ಕಿರಿಯ ವಯಸ್ಸಿನಲ್ಲಿ ಬಸವಣ್ಣನವರ ಭಕ್ತಿಯ ತತ್ವಗಳನ್ನು ಬಸನಗೌಡ ಎಂ. ಪಾಟೀಲ ಅಳವಡಿಸಿಕೊಂಡು ಮುನ್ನಡೆಯುತ್ತಿ್ದ್ದಾರೆ- ರಂಭಾಪುರಿ ಜಗದ್ಗುರುಗಳು
ವಿಜಯಪುರ, ಮಾ. 30: ವಯಸ್ಸಿನಿಂದ ಕಿರಿಯರಾದರೂ ಪ್ರತಿಭೆ ಮತ್ತು ತಮ್ಮ ಕೆಲಸ ಕಾರ್ಯಗಳಿಂದ ಎಲ್ಲರ ಮನದಲ್ಲಿ ಸದಾ ಕಂಗೊಳಿಸುತ್ತಿರುವ ಬಸನಗೌಡ ಎಂ. ಪಾಟೀಲ, ಸದ್ವಿನಯ ಸಂಪನ್ನರಾಗಿ ಬಾಗಿದ ತಲೆ, ಮುಗಿದ ಕೈ ಎಂಬ ಬಸವಣ್ಣನವರ ಭಕ್ತಿಯ ತತ್ವಗಳನ್ವನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾರೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ. ನಗರದ ಜೋರಾಪುರ ಪೇಟೆಯ ಪೇಟೆ ಓಣಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಅವರ ಮನೆಯಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಪೂಜೆ […]
ಮಕ್ಕಳ ಸರ್ವತೋಮುಖ ಅಭಿವೃದ್ಧಿ ಶಿಕ್ಷಣ ಸಂಸ್ಥೆಗಳು ಗುರಿಯಾಗಬೇಕು- ಶೈಲಜಾ ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ಮಕ್ಕಳು ಪಾಠದ ಜೊತೆಗೆ, ಪಠ್ಯಗಳ ಹೊರತಾದ ಚಟುವಟಿಕೆಗಳಲ್ಲಿಯೂ ಪಾಲ್ಗೋಳ್ಳಬೇಕು ಎಂದು ಶೈಲಜಾ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಿಡಗುಂದಿ ತಾಲೂಕಿನ ಮುಕಾರ್ತಿಹಾಳ ಗ್ರಾಮದ ಗ್ರಾಮದ ಮಾತೋಶ್ರೀ ಶಕುಂತಲಾ ಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಮಕ್ಕಳಿಗೆ ಬಾಲ್ಯದಲ್ಲಿಯೇ ಗುಣಮಟ್ಟದ ಶಿಕ್ಷಣ ಕೊಡುವ ನೀಡುವ ನೆಪದಲ್ಲಿ ಅವರ ಹೆಗಲಿಗೆ ಭಾರವಾದ ಪುಸ್ತಕಗಳ ಬ್ಯಾಗನ್ನು ಹಾಕಿಸಿ ಕೇವಲ ಓದು, ಓದು ಎಂದು ಒತ್ತಡ ಹಾಕಲಾಗುತ್ತದೆ. ಇದರಿಂದ ಅನೇಕ ಮಕ್ಕಳು ಒತ್ತಡದಿಂದ […]
ಮತ್ದೊಂದು ಹೊಸ ರೋಗ ಬರ್ತೈತಾದ್ರ ಕೊರೊನಾದಂಗಲ್ಲ- ಭಾರತ ಪ್ರೀತಿಯಿಂದ ಬೇರೆ ದೇಶ ಆಳ್ತೈತಿ- ರಾಜಕೀಯ ಗೊಂದಲ ಐತಿ- ಕತ್ನಳ್ಳಿ ಕಾರ್ಣಿಕ ಭವಿಷ್ಯ
