ಕಾಖಂಡಕಿ ಶ್ರೀ ಮಹಿಪತಿದಾಸರು ಸಿನೇಮಾ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ
ವಿಜಯಪುರ: ನಾಡಿನ ಹೆಸರಾಂತ ದಾಸವರೇಣ್ಯರಲ್ಲಿ ಒಬ್ಬರಾದ ಕಾಖಂಡಕಿ ಮಹಿಪತಿರಾಯರ ಕುರಿತು ತೆರೆಗೆ ಬರುತ್ತಿರುವ ಕಾಖಂಡಕಿ ಶ್ರೀ ಮಹಿಪತಿದಾಸರು ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಬೆಂಗಳೂರಿನ ಕೆ ಆರ್ ಪುರಂ ನಲ್ಲಿರುವ ಮೊವೀಸ್ ಫಿಲ್ಮ್ ಸ್ಟುಡಿಯೋದಲ್ಲಿ ಖ್ಯಾತ ನಿರ್ದೇಶಕ ಡಾ. ಮಧಸೂಧನ ಹವಾಲ್ದಾರ, ಯುವ ಧುರೀಣ ಪ್ರಕಾಶ ಅಕ್ಕಲಕೋಟ ಚಿತ್ರೀಕರಣಕ್ಕೆ ಕ್ಲ್ಯಾಪ್ ಮಾಡಿದರು. ಬೆಂಗಳೂರಿನ ಬ್ರೆನ್ಸ್ ಫೌಂಡೇಶನ್ ಮುಖ್ಯ ನ್ಯೂರೋ ಸರ್ಜನ್ ಹಾಗೂ ಸಂಸ್ಥಾಪಕ ಡಾ. ವೆಂಕಟರಮಣ ಎನ್. ಕೆ. ಬೆಂಗಳೂರಿನ ಉನ್ನತಿ ಫೌಂಡೇಶನ್ನಿನ ರಮೇಶ್ […]
ಶರಣರ ವಚನಗಳನ್ನು ನಾಟಕ, ನೃತ್ಯರೂಪಕಗಳ ಮೂಲಕ ಪ್ರಸಾರ ಮಾಡುವುದರಿಂದ ಹೆಚ್ಚು ಜನರಿಗೆ ತಲುಪಲು ಸಾಧ್ಯ- ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ
ವಿಜಯಪುರ: ಶರಣರ ವಚನಗಳನ್ನು ನಾಟಕ ಮತ್ತು ನೃತ್ಯ ರೂಪಕಗಳ ಮೂಲಕ ಪ್ರಸಾರ ಮಾಡುವುದರಿಂದ ಜೀವನದ ಸಾರವನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಲು ಸಾಧ್ಯ ಎಂದು ಷಣ್ಮುಖಾರೂಢ ಮಠದ ಪೀಠಾಧಿಪತಿ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಹೇಳಿದ್ದಾರೆ. ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಪದವಿ ಮಹಾವಿದ್ಯಾಲಯದ ಕನ್ನಡ ಮತ್ತು ಹಿಂದಿ ವಿಭಾಗ, ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ, ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ದೇಶದಲ್ಲೇ ಮೊದಲ ಅಖಿಲ […]
ಮೂರು ವರ್ಷಗಳಿಗೊಮ್ಮೆ ನಡೆಯುವ ಉ.ಕ.ದ ಏಕೈಕ ಜೈ ಸಂತೋಷಿ ಮಾತಾ ದೇವಸ್ಥಾನದ ಜಾತ್ರೆಗೆ ಕ್ಷಣಗಣನೆ- ಬುಧವಾರದಿಂದ ಶುಕ್ರವಾರ ನಾನಾ ಕಾರ್ಯಕ್ರಮ
