ಬಸವ ನಾಡಿನಲ್ಲಿ ಜೆ. ಪಿ. ನಡ್ಡಾ ಪ್ರವಾಸ- ಜ್ಞಾನಯೋಗಾಶ್ರಮಕ್ಕೆ ಭೇಟಿ- ಲಿಂ. ಸ್ವಾಮಿ ಸಿದ್ಧೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಕೆ

ವಿಜಯಪುರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಬಸವನಾಡು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಭರ್ಜರಿಯಾಗಿಯೇ ಕಮಲ ಪಾಳೆಯದಲ್ಲಿ ಹೊಸ ಹುಮ್ಮಸ್ಸು ತುಂಬಿದ್ದಾರೆ.  ದೆಹಲಿಯಿಂದ ಕಲಬುರಗಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಅವರು, ನಂತರ ಕಲಬುರಗಿಯಿಂದ ವಿಜಯಪುರಕ್ಕೆ ವಿಶೇಷ ಹೆಲಿಕಾಪ್ಟರ್ ನಲ್ಲಿ ಆಗಮಿಸಿದರು.  ಸೈನಿಕ ಶಾಲೆಯ ಅವರಣದಲ್ಲಿ ಉಪಸ್ಥಿತರಿದ್ದ ಬಿಜೆಪಿ ನಾಯಕರು ನಡ್ಡಾ ಅವರಿಗೆ ಹೃತ್ಪೂರ್ವಕ ಸ್ವಾಗತ ಕೋರಿದರು. ವಿಜಯಪುರ ಸೈನಿಕ ಶಾಲೆಯಿಂದ ನೇರವಾಗಿ ಜ್ಞಾನಯೋಗಾಶ್ರಮಕ್ಕೆ ಆಗಮಿಸಿದ ಅವರು, ಪ್ರಣವ ಮಂಟಪಕ್ಕೆ ಭೇಟಿ ನೀಡಿ ಪ್ರದಕ್ಷಿಣೆ ಹಾಕಿದರು.  […]

ಸಿಂದಗಿ ತಹಸೀಲ್ದಾರ ಕಚೇರಿಯಲ್ಲಿ ಶ್ರೀ ಮಹಾಯೋಗಿ ವೇಮನ್ ಜಯಂತಿ ಆಚರಣೆ

ವಿಜಯಪುರ: ಶ್ರೀ ಮಹಾಯೋಗಿ ವೇಮನ್ ಜಯಂತಿಯನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಹಸೀಲ್ದಾರಕಚೇರಿಯಲ್ಲಿ ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು.  ಗ್ರೇಡ್-2 ತಹಸೀಲ್ದಾರ ಪ್ರಕಾಶ ಸಿಂದಗಿ ಶ್ರೀ ಮಹಾಯೋಗಿ ವೇಮನ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಬಸವರಾಜ ಸೋಂಪುರ ಉಪನ್ಯಾಸ ನೀಡಿದರು.  ಸಿರಸ್ತೆದಾರ ಸುರೇಶ ಮ್ಯಾಗೇರಿ, ರೆಡ್ಡಿ ಸಮಾಜದ ತಾಲೂಕಾಧ್ಯಕ್ಷ ಮುಖಂಡರಾದ ಚಂದ್ರಶೇಖರ ದೇವರಡ್ಡಿ, ಸಮಾಜ ಮುಖಂಡರಾದ ರವಿ ಮಂಗಳೂರ, ಬಸವರಾಜ ಕೋಳೂರ, ಮಲಕನಗೌಡ ಪಾಟೀಲ, ಅನಂತರಡ್ಡಿ ದೇವರೆಡ್ಡಿ, ರಾಜೇಂದ್ರರೆಡ್ಡಿ ದೇಸಾಯಿ ಮತ್ತು ತಾಲೂಕು ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

