ಉದ್ಭವ ಲಿಂಗಕ್ಕೆ ಮಧ್ಯರಾತ್ರಿ ಸೊಂಟದವರೆಗೆ ನೀರಿನಲ್ಲಿ ನಿಂತು ಪೂಜೆ ಸಲ್ಲಿಸಿದ ಕಳ್ಳಕವಟಗಿ ಗ್ರಾಮಸ್ಥರು: ತುಬಚಿ ಬಬಲೇಶ್ವರ ಏತನೀರಾವರಿಗೆ ಶ್ಲಾಘನೆ

ವಿಜಯಪುರ: ಮಹಾಶಿವರಾತ್ರಿ ಶಿವನ ಭಕ್ತರ ಪಾಲಿಗೆ ಸಂತಸ, ಸಂಭ್ರಮಕ್ಕೆ ಅವಕಾಶ ಕಲ್ಪಿಸುತ್ತದೆ. ರಾತ್ರಿಯಿಡಿ ಜಾಗರಣೆ ಮಾಡುವ ಶಿವಭಕ್ತರು ತಮಗೆ, ತಮ್ಮ ಕುಟುಂಬಕ್ಕೆ ಮತ್ತು ನಾಡಿಗೆ ಒಳಿತಾಗಲಿ ಎಂದು ನಾನಾ ರೀತಿಯಲ್ಲಿ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಬಸವನಾಡು ವಿಜಯಪುರ ಜಿಲ್ಲೆಯ ಈ ಭಾಗದಲ್ಲಿ ಮಹಾಶಿವರಾತ್ರಿಗೆ ವಿಶೇಷ ಮೆರಗು ನೀಡಿದ್ದು ಆ ಒಂದು ನೀರಾವರಿ ಯೋಜನೆ. ಪ್ರತಿವರ್ಷ ಹೊರಗಡೆ ಬೋರವೆಲ್ ನಿಂದ ನೀರು ತಂದು ಉದ್ಭವ ಶಿವಲಿಂಗ ಪೂಜೆ ನೆರವೇರಿಸುತ್ತಿದ್ದ ಗ್ರಾಮಸ್ಥರ ಪಾಲಿಗೆ ಈ ಬಾರಿ ಸ್ವತ ಕೃಷ್ಣೆ ಹರಿದು […]

ಮಹಾಶಿವರಾತ್ರಿ ದಿನ ಶಿವನ ಮೊರೆ ಹೋದ ಕಾಂಗ್ರೆಸ್ ನಾಯಕರು- ಬಸವನಾಡಿನ 770 ಲಿಂಗದ ದೇವಸ್ಥಾನದಲ್ಲಿ ಸುರ್ಜೆವಾಲಾ ಎಂಬಿಪಿ, ಜಾರಕಿಹೊಳಿ ವಿಶೇಷ ಪೂಜೆ

ವಿಜಯಪುರ: ಚುನಾವಣೆ ಸಮೀಪಿಸುತ್ತಿದ್ದಂತೆ ನಾನಾ ಪಕ್ಷಗಳ ಪ್ರಚಾರವೂ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ.  ಈ ಮಧ್ಯೆ, ವಿಜಯಪುರ ಪ್ರವಾಸದಲ್ಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ ಸಿಂಗ್ ಸುರ್ಜೆವಾಲಾ ಅವರು ಮಹಾಶಿವರಾತ್ರಿಯ ಅಂಗವಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತೀತರ ಮುಖಂಡರೊಂದಿಗೆ ಟೆಂಪಲ್ ರನ್ ಮಾಡಿದರು. ವಿಜಯಪುರ ನಗರದ ಬಿ.ಎಲ್.ಡಿ.ಇ ಬಳಿ ಇರುವ 770 ಲಿಂಗಗಳ ಗುಡಿಗೆ ಭೇಟಿ ನೀಡಿದ ಅವರು ಸುಮಾರು ಹೊತ್ತು ದೇವರ ಪೂಜೆ ನಡೆಸಿದರು.  ಅಲ್ಲದೇ, ರಾಜ್ಯ ಬಿಜೆಪಿ ಸರಕಾರ ತೊಲಗಿ […]

