ಮಹಾತ್ಮಾ ಗಾಂಧೀಜಿಯವರ ವಿಚಾರ-ಧಾರೆಗಳ ಪ್ರಸಾರಕ್ಕೆ ಗಾಂಧಿಭವನ ಸದುಪಯೋಗವಾಗಬೇಕು- ಡಾ. ದಾನಮ್ಮನವರ

ವಿಜಯಪುರ: ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶ ವಿಚಾರ ಧಾರೆಗಳನ್ನು ಪ್ರಚುರ ಪಡಿಸಲು ಗಾಂಧಿಭವನದ ಸದುಪಯೋಗವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಗಾಂಧಿ ಭವನ ನಿರ್ವಹಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಗಾಂಧಿಭವನದಲ್ಲಿ ಗಾಂಧಿ ತತ್ವ, ವಿಚಾರಧಾರೆಯನ್ನೊಳಗೊಂಡ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಲ್ಲದೇ, ಗಾಂಧಿಭವನವನ್ನು ಪ್ರವಾಸಿ ತಾಣವನ್ನಾಗಿಸಬೇಕು ಎಂದು ಹೇಳಿದರು. ಗಾಂಧೀಜಿಯವರ ವಿಚಾರಧಾರೆವುಳ್ಳ್ಳ ಸದಭಿರುಚಿಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಗಾಂಧಿಜಿಯ ಜೀವನ ಸ್ವಾತಂತ್ರö್ಯ ಚಳುವಳಿಗಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಗಾಂಧಿಜೀವರ ಆಚಾರ-ವಿಚಾರ […]

ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮೆ ಆಚರಣೆ- ಹರಿದು ಬಂದ ಭಕ್ತಸಾಗರ

ವಿಜಯಪುರ: ಗುರು ಪೂರ್ಣಿಮೆ ಬಂದರೆ ಸಾಕು ನಡೆದಾಡುವ ದೇವರ ದರ್ಶನಕ್ಕೆ ಜನ ಮುಗಿಬೀಳುತ್ತಿದ್ದರು.  ಆಶ್ರಮಕ್ಕೆ ಭೇಟಿ ನೀಡಿ ದೂರದಿಂದಲೇ ನಮಸ್ಕರಿಸಿ ಸಾಧ್ಯವಾದರೆ ಹತ್ತಿರದಿಂದ ದರ್ಶನ ಪಡೆದು ಆಶೀರ್ವಾದ ಪಡೆದು ಧನ್ಯರಾಗುತ್ತಿದ್ದರು.  ಆದರೆ, ಈಗ ನಡೆದಾಡಿದ ದೇವರಿಲ್ಲ.  ಆದರೂ ಕಡೆಪಕ್ಷ ಅವರ ಭಾವಚಿತ್ರಕ್ಕೆ ನಮಸ್ಕರಿಸಿದರಾಯಿತು.  ನಡೆದಾಡಿದ ದೇವರ ಗುರುಗಳ ಗದ್ದುಗೆಯ ದರ್ಶನ ಪಡೆದರಾಯಿತು.  ಈಗ ಇರುವ ಶ್ರೀಗಳ ಆಶೀರ್ವಾದ ಪಡೆದರಾಯಿತು ಎಂದು ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಬಂದು ಗುರುಪೂರ್ಣಿಮೆಗೆ ನಿಜವಾದ ಅರ್ಥ ನೀಡಿದರು. ಇದು ಇದೇ ವರ್ಷದ ಆರಂಭದಲ್ಲಿ […]

ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಜಯಂತಿ ಆಚರಣೆ- ಹಳಕಟ್ಟಿ ಕುಟುಂಬಸ್ಥರು, ಅಪರ ಜಿಲ್ಲಾಧಿಕಾರಿ ಭಾಗಿ