ವಿಜಯಪುರ: ಬಸವನಾಡು ವಿಜಯಪುರ ನಗರದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಅಧಿಕ ಮಾಸ ಶ್ರಾವಣ ತಿಂಗಳಲ್ಲಿ ಮೂರು ದಿನಗಳ ಕಾಲ ನಡೆಯುವ ಜಲನಗರದ ಜೈ ಸಂತೋಷಿ ಮಾತ್ರಾ ಜಾತ್ರೆ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಾತ್ರಾ ಸಮಿತಿ ಅಧ್ಯಕ್ಷ ಮತ್ತು ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ನಾಳೆ ಆ. 23ರಂದು ಬುಧವಾರದಿಂದ ಆ. 25ರಂದು ಶುಕ್ರವಾರದವರೆಗೆ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು. ಶ್ರೀ ಜೈ ಸಂತೋಷಿಮಾತಾ […]
ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಂಥಪಾಲಕರ ದಿನ ಆಚಚರಣೆ
ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಂಥಾಲಯ ವಿಭಾಗದಿಂದ ಗ್ರಂಥಪಾಲಕರ ದಿನಾಚರಣೆ, ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಮತ್ತು ಕ್ಲಬ್ ತರಬೇತಿ ಶಿಬಿರ ನಡೆಯಿತು. ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ ಸಸಿಗೆ ನಿರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕಾಲೇಜಿನಲ್ಲಿ ಸಾಕಷ್ಟು ಪುಸ್ಸತಕಗಳ ಜೊತೆಗೆ ಡಿಜಿಟಲ್ ಮಾಹಿತಿ ಮತ್ತು ಇ- ರಿಸರ್ಚ್ ಸೌಲಭ್ಯಗಳು ಲಭ್ಯವಿವೆ. ಇದರ ಸದುಪಯೋಗ […]
ಶ್ರೀ ಹರಳೇಶ್ವರ ಕ್ಷೇತ್ರದಲ್ಲಿ ಗಣದಾಳ ಶ್ರೀಗಳ 11 ದಿನಗಳ ಮೌನಾನುಷ್ಠಾನ ಮುಕ್ತಾಯ
ವಿಜಯಪುರ: ಬಬಲೇಶ್ವರ ತಾಲೂಕಿನ ಶ್ರೀಹರಳೇಶ್ವರ ಸುಕ್ಷೇತ್ರದಲ್ಲಿ ಗುಣದಾಳ ಹಿರೇಮಠದ ಡಾ. ವಿವೇಕಾನಂದ ದೇವರು ಅವರು ಅಧಿಕ ಮಾಸ ಅಂಗವಾಗಿ ಕೈಗೊಂಡಿದ್ದ 11 ದಿನಗಳ ಮೌನ ಅನುಷ್ಠಾನ ಮುಕ್ತಾಯವಾಗಿದೆ. ಈ ಸಮಾರೋಪ ಸಮಾರಂಭದಲ್ಲಿ ಮಮದಾಪುರ ವಿರಕ್ತಮಠದ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು ಪಾಲ್ಗೋಂಡು ಮಾತನಾಡಿದರು. ಇಂದಿನ ದಿನಗಳಲ್ಲಿ ಅನುಷ್ಟಾನ ಜಪ- ತಪಗಳು ಕಡಿಮೆಯಾಗಿ ಟಿವಿ, ಮೊಬೈಲ್ ಬಳಕೆ ಹೆಚ್ಚಾಗಿವೆ. ಮಹಾಭಾರತದಲ್ಲಿ ಗಾಂಧಾರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಜೀವನ ಮಾಡಿದ ಶಕ್ತಿಯನ್ನು ಮಗ ದುರ್ಯೋಧನನಿಗೆ ಧಾರೆ ಎರೆದ ಪ್ರಸಂಗವನ್ನು ಅವರು ಈ […]
ಸದಾಶಿವ ಮೂಲ ಮಹಾಸಂಸ್ಥಾನಮಠದ ಹೆಸರಿನಲ್ಲಿ ಯಾರೂ ದೇಣಿಗೆ ಕೇಳುತ್ತಿಲ್ಲ- ಯಾರಿಗೂ ಹಣ ನೀಡಬೇಡಿ- ಬಬಲಾದಿ ಶ್ರೀ ಸಿದ್ಧರಾಮಯ್ಯ ಮುತ್ಯಾ ಖಡಕ್ ಎಚ್ಚರಿಕೆ