ಬಸವ ನಾಡಿನಲ್ಲಿ ಜಿಲ್ಲಾಡಳಿತದಿಂದ ಸಂತ ಸೇವಾಲಾಲ ಜಯಂತಿ ಆಚರಣೆ- ಶಾಸಕ ಡಾ. ದೇವಾನಂದ ಚವ್ಹಾಣ ಚಾಲನೆ

ವಿಜಯಪುರ: ಸಂತ ಸೇವಾಲಾಲ ಅವರ ಅನುಕರಣೆಯಂತೆ ಇಂದು ನಾವು ಸತ್ಯ, ಅಹಿಂಸೆ, ದಯೆ, ಕರುಣೆಗಳನ್ನು ಪಾಲಿಸುವ ಮೂಲಕ ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಧರ್ಮಾತೀತರಾಗಿ ಬಾಳೋಣ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ಡಾ. ದೇವಾನಂದ ಚವ್ಹಾಣ ಹೇಳಿದರು. ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸಂತ ಸೇವಾಲಾಲ ಜಯಂತಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,ಬಂಜಾರ ಸಮಾಜದ ಏಳ್ಗೆಗೆ ಶ್ರಮಿಸುವ ಅವಶ್ಯಕತೆ ಇದೆ. […]

ಶಾಂತಿನಿಕೇತನ ಶಾಲೆಯಲ್ಲಿ ಮಾತಾ-ಪಿತಾ ಪಾದಪೂಜಾ ಕಾರ್ಯಕ್ರಮ- ಪ್ರಜ್ಞಾನಂದ ಸ್ವಾಮೀಜಿ ಚಾಲನೆ

ವಿಜಯಪುರ: ನಗರದ ಪ್ರತಿಷ್ಠಿತ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಾತಾ-ಪಿತಾ ಪಾದಪೂಜಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜ್ಞಾನಯೋಗಾಶ್ರಮದ ಶ್ರೀ ಪ್ರಜ್ಞಾನಂದ ಸ್ವಾಮಿಗಳು, ವಿದ್ಯಾರ್ಥಿಗಳಿಗೆ ಪಾದಪೂಜೆಯ ವಿಧಿ-ವಿಧಾನಗಳನ್ನು ತಿಳಿಸಿದರು.  ಅಲ್ಲದೇ, ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ನೀಡಲು ಅನುಕಾಲವಾಗುತ್ತದೆ.  ಮಕ್ಕಳು ತಂದೆ, ತಾಯಿ, ಗುರು, ಹಿರಿಯರಿಗೆ ಗೌರವವನ್ನು ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು.  ಪೂಜೆ ಪ್ರಾರ್ಥನೆ ಮೊದಲಾದವುಗಳನ್ನು ಕಲಿಯಬೇಕು.  ನಮ್ಮ ಭಾರತೀಯ ಸಂಸ್ಕತಿ ಸಂಪ್ರದಾಯವನ್ನು ಮರೆಯಬಾರದು ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷೆ ಶೀಲಾ […]

ಜಂಗಮ ಶಬ್ದಕ್ಕೆ ಅರ್ಥ ಬರುವಂತೆ ಜೀವನ ಸಾಗಿಸಿದ ಸಿದ್ದೇಶ್ವರ ಶ್ರೀಗಳು- ಶ್ರೀ ಗುರು ಬಸವಲಿಂಗ ಸ್ವಾಮೀಜಿ

ವಿಜಯಪುರ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ವತಿಯಿಂದ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆ ಹಾಗೂ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗರದ ಆನಂದ ಮಹಲ್ ಸ್ಮಾರಕದಲ್ಲಿ ಆಯೋಜಿಸಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಜಯಪುರದ ಶ್ರೀ ಗುರು ಬಸವಲಿಂಗ ಸ್ವಾಮೀಜಿಗಳು ಗುರು ನಮನ ಸಲ್ಲಿಸಿ ಮಾತನಾಡಿ, ಸಿದ್ದೇಶ್ವರ ಶ್ರೀಗಳ ಕರ್ಮಭೂಮಿ ವಿಜಯಪುರ ನಗರದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ […]

