ಸೇವಾಲಾಲ, ಹಾಮುಲಾರರ ಆಶೀರ್ವಾದನ ನನ್ನ ಮೇಲಿದೆ- ಬಂಜಾರಾ ಉಡುಪು,, ಕಲೆ ಜಗತ್ತಿಗೆ ಪರಿಚಯಿಸಲು ಕ್ರಮ- ಎಂ. ಬಿ. ಪಾಟೀಲ

ವಿಜಯಪುರ: ಸೇವಾಲಾಲ್ ಮತ್ತು ಹಾಮುಲಾಲ್ ರ ಆಶೀರ್ವಾದ ನನ್ನ ಮೇಲಿದೆ.  ಬಂಜಾರಾ ಸಮುದಾಯದ ಉಡುಪು ಮತ್ತು ಅದನ್ನು ತಯಾರಿಸುವ ಕಲೆಯನ್ನು ಜಗತ್ತಿಗೆ ಪರಿಚಯಿಸಲು ಯೋಜನೆ ರೂಪಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರ ನಗರದ ಸೋಲಾಪುರ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಶ್ರೀ ಹಾಮುಲಾಲ್ ನೂತನ ದೇವಸ್ಥಾನ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಉದ್ಘಾಟನೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಂಜಾರಾ ಸಮುದಾಯದ ಜನ ಶ್ರಮ ಜೀವಿಗಳು.  […]

ಬಸವನಾಡಿನಲ್ಲಿ ಲೋಕಾರ್ಪಣೆಗೆ ಸಿದ್ಧವಾದ ಹಾಮುಲಾಲ್ ನೂತನ ದೇವಸ್ಥಾನ

ವಿಜಯಪುರ: ನಗರದ ಸೋಲಾಪುರ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಬಂಜಾರಾ ಸಮುದಾಯದ ಆರಾಧ್ಯ ದೈವ ಶ್ರೀ ಹಾಮುಲಾಲ್ ನೂತನ ದೇವಸ್ಥಾನ ಭಕ್ತರ ದರ್ಶನಕ್ಕೆ ಸಿದ್ಧವಾಗಿದ್ದು, ಮಾರ್ಚ್ 19ರಂದು ರವಿವಾರ ಲೋಕಾರ್ಪಣೆಯಾಗಲಿದೆ. ಈ ಕುರಿತು ಜಂಟಿ ಮಾಧ್ಯಮ ಪ್ರಕಟಣೆ ನೀಡಿರುದ ಬಂಜಾರಾ ಸಮಾಜದ ಮುಖಂಡರು ಮಾರ್ಚ್ 19 ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭ ಕೂಡ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ನಗರದ ಮುಗಳಖೋಡ ಮಠದಿಂದ ಹಾಮುಲಾಲ್ ದೇವಸ್ಥಾನದವರೆಗೆ ಕುಂಭ ಮೇಳ […]

ಮಹಿಳಾ ಅಭಿವೃದ್ಧಿಗೆ ಕಾನೂನು ದಾರಿ ದೀಪ ವಾಗಲಿ- ಪ್ರೊ. ಉಜ್ವಲಾ ಸರನಾಡಗೌಡರ

ವಿಜಯಪುರ: ಸ್ವಾವಲಂಬನೆ ಬದುಕಿಗೆ ಮಹಿಳೆಯರಿಗೆ ಕಾನೂನುಗಳ ಅರಿವು ಅವುಗಳನ್ನು ಬಳಸಿಕೊಳ್ಳುವ ಜ್ಞಾನ ಬಹಳ ಅವಶ್ಯವಾಗಿದೆ ಎಂದು ಅಂಜುಮನ್ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಉಜ್ವಲಾ ಸರನಾಡಗೌಡರ ಹೇಳಿದ್ದಾರೆ. ಜಿಲ್ಲಾ ವೀರಶೈವ ಲಿಂಗಾಯ ಮಹಾಸಭಾ ಮಹಿಳಾ ಘಟಕ, ಜಿಲ್ಲಾ ಕದಳಿ ವೇದಿಕೆ ಹಾಗೂ ಸ್ಫೂರ್ತಿ ಮಹಿಳಾ ಗ್ರಾಮಿಣ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಲಿಂ. ಶ್ರೀಮತಿ. ಗಂಗಬಾಯಿ. ಚೆನ್ನಪ್ಪ. ಉಪ್ಪಿನ ಮತ್ತು ಲಿಂ. ಆದಪ್ಪ.ಕರಡಿ ಅವರ ದತ್ತಿ ಸ್ಮರಣೆ ಉಪನ್ಯಾಸ ಕಾರ್ಯಕ್ರಮ […]

