ಶಿಕ್ಷಕರ ದಿನಾಚರಣೆ ಅಂಗವಾಗಿ 9 ಜನ ವೈದ್ಯ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, 5 ಜನ ನಿವೃತ್ತ ವೈದ್ಯರಿಗೆ ಗೌರವ ಸಲ್ಲಿಕೆ

ವಿಜಯಪುರ: ವೈದ್ಯರು ವೃತ್ತಿಯ ಜೊತೆಗೆ ವೈದ್ಯಕೀಯ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ದಾವಣಗೆರೆಯ ಎಸ್. ಎಸ್. ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಮತ್ತು ಮುಖ್ಯಸ್ಥ ಡಾ. ಬಿ. ಎಸ್. ಪ್ರಸಾದ ಹೇಳಿದ್ದಾರೆ. ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಕೀಯ ವೃತ್ತಿ ಪವಿತ್ರವಾಗಿದೆ. ಇದರ ಜೊತೆಗೆ ವೈದ್ಯರು ಮೆಡಿಕಲ್ ಕಾಲೇಜುಗಳಲ್ಲಿ ಪಾಠ ಮಾಡಲು ಹೆಚ್ಚಿನ ಅಧ್ಯಯನದ ಅಗತ್ಯ ಇರುತ್ತದೆ. ಬದಲಾಗುತ್ತಿರುವ […]

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕಲಿಸಬೇಕು- ಶ್ರೀ ಸೋಮನಾಥ ಶಿವಾಚಾರ್ಯ

ವಿಜಯಪುರ: ಮಕ್ಕಳಿಗೆ ಶಿಕ್ಷಣದ ಮೌಲ್ಯಯುತ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದು ಕನ್ನೂರ ಶ್ರೀ ಮದ್ ರಂಭಾಪುರಿ ಶಾಖಾ ಗುರುಮಠದ ಸೋಮನಾಥ ಶಿವಾಚಾರ್ಯ ಹೇಳಿದ್ದಾರೆ. ನಗರದ ಸಂಗನಬಸವ ಸಮುದಾಯ ಭವನದಲ್ಲಿ ಜಿ. ಪಂ, ತಾ. ಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ವಿಜಯಪುರ ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕಲ್ಲಿನ […]

ಗಾಯಯೋಗಿ ಸಂಘದ ಪದಾಧಿಕಾರಿಗಳ ಜನಪರ ಸೇವೆ ಮುಂದುವರಿಕೆ- ಬಸ್ ನಿಲ್ದಾಣದ ಶೌಚಾಲಯಕ್ಕೆ ಸುಣ್ಣಬಣ್ಣ- ಜಾಗೃತಿ ಸಂದೇಶ

ವಿಜಯಪುರ: ಸ್ವಚ್ಛತ, ಸುಣ್ಣಬಣ್ಣ ಬಳಿಯುವುದು ಮತ್ತು ಜನಜಾಗೃತಿ ಸಂದೇಶಗಳನ್ನು ಸಾರುವ ಮೂಲಕ ಅನೇಕ ಜನಪರ ಕಲಸಗಳನ್ನು ಮಾಡುತ್ತಿರುವ ನಗರದ ಗಾಯನೋಗಿ ಸಂಘ ಈಗ ಮತ್ತೋಂದು ಸಮಾಜಮುಖೆ ಕೆಲಸ ಮಾಡಿದೆ. ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿರುವ ಇಂದಿನ ದಿನಗಳಲ್ಲಿ ಯುವಜನತೆಯಲ್ಲಿ ಜಾಗೃತಿ ಮೂಡಿಸಲು ದುಶ್ಚಟಕ್ಕೆ ಬಲಿಯಾಗದಿರಿ.  ತಂದೆ-ತಾಯಿಯನ್ನು ಅನಾಥರನ್ನಾಗಿ ಮಾಡಿಸಬೇಡಿ ಎಂಬುಸದಿರಿ ಎನ್ನುವ ಸಂದೇಶವನ್ನು ಸಾರುವ ಮೂಲಕ ನಗರ ಬಸ್ ಸಾರಿಗೆ ಸಂಸ್ಥೆಯ ಶೌಚಾಲಯದ ಗೋಡೆಯ ಮೇಲೆ ಯುವಕರ ಮೇಲೆ ಪ್ರಭಾವ ಬೀರುವ ಬರಹಗಳನ್ನು ಸುಣ್ಣ ಬಣ್ಣಗಳನ್ನು ಬಳೆಯುವ ಮೂಲಕ […]

ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಸಿಎಂ ಬಾಗೀನ ಅರ್ಪಣೆ ಮುಖ್ಯಮಂತ್ರಿಗಳು ಹೇಳಿದ್ದೇನು ಗೊತ್ತಾ