ಅಡುಗೆ ತಯಾರಿ ಕೇವಲ ಶಾಸ್ತ್ರವಷ್ಟೇ ಅಲ್ಲ, ಕಲೆಯೂ ಹೌದು: ಡಾ. ಎಂ. ಎಸ್. ಮದಭಾವಿ

ವಿಜಯಪುರ: ಮನುಷ್ಯನ ಬದುಕಿಗೆ ಅಗತ್ಯವಾದ ಅಡುಗೆ ತಯಾರಿ ಒಂದು ಶಾಸ್ತ್ರ ಅಷ್ಟೇ ಅಲ್ಲ ಕಲೆಯೂ ಹೌದು ಎಂದು ಬಿ.ಎಲ್.ಡಿ.ಇ. ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ.ಎಸ್.ಮದಭಾವಿ ಹೇಳಿದರು. ಇಂಟ್ಯಾಚ್ ಮತ್ತು ಹಳಕಟ್ಟಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಖಾನಾ ಖಜಾನಾ ಮೈ ಫುಡ್ ಹೇರಿಟೇಜ್ ಚಿತ್ರ ಬಿಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬದುಕಿನ ಅವಿಭಾಜ್ಯ ಅಂಗವಾದ ಆಹಾರ ತಯಾರಿಕೆಯ ಕಲೆಯನ್ನು ಚಿತ್ರದ ಮೂಲಕ ವ್ಯಕ್ತಪಡಿಸುವುದು […]

ಹೊಗಳಿ ನನ್ನನ್ನು ಹೊನ್ನ ಶೂಲಕ್ಕೇರಿಸಬೇಡಿ- ಬಸವಣ್ಣನವರ ಕಾಲಿನ ಧೂಳಿಗೂ ನಾನು ಸಮನಲ್ಲ- ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ- ಸಿಎಂ ಬೊಮ್ಮಾಯಿ

ವಿಜಯಪುರ: ನನಗೆ ಹೊಗಳಿಕೆ ಎಂದರೆ ಬಹಳ ಭಯ.  ತೆಗಳಿಕೆ ಎಂದರೆ ಬಹಳ ಇಷ್ಟ.  ತೆಗಳಿಕೆ, ಟೀಕೆಗಳನ್ನು ಮೆಟ್ಟಿಲಾಗಿ ಮಾಡಿಕೊಂಡು ಯಶಸ್ಸು ಹೇಗೆ ಸಾಧಿಸಬೇಕು ಎಂಬುದು ನನಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಹಡಪದ ಸಮುದಾಯದ ಜನ ಜಾಗೃತಿ ಸಮಾವೇಶ ಮತ್ತು ಸಮುದಾಯ ಭವನಕ್ಕೆ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ ಅವರು, ಹೊಗಳಿಕೆಗಳು ಬಹಳ ದಾರಿ ತಪ್ಪಿಸುತ್ತವೆ.  ದಯವಿಟ್ಟು ನಾನು ಭೂಮಿಯ ಮೇಲೆ ಇದ್ದೇನೆ.  ಭೂಮಿಯ […]

ದ್ರಾಕ್ಷಿ ನಾಡಿನಲ್ಲಿ ಸಂಭ್ರಮದ ಕಲಿಕಾ ಹಬ್ಬ- ಮಕ್ಕಳಲ್ಲಿರುವ ಪ್ರತಿಭಾನ್ವೇಷಣೆಗೆ ಪೂರಕವಾದ ಕಾರ್ಯಕ್ರಮ