ಡಾ. ಚನ್ನಪ್ಪ ಕಟ್ಟಿ ಅವರ ಕಿನ್ನೂರಿ ಕಥೆ ಓದುಗರ ಮನಮುಟ್ಟುವಂತಿದೆ- ವಿಮರ್ಶಕ ಡಾ. ರಂಗನಾಥ ಕಂಚನಕುಂಟೆ

ವಿಜಯಪುರ: ಗ್ರಾಮೀಣ ಬದುಕಿನ ವಾಸ್ತವ ಕಲೆಯನ್ನು ಡಾ. ಚನ್ನಪ್ಪ ಕಟ್ಟಿ ತಮ್ಮ ಕಿನ್ನೂರಿ ಕಥೆಗಳಲ್ಲಿ ಓದುಗರ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಎಂದು ವಿಮರ್ಶಕ ಡಾ. ರಂಗನಾಥ ಕಂಟನಕುಂಟೆ ಹೇಳಿದರು. ನಗರದಲ್ಲಿ ವಚನಪಿತಾಮಹ ಡಾ. ಫ.ಗು.ಹಳಟ್ಟಿ ಸಂಶೋಧನ ಕೇಂದ್ರ ಮತ್ತು ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆ ಸಹಯೋಗದಲ್ಲಿ ನಡೆದ ಡಾ. ಚನ್ನಪ್ಪ ಕಟ್ಟಿ ರಚಿಸಿರುವ ಕಥಾಕಿನ್ನುರಿ ಹಾಗೂ ಯುದ್ಧಕಾಲದ ಹುಡುಗಿಯರು ಗ್ರಂಥ ಲೋಕಾರ್ಪಣೆ ಮತ್ತು ನೆಲೆ ಸಿನಿ ಕ್ರಿಯೆಶನ್ಸ್ ತಯಾರಿಸಿದ ಊಧ್ರ್ವರೇತ ಟೆಲಿ ಫಿಲ್ಮ್ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ. […]

ಪಕ್ಷಗಳು ಜಾತಿ ಧರ್ಮದ ವಿಚಾರಗಳಿಗೆ ಪ್ರಚೋದನೆ ಕೊಡಬಾರದು- ಮೋದಿ ಕಾರ್ಯ ಶ್ಲಾಘನೀಯ- ರಂಭಾಪುರಿ ಜಗದ್ಗುರು

ವಿಜಯಪುರ: ಚುನಾವಣೆ ವರ್ಷದಲ್ಲಿ ಜಾತಿ, ಧರ್ಮದ ವಿಚಾರಗಳು ಅತಿರೇಕಕ್ಕೆ ಹೋಗುತ್ತಿರುವುದು ಸರಿಯಲ್ಲ ಎಂದು ಬಾಳೆಹೊನ್ನೂರು ರಂಭಾಪುರಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ. ವಿಜಯ.ಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಈಗ ಎಲೆಕ್ಷನ್ ಹತ್ತಿರವಾಗುತ್ತಿದೆ.  ಈ ಸಂದರ್ಭದಲ್ಲಿ ಪಕ್ಷಗಳು ಜಾತಿ, ಮತ್ತು ಧರ್ಮದ ವಿಚಾರವನ್ನು  ಅತಿರೇಕವಾಗಿ ಸಂಘರ್ಷ ಮಾಡುತ್ತಿರುವುದನ್ನು ಜನ ನೋಡಿ ಬೇಸತ್ತಿದ್ದಾರೆ.  ಚುನಾವಣೆ ಸಂದರ್ಭದಲ್ಲೇ ಇದನ್ನು ಮಾಡಬಾರದು ಎಂದು ಹೇಳಿದರು. ಒಂದು ಸಮಾಜ […]

ಸರಳವಾಗಿ ನಡೆದ ಬಸವನಾಡಿನ ಗ್ರಾಮದೇವತೆ ಶ್ರೀ ಸಿದ್ಧರಾಮೇಶ್ವರ ಜಾತ್ರೆ- ಯತ್ನಾಳ ದಂಪತಿಯಿಂದ ವಿಶೇಷ ಪೂಜೆ

