ಸಾಲ ತೀರಿಸಲು, ಆರ್ಮಿ, ಪಿ ಎಸ್ ಐ ಪರೀಕ್ಷೆ ಪಾಸು ಮಾಡು, ಬೂಂದಿ ಲಾಡು ಅರ್ಪಿಸುವೆ- ಹನುಮಂತನ ಹುಂಡಿಯಲ್ಲಿ ಭಕ್ತರ ವಿಶಿಷ್ಠ ಬೇಡಿಕೆಗಳ ಚೀಟಿಗಳು

ವಿಜಯಪುರ: ನಾನು ಮಾಡಿದ ಸಾಲ ತೀರಿಸಲು ಪರಿಹಾರಕ್ಕೆ ದಾರಿ ತೋರಿಸು ಯಲಗೂರ ಹನಮಂತಪ್ಪ.  ಆರ್ಮಿ ರನ್ನಿಂಗ ಇವತ್ತು ಸ್ಟಾರ್ಟ್ ಮಾಡೀನಿ ದೇವರೆ.  ಪಾಸ ಮಾಡು.  ಅತೀ ವೇಗ ಓಡುವಂಗ ಮಾಡು.  ಆರೋಗ್ಯವಾಗಿ ಇಡು ದೇವರೆ.  ಗೋರ್ನಮೆಂಟ್ ಜಾಬ್ ಪಿ. ಎಸ್. ಐ ಮಾಡು.  ಹೆಂಡತಿ ಮಕ್ಕಳ ನಡುವೆ ಜಗಳವಾಗದಂತಿರಿಸು.  ಮಗನಿಗೆ ಎಂಬಿಎ ಸೀಟ್ ಸಿಗಲಿ.  ಮತ್ತೆ ಬಂದು ನಿನ್ನ ದರ್ಶನ ಮಾಡುತ್ತೇನೆ.  ನೌಕರಿ ಅವಶ್ಯಕತೆ ತುಂಬಾ ಇದೆ. ಬೇಗನೇ ಒಳ್ಳೆಯ ಕಂಪನಿಯಲ್ಲಿ ಹೆಚ್ಚಿನ ಸಂಬಳದ ನೌಕರಿ ಸಿಕ್ಕು […]

ಮರಾಠಿ ವಿದ್ಯಾಲಯದ 1973ನೇ ಬ್ಯಾಚ್ನ 10ನೇ ತರಗತಿ ವಿದ್ಯಾರ್ಥಿಗಳಿಂದ ಸುವರ್ಣ ಮಹೋತ್ಸವ ಆಚರಣೆ

ವಿಜಯಪುರ: ನಗರದ ಪ್ರಸಿದ್ಧ ಮರಾಠಿ ವಿದ್ಯಾಲಯದ 1973ನೇ ಬ್ಯಾಚ್ ನ 10ನೇ ತರಗತಿಯ ವಿದ್ಯಾರ್ಥಿಗಳು ಈ ವರ್ಷದ ಸುವರ್ಣ ಮಹೋತ್ಸವ ಮೂರು ದಿನಗಳ ಕಾಲ ನಡೆಯಿತು.  ನಗರದ ಶ್ರೀ ಮಹೇಶ್ವರಿ ಭವನದಲ್ಲಿ ಮೊದಲ ದಿನ ಶ್ರೀ ಗಣಪತಿ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.  ಬಳೆಗಳು, ಮೆಹೆಂದಿ, ಸಂಗೀತ, ದೇವಿಯ ಕಂಸಾಳೆ, ಜೋಗುಳ, ಆರತಿಯೊಂದಿಗೆ ಸಂಪ್ರದಾಯಬದ್ಧವಾಗಿ ಕಾರ್ಯಕ್ರಮ ನಡೆಯಿತು. ಎರಡನೇ ದಿನ ಮಾರುತಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ವಿದ್ಯಾರ್ಥಿಗಳು ಕುಂಭದೊಂದಿಗೆ ವಾರಿ ವೇಷಭೂಷಣದಲ್ಲಿ ತಾಳವಾದ್ಯಗಳ ನಾದದೊಂದಿಗೆ ತೋಟದ ಮನೆಗೆ […]

