ನಶಿಸಿ ಹೋಗುತ್ತಿರುವ ಹಲಿಗೆ ಬಾರಿಸುವ ಕಲೆ ಉಳಿಸುವುದು ಅಗತ್ಯವಾಗಿದೆ- ಉಮೇಶ ವಂದಾಲ

ವಿಜಯಪುರ: ನಶಿಸಿ ಹೋಗುತ್ತಿರುವ ಹಲಿಗೆ ಬಾರಿಸುವ ಕಲೆಯನ್ನು ಉಳಿಸುವುದು ಅಗತ್ಯವಾಗಿದೆ ಎಂದು ಶ್ರೀ ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಹೇಳಿದ್ದಾರೆ. ನಗರದದಲ್ಲಿ ಶಿವಾಜಿ ಚೌಕಿನಲ್ಲಿ ಆಯೋಜಿಸಲಾಗಿದ್ದ ಹಲಿಗೆ ಬಾರಿಸುವ ಸ್ಪರ್ಧೆಯಾದ ಹಲಗೆ ಹಬ್ಬದ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಹಲಿಗೆ ಬಾರಿಸುವ ಜಾನಪದ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಸಲುವಾಗಿ ಮತ್ತು ಹಲಿಗ ಬಾರಿಸುವ ಕಲಾವಿದರಿಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಉತ್ಸವ ಸಮಿತಿ ಸದಸ್ಯ ಶಿವಾನಂದ ಭುಯ್ಯಾರ […]

ಹೊನ್ನಳ್ಳಿಯ ಎಸ್. ಡಿ. ಕುಮಾನಿ ಅಭಿನಂದನಾ ಸಮಾರಂಭ: ಹಿರಿಯ ನಾಯಕನ ಗುಣಗಾನ ಮಾಡಿದ ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ: ಅಭಿಮಾನಿಗಳನ್ನು ಹೊಂದುವುದು ಸುಲಭದ ಮಾತಲ್ಲ.  ಎಸ್. ಡಿ. ಕುಮಾನಿ ಅವರ 80 ವರ್ಷದ ಅಭಿನಂದನಾ ಸಮಾರಂಭವನ್ನು ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿರುವುದು ಅವರ ಜನಪ್ರೀಯತೆಗೆ ಸಾಕ್ಷಿಯಾಗಿದೆ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಹೇಳಿದರು. ವಿಜಯಪುರ ತಾಲೂಕಿನ ಹೊನ್ನಳ್ಳಿಯಲ್ಲಿ ಶಿವಶರಣೆ ನಿಂಬೆಕ್ಕ ಪ್ರೌಢ ಶಾಲೆ ಮತ್ತು ದುಂಡಪ್ಪ ಮಲಕಪ್ಪ ಕುಮಾನಿ ಪಿ.ಯು.ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ ಅಧ್ಯಕ್ಷ ಸಿದ್ರಾಮಪ್ಪ ದುಂಡಪ್ಪ ಕುಮಾನಿ ಅವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. […]

ನಶಿಸಿ ಹೋಗುತ್ತಿರುವ ವಿಶಿಷ್ಟ ಪಾರಂಪರಿಕ ಕಲೆಗಳ ಉಳಿಸಿ ಬೆಳೆಸುವುದು ಅತ್ಯವಶ್ಯಕ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಇಂದಿನ ದಿನಮಾನಗಳಲ್ಲಿ ನಶಿಸಿ ಹೋಗುತ್ತಿರುವ ವಿಶಿಷ್ಟ ಕಲಾ ಪರಂಪರೆಯನ್ನು  ಉಳಿಸಿ ಬೆಳೆಸಿಕೊಂಡು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವುದು ಅತ್ಯವಶ್ಯಕವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ವಿಜಯಪುರ ನಗರದ ಐತಿಹಾಸಿಕ ಆನಂದ ಮಹಲ್ ಸ್ಮಾರಕ ಆವರಣದಲ್ಲಿ ಆಯೋಜಿಸಲಾಗಿದ್ದ ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಎಂಬ ಶೀರ್ಷಿಕೆಯಡಿ ತಳಸಮುದಾಯದ ನಶಿಸುತ್ತಿರುವ ವಿಶಿಷ್ಟ ಕಲಾ ಪರಂಪರೆಗೆ ಕಾಯಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಪದ ಸಾಹಿತ್ಯ, ಚೌಡಕಿ ಹಾಡು, ಸೋಬಾನ […]

