ಶತಮಾನದ ಸಂತನ ಕುರಿತು ವೈದ್ಯೆ ಡಾ. ವಿದ್ಯಾ ಪಾಟೀಲ ರಚಿಸಿದ ಕವನ

ವಿಜಯಪುರ: ನಡೆ, ನುಡಿ ಮೂಲಕ ಜನಮನಗೆದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಬಸವನಾಡು ವಿಜಯಪುರವಷ್ಟೇ ಅಲ್ಲ, ಇಡೀ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ಅಪಾರ ಭಕ್ತರನ್ನು ಹೊಂದಿದ್ದಾರೆ.   ಸ್ವಾಮೀಜಿಗಳ ಜೊತೆ ಬಾಲ್ಯದಿಂದಲೆ ಒಡನಾಟ ಹೊಂದಿರುವ ವೈದ್ಯ ಡಾ. ವಿದ್ಯಾ ಪಾಟೀಲ ತಾವು ಶ್ರೀಗಳಲ್ಲಿ ಕಂಡ ಗುಣಗಳನ್ನು ಲೇಖನಿಯ ಮೂಲಕ ಪ್ರಸ್ತುತ ಪಡಿಸಿದ್ದಾರೆ.  ಅವರು ರಚಿಸಿರುವ ಕವನ ಇಲ್ಲಿದೆ. ನಮ್ಮ ಸಿದ್ಧೇಶ್ವರ ಅಪ್ಪಗೋಳ್ ನಮ್ಮ ಸಿದ್ಧೇಶ್ವರ ಅಪಗೊಳ್ ನೀರೇಷ್ಟು ನಿಷ್ಕಲ್ಮಶ? ಅದಕ್ಕಿಂತಲೂ ನಿಷ್ಕಲ್ಮಶ ನಮ್ಮ ಸಿದ್ಧೇಶ್ವರ […]

ಸಿದ್ದೇಶ್ವರ ಶ್ರೀ ಗಳ ಅಂತ್ಯಕ್ರಿಯೆಗೆ ಶಾಂತಿಯಿಂದ ಸಹಕರಿಸಿ- ಸಿಎಂ ಬಸವರಾಜ ಬೊಮ್ಮಾಯಿ ಮನವಿ

ಬೆಂಗಳೂರು: ಸೋಮವಾರ ನಿಧನರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಎಲ್ಲಾ ಭಕ್ತರು ಶಾಂತಿ, ಸಂಯಮ ಹಾಗೂ ಶಿಸ್ತಿನಿಂದ ದರ್ಶನ ಪಡೆದು ಅಂತ್ಯಕ್ರಿಯೆಗೆ ಸಹರಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಅವರು ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ವಿಜಯಪುರ ಜಿಲ್ಲಾಡಳಿತ, ಎಲ್ಲಾ ಜನಪ್ರತಿನಿಧಿಗಳು, ಮುಖಂಡರಾದ ಎಂ.ಬಿ.ಪಾಟೀಲ್, ಬಸನಗೌಡರು, ಶಾಸಕರು ಎಲ್ಲರೂ ಅಚ್ಚುಕಟ್ಟಾಗಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು. ಸಿದ್ದೇಶ್ವರ ಶ್ರೀಗಳು ಒಂದು ಸಂಸ್ಕೃತಿ ಯನ್ನೇ ಬಿಟ್ಟುಹೋಗಿದ್ದಾರೆ ವಿಜಯಪುರದ ಜನ ದೊಡ್ಡ ಪ್ರಮಾಣದಲ್ಲಿ […]

ಬಸನನಾಡಿನ ನಡೆದಾಡುವ ದೇವರ ಧ್ಯಾನ ಚಿತ್ರ ಸಂಯೋಜನೆ ಮಾಡಿದ ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಶರಣು ಚೆಟ್ಟಿ