ಗಮನ ಸೆಳೆದ ಸೈನಿಕ್ ಶಾಲೆಯ ವಜ್ರಮಹೋತ್ಸವ ಕಾರ್ಯಕ್ರಮ

ವಿಜಯಪುರ: ಸೈನಿಕ ಶಾಲೆಯ ವಜ್ರಮಹೋತ್ಸವ ಅಂಗವಾಗಿ ಶುಕ್ರವಾರ ಸಂಜೆ ನಗರದ ಸೈನಿಕ ಶಾಲೆಯ ಆಡಿಟೋರಿಯಂನಲ್ಲಿ ಪ್ಲಾಯಿಂಗ್ ಲೆಫ್ಟಿನಂಟ್ ಎಲ್.ಎಸ್.ರೂಪಚಂದ್ರ ನೇತೃತ್ವದಲ್ಲಿ ನಡೆದ ವಾಯುದಳದ ಸಿಂಫೋನಿ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು. ಸಂಗೀತ ಕಾರ್ಯಕ್ರಮದಲ್ಲಿ ದೇಶ ಭಕ್ತಿಗೀತೆ, ಚಲನಚಿತ್ರ ಗೀತೆಗಳು ಹಾಗೂ ಕನ್ನಡದ ಹೆಸರಾಂತ ಕಲಾವಿದರಾದ ಪುನೀತರಾಜ್‌ಕುಮಾರ ಅವರ ಬೊಂಬೆ ಹೇಳುತೈತಿ ಹಾಗೂ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಕನ್ನಡ ಗೀತೆಗಳು ವಿಜಯಪುರದ ಕಿಶೋರಕುಮಾರ ಭಜಂತ್ರಿ ಅವರು ಹಾಡಿದ ಹಾಡುಗಳು ಸಭಿಕರನ್ನು ರಂಜಿಸಿತು. ಕಾರ್ಯಕ್ರಮದಲ್ಲಿ ಸೈನಿಕ ಶಾಲೆ ಪ್ರಾಚಾರ್ಯರಾದ […]

ಶಿಕ್ಷಕ ವೃತ್ತಿ ಪವಿತ್ರವಾದದ್ದು- ನೂತನ ಡಿಡಿಪಿಐ ಎನ್. ಎಚ್. ನಾಗೂರ ಹೇಳಿಕೆ

ವಿಜಯಪುರ: ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಬಹಳಷ್ಟು ಪವಿತ್ರವಾದದ್ದು.  ಶಿಕ್ಷಕ ವೃತ್ತಿ ಪಡೆದುಕೊಂಡವರು ಪುಣ್ಯವಂತರು ಎಂದು ಡಿಡಿಪಿಐ ಎನ್. ಎಚ್. ನಾಗೂರ ಹೇಳಿದ್ದಾರೆ.  ಶಿಕ್ಷಕರ ಬಳಗ ಹಾಗೂ ನಾನಾ ಸಂಘಟನೆಗಳ ವತಿಯಿಂದ ನಿವೃತ್ತ ಶಿಕ್ಷಕ ಶಿವಾನಂದ ಗುಡ್ಡೋಡಗಿ ಅವರ ಅಭಿನಂದನೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ವಿಜಯಪುರ ಜಿಲ್ಲೆ ಶೈಕ್ಷಣಿಕ ಅಭಿವೃದ್ದಿ ಕಡೆಗೆ ಸಾಗುತ್ತಿದ್ದು, ತಮ್ಮೆಲ್ಲರ ಶ್ರಮದಿಂದ ಕೆಲವೇ ದಿನಗಳಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಹೆಗಲ ಮೇಲಿದೆ ಎಂದು ಹೇಳಿದರು. ಅಮ್ಮನ ಮಡಿಲು ಚಾರಿಟೇಬಲ್ […]

ಪ್ರತಿಭಾ ಪುರಸ್ಕಾರ ಪಡೆದ ಪ್ರಾರ್ಥನಾ ಅಕ್ಷಯ ಕುಲಕರ್ಣಿಯನ್ನು ಸನ್ಮಾನಿಸಿ ಗೌರವಿಸಿದ ಬಿಜೆಪಿ ಮುಖಂಡರು