ಮಾ. 7 ರಂದು ವಿಜಯಪುರ ಜೋರಾಪುರ ಪೇಠೆಯ ಮಲ್ಲಯ್ಯನ ಓಣಿ ಪಾದಯಾತ್ರೆ ಕಮಿಟಿ ವತಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ

ವಿಜಯಪುರ: ನಗರದ ಜೋರಾಪುರ ಪೇಠೆಯ ಮಲ್ಲಯ್ಯನ ಗುಡಿ( ಮಲ್ಲಯ್ಯನ ಓಣಿ)ಯ ಶ್ರೀ ಮಲ್ಲಿಕಾರ್ಜುನ ಪಾದಾಯಾತ್ರಾ ಕಮೀಟಿ ವತಿಯಿಂದ ಮಾರ್ಚ್ 7 ರಿಂದ ಶ್ರೀಶೈಲ ಪಾದಯಾತ್ರೆ ಆರಂಭವಾಗಲಿದೆ. ಸತತ 29 ನೇ ವರ್ಷಗಳಿಂದ ಈ ಸಮಿತಿ ನೇತೃತ್ವದಲ್ಲಿ ಶ್ರೀಶೈಲ ಮಲ್ಲಯ್ಯನ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ.  15 ದಿನಗಳ ಈ ಪಾದಯಾತ್ರೆ ಹಿಟ್ನಳ್ಳಿ, ಮನಗೂಳಿ, ಬಸವನ ಬಾಗೇವಾಡಿ, ಹೂವಿನ ಹಿಪ್ಪರಗಿ, ಕೊಣ್ಣೂರ ಕ್ರಾಸ್, ತಾಳಿಕೋಟಿ, ಬಂಡೆಪ್ಪನ ಸಾಲವಾಡಗಿ, ಹುಣಸಗಿ, ದೇವತಕಲ್ಲ, ಶೆಳ್ಳಗಿ, ಸೂಗೂರ, ಅಂಜುಳ ಹೊಳಿ, ಮಸರಕಲ್ಲ, ಗಬ್ಬೂರ, ಕಲಮಲಾ, […]

ಶಿಕ್ಷಣ ಕ್ಷೇತ್ರಕ್ಕೆ ಎಂ. ಎಸ್. ಖೇಡ ಅವರ ಕೊಡುಗೆ ಅಪಾರ- ಶಾಸಕ ಯಶವಂತರಾಯಗೌಡ ವಿ. ಪಾಟೀಲ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಶಿಕ್ಷಣ ಕ್ಶೇತ್ರಕ್ಕೆ ದಿ. ಮಲ್ಲಿಕಾರ್ಜುನ ಖೇಡ ಅವರ ಕೊಡುಗೆ ಅಪಾರ ಎಂದು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಹೇಳಿದ್ದಾರೆ. ಇಂಡಿ ತಾಲೂಕಿನ ತಡವಲಗಾದಲ್ಲಿ ವಿನಾಯಕ ಪೂರ್ವ ಪ್ರಾಥಮಿಕ ಹಾಗೂ ಮಾತೋಶ್ರಿ ಶಾಂತಾಬಾಯಿ ಖೇಡ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಅಂಗವಿಕಲರಾಗಿದ್ದರೂ ಎಂ. ಎಸ್. ಖೇಡ ಅವರು ಈ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಅದನ್ನು ಹೆಮ್ಮರವಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.  ಅವರ ಶಿಕ್ಷಣ ಪ್ರೇಮ ಇತರರಿಗೂ […]