ವಿಜಯಪುರ: ಕಾಲಜ್ಞಾನಕ್ಕೆ ಹೆಸರಾಗಿರುವ ಬಸವ ನಾಡಿನ ಬಬಲಾದಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮೂಲ ಮಹಾಸಂಸ್ಥಾನ ಮಠದ ಹೆಸರಿನಲ್ಲಿ ಕೆಲವು ಜನರು ದೇಣಿಗೆ ಸಂಗ್ರಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಶ್ರೀಗಳ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ಪ್ರತಿವರ್ಷ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಮಠದ ಕಾರ್ಣಿಕ ಶ್ರೀ ಸಿದ್ಧರಾಮಯ್ಯ ಮುತ್ಯಾ ನೀಡುವ ಹೇಳಿಕೆ ಜಗತ್ಪ್ರಸಿದ್ಧವಾಗಿದೆ. ಇವರು ನುಡಿಯುವ ಭವಿಷ್ಯ ಎಲ್ಲವೂ ನಿಜವಾಗುತ್ತಿದೆ. ಹೀಗಾಗಿ ಈ ಮಠದ ಮೇಲೆ ಕರ್ನಾಟಕವಷ್ಟೇ ಅಲ್ಲ, ದೇಶದ ನಾನಾ ಭಾಗಗಳಿಂದಲೂ ಭಕ್ತರು ಆಗಮಿಸಿ ದೇವರ ಪ್ರೀತಿಗೆ […]
ವಿಜಯಪುರ ಬಾಲಕರ ಸರಕಾರಿ ಪಿಯು ಕಾಲೇಜಿನಲ್ಲಿ ಮೇರಾ ದೇಶ ಮೇರಾ ಮಿಟ್ಟಿ ಕಾರ್ಯಕ್ರಮ- ಯುವಜನತೆ ದೇಶ ಸೇವೆ ಮಾಡಲು ಪಣತೋಡಿ- ಸಿ. ಕೆ. ಹೊಸಮನಿ
ವಿಜಯಪುರ: ಯುವಕರು ದೇಶ ಸೇವೆ ಮಾಡಲು ಪಣತೊಡಬೇಕು ಎಂದು ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ಕೆ. ಹೊಸಮನಿ ಹೇಳಿದ್ದಾರೆ. ನಗರದ ಬಾಲಕರ ಸರಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್. ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ಮೇರಾ ಮಿಟ್ಟಿ ಮೇರಾ ದೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ದೇಶದ ಭವಿಷ್ಯದ ಭವ್ಯ ನಾಗರಿಕರು. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರ ಯಶೋಗಾಥೆಯ ಬಗ್ಗೆ ತಿಳಿದುಕೊಳ್ಳಬೇಕು. ಅವರ ಹೋರಾಟದ ವಿಚಾರಗಳು ಪ್ರೇರಣೆಯಾಗಬೇಕು ಎಂದು ಅವರು ಹೇಳಿದರು. […]
ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಕ್ವಿಟ್ ಇಂಡಿಯಾ ಚಳವಳಿ ಪ್ರಮುಖ ಕಾರಣ- ಅಶೋಕ ದಳವಾಯಿ