ವಿಶ್ವದ ಎರಡನೇ ಅತಿ ದೊಡ್ಡ ಭಾಷೆ ಹಿಂದಿ- ಡಾ. ಬಿ. ಎಸ್. ನಾವಿ

ವಿಜಯಪುರ: ಜಾಗತಿಕರಣದ ಮಧ್ಯೆಯೂ ಹಿಂದಿ ಭಾಷೆಯು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ವಿಶ್ವದ ಎರಡನೇ ಅತಿ ದೊಡ್ಡ ಭಾಷೆಯಾಗಿ ಇಂದು ಹೊರಹೊಮ್ಮಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ. ಎಸ್. ನಾವಿ ಹೇಳಿದ್ದಾರೆ. ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯವು, ಎಸ್. ಬಿ. ಕಲಾ ಮತ್ತು ಕೆ. ಸಿ. ಪಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ಮುಂಬೈ ಹಿಂದಿ ಅಕಾಡೆಮಿ ಇವುಗಳ ಸಹಯೋಗದಲ್ಲಿ ಆಯೋಜಿಸಲಾದ ಸಮಕಾಲಿನ ಹಿಂದಿ ಭಾಷಾ ಔರ್ ಸಾಹಿತ್ಯ- ವಿವಿಧ ಆಯಾಮ ಎಂಬ […]

ವಿಜಯಪುರದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ಉದ್ಘಾಟನೆ

ವಿಜಯಪುರ: ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಎದುರು ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ಉದ್ಘಾಟನೆ ಸಮಾರಂಭ ನಡೆಯಿತು. ಶ್ರೀ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ಮತ್ತು ಶ್ರೀ ಚಂದ್ರಶೇಖರ ಶಿವಾಚಾರ್ಯರ ಸ್ವಾಮಿಜಿ ಸಂಘವನ್ನು ಉದ್ಘಾಟಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಅಂಗವಾಗಿ ನಡೆದ ಈ ಕಾರ್ಯಕರ್ಮದಲ್ಲಿ ಮಾತನಾಡಿ ಸಂಘದ ಅಧ್ಯಕ್ಷ ಚಿದಾನಂದ ಹಿರೇಮಠ, ಮುಂಬರುವ ದಿನಗಳಲ್ಲಿ ನಗರದ ನಾನಾ ಕಡೆ ವೈದಿಕ ಸಂಸ್ಕಾರ ಶಿಬಿರಗಳನ್ನು ಮಾಡಲಗಾವುದು.  ಸಾಮಾಜಿಕ ಮತ್ತು ಧಾರ್ಮಿಕ ಸೇವೆ ಮಾಡುವುದು ಸಂಘದ ಉದ್ಧೇಶವಾಗಿದೆ […]

ಎಲ್ಲ ರಂಗಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಒತ್ತು ನೀಡಬೇಕು. ಜಿ. ಪಂ. ಸಿಇಓ ರಾಹುಲ್ ಶಿಂಧೆ

ವಿಜಯಪುರ: ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕಳೆದ ವರ್ಷ ಮಹಿಳೆಯರಿಗೆ ಶೇ. 40ರಷ್ಟಿದ್ದ ಮೀಸಲಾತಿಯನ್ನು ಈ ವರ್ಷದಲ್ಲಿ ಶೇ. 52 ರಷ್ಟು ಒದಗಿಸುವ ಮೂಲಕ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿ, ಸಮಾನತೆಗೆ ಒತ್ತು ನೀಡಲಾಗಿದೆ ಎಂದು ಜಿ. ಪಂ. ಸಿಇಓ ರಾಹುಲ್ ಶಿಂಧೆ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿ. ಪಂ. ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ನಗರ ಹಾಗೂ ಗ್ರಾಮೀಣ ಯೋಜನೆ, […]

ಪೂಜಾರಿಗಳು ಜೀವನದಲ್ಲಿ ಸಚ್ಚಾರಿತ್ರ್ಯವನ್ನು ಅಳವಡಿಸಿಕೊಳ್ಳಬೇಕು- ತಳೇವಾಡ ಬೀರೇಶ್ವರ ದೇವಸ್ಥಾನದ ಬರ್ಮಣ್ಣ ಪೂಜಾರಿ