ವಿಜಯಪುರ: ಶತಮಾನದ ಇತಿಹಾಸವಿರುವ ಬಸವನಾಡು ವಿಜಯಪುರ ನಗರದ ಗ್ರಾಮ ದೇವತೆ ಶ್ರೀಸಿದ್ಧರಾಮೇಶ್ವರ ಜಾತ್ರೆ ಈ ಬಾರಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿರುವ ಹಿನ್ನೆಲೆಯಲ್ಲಿ ಸರಳವಾಗಿ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಜಾತ್ರೆಗೆ ಅತ್ಯಂತ ಸರಳವಾಗಿ ನಡೆದಿತ್ತು.  ಈ ಬಾರಿಯೂ ಶ್ರೀಗಳ ಗೌರವಾರ್ಥ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಜಾತ್ರೆ ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿರಲಿದೆ ಎಂದು ಮೊದಲೇ ತಿಳಿಸಿದ್ದರು.  ಈ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ […]

ಯುವಕರು ದೇಶದ ಅಭಿವೃದ್ದಿಗೆ ಕೈ ಜೋಡಿಸಲು ಸಂಸದ ರಮೇಶ ಜಿಗಜಿಣಗಿ ಕರೆ

ವಿಜಯಪುರ: ಇಂದಿನ ಯುವ ಪೀಳಿಗೆ ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಉದ್ಯೋಗವಂತರಾಗಿ ದೇಶದ ಅಭಿವೃದ್ದಿ ಕೈ ಜೋಡಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಕರೆ ನೀಡಿದರು. ವಿಜಯಪುರ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರ ಸಂವಹನ ಇಲಾಖೆ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆ, ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ […]

ನಾಡಿನಲ್ಲಿ ಬಸವಣ್ಣ, ಕೆಂಪೇಗೌಡರ ಚಿಂತನೆ ಹರಿಯಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಚಿಂತನೆ ನಾಡಿನಲ್ಲಿ ಹರಿಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ವಿಧಾನಸಭಭೆಯ ಮುಂಭಾಗದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರ ಪುತ್ಥಳಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ಇಬ್ಬರೂ ಮಹಾನ್ ಪುರುಷರ ಆಡಳಿತ ಮತ್ತು ಆಧ್ಯಾತ್ಮಿಕ ಚಿಂತನೆ ನಮ್ಮ ನಾಡಿನಲ್ಲಿ ಬರಬೇಕು. ಈ ಶಕ್ತಿ ಸೌಧದಿಂದ ಅದು ಹರಿಯಬೇಕು. ಆ ವಿಚಾರಗಳು ಹರಿದು ಕರ್ನಾಟಕ ಸಮಗ್ರವಾಗಿ […]

ಚಿಮ್ಮಲಗಿ ಶ್ರೀ ನೀಲಕಂಠ ಸ್ಚಾಮೀಜಿ ಲಿಂಗೈಕ್ಯ- ಶುಕ್ರವಾರ ಸಂಜೆ ಅಂತ್ಯಕ್ರಿಯೆ

ವಿಜಯಪುರ: ವಿಜಯಪುರ ಜಿಲ್ಲೆಯ ಚಿಮ್ಮಲಗಿ‌-2 ಗ್ರಾಮದ ಶ್ರೀ ನೀಲಕಂಠ ಸ್ವಾಮೀಜಿ‌ (92) ಲಿಂಗೈಕ್ಯರಾಗಿದ್ದಾರೆ. ನಿಡಗುಂದಿ ತಾಲೂಕಿನ‌ ಚಿಮ್ಮಲಗಿ- 2 ಗ್ರಾಮದ ಅರಳೆಲೆ ಕಟ್ಟಿಮನಿ ಹಿರೇಮಠದ ಪೀಠಾಧೀಪತಿಯಾಗಿದ್ದ ಶ್ರೀಗಳು ವಯೋಸಹಜ‌ ಖಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ಎರಡು ವರ್ಷಗಳಿಂದ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ‌ ಇ ಆಸ್ಪತ್ರೆಯ ವೈದ್ಯರಾದ ಫಿಜಿಷಿಯನ್ ಡಾ. ವಿಜಯಕುಮಾರ ವಾರದ ಮತ್ತು ಯುರೊಲಾಜಿಸ್ಟ್ ಡಾ. ಸಂತೋಷ ಪಾಟೀಲ ಅವರು ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡಿದ್ದರು. ಕಳೆದ ಸುಮಾರಯ ದಿನಗಳಿಂದ ಮಠದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರು, ರಾತ್ರಿ […]