ವಿಜಯಪುರ: ದೇಶದಲ್ಲಿ ನಡೆದ 1942ರ ಕ್ವಿಟ್ ಇಂಡಿಯಾ ಚಳವಳಿಯು ಸ್ವಾತಂತ್ರ್ಯ ಹೋರಾಟದ ಅಂತಿಮ ಘಟ್ಟವಾಗಿತ್ತು. ಬ್ರಿಟಿಷರಿಗೆ ಅಂತಿಮ ಎಚ್ಚರಿಕೆ ಆಗಿತ್ತು. ಅದುವೇ ದೇಶಕ್ಕೆ ಸ್ವಾತಂತ್ರ್ಯ ದೊರೆಯಲು ಕಾರಣವಾಯಿತು ಎಂದು ನಿವೃತ್ತ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಹೇಳಿದರು. ತಿಕೋಟಾ ತಾಲೂಕಿನ ತೊರವಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಮತ್ತು ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಆಚರಣೆ ಸಮಿತಿ ಸಹಯೋಗದಲ್ಲಿ ಬುಧವಾರ ಆಯೋಜಿಸಿಡಿದ್ದ ಆಗಸ್ಟ್ ಕಾಂತ್ರಿ ನೆನಪು ಮತ್ತು ಶಾಂತವೇರಿ ಗೋಪಾಲಗೌಡ ಅವರ ಜೀವನ ಮತ್ತು ಸಮಕಾಲೀನತೆಯ […]
ಮಹಾತ್ಮಾ ಗಾಂಧಿಜಿಯವರ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು- ಡಾ. ಅಶೋಕ ದಳವಾಯಿ
ವಿಜಯಪುರ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಸತ್ಯ, ಅಹಿಂಸೆ ಎಂಬ ತತ್ವಗಳು ಅನುಸರಿಸಿ ಅವುಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಸರ್ವಕಾಲಕ್ಕೂ ಸತ್ಯದೆಡೆಗೆ ಅವರು ನಂಬಿ ಆಚರಿಸಿದ ತತ್ವಾದರ್ಶಗಳನ್ನು ಅರಿತುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನವದೆಹಲಿಯ ರಾಷ್ಟ್ರೀಯ ಮಳೆಯಾಶ್ರಿತ ಕೃಷಿ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಅಶೋಕ ದಳವಾಯಿ ಹೇಳಿದರು. ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದೊಂದಿಗೆ ಗಾಂಧಿ ಭವನದಲ್ಲಿ ಆಯೋಜಿಸಿದ್ದ 1942ರ ಕ್ವಿಟ್ ಇಂಡಿಯಾ ಮೂವ್‌ಮೆಂಟ್ ಚಳುವಳಿಯ ನೆನಪಿಗಾಗಿ ನಡೆದ […]
ವಿಜಯಪುರ ಶ್ರೀ ಚಿದಂಬರ ದೇವಸ್ಥಾನಕ್ಕೆ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ
ವಿಜಯಪುರ: ವಿಧಾನ ಪರಿಷತ ಸದಸ್ಯ ಮತ್ತು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಗರದ ಶ್ರೀ ಚಿದಂಬರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪ್ರಕಾಶ ಅಕ್ಕಲಕೋಟ, ವಿವೇಕಾನಂದ ಡಬ್ಬಿ, ವಿಜಯ ಜೋಶಿ, ಪಿ. ಬಿ. ಹಂಗರಗಿ, ಲಕ್ಷ್ಮೀಕಾಂತ ಕುಲಕರ್ಣಿ, ಕೇಶವ ಕುಲಕರ್ಣಿ, ಮಾಧವ ಜೋಶಿ, ವೆಂಕಟೇಶ ಜೋಶಿ, ದೀಪಕ ಜೋಶಿ, ಶಂಕರ ಭಟ ಅಗ್ನಿಹೋತ್ರಿ, ರಾಘವೇಂದ್ರ ಜೋಶಿ ಸಂಕನಾಳ, ವಿ.ಸಿ. ಕುಲಕರ್ಣಿ, ಸುಧೀಂದ್ರ ಕುಲಕರ್ಣಿ, ಸಿ ಕೆ ಪಾಟೀಲ್ […]