ವಿಜಯಪುರ: ಕಲಿಕಾ ಹಬ್ಬ ಮಕ್ಕಳು ಆಟಗಳೊಂದಿಗೆ ಅಕ್ಷರ ಕಲಿಯಲು ಪ್ರೋತ್ಸಾಹ ನೀಡುತ್ತಿದೆ ಎಂದು ಎಂದು ನೊಡಲ್ ಅಧಿಕಾರಿ ಎಂ. ಎಂ. ಮಕಾನದಾರ ಹೇಳಿದರು. ಬಸವನಾಡು ವಿಜಯಪುರ ಜಿಲ್ಲೆಯ ದ್ರಾಕ್ಷಿನಾಡು ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಅವರು‌ ಮಾತನಾಡಿದರು. ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ವಿಜಯಪುರ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಂಯುಕ್ತವಾಗಿ ಕ್ಲಸ್ಟರ್ ಮಟ್ಟದ […]

ಮೊಬೈಲ್ ಗೀಳು- ಕವನದ ಮೂಲಕ ವಾಸ್ತವಿಕ ಪರಿಸ್ಥಿತಿಯನ್ನು ಬಿಚ್ಚಿಟ್ಟ ಖ್ಯಾತ ವೈದ್ಯ ಡಾ. ಅರುಣ ಚಂ. ಇನಾಮದಾರ

ವಿಜಯಪುರ: ಮೊಬೈಲ್ ಗೀಳು ಈಗ ಸರ್ವವ್ಯಾಪಿಯಾಗಿದೆ.  ಹಲವಾರು ರೀತಿಯಲ್ಲಿ ಬಹುಪಯೋಗಿಯಾಗಿದ್ದರೂ, ಅನೇಕ ರೀತಿಯಲ್ಲಿ ತರಹೇವಾರಿ ಸಮಸ್ಯೆಗಳ ಸೃಷ್ಠಿಗೂ ಕಾರಣವಾಗಿದೆ. ಎಲ್ಲ ವಯೋಮಾನದವರನ್ನು ತನ್ನ ಮೇಲೆ ಅವಲಂಬಿತರಾಗುವಂತೆ ಮಾಡುತ್ತಿರುವ ಮೊಬೈಲ್ ಗೀಳು ಮತ್ತು ಅದರ ವಾಸ್ತವ ಪರಿಸ್ಥಿತಿ ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಮತ್ತು ಚರ್ಮರೋಗ ಖ್ಯಾತ ವೈದ್ಯ ಡಾ. ಅರುಣ ಚಂ. ಇನಾಮದಾರ ಕವನದ ಮೂಲಕ ಬಿಚ್ಚಿಟ್ಟಿದ್ದಾರೆ. ಡಾ. ಅರುಣ ಚಂ. ಇನಾಮದಾರ ರಚಿಸಿರುವ ಇಂದಿನ […]

ವಿರಾಗಿ ಚಲನಚಿತ್ರ ವೀಕ್ಷಿಸಿದ ಬಸವನಾಡಿನ ನಾನಾ ಮಠಾಧೀಶರು

ವಿಜಯಪುರ: ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಸಮಾಜ ಚಿಂತಕರು, ಶಿಕ್ಷಣ ಮತ್ತು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಾನಗಲ್ಲ ಕುಮಾರಸ್ವಾಮೀದಿಗಳ ಚಲನಚಿತ್ರ ವಿರಾಗಿ ವಿಜಯಪುರ ನಗರದಲ್ಲಿ ಪ್ರದರ್ಶನ ಕಾಣುತ್ತಿದೆ. ನಗರದ ಅಮೀರ್ ಸಿನೇಮಾ ಮಂದಿರದಲ್ಲಿ ಪ್ರದರ್ಶನವಾಗುತ್ತಿರುವ ಈ ಚಲನಚಿತ್ರವನ್ನು ಮಸೂತಿ, ಮಮದಾಪುರ, ಬಸವನ ಬಾಗೇವಾಡಿ, ಆಲಮೇಲ, ಹತ್ತಳ್ಳಿ, ಮನಗೂಳಿ, ತಡವಲಾ ಸೇರಿದಂತೆ ನಾನಾ ಮಠಾಧೀಶರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.