ವಿಜಯಪುರ: ಕೊರೊನಾ ಬಳಿಕ ವೈದ್ಯರಿಗೆ ತಲೆನೋವು ತರುವ ಮತ್ತೊಂದು ರೋಗಬಾಧೆ ಜನರನ್ನು ಕಾಡಲಿದೆ. ಆದರೆ, ಇದು ಕೊರೊನಾದಷ್ಟು ಮಾರಕವಾಗಿರಲ್ಲ ಎಂದು ಬಸವನಾಡು ವಿಜಯಪುರ ಜಿಲ್ಲೆಯ ಕತ್ನಳ್ಳಿ ಶ್ರೀ ಸದಾಶಿವ ಮುತ್ಯಾ ಮಠಾಧೀಶ ಶ್ರೀ ಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಸುಕ್ಷೇತ್ರ ಕತ್ನಳ್ಳಿಯಲ್ಲಿ ಯುಗಾದಿ ಅಂಗವಾಗಿ ಶ್ರೀ ಸದಾಶಿವ ಮುತ್ಯಾನ ಜಾತ್ರೆಯ ಅಂಗವಾಗಿ ನಡೆದ ಸಾಮೂಹಿಕ ವಿವಾಹದ ಬಳಿಕ ಪ್ರತಿವರ್ಷದಂತೆ ಈ ವರ್ಷವೂ ವರ್ಷದ ಭವಿಷ್ಯ ನುಡಿದ ಅವರು, ಹೊಸ ರೋಗದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಪ್ರಾಣಿ […]
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ- ಕನ್ನಡ ಭಾಷೆ, ಸಂಸ್ಕೃತಿ ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿ- ಸಿದ್ದಣ್ಣ ಉತ್ನಾಳ
ವಿಜಯಪುರ: ಕನ್ನಡ ಭಾಷೆ, ಸಂಸ್ಕೃತಿಯನ್ನು ನಾವು ಸದಾ ಉಳಿಸಿಕೊಂಡು ಹೋಗಬೇಕು. ಅದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಸಿದ್ದಣ್ಣ ಉತ್ನಾಳ ಹೇಳಿದ್ದಾರೆ. ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನಧ್ಯಕ್ಷರಾಗಿ ಅವರು ಮಾತನಾಡಿದರು. ವಿಜಯಪುರ ಜಿಲ್ಲೆಯಲ್ಲಿ ಅತೀ ಪ್ರಾಚೀನ ಕಾಲದಿಂದಲೂ ವಿದ್ಯಾ ಕೇಂದ್ರಗಳಾದ ಅಗ್ರಹಾರ, ಘಟಿಕಾಸ್ಥಾನ, ಬ್ರಹ್ಮಪುತ್ರಿ ಶಾಲೆಗಳಿದ್ದವು. ರಾಷ್ಟ್ರಕೂಟರ ಕಾಲದಲ್ಲಿಯೇ ಸಾಲೋಟಗಿ ಶಿಕ್ಷಣ ಕೇಂದ್ರವಾಗಿತ್ತು. ಜಗತ್ತಿಗೆ ಗಣಿತ ಶಾಸ್ತ್ರಕ್ಕೆ ಸೊನ್ನೆಯ ಪರಿಕಲ್ಪನೆ ಮಾಡಿಕೊಟ್ಟ ಕ್ರಿ.ಶ 1114ರಲ್ಲಿ ಜನಿಸಿದ ಭಾಸ್ಕರಾಚಾರ್ಯರು ವಿಜಯಪುರ […]
ಹಿಂದೂಗಳ ವೈಭವದ ನಗರ ವಿಜಯಪುರ- ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ಹಿಂದೂಗಳ ಅತ್ಯಂತ ವೈಭವದ ನಗರ ವಿಜಯಪುರ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ನಗರದ ಹನುಮಗಿರಿ ರಸ್ತೆಯ ಖಣಿ ಹತ್ತಿರದ ಮೋಹನ ನಗರದಲ್ಲಿ ವೆಂಕಟೇಶ್ವರ ದೇವಸ್ಥಾನದ ಗೀತಾ ಭವನ ಮತ್ತು ವಾನಪ್ರಸ್ಥಧಾಮ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ನಗರದಲ್ಲಿ ಅನೇಕ ದೇವಸ್ಥಾನಗಳನ್ನು ದಾಳಿ ಮಾಡಿದ ಕಾಲದಲ್ಲಿ ನಾಶಪಡಿಸಲಾಗಿದೆ. ನಗರದಲ್ಲಿ ಎಲ್ಲಿಯೇ ಉತ್ಖನನ ಮಾಡಿದರೂ ಹಿಂದು ಕುರುಹು ಸಿಗುವ ನಗರ ವಿಜಯಪುರ ಎಂದು ಅವರು ಹೇಳಿದರು. ಆದಿಲ್ ಶಾಹಿ ಹೋಟೆಲ್ ಬಳಿಯ ಯಾದವರ […]
