ಕಾಶಿ ಯಾತ್ರಾರ್ಥಿಗಳ ಮಾದರಿಯಲ್ಲಿ ಅಯ್ಯಪ್ಪಸ್ವಾಮಿ ವ್ರತ ಆಚರಿಸುವ ಮಾಲಾಧಾರಿಗಳೂ ಸರಕಾರ ಸಹಾಯಧನ ನೀಡಲು ಆಗ್ರಹ

ವಿಜಯಪುರ: ರಾಜ್ಯ ಸರಕಾರ ಕಾಶಿ ಯಾತ್ರಾರ್ಥಿಗಳಿಗೆ ನೀಡುವ ಸಹಾಯ ಧನವನ್ನು ಅಯ್ಯಪ್ಪಸ್ವಾಮಿ ವೃತ ಆಚರಿಸುವ ಮಾಲಾಧಾರಿಗಳಿಗೂ ನೀಡಬೇಕು ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಮುಖಂಡ ದತ್ತಾತ್ರೇಯ ಗುರುಸ್ವಾಮಿಗಳು ಮತ್ತು ವಿಜಯಪುರ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಶಿವರುದ್ರ ಬಾಗಲಕೋಟ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ರಾಜ್ಯ ಘಟಕದ ಉಪಾಧ್ಯಕ್ಷ ಸಂಪತಕುಮಾರ್ ಗುರೂಜಿ 2008 ರಲ್ಲಿ ಈ ಸಂಘಟನೆ ಸ್ಥಾಪಿಸಿದರು.  ದಿ. ಶಿವರಾಂ ಗುರುಗಳ ಮಾರ್ಗದರ್ಶನದಲ್ಲಿ ನಂದಿಯಾರ್ […]

2A Reservation: ಡಿ. 22 ರಂದು ಬೆಳಗಾವಿ ಸುವರ್ಣಸೌಧದ ಮುಂಭಾಗ ಮೀಸಲಾತಿಗಾಗಿ ಬೃಹತ್ ಹೋರಾಟ- ಬಸವ ನಾಡಿನಿಂದ 15000 ಪಂಚಮಸಾಲಿ ಸಮುದಾಯದ ಜನ ಭಾಗಿ

ವಿಜಯಪುರ: 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಲಿಂಗಾಯಿತ ಪಂಚಮಸಾಲಿ ಸಮುದಾಯ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ನೇತತ್ವದಲ್ಲಿ ಹೋರಾಟ ನಡೆಸುತ್ತಿದೆ.  ಇದರ ಮುಂದುವರೆದ ಭಾಗವಾಗಿ ಡಿ. 22 ರಂದು ನಿರ್ಣಾಯಕ ಹೋರಾಟ ನಡೆಯಲಿದೆ ಎಂದು ಪಂಚಮಸಾಲಿ ಸಮುದಾಯದ ನಾನಾ ಮುಖಂಡರು ತಿಳಿಸಿದ್ದಾರೆ. ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಪೋರೇಟರ್ ಪ್ರೇಮಾನಂದ ಬಿರಾದಾರ, ರಾಣಿ ಚೆನ್ನಮ್ಮ ಬಳಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ […]

Basaveshwar Kademani: ಸುವರ್ಣ ವಿಧಾನಸೌಧ ಸಭಾಂಗಣದಲ್ಲಿ ಅನಾವರಣಗೊಂಡ ಬಸವನಾಡಿನ ಕಲಾವಿದ ಚಿತ್ರಿಸಿದ ಭಾವಚಿತ್ರ

