ಯುವಕರು ದೇಶದ ಅಭಿವೃದ್ದಿಗೆ ಕೈ ಜೋಡಿಸಲು ಸಂಸದ ರಮೇಶ ಜಿಗಜಿಣಗಿ ಕರೆ

ವಿಜಯಪುರ: ಇಂದಿನ ಯುವ ಪೀಳಿಗೆ ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಉದ್ಯೋಗವಂತರಾಗಿ ದೇಶದ ಅಭಿವೃದ್ದಿ ಕೈ ಜೋಡಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಕರೆ ನೀಡಿದರು. ವಿಜಯಪುರ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರ ಸಂವಹನ ಇಲಾಖೆ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆ, ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ […]

ನಾಡಿನಲ್ಲಿ ಬಸವಣ್ಣ, ಕೆಂಪೇಗೌಡರ ಚಿಂತನೆ ಹರಿಯಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಚಿಂತನೆ ನಾಡಿನಲ್ಲಿ ಹರಿಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ವಿಧಾನಸಭಭೆಯ ಮುಂಭಾಗದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರ ಪುತ್ಥಳಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ಇಬ್ಬರೂ ಮಹಾನ್ ಪುರುಷರ ಆಡಳಿತ ಮತ್ತು ಆಧ್ಯಾತ್ಮಿಕ ಚಿಂತನೆ ನಮ್ಮ ನಾಡಿನಲ್ಲಿ ಬರಬೇಕು. ಈ ಶಕ್ತಿ ಸೌಧದಿಂದ ಅದು ಹರಿಯಬೇಕು. ಆ ವಿಚಾರಗಳು ಹರಿದು ಕರ್ನಾಟಕ ಸಮಗ್ರವಾಗಿ […]

ಚಿಮ್ಮಲಗಿ ಶ್ರೀ ನೀಲಕಂಠ ಸ್ಚಾಮೀಜಿ ಲಿಂಗೈಕ್ಯ- ಶುಕ್ರವಾರ ಸಂಜೆ ಅಂತ್ಯಕ್ರಿಯೆ

ವಿಜಯಪುರ: ವಿಜಯಪುರ ಜಿಲ್ಲೆಯ ಚಿಮ್ಮಲಗಿ‌-2 ಗ್ರಾಮದ ಶ್ರೀ ನೀಲಕಂಠ ಸ್ವಾಮೀಜಿ‌ (92) ಲಿಂಗೈಕ್ಯರಾಗಿದ್ದಾರೆ. ನಿಡಗುಂದಿ ತಾಲೂಕಿನ‌ ಚಿಮ್ಮಲಗಿ- 2 ಗ್ರಾಮದ ಅರಳೆಲೆ ಕಟ್ಟಿಮನಿ ಹಿರೇಮಠದ ಪೀಠಾಧೀಪತಿಯಾಗಿದ್ದ ಶ್ರೀಗಳು ವಯೋಸಹಜ‌ ಖಾಯಿಲೆಗಳಿಂದ ಬಳಲುತ್ತಿದ್ದರು. ಕಳೆದ ಎರಡು ವರ್ಷಗಳಿಂದ ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ‌ ಇ ಆಸ್ಪತ್ರೆಯ ವೈದ್ಯರಾದ ಫಿಜಿಷಿಯನ್ ಡಾ. ವಿಜಯಕುಮಾರ ವಾರದ ಮತ್ತು ಯುರೊಲಾಜಿಸ್ಟ್ ಡಾ. ಸಂತೋಷ ಪಾಟೀಲ ಅವರು ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡಿದ್ದರು. ಕಳೆದ ಸುಮಾರಯ ದಿನಗಳಿಂದ ಮಠದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರು, ರಾತ್ರಿ […]