ವಿಜಯಪುರ: ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಜಯಂತಿಯನ್ನು ನಗರದ ಬಿ.ಎಲ್.ಡಿ.ಇ. ಸಂಸ್ಥೆಯಲ್ಲಿ ಆಚರಿಸಲಾಯಿತು. ಸಂಸ್ಥೆಯ ಆವರಣದಲ್ಲಿರುವ ಸಂಶೋಧನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಳಕಟ್ಟಿಯವರ ಸಮಾಧಿಗೆ ಗಣ್ಯರು ನಮನ ಸಲ್ಲಿಸಿದರು. ಅಲ್ಲದೇ ಹಳಕಟ್ಟಿಯವರ ಭಾವಚಿತ್ರ ಹಾಗೂ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಳಕಟ್ಟಿಯವರ ಮರಿಮೊಮ್ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿ.ಎಲ್.ಡಿ.ಇ. ಸಂಸ್ಥೆಯ ವತಿಯಿಂದ ಮುಖ್ಯ ಆಡಳಿತಾಧಿಕಾರಿ ಡಾ. ಆರ್.ಬಿ.ಕೊಟ್ನಾಳ ಅವರು ಹಳಕಟ್ಟಿಯವರ ಕುಟುಂಬಸ್ಥರಿಗೆ ಗೌರವಧನದ ಚೆಕ್ ವಿತರಿಸಿದರು. ಹಳಕಟ್ಟಿಯವರ ಮೊಮ್ಮಗ ಗಿರೀಶ ಹಳಕಟ್ಟಿ, ಅವರ ಪತ್ನಿ ಸುಜಾತಾ ಹಳಕಟ್ಟಿ […]

ಬಸವನಾಡಿನ ತಾಳಿಕೋಟೆಯಲ್ಲಿ ನಡೆದ ಶ್ರೀ ಖಾಸ್ಗತ ಮಹಾಶಿವಯೋಗಿಗಳ ಜಾತ್ರೋತ್ಸವ- ಭಾವೈಕ್ಯತೆಗೆ ಸಾಕ್ಷಿಯಾದ ಧಾರ್ಮಿಕ ಕಾರ್ಯಕ್ರಮಗಳು

ವಿಜಯಪುರ: ಜಿಲ್ಲೆಯ ತಾಳಿಕೋಟೆ ಪಟ್ಟಣದ ಶ್ರೀ ಖಾಸ್ಗತ ಮಹಾ ಶಿವಯೋಗಿಗಳ ಜಾತ್ರೋತ್ಸವ ಅದ್ದೂರಿಯಾಗಿ ನಡೆದಿದ್ದು, ಜಾತ್ರೆಯ ಅಂಗವಾಗಿ ನಡೆದ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ಜನಮನ ಸೆಳೆದಿವೆ.  ಶ್ರೀ ಖಾಸ್ಗತ ಮಹಾಶಿವಯೋಗಿಗಳ ಗಂಗಸ್ಥಳ ಮತ್ತು ಶ್ರೀಗಳ ಭವ್ಯ ಮೆರಣಿಗೆಯ ಮಹಾ ಕಾರ್ಯಕ್ರಮ ಶ್ರೀ ಮಠದ ನೂತನ ಪೀಠಾಧಿಪತಿ ಶ್ರೀ ಸಿದ್ದಲಿಂಗದೇವರ ನೇತೃತ್ವದಲ್ಲಿ ಅದ್ಧೂರಿಯಾಗಿ ನಡೆಯಿತು.  ಭಾವೈಕ್ಯತೆಗೆ ಸಾಕ್ಷಿಯಾದ ಈ ಕಾರ್ಯಕ್ರಮ ಜನಮನಸೂರೆಗೊಂಡಿತು. ಬೆಳಿಗ್ಗೆ 9 ಘಂಟೆಗೆ ಶ್ರೀ ಖಾಸ್ಗತ ಮಠದಿಂದ ಆನೆ ಅಂಬಾರಿ ಮೇಲೆ ಶ್ರೀ […]