ವಿಜಯಪುರ: ಬೆಳಗಾವಿ ಸುವರ್ಣ ಸೌಧದಲ್ಲಿರುವ ವಿಧಾನ ಸಭೆ ಸಭಾಂಗಣದಲ್ಲಿ ದಾರ್ಶನಿಕರ ಭಾವಚಿತ್ರ ಅನಾವರಣ ಮಾಡಲಾಗಿದ್ದು, ಇವುಗಳಲ್ಲಿ ಬಸವನಾಡಿನ ಹೆಸರಾಂತ ಕಲಾವಿದರು ಚಿತ್ರಿಸಿರುವ ಭಾವಚಿತ್ರವೂ ಸೇರಿಸುವುದು ವಿಜಯಪುರ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ. ವಿಜಯಪುರ ನಗರದಲ್ಲಿರುವ ಜ್ಞಾನ ಯೋಗಾಶ್ರಮ ಬಳಿ ಇರುವ ಇರುವ ಟೀಚರ್ ಕಾಲೋನಿ ನಿವಾಸಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಚಿತ್ರಕಲಾವಿದ ಪಿ. ಎಸ್. ಕಡೆಮನಿ ಅವರು ಚಿತ್ರಿಸಿರುವ ಬಸವಣ್ಣನವರ ಭಾವಚಿತ್ರ ಈಗ ಸುವರ್ಣ ವಿಧಾನಸೌಧದಲ್ಲಿ ರಾರಾಜಿಸುತ್ತಿದೆ. ನಡೆದಾಡುವ ದೇವರೆಂದೇ ಹೆಸರಾಗಿರುವ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ […]

Adilshahi Dynasty: ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಆದಿಲಶಾಹಿ ಸಾಮ್ರಾಜ್ಯದ ಪ್ರಮುಖಾಂಶಗಳ 19 ಕನ್ನಡ ಸಂಪುಟಗಳು ಲೋಕಾರ್ಪಣೆಗೆ ಸಜ್ಜು

ವಿಜಯಪುರ: ಬಸವ ನಾಡು ವಿಜಯಪುರ ಎಂದರೆ ಸಾಕು ತಟ್ಟನೆ ನೆನಪಿಗೆ ಬರುವುದು ಐತಿಹಾಸಿಕ ಗೋಳಗುಮ್ಮಟ.  ಈ ಪ್ರಾಚೀನ ಸ್ಮಾರಕದ ನಿರ್ಮಾಪಕರಾದ ಆದಿಲ್ ಶಾಹಿ ಮನೆತನದ ಬಗ್ಗೆ ಇತಿಹಾಸದಲ್ಲಿ ಸಾಕಷ್ಟು ಸಂಗತಿಗಳು ದಾಖಲಾಗಿವೆ.  ಆದರೆ, ಕಾಲಗರ್ಭದಲ್ಲಿ ಹುದುಗಿ ಹೋಗಿದ್ದ ಈ ಸಾಮ್ರಾಜ್ಯದ ಬಾದಷರು ನಾಡಿನ ಸಮೃದ್ಧಿಗೆ ನೀಡಿರುವ ಕೊಡುಗಳನ್ನು ವರ್ಷಾನುಗಟ್ಟಲೆ ಸಂಶೋಧಿಸಿ ಸಂಗ್ರಹಿಸಲಾಗಿರುವ 19 ಕನ್ನಡ ಸಂಪುಟಗಳು ಲೋಕಾರ್ಪಣೆಗೆ ಸಜ್ಜಾಗಿವೆ. ವಿಜಯಪುರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ […]

Ayyappaswamy Padayatre: ಜಲನಾಯಕ ಸಿಎಂ ಆಗಲೆಂದು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಪಾದಯಾತ್ರೆ ಹೊರಟ ಅನ್ನದಾತ

ವಿಜಯಪುರ: ಬಸವ ನಾಡಿಗೆ ನೀರಾವರಿ ಕಲ್ಪಿಸಿದ ಆಧುನಿಕ ಭಗೀರಥ ಮುಖ್ಯಮಂತ್ರಿಯಾಗಲಿ ಎಂದು ಹರಕೆ ಹೊತ್ತು ರೈತರೊಬ್ಬರು ಕೊರಳಲ್ಲಿ ಎಂ. ಬಿ. ಪಾಟೀಲರ ಭಾವಚಿತ್ರ ಹಾಕಿಕೊಂಡು ಶಬರಿಮಲೈ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಏಕಾಂಗಿಯಾಗಿ ಪಾದಯಾತ್ರೆಯಲ್ಲಿ ತೆರಳಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದ ರೈತ ರಾಜಕುಮಾರ ರವೀಂದ್ರ ಹೊನವಾಡ(28) ಬಾಬಾನಗರದಿಂದ ಶಬರಿಮಲೈವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. 5.5 ಎಕರೆ ಹೊಲ ಹೊಂದಿರುವ ಈ ರೈತ ದ್ರಾಕ್ಷಿ ಬೆಳೆಗಾರರಾಗಿದ್ದಾರೆ. ತಮ್ಮ ಭಾಗ ಈಗ ನೀರಾವರಿಯಾಗಿದ್ದು, ಇದಕ್ಕೆಲ್ಲ ಕಾರಣರಾದ ಎಂ. ಬಿ. ಪಾಟೀಲರು […]