ಲಿಂ. ಸ್ವಾಮಿ ಸಿದ್ದೇಶ್ವರ ಶ್ರೀಗಳು ಆಧ್ಯಾತ್ಮ ಜಗತ್ತಿನ ಅನರ್ಘ್ಯ ರತ್ನ- ಸಂಗಮೇಶ ಬಬಲೇಶ್ವರ

ವಿಜಯಪುರ: ಲಿಂ. ಸ್ವಾಮಿ ಸಿದ್ದೇಶ್ವರ ಶ್ರೀಗಳು ಆಧ್ಯಾತ್ಮ ಜಗತ್ತಿನ ಅನರ್ಗ್ಯ ರತ್ನರಾಗಿದ್ದಾರೆ ಎಂದು ಯುವ ಮುಖಂಡ ಮತ್ತು ಸಮಾಜ ಸೇವಕ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ. ಕೋಲ್ಹಾರ ತಾಲೂಕಿನ ಮುಳವಾಡ ಗ್ರಾಮದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಲಿಂ. ಸಿದ್ಧೇಶ್ವರ  ಮಹಾಸ್ವಾಮಿಗಳ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಶ್ರೀಗಳು ಈ ಶತಮಾನದ ಸಂತ.  ಜ್ಞಾನಯೋಗಿಯಾಗಿ ಆಧ್ಯಾತ್ಮಿಕ ಜಗತ್ತಿಗೆ ನೀಡಿದ ಕೊಡುಗೆ ಅನನ್ಯವಾಗಿದೆ.  ಸ್ವಾಮೀಜಿ ಆಧ್ಯಾತ್ಮ ಜಗತ್ತಿನ ಅನರ್ಘ್ಯ ರತ್ನರಾಗಿದ್ದರು.  ಮೃದು ಮತ್ತು ಮಧುರವಾದ ಭಾಷೆಯಿಂದ ಅವರು ಅಬಾಲ ವೃದ್ಧರಾಗಿ ಎಲ್ಲರನ್ನೂ […]

ಲಿಂ. ಸ್ವಾಮಿ ಸಿದ್ಧೇಶ್ವರ ಶ್ರೀಗಳ ಗೌರವಾರ್ಥ ಈ ಬಾರಿ ಸರಳವಾಗಿ ಸಿದ್ಧರಾಮೇಶ್ವರ ಜಾತ್ರೆ ಆಚರಣೆ- ಯತ್ನಾಳ

ವಿಜಯಪುರ: ಬಸವ ನಾಡಿನ ನಡೆದಾಡಿದ ದೇವರ ಲಿಂ. ಸಿದ್ಧೇಶ್ವರ ಸ್ವಾಮೀಜಿಗಳ ಅಗಲಿಕೆಯಿಂದಾಗಿ ಈ ಬಾರಿ ವಿಜಯಪುರ ಗ್ರಾಮದ ದೇವತೆ ಶ್ರೀ ಸಿದ್ಧರಾಮೇಶ್ವರ ಜಾತ್ರೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶತಮಾನದ ಇತಿಹಾಸ ಹೊಂದಿರುವ ಸಂಕ್ರಮಣ ಜಾತ್ರೆಯನ್ನು ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ.  ಲಿಂ. ಸ್ವಾಮಿ ಸಿದ್ದೇಶ್ವರ ಶ್ರೀಗಳ ಅಗಲಿಕೆಯಿಂದಾಗಿ ಯಾವುದೇ ಸಂಭ್ರಮದ ಆಚರಣೆ ಬೇಡ ಎಂದು […]

ಸುಕ್ಷೇತ್ರ ಗೋಕರ್ಣದ ಅರಬ್ಬಿ ಸಮುದ್ರದಲ್ಲಿ ಲಿಂ. ಸ್ವಾಮಿ ಸಿದ್ಧೇಶ್ವರ ಚಿತಾಭಸ್ಮ ವಿಸರ್ಜನೆ

ಕಾರವಾರ: ವಿಜಯಪುರ ಜ್ಞಾನಯೋಗಾಶ್ರಮದ ಲಿಂ. ಸ್ವಾಮಿ ಸಿದ್ಧೇಶ್ವರ ಅವರ ಚಿತಾಭಸ್ಮವನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಬಳಿ ಇರುವ ಅರಬ್ಬಿ ಸಮುದ್ರದಲ್ಲಿ ವಿಸರ್ಜನೆ ಮಾಡಲಾಯಿತು. ಬೆಳಿಗ್ಗೆ ವಿಜಯಪುರದಿಂದ ಶ್ರೀ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಾನಾ ಸ್ವಾಮೀಜಿಗಳು ಶ್ರೀಗಳ ಚಿತಾಭಸ್ಮದೊಂದಿಗೆ ಹೊರಟಿದ್ದರು.  ಮೊದಲಿಗೆ ಕೂಡಲ ಸಂಗಮದಲ್ಲಿ ಚಿತಾಭಸ್ಮ ವಿಸರ್ಜಿಸಿದ ಸ್ವಾಮೀಜಿಗಳು ಸಂಜೆ ಸುಕ್ಷೇತ್ರ ಗೋಕರ್ಣಕ್ಕೆ ಆಗಮಿಸಿದರು.  ನಂತರ ಇಲ್ಲಿನ ಅರಬ್ಬಿ ಸಮುದ್ರದಲ್ಲಿ ನಡೆದಾಡಿದ ದೇವರು ಶತಮಾನದ ಸಂತ ಎಂದೇ ಹೆಸರಾಗಿರುವ ಬಸವನಾಡಿನ ಲಿಂ. ಸ್ವಾಮಿ ಸಿದ್ಧೇಶ್ವರ […]

