ಮತದಾನದ ಹಕ್ಕು ನಮ್ಮನ್ನು ಉಳಿಸುತ್ತದೆ- ನಿಮ್ಮ ರಕ್ಷಣೆ ಮಾಡುವವರಿಗೆ ಮತಹಾಕಿ- ಎಚ್. ಟಿ. ಪೋತೆ

ವಿಜಯಪುರ: ಮತದಾನದ ಹಕ್ಕು ನಮ್ಮನ್ನು ಉಳಿಸುತ್ತದೆ.  ನಿಮ್ಮ ರಕ್ಷಣೆ ಮಾಡುವವರಿಗೆ ಮತಹಾಕಿ ಎಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಚ್. ಟಿ. ಪೋತೆ ಹೇಳಿದರು.  ನಗರದಲ್ಲಿ ಗದುಗಿನ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬದ ಸಂಭ್ರಮ ಮತ್ತು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು ನಿಮ್ಮನ್ನು ರಕ್ಷಿಸುವ ವ್ಯಕ್ತಿಗೆ ಮತ ನೀಡಬೇಕು.  ನಮ್ಮ ಹಕ್ಕನ್ನು ರಕ್ಷಣೆ ಮಾಡುವ, ದೇಶ, ಮಹಿಳೆ, ಪ್ರತಿಯೊಬ್ಬರನ್ನು ರಕ್ಷಣೆ ಮಾಡುವವರು, ನಿಮ್ಮ ಹಕ್ಕನ್ನು […]

ಬಣಜಿಗ ಸಮುದಾಯ ರಾಜ್ಯ ಮಟ್ಟದ ವಧು-ವರರ ಸಮಾವೇಶ, ನಾನಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ವಿಜಯಪುರ: ನಗರದ ಆಶ್ರಮ ರಸ್ತೆಯಲ್ಲಿರುವ ಸಾಯಿ ವಿಹಾರದ ಸಭಾಭವನದಲ್ಲಿ ಬಣಜಿಗ ಮುದಾಯದ ರಾಜ್ಯ ಮಟ್ಟದ ವಧು-ವರ ಸಮಾವೇಶ ಮತ್ತು ನಾನಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.  ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಈ ಮುಂಚೆ ಸಮಾಜದ ಹಿರಿಯರು ಬಿಡುವ ಮಾಡಿಕೊಂಡು ಒಬ್ಬರಿಗೊಬ್ಬರು ಚರ್ಚಿಸಿ ಶುಭ ಕಾರ್ಯಗಳನ್ನು ಮಾಡುತ್ತಿದ್ದರು.  ಈಗ ವಧು- ವರರ ಕಾರ್ಯಕ್ರಮ ಮಾಡುವ ಮೂಲಕ ಸಂಬಂಧ ಗಟ್ಟಿಗೊಳಿಸಲು ಸಹಕಾರಿಯಾಗುತ್ತಿದೆ ಎಂದು ಹೇಳಿದರು. ಬುರುಣಾಪುರದ ಯೋಗೇಶ್ವರಿ ಮಾತಾಜಿ, ವಧು- ವರರ […]

ಬೆಂಗಳೂರಿನಿಂದ ಕಾಶಿ ವಿಶ್ವನಾಥ ಸನ್ನಿಧಿಗೆ 50 ಜನರ ಪಾದಯಾತ್ರೆ- ಬಸವನಾಡಿನಲ್ಲಿ ಭಕ್ತರಿಗೆ ಬಸವ ನಾಡಿನಲ್ಲಿ ಆತಿಥ್ಯ ನೀಡಿದ ಶಿವಭಕ್ತರು