ಕರ್ನಾಟಕದ ಏಳು ಅದ್ಭುತಗಳಲ್ಲಿ ವಿಜಯಪುರದ ಗೋಳಗುಮ್ಮಟವೂ ಒಂದು- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕರ್ನಾಟಕದ ಏಳು ಅದ್ಭುತಗಳಲ್ಲಿ ಐತಿಹಾಸಿಕ ವಿಜಯಪುರದ ಐತಿಹಾಸಿಕ ಗಗೋಳಗುಮ್ಮಟವೂ ಒಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.   ಬೆಂಗಳೂರಿನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಉದ್ಘೋಷಿಸಲಾಯಿತು. ಇದೇ ವೇಳೆ, ವಿಜೇತ ತಾಣಗಳಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಪ್ರಮಾಣಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ನೆಲ-ಜಲ, ಕಾಡು-ಕಡಲು, ವಾಸ್ತು-ವಿಜ್ಞಾನ, ಶಿಲ್ಪಕಲೆ, ಇತಿಹಾಸ-ಪರಂಪರೆ ಸೇರಿದಂತೆ ಎಲ್ಲ ವೈವಿಧ್ಯಗಳನ್ನೂ ಪ್ರತಿನಿಧಿಸುವ ಏಳು ವಿಶಿಷ್ಟ ತಾಣಗಳನ್ನು ಕರ್ನಾಟಕದ ಏಳು ಅದ್ಭುತಗಳು ಎಂದು ಘೋಷಿಸಿದರು. ಈ […]

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಯತ್ನಾಳ

ವಿಜಯಪುರ: ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಆರ್.ಅಂಬೇಡ್ಕರ್ ಅವರು 1939ರಲ್ಲಿ ವಿಜಯಪುರ ನಗರಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಸುಮಾರು ರೂ. 1.90 ಕೋ. ಅನುದಾನದಲ್ಲಿ ಡಾ. ಬಿ. ಆರ್. ಅಂಬೇಡ್ಕರ ಸ್ಮಾರಕ ನಿರ್ಮಾಣಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಸಮಾಜದ ಮುಖಂಡ ರಮೇಶ ಆಸಂಗಿ, ಆನಂದ ಔದಿ, ಅಭಿಷೇಕ ಚಕ್ರವರ್ತಿ, ನಾಗರಾಜ ಲಂಬು, ಸಿದ್ದು […]

ಭಗೀರಥ ಮಹರ್ಷಿ ವೃತ್ತ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಯತ್ನಾಳ- ವೈಯಕ್ತಿಕವಾಗಿ ರೂ. 5 ಲಕ್ಷ ನೆರವು ಘೋಷಣೆ

ವಿಜಯಪುರ: ಭಗೀರಥ ವೃತ್ತ ನಿರ್ಮಾಣಕ್ಕೆ ವೈಯುಕ್ತಿಕವಾಗಿ ರೂ. 5 ಲಕ್ಷ ಅನುದಾನ ನೀಡುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಘೋಷಿಸಿದ್ದಾರೆ. ನಗರದಲ್ಲಿ ಡಾ. ಬಿ. ಆರ್.ಅಂಬೇಡ್ಕರ್ ರಸ್ತೆಯ(ಸ್ಟೇಶನ್ ರೋಡ) ನವರತ್ನ ಹೋಟೆಲ್ ಬಳಿ ಭಗೀರತ ಮಹರ್ಷಿ ವೃತ್ತ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದ ಅವರು, ನಾಳೆಯೇ ಮುಖಂಡರು ಬಂದು ಹಣ ಪಡೆದುಕೊಳ್ಳಿ ಎಂದು ಹೇಳಿದರು. ಭಗೀರಥರು ಪೌರಾಣಿಕ ರಾಜನಾಗಿದ್ದರು.  ಹಿಂದೂ ನದಿ ದೇವತೆ ಗಂಗಾ ಎಂದು ನಿರೂಪಿಸಲ್ಪಟ್ಟ ಪವಿತ್ರ ನದಿ.  ಪವಿತ್ರ […]

