ತಾಯಿಗಿಂತಲೂ ಮಿಗಿಲಾದ ದೇವರಿಲ್ಲ-ಎಲ್ಲ ಪದಗಳ ಮೂರ್ತರೂಪವೇ ತಾಯಿ- ಎಂ. ಬಿ. ಪಾಟೀಲ ಭಾವನಾತ್ಮಕ ಟ್ವೀಟ್
ವಿಜಯಪುರ: ಮೂರನೇ ಬಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ತವರು ಜಿಲ್ಲೆ ವಿಜಯಪುರಕ್ಕೆ ಆಗಮಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ತಮ್ಮ ತಾಯಿ ಕಮಲಾಬಾಯಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ತಾಯಿಗಿಂತಲೂ ಮಿಗಿಲಾದ ದೇವರಿಲ್ಲ. ಮಮತೆ, ಪ್ರೀತಿ-ವಾತ್ಸಲ್ಯ ತ್ಯಾಗ, ಅನುಕಂಪ ಹೀಗೆ ಎಲ್ಲ ಪದಗಳ ಮೂರ್ತರೂಪವೇ ತಾಯಿ. ನನ್ನ ಬೆಳವಣಿಗೆ, ಏಳಿಗೆ, ಶ್ರೇಯಸ್ಸು-ಯಶಸ್ಸು ಎಲ್ಲಕ್ಕೂ […]
ಬಸವ ನಾಡಿನಲ್ಲಿ ವಿನೂತನ ಕಾರ್ಯಕ್ರಮ- ಎತ್ತಿನ ಗಾಡಿಯಲ್ಲಿ ಮಕ್ಕಳನ್ನು ಕರೆತಂದು ಶಾಲೆ ಪ್ರಾರಂಭೋತ್ಸವ
ವಿಜಯಪುರ: ಬೇಸಿಗೆ ಬಿಡುವಿನ ನಂತರ ಇಂದಿನಿದ ಶಾಲೆಗಳು ಆರಂಭವಾಗಿದ್ದು, ಮಕ್ಕಳನ್ನು ಶಾಲೆಗೆ ಕರೆತರಲು ಬವಸ ನಾಡಿನ ಶಾಲೆಯೊಂದು ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನ ಸೆಳೆದಿದೆ. ವಿಜಯಪುರ ನಗರದ ದಿವಟಗೇರಿ ಗಲ್ಲಿಯಲ್ಲಿರುವ ಶ್ರೀ ರುಕ್ಮಾಂಗದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ವಿನೂತನವಾಗಿ ಸ್ವಾಗತಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ. ವಿದ್ಯಾರ್ಥಿಗಳನ್ನು ವಿಶೇಷವಾಗಿ ಸಿಂಗರಿಸಲಾಗಿದ್ದ ಎತ್ತಿನ ಗಾಡಿಯಲ್ಲಿ ಕುಳ್ಳಿರಿಸಿಕೊಂಡು ಶಾಲೆಗೆ ಕರೆತರಲಾಯಿತು. ಈ ಮೂಲಕ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಮೆರಗು ಕಲ್ಪಿಸಲಾಯಿತು. ಈ ಕಾರ್ಯಕ್ರಮದದಲ್ಲಿ ಅತಿಥಿಯಾಗಿ ಪಾಲ್ಗೊಂಡ […]
ಡಾ. ಬಿ. ಆರ್. ಅಂಬೇಡ್ಕರ ಚಿಂತನೆಯ ಪಕ್ಷ ಬೇಕು- ಪ್ರಕಾಶ ಅಂಬೇಡ್ಕರ
ವಿಜಯಪುರ: ಇಂದಿನ ಜಾತಿ ಆಧಾರಿತ ಪ್ರಜಾಪ್ರಭುತ್ವ ನಿರ್ಮೂಲನೆ ಮಾಡಬೇಕು. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ ಚಿಂತನೆಯ ಪಕ್ಷ ಈಗ ಬೇಕಾಗಿದೆ ಎಂದು ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ ಮೊಮ್ಮಗ, ಮಾಜಿ ಸಂಸದ ಹಾಗೂ ಹಿರಿಯ ಚಿಂತಕ ಪ್ರಕಾಶ ಅಂಬೇಡ್ಕರ ಹೇಳಿದ್ದಾರೆ. ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಗದಗಿನ ಲಡಾಯಿ ಪ್ರಕಾಶನ, ಧಾರವಾಡದ ಕವಿ ಪ್ರಕಾಶನ ಕವಲಕ್ಕಿ ಚಿತ್ತಾರ ಕಲಾ ಬಳಗ ಹಾಗೂ ವಿಜಯಪುರ ಮೇ ಸಾಹಿತ್ಯ ಬಳಗ ಸಂಯುಕ್ತಾಶ್ರಯದಲ್ಲಿ […]
ಮಖಣಾಪುರ ಎಲ್. ಟಿ.-2 ರಲ್ಲಿ ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ- ಡಾ. ದೇವಾನಂದ ಚವ್ಹಾಣ ಭಾಗಿ