ವಿಜಯಪುರ: ಲೋಕಕಲ್ಯಾಣಕ್ಕಾಗಿ ಬೆಂಗಳೂರಿನ ಯಲಹಂಕ ಉಪನಗರದ ಗುರುಗಳಾದ ಶ್ರೀ ಡಿ. ಚಿಕ್ಕೀರಪ್ಪನವರ ನೇತೃತ್ವದಲ್ಲಿ 50 ಜನ ಪಾದಯಾತ್ರೆ ನಡೆಸುತ್ತಿದ್ದು, ಈ ತಂಡ ಬಸವನಾಡು ವಿಜಯಪುರಕ್ಕೆ ಆಗಮಿಸಿದೆ.  ಯಲಹಂಕದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಿಂದ ಪರಮ ಪವಿತ್ರ ಕಾಶಿ ಕ್ಷೇತ್ರಕ್ಕೆ ಜುಲೈ 8 ಶನಿವಾರದಿಂದ ಪಾದಯಾತ್ರೆ ಆರಂಭವಾಗಿದ್ದು, ಕಾಶಿ ವಿಶ್ವನಾಥ ಮಂದಿರಕ್ಕೆ ಸುಮಾರು 80 ದಿನಗಳ ಪಾದಯಾತ್ರೆ ಕೈಗೊಂಡಿದ್ದಾರೆ.  ಡಿ. ಚಿಕ್ಕಿರಪ್ಪ ಅವರ ನೇತೃತ್ವದಲ್ಲಿ ಸರಿ ಸುಮಾರು 50 ಕ್ಕೂ ಹೆಚ್ಚು ಪಾದಯಾತ್ರೆಯನ್ನು ನಡೆಸುತ್ತಿದ್ದು, ವಿಜಯಪುರಕ್ಕೆ ಆಗಮಿಸಿದಾಗ ಅವರಿಗೆ […]

ಜು. 29, 30 ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ- ಡಾ. ಅರ್ಜುನ ಗೊಳಸಂಗಿ

ವಿಜಯಪುರ: ಪ್ರಬುದ್ಧ ಭಾರತದ ಆಶಯದೊಂದಿಗೆ ವಿಜಯಪುರ ನಗರದ ಕಂದಗಲ ಹನುಮಂತರಾಯ ರಂಗಮAದಿರದಲ್ಲಿ ಜುಲೈ 29 ಮತ್ತು 30 ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿಯವರು ಹೇಳಿದರು. ಅವರು ನಗರದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಹಾಗೂ ಬೆಳ್ಳಿ ಸಂಭ್ರಮದ ವಿಶೇಷವಾಗಿ ಮೂಡಿ ಬರುತ್ತಿರುವ ಪ್ರೊ. ಎಚ್. ಟಿ. ಪೋತೆ ಅವರ ಜನಪ್ರಿಯ ನಾಟಕ ರಮಾಯಿ […]

ಕತ್ತೆಗಳ ಅದ್ದೂರಿ ಮದುವೆ- ನೂಲು ಸುತ್ತಿ, ಹಳದಿ ಹಚ್ಚಿ, ಹುಗ್ಗಿ ತಿಂದು ಕೃಪೆ ತೋರುವಂತೆ ಮೇಘರಾಜನ ಪ್ರಾರ್ಥಿಸಿದ ಗ್ರಾಮಸ್ಖರು

ವಿಜಯಪುರ: ಮಳೆಯಾಗದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಪೂಜೆ, ಜಲಾಭಿಷೇಕ, ಕತ್ತೆಗಳ ಮದುವೆ ಮಾಮೂಲು.  ಆದರೆ, ಇದೇ ವರುಣನ ಕೃಪೆಗಾಗಿ ಬಸವನಾಡಿನಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಗಾದರ್ಭಗಳ ಮದುವೆ ಗಮನ ಸೆಳೆದಿದೆ. ಮುಂಗಾರು ಹಂಗಾಮು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ವರುಣ ಇನ್ನೂ ಕೃಪೆ ತೋರಿಲ್ಲ.  ಮೋಡ ಮುಸುಕಿದ ವಾತಾವರಣವಿದೆ ಆದರೂ, ನಾಲ್ಕಾರು ಹನಿ ಮಳೆ ಸುರಿದಿದ್ದು ಬಿಟ್ಟರೆ ಈ ಬಾರಿ ಮಳೆಯ ಕೊರತೆ ಪ್ರಮಾಣ ಹೆಚ್ಚಾಗಿದೆ.  ಇದು ಭೂತಾಯಿಯನ್ನು ನಂಬಿ ಜೀವನ ಸಾಗಿಸುವ ರೈತರ […]