ವಿಜಯಪುರ: ಬಸವನಾಡಿನ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮಿ ಎಂದರೆ ಸಾಕು ಧ್ಯಾನ ಮತ್ತು ಧ್ಯಾನದಿಂದಾಗುವ ಲಾಭಗಳನ್ನು ಭಕ್ತರಿಗೆ ದಾಸೋಹ ಮಾಡಿದರವರು.  ಅವರಿಗೆ ಬಾಲ್ಯದಲ್ಲಿಯೇ ದೈವದತ್ತವಾಗಿ ಬಂದಿದ್ದ ಧ್ಯಾನ ಮತ್ತು ಈಗ ಅಂತಿಮ ದರ್ಶನದ ಸಂದರ್ಭದಲ್ಲಿ ಅವರು ಧ್ಯಾನ ಮಾಡುವ ರೀತಿಯಲ್ಲಿಯೇ ಭಕ್ತರು ಅಂತಿಮ ದರ್ಶನ ಪಡೆಯುತ್ತಿರುವ ಕುರಿತು ಖ್ಯಾತ ವ್ಯಂಗ್ಯಚಿತ್ರಕಾರ ಶರಣು ಚೆಟ್ಟಿ ಚಿತ್ರ ಸಂಯೋಜನೆ ಮಾಡಿರುವುದು ಗಮನ ಸೆಳೆಯುತ್ತಿದೆ. ಈ ಮೂಲಕ ಮೇಷ್ಟು ಆಗಿರುವ ಶರಣು ಚೆಟ್ಟಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗೆ ಭಾವಪೂರ್ಣ ಶ್ರದ್ಧಾಂಜಲಿ […]

ಅಗ್ನಿಸ್ಪರ್ಷ ಮಾಡಿ- ವಿಧಿವಿಧಾನಗಳು ಬೇಡ- ನದಿ, ಸಾಗರದಲ್ಲಿ ಚಿತಾಭಸ್ಮ ವಿಸರ್ಜಿಸಿ- ಸ್ಮಾರಕ ಬೇಡ- ಸಂಪೂರ್ಣವಾಗಿ ಮರೆಯಲು ಇಷ್ಟಪಡುತ್ತೇನೆ- ಶ್ರೀಗಳ ಉಯಿಲು

ವಿಜಯಪುರ: ಬಸವನಾಡಿನ ನಡೆದಾಡಿದ ದೇವರು ತಮ್ಮ ಅಂತ್ಯಕ್ರಿಯೆಯ ಬಗ್ಗೆಯೂ ಉಯಿಲು(ವಿಲ್) ಬರೆದಿಟ್ಟಿದ್ದಾರೆ.  ವೀರಶೈವ ಲಿಂಗಾಯತ ಸಮುದಾಯದಲ್ಲಿ ಜನಿಸಿದರೂ ಶ್ರೀಗಳು ಆ ಸಂಪ್ರದಾಯದಂತೆ ದೇಹವನ್ನು ಭೂಮಿಯಲ್ಲಿಡುವ ಬದಲು ಅಗ್ನಿಸ್ಪರ್ಷ ಮಾಡಬೇಕು ಎಂದು ಉಯಿಲು ಬರೆದಿಟ್ಟಿದ್ದಾರೆ. ಅಂತ್ಯಕ್ರಿಯೆ ಸಂದರ್ಭದಲ್ಲಿ ಯಾವುದೇ ಶ್ರಾದ್ಧಿಕ ವಿಧಿ-ವಿಧಾನಗಳು ಅನಗತ್ಯ.  ಅಗ್ನಿಸ್ಪರ್ಷದ ನಂತರ ಚಿತಾಭಸ್ಮವನ್ನು ನದಿ ಅಥವಾ ಸಾಗರದಲ್ಲಿ ವಿಸರ್ಜಿಸುವುದು.  ನನ್ನ ನೆನಪಿನಲ್ಲಿ ಯಾವುದೇ ಬಗೆಯ ಸ್ಮಾರಕ ನಿರ್ಮಿಸಬಾರದು.  ನಾನು ಸಂಪೂರ್ಣವಾಗಿ ಮರೆಯಲು ಇಷ್ಟಪಡುತ್ತೇನೆ ಎಂದು 2014ರ ಗುರುಪೂರ್ಣಿಮೆಯ ದಿನ ಶ್ರೀಗಳು ತಮ್ಮ ಇಚ್ಛೆಯನ್ನು ದಾಖಲಿಸಿದ್ದಾರೆ.  […]

