂ ಅವರ ದೇಶ ಭಕ್ತಿ ಸ್ಮರಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸೋಣ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಕಿತ್ತೂರು ಚನ್ನಮ್ಮ ಅವರ ವಿಜಯ ವೀರಜ್ಯೋತಿ ಯಾತ್ರೆಯ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿ ಮಾತನಾಡಿದರು. ಕಿತ್ತೂರ ಚನ್ನಮ್ಮ ಅವರ ಸ್ವಾತಂತ್ರ‍್ಯ […]
ಲಿಂಬೆಹಣ್ಣು, ಸಮುದ್ರದ ಮರಳಿನಿಂದ ತಯಾರಾಯ್ತು ನಾಡದೇವಿ- ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಗೆಲ್ಲಲಿ ಎಂದು ಶುಭ ಸಂದೇಶ- ಎಲ್ಲಿದೆ ಗೊತ್ತಾ?
ವಿಜಯಪುರ: ವಿಶ್ವಾದ್ಯಂತ ಈಗ ವಿಶ್ವಕಪ್ ಕ್ರಿಕೆಟ್ ಹವಾ ಜೋರಾಗಿದೆ. ಭಾರತದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿ ಈಗ ಕ್ರಿಕೆಟ್ ಕ್ರೇಜ್ ಹೆಚ್ಚಿಸಿದೆ. ಈ ಮಧ್ಯೆ ನಾಡಹಬ್ಬ ದಸರಾ ಸಂಭ್ರಮವೂ ಜೋರಾಗಿದೆ. ಇದೆಲ್ಲವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಸವ ನಾಡು ವಿಜಯಪುರದಲ್ಲಿ ಓಡಿಶ್ಯಾದ ಖ್ಯಾತ ಕಲಾವಿದ ಮತ್ತು ಸಮುದ್ರದ ಮರಳಿನಿಂದ ಕಲಾಕೃತಿ ರಚಿಸುವ ಸುದರ್ಶನ ಪಟ್ನಾಯಕ್ ನಿರ್ಮಿಸಿರುವ ಮಾದರಿಯೊಂದು ಗಮನ ಸೆಳೆಯುತ್ತಿದೆ. ವಿಜಯಪುರ ನಗರದ ಶಹಾಪೇಟಿ ಗಲ್ಲಿಯ ಮುಖ್ಯ ರಸ್ತೆಯಲ್ಲಿ ಪ್ರತಿವರ್ಷ ನಾಡಹಬ್ಬ ದಸರಾ ಅಂಗವಾಗಿ ಪ್ರತಿಷ್ಠಾಪಿಸಲಾಗುವ ನಾಡದೇವಿ ಆಕರ್ಷಣೆಯ ಕೇಂದ್ರವಾಗುತ್ತಿದೆ. […]
ಶ್ರೀ ಸಿದ್ಧೇಶ್ವರ ಆದಿಶಕ್ತಿ ತರುಣ ಮಂಡಳಿಯಿಂದ ಈ ಬಾರಿ ನಾಡಹಬ್ಬದ ಅಂಗವಾಗಿ ದೇಹುಗಾಂವ ಗಾಥಾ ಮಂದಿರ ನಿರ್ಮಾಣ
ವಿಜಯಪುರ: ನಾಡಹಬ್ಬದ ಅಂಗವಾಗಿ ನಗರದ ರಾಮ ಮಂದಿರ ರಸ್ತೆಯಲ್ಲಿರುವ ಶ್ರೀ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿ ಪ್ರತಿವರ್ಷ ನಾನಾ ಮಾದರಿಗಳನ್ನು ನಿರ್ಮಿಸುವ ಮೂಲಕ ಗಮನ ಸೆಳೆಯುತ್ತಿದ್ದು, ಈ ಬಾರಿಯೂ ವಿಶೇಷ ಮಾದರಿ ನಿರ್ಮಿಸಿದೆ. 44ನೇ ದಸರಾ ಹಬ್ಬದ ಆಚರಣೆ ಅಂಗವಾಗಿ ಈ ಬಾರಿ ಪುಣೆಯ ದೇಹುಗಾಂವ ಗಾಥಾ ಮಂದಿರ ನಿರ್ಮಿಸಲಾಗಿದೆ. ದಸರಾ ಅಂಗವಾಗಿ ಅ. 17 ರಂದು ಮಂಗಳವಾರ ರಾಮ ಮಂದಿರದಿಂದ ನಾಡದೇವಿಯ 101 ಕೆಜಿ ಬೆಳ್ಳಿಯ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ನಗರದ ಪ್ರಮುಖ ರಸ್ತೆಗಳಲ್ಲಿ […]
ಭೂತನಾಳ ತಾಂಡಾ ಶ್ರೀ ದುರ್ಗಾದೇವಿ ದೇವಾಲಯ ಅಭಿವೃದ್ಧಿಗೆ ಕೇಂದ್ರದಿಂದ ರೂ. 1 ಕೋ. ವಿಶೇಷ ಅನುದಾನ ಮಂಜೂರು ಮಾಡಿಸಿದ ಸಂಸದ ರಮೇಶ ಜಿಗಜಿಣಗಿ
ವಿಜಯಪುರ: ನಗರದ ಹೊರವಲಯದ ಭೂತನಾಳ ತಾಂಡಾದಲ್ಲಿರುವ ಪುರಾತನ ಶ್ರೀ ದುರ್ಗಾದೇವಿ ದೇವಾಲಯದ ಸರ್ವತೋಮುಖ ಪ್ರಗತಿಗಾಗಿ ಸಂಸದ ರಮೇಶ ಜಿಗಜಿಣಗಿ ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯಿಂದ ರೂ. 1 ಕೋ. ಅನುದಾನ ಮಂಜೂರು ಮಾಡಿಸಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯ ಬಾಬು ಚವ್ಹಾಣ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಂಸದರು ಇಲಾಖೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ರೂ. 1 ಕೋ. ವಿಶೇಷ ಅನುದಾನ ಮಂಜೂರು ಮಾಡಿಸಿದ್ದಾರೆ. ಸಂಸದರು ಅಭಿವೃದ್ಧಿ ಪರ ರಾಜಕಾರಣಿಯಾಗಿದ್ದು, ಆಧ್ಯಾತ್ಮಿಕತೆಗೂ […]