Cultural Evening: ವಿಜಯಪುರ ನಗರದ ಆನಂದ ಮಹಲ್ ನಲ್ಲಿ ಗಮನ ಸೆಳೆದ ಸಾಂಸ್ಕøತಿಕ ಸಂಜೆ ಕಾರ್ಯಕ್ರಮ

ವಿಜಯಪುರ: ನಗರದ ಆನಂದ ಮಹಲ್ ಸ್ಮಾರಕ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ನಡೆದ ಸಾಂಸ್ಕøತಿಕ ಸಂಜೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು.  ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಹಾಗೂ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿ ಮಾಹೆಯ ಮೊದಲನೇ ಶನಿವಾರ ಐತಿಹಾಸಿಕ ಆನಂದ ಮಹಲ್ ಸ್ಮಾರಕ ಆವರಣದಲ್ಲಿ ‘ಸಾಂಸ್ಕøತಿಕ ಸಂಜೆ’ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. […]

Datta Jayanti: ಇಟ್ಟಂಗಿಹಾಳ ಸಚ್ಚಿದಾನಂದ ಮಹಾರಾಜ ಆಶ್ರಮದಲ್ಲಿ ಡಿ. 7 ರಂದು ದತ್ತ ಜಯಂತಿ ಆಚರಣೆ- ಮಹಾಂತೇಶ ಗುಲಗಂಜಿ

ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಕೆ. ಎಚ್. ಗ್ರಾಮದ ಸಚ್ಚಿದಾನಂದ ಮಹಾರಾಜ ಆಶ್ರಮದಲ್ಲಿ ಡಿ. 7 ರಂದು ದತ್ತ ಜಯಂತಿ ಮಹೋತ್ಸವ  ನಡೆಯಲಿದೆ ಎೞದು ಆಶ್ರಮದ ಭಕ್ತ ಮಹಾಂತೇಶ ಗುಲಗಂಜಿ ತಿಳಿಸಿದ್ದಾರೆ.  ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಡಿ. 7 ರಂದು ಬುಧವಾರ ಬೆ. 6ಕ್ಕೆ ಆಶ್ರಮದ ದೇವಸ್ಥಾನದಲ್ಲಿ ಗಣಪತಿ, ದತ್ತಾತ್ರೇಯ, ಶ್ರೀ ಭಿಮಾಶಂಕರ ಕ್ಷೇತ್ರಾದಿ ದೇವತೆಗಳ ಅಭಿಷೇಕ, ದೇವಾರ್ಚನೆ, ಪುಷ್ಪಾರ್ಚನೆ, ಬಿಲ್ವಾರ್ಚನೆ ಹಾಗೂ ಮಂಗಳಾರುತಿ ಕಾರ್ಯಕ್ರಮಗಳು ನಡೆಯಲಿವೆ. ಬೆ. 8ಕ್ಕೆ ಪುಣ್ಯಾಹವಾಚನ, […]

Gani Someshwar Jatre: ದೇವರ ಕಲ್ಲಿಗೆ ಓಡಿಬಂದು ತಲೆಯಿಂದ ಗುದ್ದುವ ಭಕ್ತರು- ಬೆನ್ನಿಗೆ ಕಬ್ಬಿಣ ಗುಂಡಿನಿಂದ ಹೊಡೆದುಕೊಂಡು ಹರಕೆ ತೀರಿಸುವ ಜಾತ್ರೆ