ಶ್ರೀ ಸಿದ್ಧೇಶ್ವರ ಸ್ವಾಮೀಜಿ ಆರೋಗ್ಯ ಸುಧಾರಣೆಗಾಗಿ ಭಕ್ತೆಯಿಂದ ದೀಡ ನಮಸ್ಕಾರ, ವಿದ್ಯಾರ್ಥಿಗಳಿಂದ ಸಾಮೂಹಿಕ ಪ್ರಾರ್ಥನೆ

ವಿಜಯಪುರ: ಈ ಮಧ್ಯೆ, ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಬೇಗ ಗುಣಮುಖರಾಗಲಿ ಎಂದು ಭಕ್ತರು ನಾನಾ ರೀತಿಯಲ್ಲಿ ಹರಕೆ ಹೊತ್ತಿದ್ದಾರೆ.  ಶ್ರೀಗಳ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥಿಸಿ ಮಹಿಳಾ ಭಕ್ತರೊಬ್ಬರು 80 ಕಿ. ಮೀ. ದೀರ್ಘದಂಡ ನಮಸ್ಕಾರ ಹಾಕುತ್ತಿದ್ದಾರೆ.  ಕೊಲ್ಹಾರ ಪಟ್ಟಣದ  ಭಕ್ತೆ ಕಸ್ತೂರಿ ಬಸಪ್ಪ ಬಾಲಗೊಂಡ ಎಂಬ ಮಹಿಳೆ ಈ ದೀರ್ಘದಂಡ ನಮಸ್ಕಾರ ಕೈಗೊಂಡಿದ್ದಾರೆ.  ವಿಜಯಪುರ ಜಿಲ್ಲೆಯ ಕೊಲ್ಹಾರದಿಂದ ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಬಾದಾಮಿ ಬನಶಂಕರಿ ದೇವಸ್ಥಾನದವರೆಗೂ ದೀರ್ಘದಂಡ ನಮಸ್ಕಾರ ಹಾಕುತ್ತಿರುವ ಕಸ್ತೂರಿ ಬಾಲಗೊಂಡ, […]

ನಮ್ಮ ಮಧ್ಯೆ ಇರುವ ಅನೇಕ ಸಂತರಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಪರೂಪದ ಸಂತ- ಎಸ್. ಸಿದ್ಧರಾಮಯ್ಯ

ವಿಜಯಪುರ: ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಬಸವನಾಡು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಲು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ವಿಜಯಪುರಕ್ಕೆ ಭೇಟಿ ನೀಡಿದ್ದಾರೆ. ಬೆಂಗಳೂರಿನಿಂದ ವಿಜಯಪುರಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ವಿಧಾನ ಪರಿಷತ ಪ್ರತಿಪಕ್ಷದ ಸಚೇತಕ ಪ್ರಕಾಶ ರಾಠೋಡ ಅವರ ಜೊತೆ ಆಗಮಿಸಿದ ಎಸ್. ಸಿದ್ಧರಾಮಯ್ಯ ಅವರನ್ನು ನಗರದ ಸೈನಿಕ ಶಾಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡರು.  ಹೆಲಿಪ್ಯಾಡ್ ನಿಂದ ಜ್ಞಾನಯೋಗಾಶ್ರಮಕ್ಕೆ ಆಗಮಿಸಿದ ಅವರು, ಹೆಲಿಕಾಪ್ಟರ್ ಮೂಲಕ ಆಗಮಿಸಿದ […]