ವಿಜಯಪುರ: ಹಿರಿಯ ಪತ್ರಕರ್ತ ಅಕ್ಷಯ ಕುಲಕರ್ಣಿ ಅವರು ಪುತ್ರಿ ಪ್ರಾರ್ಥನಾ ಅಕ್ಷಯ ಕುಲಕರ್ಣಿ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಉಡುಪಿಯಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಸಭೆ ಸ್ಪೀಕರ್ ಯು. ಟಿ. ಖಾದರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮುಂತಾದವರು ಉಪಸ್ಥಿತರಿದ್ದು ಸಾಧನೆ ಮಾಡಿದ […]

200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಂದ ಗಾಂಧಿಭವನ ವೀಕ್ಷಣೆ- ರಾಷ್ಟ್ರಪಿತನ ಕುರಿತು ಅರಿತುಕೊಳ್ಳಲು ಉಪಯುಕ್ತವಾದ ಭವನ- ಸುರೇಶ ಮುಂಜೆ

ವಿಜಯಪುರ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧೀಜಿಯವರ ಚಳುವಳಿಗೆ ಸತ್ಯ ಮತ್ತು ಅಹಿಂಸಾ ಅಸ್ತ್ರಗಳಾಗಿದ್ದವು.  ಇಂಥ ಸತ್ಯ, ಶಾಂತ, ತ್ಯಾಗಮೂರ್ತಿ ಮಹಾತ್ಮ ಗಾಂಧೀಜಿವರ ತತ್ವಾದರ್ಶಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ವಿಜಯಪುರ ತಹಶೀಲ್ದಾರ ಸುರೇಶ ಮುಂಜೆ ಕರೆ ನೀಡಿದರು. ನಗರದ ಇಟ್ಟಂಗಿಹಾಳದ ತುಂಗಳ ಶಾಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರದ ಜಿ. ಪಂ. ಬಳಿ ಇರುವ ಗಾಂಧಿಭವನಕ್ಕೆ ಭೇಟಿ ನೀಡಿ, ವೀಕ್ಷಣೆ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ಜ್ಞಾನ, ಉದ್ಯೋಗ, ಶಿಕ್ಷಣ ಅನಿವಾರ್ಯವಾಗಬೇಕು.  ಮಹಾನ್ […]

ಸವನಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರಿಂದ ಗುಳ್ಳವನ ಪೂಜೆ

ವಿಜಯಪುರ: ಮುಂಗಾರು ಹಂಗಾಮು ಪ್ರಾರಂಭವಾಗಿ ಒಂದು ತಿಂಗಳಿಗೂ ಹೆಚ್ಚು ಕಾಲವಾಗಿದ್ದರೂ ಮಳೆ ಸುರಿಯದ ಹಿನ್ನೆಲೆಯಲ್ಲಿ ಸವನಹಳ್ಳಿ ಗ್ರಾಮಸ್ಥರು ಗುಳ್ಳವನ ಅಂದರೆ ಗುರ್ಜಿ ಪೂಜೆ ಮೊರೆ ಹೋಗಿದ್ದಾರೆ. ಮಳೆಗಾಗಿ ಪ್ರಾರ್ಥಿಸಿದ ರೈತರ ಮಕ್ಕಳು ಮನೆ ಮನೆಗಳಿಗೆ ಹೋಗಿ ಗುರಜಿ ಗುರುಜಿ ಎಲ್ಲ್ಯಾಡಿ ಬಂದೆ ಹಳ್ಳಾ ಕೊಳ್ಳಾ ತಿರುಗಾಡಿ ಬಂದೆ ಕಾರ ಮಳೆಯೇ ಕಪ್ಪತ ಮಳೆಯೇ ಹಳ್ಳಾ ಕೊಳ್ಳಾ ತುಂಬಿಸು ಮಳೆಯೇ ಸುಣ್ಣಾ ಕೊಡತೀನಿ ಸುರಿಯಲೆ ಮಳೆಯೇ ಬಣ್ಣಾ ಕೊಡತೀನಿ ಬಾರಲೆ ಮಳೆಯೇ ಸುರಿಮಳೆಯೇ ಸುರಿಮಳೆಯೇ ಕಾರ ಮಳೆಯೇ ಕಪ್ಪತ […]