Ambedkar Mahaparinirvana: ವಿಜಯಪುರ ಜಿಲ್ಲಾ ಕ್ರೀಡಾಂಗಣ ಬಳಿ ಅಂಬೇಡ್ಕರ ಮಹಾಪರಿನಿರ್ವಾಣ ದಿನಾಚರಣೆ

ವಿಜಯಪುರ: ಭಾರತರತ್ನ, ಬೋಧಿಸತ್ವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಜಿಲ್ಲಾ ಕ್ರಿಡಾಂಗಣದಲ್ಲಿ ಆಚರಿಸಲಾಯಿತು. ಡಾ. ಅಂಬೇಡ್ಕರ್ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿ‌ನಮನ ಸಲ್ಲಿಸಿದರು. ವಿಜಯಪುರ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯ ವಿಜಯಪುರ ಜಿಲ್ಲಾಧ್ಯಕ್ಷ ಬಿ. ಎಚ್. ನಾಡಗಿರಿ ಮಾತನಾಡಿದರು. ಸಮಿತಿ ಸ್ಥಾಪನೆಯಾಗಿ 18 ವರ್ಷಗಳಾಗಿವೆ. ಈ ಸಂಘವು ನೌಕರರ ಪರ […]

Skill Educaiton: ಮಕ್ಕಳ ಆಸಕ್ತಿಗನುಗುಣವಾಗಿ ನವೀನ, ಸಂವಹನ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಶಿಕ್ಷಣ ಅಗತ್ಯವಾಗಿದೆ- ಸುನೀಲಗೌಡ ಪಾಟೀಲ

ವಿಜಯಪುರ: ಮಕ್ಕಳ ಆಸಕ್ತಿಗನುಗುಣವಾಗಿ ನವೀನ ಮತ್ತು ಸಂವಹನ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸುವ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು. ವಿಜಯಪುರ ನಗರದ ಎಸ್.ಎಸ್.ಪಿ.ಯು.ಕಾಲೇಜ ಆವರಣದ ಮಾಧ್ಯಮಿಕ ವಿಭಾಗದಲ್ಲಿ ಆರಂಭಿಸಲಾಗಿರುವ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು. ನಿಗದಿತ ಪಠ್ಯಕ್ರಮಕ್ಕಿಂತ ವಿದ್ಯಾರ್ಥಿಗಳ ಆಸಕ್ತಿಗೆ ಪೂರಕವಾಗಿ ಶಿಕ್ಷಣ ನೀಡುವುದು ಅಗತ್ಯವಾಗಿದೆ.  ಇದಕ್ಕೆ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಪೂರಕವಾಗಿ ಕೆಲಸ ಮಾಡುತ್ತಿವೆ.  ಇಂಥ ಲ್ಯಾಬ್‍ಗಳ ಸ್ಥಾಪನೆಯಿಂದ ಗ್ರಾಮೀಣ ಭಾಗದ […]

Youth Festival: ಗುಮ್ಮಟ ನಗರಿಯಲ್ಲಿ ಗಮನ ಸೆಳೆದ ಬಸವ ನಾಡಿನ ಯುವ ಜನೋತ್ಸವಕ್ಕೆ ಜಾವೀದ ಜಮಾದಾರ ಚಾಲನೆ- ಕುಣಿದು ಕುಪ್ಪಳಿಸಿ ಪ್ರತಿಭೆ ಪ್ರದರ್ಶಿಸಿದ ಯುವಜನತೆ