ಹಸುವಿನ ಅಂತ್ಯಕ್ರಿಯೆ ನೆರವೇರಿಸಿ ಗೋಭಕ್ತಿ ತೋರಿದ ಬಸವನಾಡಿನ ಮಾತೋಶ್ರೀ ಕಾಲನಿ ನಿವಾಸಿಗಳು

ವಿಜಯಪುರ: ಬೀಡಾಡಿ ದನಗಳೆಂದರೆ ಸಾಕು ಮಾಲಿಕರು ಗೊತ್ತಾಗದ ಕಾರಣ ಸಾರ್ವಜನಿಕರೂ ಅವುಗಳನ್ನು ನಿರ್ಲಕ್ಷ್ಯಿಸುವುದುಂಟು.  ಆದರೆ, ತಮ್ಮ ಬಡಾವಣೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ತಿರುಗಾಡಿಕೊಂಡಿದ್ದ ಹಸು ಅಸುನೀಗಿಡಾದ ಅದನ್ನು ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಬಸವ ನಾಡಿನ ಜನ ಗಮನ ಸೆಳೆದಿದ್ದಾರೆ. ನಗರದ ವಾರ್ಡನಂ. 12ರಲ್ಲಿ ಬರುವ ಮಾತೋಶ್ರೀ ಕಾಲನಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಬೀಡಾಡಿ ಆಕಳೊಂದು ತಿರುಗಾಡಿಕೊಂಡಿತ್ತು.  ವಿಜಯ ಟಾಯರ್ ಹಿಂದುಗಡೆ ಬರುವ ಬಡಾವಣೆಯಲ್ಲಿ ಬರುವ ಈ ಪ್ರದೇಶದಲ್ಲಿನ ಈ ಹಸು ಸಾವನ್ನಪ್ಪಿದೆ.  ಈ ವಿಷಯ ತಿಳಿದ ಬಟಾವಣೆ […]

ಗಾಂಧಿ ಭವನ ವೀಕ್ಷಿಸಿದ ರಾಜ್ಯ ಹೈಕೋರ್ಟ್ ನ್ಯಾ. ಎಚ್. ಪಿ. ಸಂದೇಶ

ವಿಜಯಪುರ:  ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಎಚ್. ಪಿ. ಸಂದೇಶ್ ಅವರು ಕುಟುಂಬದೊಂದಿಗೆ ಶುಕ್ರವಾರ ನಗರದ ಜಿಲ್ಲಾ ಪಂಚಾಯತಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗಾಂಧಿ ಭವನಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಗಾಂಧಿ ಪ್ರತಿಮೆ,ಗಾಂಧೀ ವಿಚಾರ ಧಾರೆಗಳ ಕುರಿತ ಮಾಹಿತಿ ವಿವರ, ಗಾಂಧಿಜಿ ಕುರಿತ ಜಗತ್ತಿನ ನಾಯಕರು ವ್ಯಕ್ತಪಡಿಸಿದ ಅಭಿಪ್ರಾಯಗಳ ಕುರಿತಾದ ಮಾಹಿತಿ ವಿವರ ಓದಿ ಪ್ರಶಂಸೆ ವ್ಯಕ್ತ ಪಡಿಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ವೀಕ್ಷಿಸಿದ ಅವರು ಇಲ್ಲಿನ ಬಹುಮೂಲ್ಯ ಸಂಗ್ರಹದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ […]

ಮಾದರಿ ಅಂಗನವಾಡಿಯಲ್ಲಿದೆ ಚಿಣ್ಣ ಕಲಿಯಲು ಬೇಕಾದ ಜ್ಞಾನದ ಭಂಡಾರ- ಆಟದೊಂದಿಗೆ ಶಿಕ್ಷಕರು ಮಾಡುವ ಪಾಠ ಬಲು ಸುಂದರ