ಜೈನ ಮುನಿ ಕೊಲೆ ಪ್ರಕರಣ- ಹಂತಕರನ್ನು ಗಲ್ಲಿಗೇರಿಸಬೇಕು- ಮನಗೂಳಿ ಹಿರೇಮಠದ ಸಂಗನಬಸವ ಶ್ರೀಗಳ ಆಗ್ರಹ

ವಿಜಯಪುರ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದ ಜೈನ ಮುನಿಗಳ ಕೊಲೆ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದ ಶ್ರೀ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಈ ಕುರಿತು ವಿಡಿಯೋ ಸಂದೇಶ ನೀಡಿರುವ ಅವರು, ಜೈನಮುನಿಗಳ ಕೊಲೆಯನ್ನು ಖಂಡಿಸುತ್ತೇನೆ.  ಇಂದು ರಾಜ್ಯದಲ್ಲಿ ಯಾವುದೇ ಧರ್ಮದ ಸ್ವಾಮೀಜಿಗಳು ತಮ್ಮ ಸ್ವಂತಕ್ಕಾಗಿ ಯಾವ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ.  ಈ ಸಮಾಜದ ಜನರೇ ತಂದೆ-ತಾಯಿ, ಈ ಸಮಾಜದ ಜನತೆಯೇ ನಮ್ಮ ಬಂಧು- ಬಳಗ ಎಂಬ […]

ಜ್ಞಾನಯೋಗಾಶ್ರಮದಲ್ಲಿ ಪ್ರತಿದಿನ ಬೆಳಿಗ್ಗೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರವಚನಗಳ ಧ್ವನಿಸುರುಳಿ ಪ್ರಸಾರ

ವಿಜಯಪುರ: ಪ್ರತಿವರ್ಷ ಜ್ಞಾನಯೋಗಾಶ್ರಮದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ಮುಗಿದ ನಂತರ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನ ನಡೆಯುತ್ತಿತ್ತು.  ಆದರೆ, ಶತಮಾನದ ಸಂತ ಈ ವರ್ಷಾರಂಭದಲ್ಲಿಯೇ ಪ್ರಕೃತಿಯಲ್ಲಿ ಲೀನರಾಗಿದ್ದಾರೆ.  ಶ್ರೀಗಳು ಈಗ ಇಲ್ಲವಾದರೂ, ಅವರು ಈ ಹಿಂದೆ ನೀಡಿದ ಪ್ರವಚನಗಳ ಧ್ವನಿಸುರುಳಿಗಳ ಪ್ರಸಾರಕ್ಕೆ ಚಾಲನೆ ನೀಡಲಾಗಿದೆ.  ನಯೋಗಾಶ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪ್ರವಚನ ನೀಡುತ್ತಿದ್ದ ಸ್ಳಳದಲ್ಲಿ ಶ್ರೀಗಳ ಭಾವಚಿತ್ರ ಇಟ್ಟು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ, […]

ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸೇರಿದಂತೆ ಇತರ ಇಲಾಖೆಗಳಿಗೆ ಸಿಎಂ ಘೋಷಣೆ ಮಾಡಿರುವ ಯೋಜನೆಗಳು

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸೇರಿದಂತೆ ಇತರ ಇಲಾಖೆಗಳಿಗೂ ಸಿಎಂ ಎಸ್. ಸಿದ್ಧರಾಮಯ್ಯ ಉತ್ತಮ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಒಂದೇ ಒಂದೇ ಒಂದೇ ಕರ್ನಾಟಕವೊಂದೇ, ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ, ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ. – ಡಾ. ದ.ರಾ. ಬೇಂದ್ರೆ 281. ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣವಾಗಿ 1ನೇ ನವೆಂಬರ್, 2023ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ ʻಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಎಂಬ ಹೆಸರಿನಲ್ಲಿ ಇಡೀ […]