ವಿಜಯಪುರ: ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯ ವಿಜಯಪುರ ತಾಲೂಕಿನ ಮಖಣಾಪುರ ತಾಂಡಾ 2ರಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿದ ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಡಾ. ದೇವಾನಂದ ಫೂ. ಚವ್ಹಾಣ ಭಾಗವಹಿಸಿ ಜಗನ್ಮಾತೆಯ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಯಿ ದುರ್ಗಾದೇವಿಯನ್ನು ಭಕ್ತಿಯಿಂದ ನೆನೆದರೆ ಜೀವನದಲ್ಲಿ ಕಷ್ಟ-ನಷ್ಟಗಳು ದೂರ ಆಗುತ್ತದೆ. ಮಖಣಾಪುರ ಜನರಿಗೆ ದುರ್ಗಾದೇವಿಯೇ ಶ್ರೀರಕ್ಷೆಯಾಗಿ ನಿಂತಿದ್ದಾಳೆ ಎಂದು ಹೇಳಿದರು. ಮಖಣಾಪೂರ ಜನತೆ ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟುಕೊಂಡು ಇಲ್ಲಿಯ ವರೆಗೆ ಕರೆಸಿದ್ದಕ್ಕೆ […]
ಎಂ. ಬಿ. ಪಾಟೀಲ ಶ್ರೇಯಸ್ಸು ಬಯಸಿ ಯುವಕರಿಂದ ಕಣಬೂರಿನಲ್ಲಿ ದೀರ್ಘದಂಡ ನಮಸ್ಕಾರ
ವಿಜಯಪುರ: ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಅತೀ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿ ಮತ್ತು ಸರಕಾರದಲ್ಲಿ ಉನ್ನತ ಸ್ಥಾನಕ್ಕೇರಲಿ ಎಂದು ಪ್ರಾರ್ಥಿಸಿ ಯುವಕರು ದೀರ್ಘದಂಡ ನಮಸ್ಕಾರ ಹಾಕಿ ಗಮನ ಸೆಳೆದಿದ್ದಾರೆ. ಬಬಲೇಶ್ವರ ತಾಲೂಕಿನ ಕಣಬೂರ ಗ್ರಾಮದ 24 ಯುವಕರು ಕೃಷ್ಣಾ ನದಿಯಿಂದ ಗ್ರಾಮದ ಶ್ರೀ ರಾಚೋಟೇಶ್ವರ ದೇವಸ್ಥಾನದ ವರೆಗೆ ದೀರ್ಘದಂಡ ನಮಸ್ಕಾರ ಹಾಕಿದರು. ಅಲ್ಲದೇ, ಎಂ. ಬಿ. ಪಾಟೀಲರು ಉನ್ನತ ಸ್ಥಾನಕ್ಕೇರಲಿ. ಈ ಭಾಗದಲ್ಲಿ ಮತ್ತು ನಾಡಿನಾದ್ಯಂತ ಹೆಚ್ಚೆಚ್ಚು ಅಭಿವೃದ್ಧಿ ಮಾಡಲಿ […]
ಅಂಬೇಡ್ಕರ ಎಲ್ಲ ಸಮುದಾಯಗಳ ಅಮೂಲ್ಯ ಆಸ್ತಿ- ಸಂಸದ ರಮೇಶ ಜಿಗಜಿಣಗಿ
ವಿಜಯಪುರ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರು ಎಲ್ಲ ಸಮುದಾಯಗಳ ಅಮೂಲ್ಯ ಆಸ್ತಿ. ಶೋಷಿತ ಸಮುದಾಯಗಳ ಉದ್ಧಾರಕ್ಕಾಗಿ ಅವತರಿಸಿದ ಮಹಾನ್ ಸಂತ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ. ಬಿ. ಆರ್. ಅಂಬೇಡ್ಕರ ಅವರ ಚಿಂತನೆಯ ಫಲವಾಗಿ ರೂಪುಗೊಂಡ ಸಂವಿಧಾನದ ಫಲವಾಗಿ ಇಂದು ದಲಿತರ ಬದುಕಿನಲ್ಲಿ ಬೆಳಕು ಮೂಡುವಂತಾಗಿದೆ. ಭಾರತಕ್ಕೆ ಶ್ರೇಷ್ಠ ಸಂವಿಧಾನ […]
ವಿಜಯಪುರ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಆಚರಣೆ
ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ 132ನೇ ಜನ್ಮ ದಿನ ಆಚರಿಸಲಾಯಿತು. ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಪ್ರೊ. ರಾಜು ಆಲಗೂರ ಅಂಬೇಡಕ್ರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಜಗತ್ತಿನಲ್ಲೇ ಸರ್ವಶ್ರೇಷ್ಠವಾದ ಭಾರತ ಸಂವಿಧಾನವನ್ನು ನೀಡಿದ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಆರ್ಥಿಕ ತಜ್ಞ, ಯೋಜನಾ ನಿಪುಣ, ಕಾನೂನು ತಜ್ಞರಾಗಿದ್ದರು. ಮಾತ್ರವಲ್ಲ, ಸಾಮಾಜಿಕ ಪರಿಕಲ್ಪನೆಯ ತಜ್ಞರಾಗಿದ್ದರು. […]
ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನ: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ
ವಿಜಯಪುರ: ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ವಿಶ್ವದ ಗಮನ ಸೆಳೆಯುತ್ತಿದೆ. ಸಂವಿಧಾನದಲ್ಲಿ ಎಲ್ಲ ಆದರ್ಶಗಳನ್ನು ಅಳವಡಿಸುವ ಮೂಲಕ ಜನತೆಗೆ ಸಮಾನತೆಯನ್ನು ಒದಗಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ಹೇಳಿದರು. ಚುನಾವಣಾ ನೀತಿ ಸಂಹಿತೆ ಜಾರಿಯಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ, ಅರ್ಥಪೂರ್ಣವಾಗಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳು ಮಾತನಾಡಿ, […]
ರಾಜ್ಯ ಮಟ್ಟದ ಪಟ್ಟದ ಪೂಜಾರಿಗಳ, ಜಡೆ ತಲೆ ಪೂಜಾರಿಗಳ 4ನೇ ಹಾಲುಮತ ಧರ್ಮ ಸಭೆ- ಶ್ರೀ ಮರಡಿ ಸಿದ್ದೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ
ವಿಜಯಪುರ: ಬಬಲೇಶ್ವರ ತಾಲೂಕಿನ ಕಣಮುಚನಾಳ ಗ್ರಾಮದಲ್ಲಿ ರಾಜ್ಯ ಮಟ್ಟದ ಪಟ್ಟದ ಪೂಜಾರಿಗಳ ಹಾಗೂ ಜಡೆ ತಲೆ ಪೂಜಾರಿಗಳ 4ನೇ ಹಾಲುಮತ ಧರ್ಮ ಸಭೆಯನ್ನು ನಡೆಯಿತು. ಗ್ರಾಮದ ಭಕ್ತರು ಹನುಮಾನ ದೇವಸ್ಥಾನದಿಂದ ದೇವರ ಸತ್ತಿಗೆ ಹಾಗೂ ಎಲ್ಲ ಪೂಜಾರಿಗಳನ್ನು ಡೊಳ್ಳು ಕುಣಿತದೊಂದಿಗೆ ಪ್ರಮುಖ ರಸ್ತೆಗಳ ಮೂಲಕ ಶ್ರೀ ಮರಡಿ ಸಿದ್ದೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಂಡರು. ಬಳಿಕ ಶ್ರೀ ಮರಡಿ ಸಿದ್ದೇಶ್ವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಗ್ರಾಮದ ಹೆಣ್ಣು ಮಕ್ಕಳು ಎಲ್ಲ ಪೂಜಾರಿಗಳಿಗೆ ದಾರಿಯುದ್ದಕ್ಕೂ ಪಾದ ಪೂಜೆ ಮಾಡಿದರು. […]
ಬಸವನಾಡಿನಲ್ಲಿ ಹನುಮ ಜಯಂತಿ ಆಚರಣೆ- ನಸುಕಿನಿಂದಲೇ ಆಂಜನೇಯ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದ ಭಕ್ತರು- ಪ್ರಸಾದ ವ್ಯವಸ್ಥೆಯೂ ಜೋರು
ವಿಜಯಪುರ: ಇಂದು ರಾಮಭಕ್ತ ಹನುಮ ಜಯಂತಿ. ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಹನುಮ ಜಯಂತಿ ಸಂಭ್ರಮ ಜೋರಾಗಿದೆ. ಜಿಲ್ಲೆಯ ನಾನಾ ಬಡಾವಣೆಗಳಲ್ಲಿರುವ ಎಲ್ಲ ಹನುಮಾನ ಮಂದಿರಗಳಲ್ಲಿ ಹನುಮ ಜಯಂತಿ ಅಂಗವಾಗಿ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ರಾಮಭಕ್ತ, ಸರ್ವಶಕ್ತ, ಚಿರಂಜೀವಿ, ವಾಯುಪುತ್ರ, ಆಂಜನಿಸುತ, ಮಾರುತಿ ಸೇರಿದಂತೆ ನಾನಾ ಹೆಸರುಗಳಿಂದ ಕರೆಯಲಾಗುವ ಆಂಜನೆಯ ಭಕ್ತರು ಅಪಾರ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಹನುಮಂತನ ಪ್ರತಿಯೊಂದು ದೇವಸ್ಧಾನಗಳಲ್ಲಿ ನಸುಕಿನ ಜಾವದಿಂದಲೇ ಜನಜಂಗುಳಿ ಕಂಡು ಬಂತು. ಹನುಮ ದೇಗುಲಗಳಲ್ಲಿ ಸಂಭ್ರಮದಿಂದ ಪೂಜಾ ಕೈಂಕರ್ಯ […]