ಕಥಕ್ ನೃತ್ಯವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ- ಲತಾ ಜಹಾಗೀರದಾರ
ವಿಜಯಪುರ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ವಿಜಯಪುರದ ನವರಸ ನೃತ್ಯ ಕಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕಥಕ್ ನೃತ್ಯ ತರಬೇತಿ ಶಿಬಿರ ನಗರದಲ್ಲಿ ನಡೆಯಿತು. ಈ ಶಿಬಿರವನ್ನು ಶೇಷ ಘಟಕ ಯೋಜನೆ ಅಡಿಯಲ್ಲಿ ಗುರುಶಿಷ್ಯ ಪರಂಪರೆ ಅಂಗವಾಗಿ ಆಯೋಜಿಸಲಾಗಿದ್ದ ಈ ತರಬೇತಿ ಶಿಬಿರವನ್ನುಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಮಾಜಿ ಸತಸ್ಯೆ ಮತ್ತು ಖ್ಯಾತ ಸಂಗೀತ ಕಲಾವಿದೆ ಲತಾ ಜಾಗೀರದಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನೃತ್ಯ ಸರ್ವ ರೋಗಕ್ಕೂ ರಾಮಬಾಣವಿದ್ದಂತೆ. ನೃತ್ಯದಿಂದ ನಮ್ಮ ದೇಹದ ಸರ್ವ ಅಂಗಾಂಗಗಳಿಗೂ […]
ಅಗಸನಹಳ್ಳಿಯಲ್ಲಿ ಗಮನ ಸೆಳೆದ ವಿಠ್ಠಲ- ರುಕ್ಮಿಣಿ ದೇವರ ಜಾತ್ರೆ
ವಿಜಯಪುರ: ಬಬಲೇಶ್ವರ ತಾಲೂಕಿನ ಕಾಖಂಡಕಿ ಪಕ್ಕದಲ್ಲಿರುವ ಅಗಸನಹಳ್ಳಿ ಗ್ರಾಮದಲ್ಲಿ ವಿಠ್ಠಲ- ರುಕ್ಮಿಣಿ ದೇವರ ಜಾತ್ರೆ ವಿಜೃಂಭಣೆಯಿಂದ ನೆರವೇರಿತು. ಕಳೆದ ಮೂರು ದಿನಗಳಿಂದ ದೇವಾಲಯ ಆವರಣದಲ್ಲಿ ಕೀರ್ತನೆ ಭಜನೆ ದೇವರ ಧ್ಯಾನ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪಾಂಡುರಂಗನ ಪಲ್ಲಕ್ಕಿ ಉತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಹರಿ ಭಜನೆ ನಾನಾ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಯಿತು. ಜಿಲ್ಲೆಯಷ್ಟೇ ಅಲ್ಲ, ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಂತ ಮಂಡಳಿ ಸದಸ್ಯರು ಭಕ್ತಿಭಾವದ ಮತ್ತು ಗ್ರಾಮೀಣ ಸೊಗಡಿನ ಕಾರ್ಯಕ್ರಮವನ್ನು […]
ವಿಜಯಪುರ ನಗರದ ಪುರಾತನ ಸ್ವಯಂ ಶಿವಲಿಂಗ ದೇವಸ್ಥಾನಕ್ಕೆ ಯತ್ನಾಳ ಭೇಟಿ- ಉತ್ಖನನ ಮಾಡಿಸುವ ಭರವಸೆ