ವಿಜಯಪುರದಲ್ಲಿ ಬ್ರಾಹ್ಮಣ ಶಕ್ತಿ ಸಂಗಮ- 2023 ಕಾರ್ಯಕ್ರಮ- ನಾನಾ ಸ್ವಾಮೀಜಿ ಗಣ್ಯರು ಭಾಗಿ

ವಿಜಯಪುರ: ನಾವು ಬ್ರಾಹ್ಮಣರು ನಮ್ಮನ್ನು ಹುಟ್ಟಿಸಿದ ಭಗವಂತನೇ ನಮ್ಮನ್ನು ಕಾಪಾಡುತ್ತಾನೆ. ನಾವು ನಮ್ಮ ಸಾಮರ್ಥ್ಯವನ್ನು ಕಾಪಾಡಿಕೊಂಡು ಇನ್ನೊಬ್ಬರಿಗೆ ಉಪದೇಶ ಮಾಡಬೇಕು ಎಂದು ಹುಣಸಿಹೊಳೆ ಕಣ್ವ ಮಠದ ಪೀಠಾಧಿಪತಿ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥ ಸ್ವಾಮೀಜಿಗಳು ಹೇಳಿದರು. ನಗರದ ಶ್ರೀ ಕಂದಗಲ್ ಹಣಮಂತರಾಯ ರಂಗಮಂದಿರದ ಶ್ರೀ ಭಾಸ್ಕರಾಚಾರ್ಯ ವೇದಿಕೆಯಲ್ಲಿ ನಡೆದ ಬ್ರಾಹ್ಮಣ ಶಕ್ತಿಸಂಗಮ- 2023 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಾಹ್ಮಣರು ಇನ್ನೊಬ್ಬರನ್ನು ರಕ್ಷಣೆ ಮಾಡಬೇಕು.  ನಮ್ಮ ರಕ್ಷಣೆಯನ್ನು ಪರಮಾತ್ಮ ಮಾಡುತ್ತಾನೆ.  ಬ್ರಾಹ್ಮಣರಿಗೆ ಆ ಪರಶುರಾಮನ ಆಶಿರ್ವಾದ ಇದೆ.  ನಾವು […]

ಈ ವರ್ಷ ಉತ್ತಮ ಮಳೆಯಿದೆ, ಕೊರೊನಾ, ವೃದ್ಧಾಶ್ರಮಗಳು ಕಡಿಮೆಯಾಗಲಿವೆ, ಭೂಕಂಪ, ಪ್ರಳಯದ ಆತಂಕವಿದೆ, ಸೈನಿಕರಿಗೆ ಗೆಲುವಿದೆ- ಬಬಲಾದಿ ಕಾರ್ಣಿಕ ಭವಿಷ್ಯ

ವಿಜಯಪುರ: ಕಾಲಜ್ಞಾನದ ಭವಿಷ್ಯಕ್ಕೆ ಹೆಸರಾಗಿರುವ ಬಸವನಾಡು ವಿಜಯಪುರ ಜಿಲ್ಲೆಯ ಕೃಷ್ಣಾ ನದಿ ತೀರದ ಹೊಳೆ ಬಬಲಾದಿ ಶ್ರೀ ಸದಾಶಿವ ಮಠಾಧೀಶ ಶ್ರೀ ಸಿದ್ಧರಾಮಯ್ಯ 2023-24ರ ಭವಿಷ್ಯ ನುಡಿದಿದ್ದು, ಅದರಲ್ಲಿನ ಬಹುತೇಕ ಅಂಶಗಳು ಜನಸಾಮಾನ್ಯರಿಗೆ ನೆಮ್ಮದಿ ತರುವಂತಿವೆ. ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಶ್ರೀ ಸದಾಶಿವ ಮುತ್ಯಾನ ಜಾತ್ರೆ ಪ್ರತಿ ವರ್ಷ ಮಹಾಶಿವರಾತ್ರಿಯಂದು ನಡೆಯುತ್ತಿದ್ದ, ಇಲ್ಲಿ ಮದ್ಯಾರಾಧನೆ ತಲೆತಲಾಂತರಗಳಿಂದಲೂ ಮುಂದುವರೆದುಕೊಂಡು ಬಂದಿದೆ.  ಈ ಹಿಂದೆ ಕೊರೊನಾ, ನಾನಾ ಬೆಂಕಿ, ಭೂಕಂಪ, ಜಲಪ್ರಳಯಗಳು, ರಾಜಕೀಯ ಪಲ್ಲಟಗಳ ಕುರಿತು ಇಲ್ಲಿನ ಕಾರ್ಣಿಕರು ನುಡಿದಿದ್ದ […]