ವಿಜಯಪುರ: ಎರಡನೇ ಬಾರಿ ಮುಖ್ಯಮಂತ್ರಿಯಾದ ಮೇಲೆ ಎಸ್. ಸಿದ್ಧರಾಮಯ್ಯ ಇದೇ ಮೊದಲ ಬಾರಿಗೆ ಆಲಮಟ್ಟಿ ಆಗಮಿಸಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ್ದಾರೆ. ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಆಲಮಟ್ಟಿಯ ಹೆಲಿಪ್ಯಾಡ್ ಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಆಲಮಟ್ಟಿ ಹೆಲಿಪ್ಯಾಡ್ ನಲ್ಲಿ ವಿಜಯಪುರ ಎಸ್ಪಿ ಎಚ್. ಡಿ. ಅನಂದಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಗೌರವ ಸಲ್ಲಿಸಿದರು.  ಗೌರವ ವಂದನೆ ಸ್ವೀಕರಿಸಿ ರಸ್ತೆ ಮಾರ್ಗವಾಗಿ ಡ್ಯಾಂ ಅವರಣಕ್ಕೆ ಆಗಮಿಸಿದ ಸಿಎಂ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ […]

ವೃತ್ತಿಯಿಂದ ಗಳಿಸಿದ ರೂ. 2 ಕೋ. ಖರ್ಚು ಮಾಡಿ ಶ್ರೀಶೈಲದಲ್ಲಿ ವಸತಿ ನಿಲಯ ಕಟ್ಟಿದ ಮಲ್ಲಯ್ಯನ ಭಕ್ತ ಡಾ. ಸಾರ್ವಭೌಮ ಬಗಲಿ

ವಿಜಯಪುರ: ಪ್ರತಿ ವರ್ಷ ಲಕ್ಷಾಂತರ ಜನ ಉತ್ತರ ಕರ್ನಾಟಕದಿಂದ ಆಂಧ್ರ ಪ್ರದೇಶದಲ್ಲಿರುವ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ತೆರಳುತ್ತಾರೆ.  ಯುಗಾದಿ ಸಂದರ್ಭದಲ್ಲಿ ಅಲ್ಲಿ ನಡೆಯುವ ಮಲ್ಲಯ್ಯನ ಜಾತ್ರೆಗೆ ಬಹುತೇಕ ಜನರು ಪಾದಯಾತ್ರೆ ಮೂಲಕ ತೆರಳಿದರೆ, ಲಕ್ಷಾಂತರ ಜನರು ಸರಕಾರಿ ಬಸ್ಸುಗಳು ಸೇರಿದಂತೆ ಖಾಸಗಿ ವಾಹನಗಳಲ್ಲಿಯೂ ಪ್ರಯಾಣ ಮಾಡುತ್ತಾರೆ. ಹೀಗೆ ಶ್ರೀಶೈಲಕ್ಕೆ ತೆರಳು ಭಕ್ತರಿಗೆ ಅಲ್ಲಿ ತಂಗಲು ಎಷ್ಟೇ ವಸತಿ ಗೃಹ ನಿರ್ಮಿಸಿದರೂ ಕಡಿಮೆಯೇ.  ಮಲ್ಲಯ್ಯನ ಭಕ್ತರ ಈ ಸಮಸ್ಯೆಯನ್ನು ಅರಿತ ಮಾಜಿ ಶಾಸಕ ಮತ್ತ ವೃತ್ತಿಯಿಂದ ವೈದ್ಯರಾಗಿರುವ ಹಾಗೂ […]

ವಿಜಯಪುರ ಜಿಲ್ಲಾಡಳಿತದಿಂದ ನಾರಾಯಣ ಗುರುಗಳ ಜಯಂತಿ ಆಚರಣೆ

ವಿಜಯಪುರ: ಮಹಾನ್ ಪುರುಷರ ಆದರ್ಶ, ವ್ಯಕ್ತಿತ್ವ ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಇಂತಹ ಜಯಂತಿಗಳು ಮುಖ್ಯ ಹಾಗೂ ಮಹತ್ವದ್ದಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದರು. ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾರಾಯಣ ಗುರುಗಳ ನಡೆ, ನುಡಿ ಹಾಗೂ ಆಚಾರ, ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ತತ್ವಾದರ್ಶಗಳನ್ನು ಚಾಚು ತಪ್ಪದೇ ಪಾಲಿಸಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕದ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ […]

ಕಾಖಂಡಕಿ ಶ್ರೀ ಮಹಿಪತಿದಾಸರು ಸಿನೇಮಾ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ

ವಿಜಯಪುರ: ನಾಡಿನ ಹೆಸರಾಂತ ದಾಸವರೇಣ್ಯರಲ್ಲಿ ಒಬ್ಬರಾದ ಕಾಖಂಡಕಿ ಮಹಿಪತಿರಾಯರ ಕುರಿತು ತೆರೆಗೆ ಬರುತ್ತಿರುವ ಕಾಖಂಡಕಿ ಶ್ರೀ ಮಹಿಪತಿದಾಸರು ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಬೆಂಗಳೂರಿನ ಕೆ ಆರ್ ಪುರಂ ನಲ್ಲಿರುವ ಮೊವೀಸ್ ಫಿಲ್ಮ್ ಸ್ಟುಡಿಯೋದಲ್ಲಿ ಖ್ಯಾತ ನಿರ್ದೇಶಕ ಡಾ. ಮಧಸೂಧನ ಹವಾಲ್ದಾರ, ಯುವ ಧುರೀಣ ಪ್ರಕಾಶ ಅಕ್ಕಲಕೋಟ ಚಿತ್ರೀಕರಣಕ್ಕೆ ಕ್ಲ್ಯಾಪ್ ಮಾಡಿದರು. ಬೆಂಗಳೂರಿನ ಬ್ರೆನ್ಸ್ ಫೌಂಡೇಶನ್ ಮುಖ್ಯ ನ್ಯೂರೋ ಸರ್ಜನ್ ಹಾಗೂ ಸಂಸ್ಥಾಪಕ ಡಾ. ವೆಂಕಟರಮಣ ಎನ್. ಕೆ. ಬೆಂಗಳೂರಿನ ಉನ್ನತಿ ಫೌಂಡೇಶನ್ನಿನ ರಮೇಶ್ […]

ಶರಣರ ವಚನಗಳನ್ನು ನಾಟಕ, ನೃತ್ಯರೂಪಕಗಳ ಮೂಲಕ ಪ್ರಸಾರ ಮಾಡುವುದರಿಂದ ಹೆಚ್ಚು ಜನರಿಗೆ ತಲುಪಲು ಸಾಧ್ಯ- ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ

ವಿಜಯಪುರ: ಶರಣರ ವಚನಗಳನ್ನು ನಾಟಕ ಮತ್ತು ನೃತ್ಯ ರೂಪಕಗಳ ಮೂಲಕ ಪ್ರಸಾರ ಮಾಡುವುದರಿಂದ ಜೀವನದ ಸಾರವನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಲು ಸಾಧ್ಯ ಎಂದು ಷಣ್ಮುಖಾರೂಢ ಮಠದ ಪೀಠಾಧಿಪತಿ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಹೇಳಿದ್ದಾರೆ. ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಪದವಿ ಮಹಾವಿದ್ಯಾಲಯದ ಕನ್ನಡ ಮತ್ತು ಹಿಂದಿ ವಿಭಾಗ, ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ, ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ದೇಶದಲ್ಲೇ ಮೊದಲ ಅಖಿಲ […]

ಮೂರು ವರ್ಷಗಳಿಗೊಮ್ಮೆ ನಡೆಯುವ ಉ.ಕ.ದ ಏಕೈಕ ಜೈ ಸಂತೋಷಿ ಮಾತಾ ದೇವಸ್ಥಾನದ ಜಾತ್ರೆಗೆ ಕ್ಷಣಗಣನೆ- ಬುಧವಾರದಿಂದ ಶುಕ್ರವಾರ ನಾನಾ ಕಾರ್ಯಕ್ರಮ

ವಿಜಯಪುರ: ಬಸವನಾಡು ವಿಜಯಪುರ ನಗರದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಅಧಿಕ ಮಾಸ ಶ್ರಾವಣ ತಿಂಗಳಲ್ಲಿ ಮೂರು ದಿನಗಳ ಕಾಲ ನಡೆಯುವ ಜಲನಗರದ ಜೈ ಸಂತೋಷಿ ಮಾತ್ರಾ ಜಾತ್ರೆ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.   ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಾತ್ರಾ ಸಮಿತಿ ಅಧ್ಯಕ್ಷ ಮತ್ತು ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ನಾಳೆ ಆ. 23ರಂದು ಬುಧವಾರದಿಂದ ಆ. 25ರಂದು ಶುಕ್ರವಾರದವರೆಗೆ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. ಶ್ರೀ ಜೈ ಸಂತೋಷಿಮಾತಾ […]

ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಂಥಪಾಲಕರ ದಿನ ಆಚಚರಣೆ

ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಂಥಾಲಯ ವಿಭಾಗದಿಂದ ಗ್ರಂಥಪಾಲಕರ ದಿನಾಚರಣೆ, ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಕ್ಲಬ್ ತರಬೇತಿ ಶಿಬಿರ ನಡೆಯಿತು.  ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಸಸಿಗೆ ನಿರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕಾಲೇಜಿನಲ್ಲಿ ಸಾಕಷ್ಟು ಪುಸ್ಸತಕಗಳ ಜೊತೆಗೆ ಡಿಜಿಟಲ್ ಮಾಹಿತಿ ಮತ್ತು ಇ- ರಿಸರ್ಚ್ ಸೌಲಭ್ಯಗಳು ಲಭ್ಯವಿವೆ.  ಇದರ ಸದುಪಯೋಗ […]