ವಿಜಯಪುರ: ಹಾಲುಮತ ಪೂಜಾರಿಗಳು ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕಾದರೆ ಶುದ್ಧ, ಹಸ್ತ, ಸಚ್ಚಾರಿತ್ರ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಲ್ಹಾರ ತಾಲೂಕಿನ ತಳೆವಾಡ ಗ್ರಾಮದ ಬಿರೇಶ್ವರ ದೇವಸ್ಥಾನದ ಪೂಜಾರಿಗಳಾದ ಶ್ರೀ ಬರ್ಮಣ್ಣ ಪೂಜಾರಿ ಹೇಳಿದರು. ಹಾಲುಮತ ಧಾರ್ಮಿಕ ಪ್ರಸಿದ್ಧ ಕ್ಷೇತ್ರ ಕೊಲ್ಹಾರ ತಾಲೂಕಿನ ತಳೆವಾಡ ಗ್ರಾಮದ ಶ್ರೀ ಬಿರೇಶ್ವರ ದೇವಸ್ಥಾನದಲ್ಲಿ ಪಟ್ಟದ ಪೂಜಾರಿ ಹಾಗೂ ಜಡೆ ಪೂಜಾರಿಗಳ ಶ್ರೇಯೋಭಿವೃದ್ಧಿಗಾಗಿ ಏರ್ಪಡಿಸಲಾದ ಹಾಲುಮತ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಾಲುಮತದ ಪೂಜಾರಿಗಳು ಸತ್ಯಕ್ಕಾಗಿ ತ್ಯಾಗ ಮಾಡುವುದು, ನುಡಿದಂತೆ […]

ಮಹಿಳೆಯರಿಗೆ ಸೂಕ್ತ, ಉನ್ನತ ಶಿಕ್ಷಣ ದೊರೆತರೆ ಮುಖ್ಯ ವಾಹಿನಿಗೆ ಬರಲು ಸಾಧ್ಯ- ಪ್ರೊ. ಬಿ. ಕೆ. ತುಳಸಿಮಾಲ

ವಿಜಯಪುರ: ಮಹಿಳೆಯರಿಗೆ ಸರಿಯಾದ ಮತ್ತು ಉನ್ನತ ಶಿಕ್ಷಣ ಸಿಕ್ಕಾಗ ಮಾತ್ರ ಮಹಿಳೆ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ವಿವಿಯ ಕುಲಪತಿ ಪ್ರೊ. ಬಿ.ಕೆ ತುಳಸಿಮಾಲ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಮಹಿಳಾ ಸಾಂಸ್ಕೃತಿಕ ಹಬ್ಬದ ಎರಡನೆ ದಿನದಂದು ಮಹಿಳಾ ಸಮುದಾಯ ಸಬಲೀಕರಣಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಕೊಡುಗೆ ಕುರಿತ […]

ಇತಿಹಾಸದಲ್ಲಿ ಹೆಣ್ಣಿನ ನಿಜವಾದ ರೂಪವನ್ನು ಸರಿಯಾಗಿ ಬಿಂಬಿಸಿಲ್ಲ- ಡಾ. ಗೀತಾ ವಸಂತ ವಿಷಾಧ

ವಿಜಯಪುರ: ಇತಿಹಾಸ ಚರಿತ್ರೆಯನ್ನು ನೋಡಿದರೆ ಎಲ್ಲಿಯೂ ಸಹ ಹೆಣ್ಣಿನ ನಿಜವಾದ ರೂಪವನ್ನು ಬಿಂಬಿಸಿಲ್ಲ. ಅವಳನ್ನು ಬರೀ ಒಂದು ಭೋಗದ ವಸ್ತುವಾಗಿ ಬಿಂಬಿಸುತ್ತಾ ಬಂದಿದ್ದು ವಿಷಾದದ ಸಂಗತಿ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತ ವಿಶ್ಲೇಷಿಸಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ “ಮಹಿಳಾ ಸಾಂಸ್ಕøತಿಕ ಹಬ್ಬದಲ್ಲಿ” […]

ಮಹಿಳೆಯರೂ ಇಂದಿಗೂ ತಮ್ಮ ಹಕ್ಕುಗಳನ್ನು ಪಡೆಯಲಾಗದೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ- ಪ್ರೊ. ಹರೀಶ ರಾಮಸ್ವಾಮಿ

ವಿಜಯಪುರ: ಮಹಿಳೆಯರು ಇಂದಿಗೂ ಸಹ ತಮ್ಮ ಹಕ್ಕುಗಳನ್ನು ಪಡೆಯಲಾಗದೆ ಹಲವಾರು ಕಾರಣಗಳಿಗೆ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದು ನಮ್ಮಲ್ಲಿರುವ ಸಾಮಾಜಿಕ ಕ್ರೂರತೆಯನ್ನು ಬಿಂಬಿಸುತ್ತದೆ. ಈಗಲಾದರೂ ಸಮಾಜ ಬದಲಾಗಬೇಕಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ತಿಳಿಸಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕತಿಕ ಹಬ್ಬ ಉದ್ಘಾಟಸಿ ಅವರು ಮಾತನಾಡಿದರು. ನಮ್ಮ ಸಮಾಜದಲ್ಲಿ […]