ಶ್ರೀ ಸಿದ್ಧೇಶ್ವರ ಸ್ವಾಮೀಜಿ ಭೇಟಿ ಮಾಡಿದ ಸಿಎಂ ಬೊಮ್ಮಾಯಿ, ಸಚಿವ ಪ್ರಹ್ಲಾದ ಜೋಶಿ, ಗೋವಿಂದ ಕಾರಜೋಳ- ಪ್ರಧಾನಿ್ಎ ಮಾಹಿತಿ‌‌‌ ನೀಡಿದ ನಾಯಕರು

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಜಯಪುರ ನಗರಕ್ಕೆ ಆಗಮಿಸಿದ್ದು, ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಸಚಿವ ಗೋವಿಂದ ಕಾರಜೋಳ ಅವರ ಜೊತೆ ಜ್ಞಾನಯೋಗಾಶ್ರಮಕ್ಕೆ ಆಗಮಿಸಿ ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಸುನಾರು ಅರ್ಧ ಗಂಟೆಗಳ ಕಾಲ ಶ್ರೀಗಳ ಕೊಠಡಿಯಲ್ಲಿ ಸಿಎಂ ಮತ್ತು ಸಚಿವರು ಉಳಿದುಕೊಂಡ ಶ್ರೀಗಳ ದರ್ಶನ ಹಾಗೂ ಆಶೀರ್ವಾದ ಪಡೆದರು. ಸಿದ್ಧೇಶ್ವರ ಶ್ರೀಗಳ ದರ್ಶನ ಪಡೆದು ಬಂದ ಬಳಿಕ ಮಾತನಾಡಿದ ಸಿಎಂ […]

ಶ್ರೀ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯದಿಂದಾರೆ- ಮ. 1ಕ್ಕೆ ಯೂಟ್ಯೂಬ್ ಚಾನೆಲ್ ಮೂಲಕ ಭಕ್ತರಿಗೆ ದರ್ಶನ ನೀಡಲಿದ್ದಾರೆ- ಜ್ಞಾನಯೋಗಾಶ್ರಮದಿಂದ ಪ್ರಕಟಣೆ

ವಿಜಯಪುರ: ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆರೋಗ್ಯವಾಗಿದ್ದಾರೆ ಎಂದು ವಿಜಯಪುರ ಜ್ಞಾನಯೋಗಾಶ್ರಮದಿಂದ ಪ್ರಕಟಣೆ ಹೊರಡಿಸಲಾಗಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಜ್ಞಾನಯೋಗಾಶ್ರಮದ ಅಧ್ಯಕ್ಷ ಮತ್ತು ಗುರುಗಳಾದ ಬಸವಲಿಂಗ ಸ್ವಾಮೀಜಿಗಳಿಂದ ಬೆಳಗಿನ ಪ್ರಕಟಣೆ ನೀಡಿದ್ದಾರೆ. ಜ್ಞಾನಯೋಗಾಶ್ರಮದಿಂದ ಮ. 1ಗಂಟೆಗೆ ಆಶ್ರಮದ ಯೂಟ್ಯೂಬ್  ಚಾನಲ್ ನಲ್ಲಿ ದರ್ಶನ ನೀಡಲಿದ್ದಾರೆ.  ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು.  ಗಾಳಿ ಸುದ್ದಿಯನ್ನು ಯಾರೂ ಹಬ್ಬಿಸಬೇಡಿ ಎಂದು ಪ್ರಕಟಣೆಯಲ್ಲಿ ಶ್ರೀಗಳು ಕೋರಿದ್ದಾರೆ. ಈ ಕೆಳಗಿನ ಲಿಂಕ್ ಗಳಲ್ಲಿ ಶ್ರೀಗಳ ದರ್ಶನ ಪಡೆಯಬಹುದು. ಎಂದು ಬಸವಲಿಂಗ ಸ್ವಾಮೀಜಿ […]