ವಿಜಯಪುರ: ಭಾರತ ಶ್ರೀಮಂತ ಸಂಸ್ಕೃತಿಯನ್ನು ಪೋಷಿಸುತ್ತಿದೆ.  ಮಾತ್ರವಲ್ಲ, ಸರ್ವರ ಮೌಲ್ಯಗಳನ್ನು ಜಗತ್ತಿಗೆ ಪ್ರಸಾರ ಮಾಡುತ್ತಿದೆ.  ಇಂಧ ಮೌಲ್ಯಾಧಾರಿತ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲು ಇಂದಿನ ಯುವ ಜನಾಂಗ ಹಿಂದೇಟು ಹಾಕುತ್ತಿರುವುದು ವಿಷಾಧನೀಯ ಜಾವೀದ ಜಮಾದಾರ, ಎಂದು ಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರದ ಸಭಾ ಭವನದಲ್ಲಿ ನಡೆದ ಜಿಲ್ಲಾ ಯುವ ಜನೋತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರ ಫೆಡರೇಶನ್ನಿನ ರಾಷ್ಟ್ರೀಯ ಅಧ್ಯಕ್ಷ ಹೇಳಿದರು. ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯವಜನ ಸಬಲೀಕರಣ ಮತ್ತು ಕ್ರೀಡಾ […]

ಸ್ಪೂರ್ತಿ ಫೌಂಡೇಶನ್ ವತಿಯಿಂದ ಸಾಧಕತಿಗೆ ಸನ್ಮಾನ- ಎಂ ಎಲ್ ಸಿ ಸುನೀಲಗೌಡ ಪಾಟೀಲ ಭಾಗಿ

ವಿಜಯಪುರ: ಸ್ಪೂರ್ತಿ ಫೌಂಡೇಶನ್ ವಿದ್ಯಾರ್ಥಿಗಳಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಈ ಸಂಸ್ಥೆಯ ಸ್ವಂತ ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ರೂ. 20 ಲಕ್ಷ ಅನುದಾನ ನೀಡುವುದಾಗಿ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ. ವಿಜಯಪುರ ನಗರದ ಸ್ಪೂರ್ತಿ ಫೌಂಡೇಶನ್, ವಿಜಯಪುರ ಗ್ರಂಥಾಲಯ ವತಿಯಿಂದ ಗ್ರಂಥಾಲಯದಲ್ಲಿ ಓದಿ ಉತ್ತೀರ್ಣರಾಗಿ ನಾನಾ ಇಲಾಖೆಗಳ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸನ್ಮಾನಿ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಪೌಂಡೇಶನ್ ನಿಸ್ವಾರ್ಥ ಸೇವೆ ಒದಗಿಸುತ್ತಿದೆ. ರಾಜಕಾರಣಿಗಳು […]

Congress Ambedkar: ಕಾಂಗ್ರೆಸ್ ಕಚೇರಿಯಲ್ಲಿ‌ ಡಾ. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನಾಚರಣೆ

ವಿಜಯಪುರ: ಭಾರತ ರತ್ನ ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ, ಸಮಾನತೆಯ ಹರಿಕಾರ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಣ ದಿನವನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಮುಖಂಡರು‌ ಅಂಬೇಡ್ಕರ ಅವರ ಕೊಡುಗೆಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚೈತ್ಯಭೂಮಿ ಮುಂಬಯಿಯಲ್ಲಿ ಲಕ್ಷಾಂತರ ಜನ ಸೇರಿ ಮಹಾಪರಿನಿರ್ವಾಣ ದಿನ ಆಚರಿಸಿ ಗೌರವ ಸಲ್ಲಿಸಿದರು. ಅಂದಿನಿಂದ ಇಂದಿನರೆಗೂ ಈ ಪ್ರಕ್ರಿಯೆ ನಡೆಯುತ್ತ ಬಂದಿದೆ. […]