ಕೂಡಲ ಸಂಗಮದಲ್ಲಿ ಲಿಂ. ಸ್ವಾಮಿ ಸಿದ್ಧೇಶ್ವರ ಅಸ್ತಿ ವಿಸರ್ಜನೆ- ಶ್ರೀಗಳ ಇಚ್ಛೆಯಂತೆ ತ್ರಿವೇಣಿ ಸಂಗಮದಲ್ಲಿ ವಿಸರ್ಜನೆ- ಬಸವಲಿಂಗ ಸ್ವಾಮೀಜಿ

ಬಾಗಲಕೋಟೆ: ಲಿಂ. ಸ್ವಾಮಿ ಸಿದ್ಧೇಶ್ವರರ ಆಶಯದಂತೆ ಅವರ ಅಸ್ತಿಯನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐತಿಹಾಸಿಕ ಕೂಡಲ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು. ಬೆ. 7 ಗಂಟೆಯಿಂದ 8.17ರ ವರೆಗೆ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಐದು ಮಡಿಕೆಗಳಲ್ಲಿ ಸಿದ್ದೇಶ್ವರ ಶ್ರೀಗಳ ಇಚ್ಚೆಯಂತೆ ಅಸ್ಥಿ ಸಹಿತ ಚಿತಾಭಸ್ಮ ಸಂಗ್ರಹ ಮಾಡಿ ತರಲಾಗಿತ್ತು.  ಸುಮಾರು 900 ರಿಂದ 10000 ಜನರ ಸಮ್ಮುಖದಲ್ಲಿ ಎಲ್ಲ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮಲಪ್ರಭಾ, ಕೃಷ್ಣಾ ಮತ್ತು ಘಟಪ್ರಭಾ ತ್ರಿವೇಣಿ ನದಿಗಳು ಸೇರುವ ಸ್ಥಳದಲ್ಲಿ ಸುಮಾರು […]

ಬಸವನಾಡಿನ ನಡೆದಾಡಿದ ದೇವರು ಲಿಂ. ಸ್ವಾಮಿ ಸಿದ್ಧೇಶ್ವರ ಚಿತಾಭಸ್ಮ ಕೂಡಲ ಸಂಗಮ, ಗೋಕರ್ಣಕ್ಕೆ ರವಾನೆ

ವಿಜಯಪುರ: ನಡೆದಾಡಿವ ದೇವರು ಲಿಂ. ಸ್ವಾಮಿ ಸಿದ್ದೇಶ್ವರ ಅವರ ಅಂತ್ಯಕ್ರಿಯೆ ನಡೆದು ಏಳನೇ ದಿನದ ಹಿನ್ನೆಲೆಯಲ್ಲಿ ಶ್ರೀಗಳ ಆಶಯದಂತೆ ಅವರ ಚುತಾಭಸ್ಮವನ್ನು ನದಿ ಮತ್ತು ಸಾಗರದಲ್ಲಿ ವಿಸರ್ಜನೆ ಮಾಡುವ ಕಾರ್ಯ ಆರಂಭವಾಗಿದೆ. ವಿಜಯಪುರ ನಗರ ಜ್ಞಾನಯೋಗಾಶ್ರಮದಲ್ಲಿ ಶ್ರೀಗಳ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದ ಸ್ಥಳದಿಂದ ಸಂಗ್ರಹಿಸಲಾದ ಚಿತಾಭಸ್ಮವನ್ನು ಬೆಳಗ್ಗೆ 5 ಗಂಟೆಗೆ ಜ್ಞಾನ ಯೋಗಾಶ್ರಮದಿಂದ ವಿಶೇಷ ವಾಹನದಲ್ಲಿ ತೆಗೆದುಕೊಂಡು ಹೋಗಲಾಯಿತು.‌ 12ನೇ ಶತಮಾನದ ಸಾಮಾಜಿಕ ಹೋರಾಟಗಾರ ಅಣ್ಣ ಬಸವಣ್ಣನವರ ಐಕ್ಯ ಸ್ಥಳ ಕೂಡಲ ಸಂಗಮ ಹಾಗೂ ಸಂಜೆ […]