ಸಾಲ ತೀರಿಸಲು, ಆರ್ಮಿ, ಪಿ ಎಸ್ ಐ ಪರೀಕ್ಷೆ ಪಾಸು ಮಾಡು, ಬೂಂದಿ ಲಾಡು ಅರ್ಪಿಸುವೆ- ಹನುಮಂತನ ಹುಂಡಿಯಲ್ಲಿ ಭಕ್ತರ ವಿಶಿಷ್ಠ ಬೇಡಿಕೆಗಳ ಚೀಟಿಗಳು

ವಿಜಯಪುರ: ನಾನು ಮಾಡಿದ ಸಾಲ ತೀರಿಸಲು ಪರಿಹಾರಕ್ಕೆ ದಾರಿ ತೋರಿಸು ಯಲಗೂರ ಹನಮಂತಪ್ಪ.  ಆರ್ಮಿ ರನ್ನಿಂಗ ಇವತ್ತು ಸ್ಟಾರ್ಟ್ ಮಾಡೀನಿ ದೇವರೆ.  ಪಾಸ ಮಾಡು.  ಅತೀ ವೇಗ ಓಡುವಂಗ ಮಾಡು.  ಆರೋಗ್ಯವಾಗಿ ಇಡು ದೇವರೆ.  ಗೋರ್ನಮೆಂಟ್ ಜಾಬ್ ಪಿ. ಎಸ್. ಐ ಮಾಡು.  ಹೆಂಡತಿ ಮಕ್ಕಳ ನಡುವೆ ಜಗಳವಾಗದಂತಿರಿಸು.  ಮಗನಿಗೆ ಎಂಬಿಎ ಸೀಟ್ ಸಿಗಲಿ.  ಮತ್ತೆ ಬಂದು ನಿನ್ನ ದರ್ಶನ ಮಾಡುತ್ತೇನೆ.  ನೌಕರಿ ಅವಶ್ಯಕತೆ ತುಂಬಾ ಇದೆ. ಬೇಗನೇ ಒಳ್ಳೆಯ ಕಂಪನಿಯಲ್ಲಿ ಹೆಚ್ಚಿನ ಸಂಬಳದ ನೌಕರಿ ಸಿಕ್ಕು […]

ಮರಾಠಿ ವಿದ್ಯಾಲಯದ 1973ನೇ ಬ್ಯಾಚ್ನ 10ನೇ ತರಗತಿ ವಿದ್ಯಾರ್ಥಿಗಳಿಂದ ಸುವರ್ಣ ಮಹೋತ್ಸವ ಆಚರಣೆ

ವಿಜಯಪುರ: ನಗರದ ಪ್ರಸಿದ್ಧ ಮರಾಠಿ ವಿದ್ಯಾಲಯದ 1973ನೇ ಬ್ಯಾಚ್ ನ 10ನೇ ತರಗತಿಯ ವಿದ್ಯಾರ್ಥಿಗಳು ಈ ವರ್ಷದ ಸುವರ್ಣ ಮಹೋತ್ಸವ ಮೂರು ದಿನಗಳ ಕಾಲ ನಡೆಯಿತು.  ನಗರದ ಶ್ರೀ ಮಹೇಶ್ವರಿ ಭವನದಲ್ಲಿ ಮೊದಲ ದಿನ ಶ್ರೀ ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.  ಬಳೆಗಳು, ಮೆಹೆಂದಿ, ಸಂಗೀತ, ದೇವಿಯ ಕಂಸಾಳೆ, ಜೋಗುಳ, ಆರತಿಯೊಂದಿಗೆ ಸಂಪ್ರದಾಯಬದ್ಧವಾಗಿ ಕಾರ್ಯಕ್ರಮ ನಡೆಯಿತು. ಎರಡನೇ ದಿನ ಮಾರುತಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ವಿದ್ಯಾರ್ಥಿಗಳು ಕುಂಭದೊಂದಿಗೆ ವಾರಿ ವೇಷಭೂಷಣದಲ್ಲಿ ತಾಳವಾದ್ಯಗಳ ನಾದದೊಂದಿಗೆ ತೋಟದ ಮನೆಗೆ […]