ವಿಜಯಪುರ: ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಇಲಾಖೆ, ಗ್ರಾ. ಪಂ. ಆಡಳಿತ ಮಂಡಳಿ ಮತ್ತು ಶಿಕ್ಷಕರು ಮನಸ್ಸು ಮಾಡಿದರೆ ಹೇಗೆ ಮಾದರಿ ಕೆಲಸ ಮಾಡಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿದೆ ಬಸವ ನಾಡಿನ ಈ ಅಂಗನವಾಡಿ ಕೇಂದ್ರ.  ಇಲ್ಲಿ ಮಕ್ಕಳ ಆಟದ ಜೊತೆಗೆ ಪಾಠವನ್ನು ಕಲಿಸಲಾಗುತ್ತಿದ್ದು, ಎಲ್ಲವೂ ಹೊಸ ಶಿಕ್ಷಣ ನೀತಿಯಂತೆ ನಡೆಯುತ್ತಿರುವುದು ಗಮನಾರ್ಹವಾಗಿದೆ.  ಯಾವುದೇ ಕಾನ್ವೆಂಟ್ ಗಳಿಗೂ ಕಮ್ಮಿ ಇಲ್ಲ ನಮ್ಮ ಅಂಗನವಾಡಿ ಎಂದು ಅಲ್ಲಿ ಪೋಷಕರೇ ಹೇಳುವುದು ಕುತೂಹಲಕ್ಕ ಕೆರಳಿಸುತ್ತಿದೆ. ಇದು ಬಸವನಾಡು […]

ಗುಮ್ಮಟ ನಗರಿಯಲ್ಲಿ ಮುಸ್ಲಿಂ ಬಾಂಧವರಿಂದ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಣೆ

ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಪವಿತ್ರ ಬಕ್ರೀದ್ ಹಬ್ಬವನ್ನು ಆಚರಿಸಿದರು.  ನಗರದ ನಾನಾ ಮಸೀದಿ ಮತ್ತು ಈದ್ಗಾಗಳಿಗೆ ತೆರಳಿದ ಸಾವಿರಾರು ಜನರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ದಖನಿ ಈ ಮೈದಾನದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಸೇರಿದಂತೆ ನಾನಾ ಮುಖಂಡರು ವಿಶ್ವಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ಪರಸ್ಪರ ಆಲಂಗಿಸಿಕೊಂಡು ಶುಭಾಷಯ ವಿನಿಮಯ ಮಾಡಿಕೊಂಡರು.

ಬಸವ ನಾಡಿಗೆ ಬಂದು ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ದರ್ಶನ ಪಡೆದ ಖಾನಪುರ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ

ವಿಜಯಪುರ: ಬೆಳಗಾವಿ ಜಿಲ್ಲೆಯ ಖಾನಾಪುರ ಬಿಜೆಪಿ ಶಾಸಕ ವಿಠ್ಠಲ ಹಲಗೇಕರ ಅವರು ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.  ಈ ಸಂದರ್ಭದಲ್ಲಿ ಉಪಸ್ಥಿತಿತರಿದ್ದ ಮಠದ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡ ಪ್ರಕಾಶ ಅಕ್ಕಲಕೋಟ ಶಾಸಕರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಠದ ನಿರ್ದೇಶಕರಾದ ವಿಜಯ ಜೋಶಿ, ರಾಕೇಶ ಕುಲಕರ್ಣಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ಗೋವಿಂದರಾಜ ದೇಶಪಾಂಡೆ, ಶ್ರೀಹರಿ ಕುಲಕರ್ಣಿ, ವೆಂಕಟೇಶ ಖಾಸನೀಸ, ವಿನಾಯಕ […]

ಬಸ್ ನಿಲ್ದಾಣಕ್ಕೆ ಕಿತ್ತೂರು ಚೆನ್ನಮ್ಮ ಹೆಸರಿಡಿ- ಸಚಿವ ಎಂ. ಬಿ. ಪಾಟೀಲರಿಂದ ಸಿಎಂ ಗೆ ಪತ್ರ

ವಿಜಯಪುರ: ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಹೆಸರನ್ಬು ನಾಮಕರಣ ಮಾಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಮಹಿಳೆಯರನ್ನು ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಸರಕಾರ ಘೋಷಿಸಿದ್ದ ಶಕ್ತಿ ಯೋಜನೆಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಜೂ. 11 ರಂದು ಚಾಲನೆ ನೀಡುವ ಕಾರ್ಯಕ್ರಮಕ್ಕೆ ಮಹಿಳೆಯರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಮಹಿಳೆಯರಿಗೆ ಸ್ಪೂರ್ತಿಯಾಗಿರುವ […]