ಲಿಂ. ಸ್ವಾಮಿ ಸಿದ್ದೇಶ್ವರ ಶ್ರೀಗಳು ಆಧ್ಯಾತ್ಮ ಜಗತ್ತಿನ ಅನರ್ಘ್ಯ ರತ್ನ- ಸಂಗಮೇಶ ಬಬಲೇಶ್ವರ

ವಿಜಯಪುರ: ಲಿಂ. ಸ್ವಾಮಿ ಸಿದ್ದೇಶ್ವರ ಶ್ರೀಗಳು ಆಧ್ಯಾತ್ಮ ಜಗತ್ತಿನ ಅನರ್ಗ್ಯ ರತ್ನರಾಗಿದ್ದಾರೆ ಎಂದು ಯುವ ಮುಖಂಡ ಮತ್ತು ಸಮಾಜ ಸೇವಕ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ. ಕೋಲ್ಹಾರ ತಾಲೂಕಿನ ಮುಳವಾಡ ಗ್ರಾಮದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಲಿಂ. ಸಿದ್ಧೇಶ್ವರ  ಮಹಾಸ್ವಾಮಿಗಳ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಶ್ರೀಗಳು ಈ ಶತಮಾನದ ಸಂತ.  ಜ್ಞಾನಯೋಗಿಯಾಗಿ ಆಧ್ಯಾತ್ಮಿಕ ಜಗತ್ತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ.  ಸ್ವಾಮೀಜಿ ಆಧ್ಯಾತ್ಮ ಜಗತ್ತಿನ ಅನರ್ಘ್ಯ ರತ್ನರಾಗಿದ್ದರು.  ಮೃದು ಮತ್ತು ಮಧುರವಾದ ಭಾಷೆಯಿಂದ ಅವರು ಅಬಾಲ ವೃದ್ಧರಾಗಿ ಎಲ್ಲರನ್ನೂ […]

ಲಿಂ. ಸ್ವಾಮಿ ಸಿದ್ಧೇಶ್ವರ ಶ್ರೀಗಳ ಗೌರವಾರ್ಥ ಈ ಬಾರಿ ಸರಳವಾಗಿ ಸಿದ್ಧರಾಮೇಶ್ವರ ಜಾತ್ರೆ ಆಚರಣೆ- ಯತ್ನಾಳ

ವಿಜಯಪುರ: ಬಸವ ನಾಡಿನ ನಡೆದಾಡಿದ ದೇವರ ಲಿಂ. ಸಿದ್ಧೇಶ್ವರ ಸ್ವಾಮೀಜಿಗಳ ಅಗಲಿಕೆಯಿಂದಾಗಿ ಈ ಬಾರಿ ವಿಜಯಪುರ ಗ್ರಾಮದ ದೇವತೆ ಶ್ರೀ ಸಿದ್ಧರಾಮೇಶ್ವರ ಜಾತ್ರೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶತಮಾನದ ಇತಿಹಾಸ ಹೊಂದಿರುವ ಸಂಕ್ರಮಣ ಜಾತ್ರೆಯನ್ನು ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ.  ಲಿಂ. ಸ್ವಾಮಿ ಸಿದ್ದೇಶ್ವರ ಶ್ರೀಗಳ ಅಗಲಿಕೆಯಿಂದಾಗಿ ಯಾವುದೇ ಸಂಭ್ರಮದ ಆಚರಣೆ ಬೇಡ ಎಂದು […]