ವಿಜಯಪುರ: ನಗರದ ಹೋಟೆಲ್ ಆದಿಲ್‍ಶಾಹಿ ಹಿಂಭಾಗದಲ್ಲಿರುವ ಪುರಾತನ ಸ್ವಯಂ ಶಿವಲಿಂಗ ದೇವಸ್ಥಾನ ಕುರಿತು ಉತ್ಖನನ ಮಾಡಿಸಲಾಗುವುದು ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಹೇಳಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಈ ಐತಿಹಾಸಿಕವಾದ ಸುಂದರ ದೇವಸ್ಥಾನದ ಪರಿಚಯ ಜನರಿಗೆ ಇರಲಿಲ್ಲ. ಇನ್ನೂ ಮುಂದೆ ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು. ದೇವಸ್ಥಾನ ಕುರಿತಂತೆ ಮುಧೋಳದ ಸಂಶೋಧಕ ಡಾ. ಸಂಗಮೇಶ ಕಲ್ಯಾಣಿ ಅವರಿಂದ ಮಾಹಿತಿ ಪಡೆದ ಶಾಸಕರು, ನಂತರ ಭಾರತೀಯ […]
ಸರಕಾರಗಳು ಎಲ್ಲ ಪದವೀಧರ ಶಿಕ್ಷಕರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು- ಆಶಾ ಎಂ. ಪಾಟೀಲ
ವಿಜಯಪುರ: ಸರಕಾರಗಳು ದೇಶದ ಭವಿಷ್ಯ ರೂಪಿಸುವ ಎಲ್ಲ ಪದವೀಧರ ಶಿಕ್ಷಕರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಶಾ ಎಂ. ಪಾಟೀಲ ಹೇಳಿದ್ದಾರೆ. ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗ ಯಾವುದೇ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರನ್ನು ನೇಕವಾದಿ ನೇಮತ ಮಾಡಿಕೊಳ್ಳುವುದಿಲ್ಲ. ಸರಕಾರ ಅನುಮತಿ ನೀಡಿದ ನಂತರ ಮಾರ್ಗಸೂಚಿಯಂತೆ ಎಲ್ಲ ಪ್ರಕ್ರಿಯೆ ನಡೆಯುತ್ತದೆ. ಖಾಸಗಿ […]
ಕಾಲಜ್ಞಾನದ ಹೇಳಿಕೆಗೆ ಹೆಸರಾದ ಕತ್ನಳ್ಳಿ ಸದಾಶಿವ ಜಾತ್ರೆಗೆ ಕ್ಷಣಗಣನೆ ಆರಂಭ- ಜ್ಞಾನ ದೀಪೋತ್ಸವ ಈ ಬಾರಿಯ ವಿಶೇಷ ಶ್ರೀ ಶಿವಯ್ಯ ಸ್ವಾಮೀಜಿ
ವಿಜಯಪುರ: ಚಹಾ ಮಾರುವವ ದೇಶದ ಪ್ರಧಾನಿಯಾಗುತ್ತಾನೆ. ವೈದ್ಯರೂ ತಲೆಗೆ ಕೈ ಹಚ್ಚಿ ಕುಳಿತುಕೊಳ್ಳುವ ರೋಗ ಬಾಧಿಸುತ್ತೆ ಸೇರಿದಂತೆ ನಾನಾ ಭವಿಷ್ಯಗಳನ್ನು ಹೇಳುವ ಮೂಲಕ ಖ್ಯಾತವಾಗಿರುವ ಬಸವನಾಡು ವಿಜಯಪುರ ಜಿಲ್ಲೆಯ ಕತ್ನಳ್ಳಿ ಶ್ರೀ ಸದಾಶಿವ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಶ್ರೀ ಶಿವಯ್ಯ ಸ್ವಾಮೀಜಿ, ಈ ಬಾರಿಯ ಜಾತ್ರೆಯ ವಿಶೇಷತೆಗಳನ್ನು ವಿವರವಾಗಿ ಮಾಹಿತಿ ನೀಡಿದ್ದಾರೆ. ಮಾ. 21 ರಿಂದ 25ರ ವರೆಗೆ ಜಾತ್ರೆ ನಡೆಯಲಿದೆ. ಈ ಬಾರಿಯ ಜಾತ್ರೆಯಲ್ಲಿ ಜ್ಞಾನ ದೀಪೋತ್ಸವ […]