ಗಮನ ಸೆಳೆದ ಸೈನಿಕ್ ಶಾಲೆಯ ವಜ್ರಮಹೋತ್ಸವ ಕಾರ್ಯಕ್ರಮ

ವಿಜಯಪುರ: ಸೈನಿಕ ಶಾಲೆಯ ವಜ್ರಮಹೋತ್ಸವ ಅಂಗವಾಗಿ ಶುಕ್ರವಾರ ಸಂಜೆ ನಗರದ ಸೈನಿಕ ಶಾಲೆಯ ಆಡಿಟೋರಿಯಂನಲ್ಲಿ ಪ್ಲಾಯಿಂಗ್ ಲೆಫ್ಟಿನಂಟ್ ಎಲ್.ಎಸ್.ರೂಪಚಂದ್ರ ನೇತೃತ್ವದಲ್ಲಿ ನಡೆದ ವಾಯುದಳದ ಸಿಂಫೋನಿ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ಸಂಗೀತ ಕಾರ್ಯಕ್ರಮದಲ್ಲಿ ದೇಶ ಭಕ್ತಿಗೀತೆ, ಚಲನಚಿತ್ರ ಗೀತೆಗಳು ಹಾಗೂ ಕನ್ನಡದ ಹೆಸರಾಂತ ಕಲಾವಿದರಾದ ಪುನೀತರಾಜ್‌ಕುಮಾರ ಅವರ ಬೊಂಬೆ ಹೇಳುತೈತಿ ಹಾಗೂ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಕನ್ನಡ ಗೀತೆಗಳು ವಿಜಯಪುರದ ಕಿಶೋರಕುಮಾರ ಭಜಂತ್ರಿ ಅವರು ಹಾಡಿದ ಹಾಡುಗಳು ಸಭಿಕರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಸೈನಿಕ ಶಾಲೆ ಪ್ರಾಚಾರ್ಯರಾದ […]

ಶಿಕ್ಷಕ ವೃತ್ತಿ ಪವಿತ್ರವಾದದ್ದು- ನೂತನ ಡಿಡಿಪಿಐ ಎನ್. ಎಚ್. ನಾಗೂರ ಹೇಳಿಕೆ

ವಿಜಯಪುರ: ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಬಹಳಷ್ಟು ಪವಿತ್ರವಾದದ್ದು.  ಶಿಕ್ಷಕ ವೃತ್ತಿ ಪಡೆದುಕೊಂಡವರು ಪುಣ್ಯವಂತರು ಎಂದು ಡಿಡಿಪಿಐ ಎನ್. ಎಚ್. ನಾಗೂರ ಹೇಳಿದ್ದಾರೆ.  ಶಿಕ್ಷಕರ ಬಳಗ ಹಾಗೂ ನಾನಾ ಸಂಘಟನೆಗಳ ವತಿಯಿಂದ ನಿವೃತ್ತ ಶಿಕ್ಷಕ ಶಿವಾನಂದ ಗುಡ್ಡೋಡಗಿ ಅವರ ಅಭಿನಂದನೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ವಿಜಯಪುರ ಜಿಲ್ಲೆ ಶೈಕ್ಷಣಿಕ ಅಭಿವೃದ್ದಿ ಕಡೆಗೆ ಸಾಗುತ್ತಿದ್ದು, ತಮ್ಮೆಲ್ಲರ ಶ್ರಮದಿಂದ ಕೆಲವೇ ದಿನಗಳಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ ಎಂದು ಹೇಳಿದರು. ಅಮ್ಮನ ಮಡಿಲು ಚಾರಿಟೇಬಲ್ […]

ಪ್ರತಿಭಾ ಪುರಸ್ಕಾರ ಪಡೆದ ಪ್ರಾರ್ಥನಾ ಅಕ್ಷಯ ಕುಲಕರ್ಣಿಯನ್ನು ಸನ್ಮಾನಿಸಿ ಗೌರವಿಸಿದ ಬಿಜೆಪಿ ಮುಖಂಡರು

ವಿಜಯಪುರ: ಹಿರಿಯ ಪತ್ರಕರ್ತ ಅಕ್ಷಯ ಕುಲಕರ್ಣಿ ಅವರು ಪುತ್ರಿ ಪ್ರಾರ್ಥನಾ ಅಕ್ಷಯ ಕುಲಕರ್ಣಿ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಉಡುಪಿಯಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಸಭೆ ಸ್ಪೀಕರ್ ಯು. ಟಿ. ಖಾದರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮುಂತಾದವರು ಉಪಸ್ಥಿತರಿದ್ದು ಸಾಧನೆ ಮಾಡಿದ […]