ಲಿಂ. ಸಿದ್ಧೇಶ್ವರ ಸ್ವಾಮೀಜಿ ಅಂತ್ಯಕ್ರಿಯೆ ಸ್ಥಳದ ದರ್ಶನ ಪಡೆದ ಸಿದ್ದಗಂಗಾ ಮಠಾಧೀಶರು, ಮಹಾದೇವ ಸಾಹುಕಾರ ಭೈರಗೊಂಡ, ವಿದ್ಯಾರ್ಥಿಗಳು

ವಿಜಯಪುರ: ಬಸವನಾಡಿನ ನಡೆದಾಡಿದ ದೇವರು ವಿಜಯಪುರ ಜ್ಞಾನಯೋಗಾಶ್ರಮದ ಲಿಂ. ಸಿದ್ದೇಶ್ವರ ಸ್ವಾಮೀಜಿ ಅವರ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ತುಮಕೂರು ಸಿದ್ದಗಂಗಾ ಸ್ವಾಮೀಜಿ ಭೇಟಿ ನೀಡಿದರು. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತ್ಯಕ್ರಿಯೆ ಮಾಡಿದ ಸ್ಥಳ ದರ್ಶನ ಮಾಡಿದ ಶ್ರೀ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ನಂತರ ನಮನ ಸಲ್ಲಿಸಿ ಎರಡು ಸುತ್ತು ಹಾಕಿದರು.  ನಂತರ ಸ್ವಾಮಿ ಸಿದ್ಧೇಶ್ವರ ಅವರು ವಾಸಿಸುತ್ತಿದ್ದ ಕೋಣೆಗೆ ತೆರಳಿ ಅಲ್ಲಿ ಸಂಗ್ರಸಿಹಿ ಇಡಲಾಗಿರುವ ಶ್ರೀಗಳ ಚಿತಾಭಸ್ಮದ ದರ್ಶನ ಪಡೆದರು. ಈ ಸಂದರ್ಭದಲ್ಲಿ […]

ಲಿಂ. ಸ್ವಾಮಿ ಸಿದ್ಧೇಶ್ವರ ಚಿತಾಭಸ್ಮ ಸಂಗ್ರಹ- ರವಿವಾರ ಸುಕ್ಷೇತ್ರ ಕೂಡಲ ಸಂಗಮ, ಗೋಕರ್ಣದಲ್ಲಿ ಅಸ್ತಿ ವಿಸರ್ಜನೆ- ಬಸವಲಿಂಗ ಸ್ವಾಮೀಜಿ

ವಿಜಯಪುರ: ಸೋಮವಾರ ಜನೇವರಿ 2 ರಂದು ವೈಕುಂಠ ಏಕಾದಶಿ ದಿನ ಲಿಂಗೈಕ್ಯರಾದ ಬಸವನಾಡಿನ ನಡೆದಾಡಿದ ದೇವರ ಚಿತಾಭಸ್ಮವನ್ನು ಜ್ಞಾನಯೋಗಾಶ್ರಮದ ಸ್ವಾಮೀಜಿಗಳು ಸಂಗ್ರಿಸಿದ್ದಾರೆ.  ಜ. 3 ರಂದು ರಾತ್ರಿ ಶ್ರೀಗಳ ಅಂತ್ಯಕ್ರಿಯೆ ನಡೆಸಲಾಗಿತ್ತು.  ಅಂತ್ಯಕ್ರಿಯೆ ನಡೆಸಿ ಮೂರು ದಿನಗಳಾದ ಹಿನ್ನೆಲೆಯಲ್ಲಿ ಜ್ಞಾನಯೋಗಾಶ್ರಮದಲ್ಲಿ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಾನಾ ಸ್ವಾಮೀಜಿ ಲಿಂ. ಸ್ವಾಮಿ ಸಿದ್ಧೇಶ್ವರ ಅವರ ಚಿತಾಭಸ್ಮ ಸಂಗ್ರಹಿಸಿದರು. ಮಣ್ಣಿನ ಮಡಿಕೆಗಳು ಸೇರಿದಂತೆ ಒಟ್ಟು ಏಳು ನಾನಾ ಪಾತ್ರೆಗಳಲ್ಲಿ ಚಿತಾಭಸ್ಮವನ್ನು ಸಂಗ್ರಹಿಸಿದ ಸ್ವಾಮೀಜಿಗಳು ಆ ಪಾತ್ರೆಗಳ ಮೇಲ್ಭಾಗದಲ್ಲಿ ಕೇಸರಿ ಬಣ್ಣದ ಬಟ್ಟೆಯನ್ನು […]