ಸಿಎಂ ಜೊತೆ ಕಿರಿಯ ಸ್ವಾಮೀಜಿ ಫೋನಿನಲ್ಲಿ ಮಾತುಕತೆ- ಸಿದ್ಧೇಶ್ವರ ಸ್ವಾಮೀಜಿ ಆರೋಗ್ಯ ವಿಚಾರಣೆ- ಆತಂಕ ಬೇಡ- ಸಚಿವ ಬಿ. ಶ್ರೀರಾಮುಲು

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಜಯಪುರ ಜ್ಞಾನಯೋಗಾಶ್ರಮದ ಕಿರಿಯ ಸ್ವಾಮೀಜಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಆರೋಗ್ಯದ ಕುರಿತು ವಿಚಾರಿಸಿದ್ದಾರೆ ಎಂದು ಸಾರಿಗೆ ಸಚಿವ ಬಿ.‌ ಶ್ರೀರಾಮುಲು ತಿಳಿಸಿದ್ದಾರೆ. ವಿಜಯಪುರಕ್ಕೆ ಆಗಮಿಸಿದ ಸಚಿವ ಬಿ. ಶ್ರೀರಾಮುಲು, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತು ಇತರ ಮುಖಂಡರ ಜೊತೆಗೂಡಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ದರ್ಶನಕ್ಕೆ ತೆರಳಿದರು. ಶ್ರೀಗಳಿಗೆ ಅನಾರೋಗ್ಯ ವದಂತಿ ಹಿನ್ನೆಲೆಯಲ್ಲಿ ಭೇಟಿಗೆ ಆಗಮಿಸಿದ ಸಚಿವರು, ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಭೇಟಿಗಾಗಿ ಕೆಲಹೊತ್ತು […]

ಉತ್ತರ ಕರ್ನಾಟಕದ ವಿಶೇಷ ಹಬ್ಬ ಎಳ್ಳಮವಾಸ್ಯೆ ಚೆರಗಾ ಚೆಲ್ಲಿ ಸಂಭ್ರಮಿಸಿದ ರೈತಾಪಿ ಜನರು

ವಿಜಯಪುರ: ಉತ್ತರ ಕರ್ನಾಟಕದಲ್ಲಿ ಮುಂಗಾರು ಬೆಳೆಗಳನ್ನು ಕಟಾವು ಮಾಡಿ ಭೂಮಿತಾಯಿಗೆ ಅರ್ಪಿಸುವ ಪ್ರಮುಖ ಹಬ್ಬ ಎಳ್ಳ ಅಮವಾಸ್ಯೆ ಆಚರಣೆ ಜೋರಾಗಿ ನಡೆಯಿತು. ಭೂಮಿ ತಾಯಿಗೆ ಸೀಮಂತ ಮಾಡುವ ಹಬ್ಬ ಎಂದೂ ಕರೆಯಲಾಗುವ ಚೆರಗಾ ಚೆಲ್ಲುವ ಕಾರ್ಯಕ್ರಮದ ಅಂಗವಾಗಿ ನಗರ ವಾಸಿಗಳೂ ಕೂಡ ಗ್ರಾಮೀಣ ಭಾಗಕ್ಕೆ ತೆರಳಿ ತಮ್ಮ ಮತ್ತು ತಮ್ಮ ಸಂಬಂಧಿಕರ ಹಾಗೂ ಸ್ನೇಹಿತರ ಹೊಲ ಮತ್ತು ತೋಟಗಳಿಗೆ ಹೋಗಿ ಮೃಷ್ಠಾನ್ನ ಭೋಜನ ಸವಿದು ಸಂಭ್ರಮಿಸಿದರು. ಮುಂಗಾರು ಬೆಳೆಗಳ ಕಟಾವು ಮತ್ತು ಹಿಂಗಾರು ಬೆಳೆಗಳ ಬಿತ್ತನೆ ಸಮಯದಲ್ಲಿ […]