ಮಹೇಶ ವಿ. ಶಟಗಾರ ವಿಜಯಪುರ: ಬಸವ ನಾಡು ವಿಜಯಪರು ಜಿಲ್ಲೆ ಜಾತ್ರೆಗಳ ತವರು ಜಿಲ್ಲೆ ಎಂದೇ ಹೆಸರುವಾಸಿಯಾಗಿದೆ.  ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಈ ಜಿಲ್ಲೆಯಲ್ಲಿ ನಡೆಯುವಷ್ಟು ಜಾತ್ರೆಗಳು ನಡೆಯುವುದಿಲ್ಲ ಗಮನಾರ್ಹವಾಗಿದೆ.  ಒಂದೇ ಊರಿನಲ್ಲಿ ಮೂರ್ನಾಲ್ಕು ಜಾತ್ರೆಗಳು ನಡೆಯುವದು ಇದರ ವಿಶೇಷ.  ಅಷ್ಟೇ ಅಲ್ಲ, ಇಡೀ ವರ್ಷ ಪ್ರತಿದಿನ ಒಂದಿಲ್ಲೊಂದು ಊರಿನಲ್ಲಿ ಜಾತ್ರೆ ನಡೆಯುತ್ತವೆ ಎಂದರೂ ತಪ್ಪಲ್ಲ.  ಅದರಲ್ಲಿಯೂ ಜಿಲ್ಲೆಯಲ್ಲಿ ನಡೆಯುವ ಒಂದೊಂದು ಜಾತ್ರೆಯೂ ವಿಶೇಷವಾಗಿದ್ದು, ಸಂಪ್ರದಾಯಗಳೂ ಜನರು ಅಚ್ಚರಿ ಪಡುವಂತಿದೆ. ಈಗ ಇಂಥದ್ದೆ ಒಂದು ಜಾತ್ರೆಯ ಬಗ್ಗೆ […]

DC Office Constitution Day: ಜಿಲ್ಲಾಧಿಕಾರಿ ಕಚೇರಿ ಪ್ರವಾಸೋದ್ಯಮ ಇಲಾಖೆಯಲ್ಲಿ ಸಂವಿಧಾನ ದಿನಾಚರಣೆ

ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮತ್ತು ಪ್ರವಾಸೋದ್ಯಮ ಕಚೇರಿಯಲ್ಲಿ ಸಂವಿಧಾನ ದಿನ ಆಚರಿಸಲಾಯಿತು.  ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಡಿಸಿ ಕಚೇರಿ ಸಭಾಂಗಣದಲ್ಲಿ ಸಂವಿಧಾನ ದಿನದ ಅಂಗವಾಗಿ ಸಾಮೂಹಿಕವಾಗಿ ಸಂವಿಧಾನ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ,  ಸಂವಿಧಾನ ದಿನದ ಅಂಗವಾಗಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.  ನಂತರ  ಸಮಾಜ ಕಲ್ಯಾಣ […]

Constitution Day: ಸಂವಿಧಾನದ ಆಶಯಕ್ಕನುಗುಣವಾಗಿ ನಡೆದುಕೊಳ್ಳಬೇಕು- ನ್ಯಾಯಾಧೀಶ ಜಿ. ಜಿ. ಕುರವತ್ತಿ

ವಿಜಯಪುರ: ಸಂವಿಧಾನದ ಪೂರ್ವ ಪೀಠಿಕೆಯ ಆಶಯವನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಸ್ಪಂದಿಸಿ, ಸಂವಿಧಾನದ ಆಶಯಕ್ಕನುಗುಣವಾಗಿ ನಡೆದುಕೊಳ್ಳಬೇಕು ಎಂದು  ವಿಜಯಪುರ ಜಿಲ್ಲಾ ಪ್ರಧಾನ  ಮತ್ತು ಸತ್ರ ನ್ಯಾಯಾಧೀಶ ಜಿ. ಜಿ. ಕುರವತ್ತಿ ಹೇಳಿದ್ದಾರೆ.  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಪೊಲೀಸ್. ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಅವರು ಮಾತನಾಡಿದರು. ತ್ವರಿತಗತಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ರಾಮ ನಾಯಕ ಮಾತನಾಡಿ, ಸಂವಿಧಾನವು ನಮ್ಮೆಲ್ಲರಿಗೂ […]

Danammadevi Jatre: ಗುಡ್ಡಾಪುರ ದಾನಮ್ಮದೇವಿ ಜಾತ್ರೆ ರಥೋತ್ಸವಕ್ಕೆ ಚಾಲನೆ ನೀಡಿದ ವಿಜಯಪುರ ಡಿಸಿ, ಸಾಂಗಲಿ ಎಸ್ಪಿ

ವಿಜಯಪುರ: ಉತ್ತರ ಕರ್ನಾಟಕದ ಆರಾಧ್ಯ ದೈವ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಗುಡ್ಡಾಪುರ ದಾನಮ್ಮದೇವಿ ಜಾತ್ರೆಯ ರಥೋತ್ಸವಕ್ಕೆ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಸಾಂಗಲಿ ಎಸ್ಪಿ ಬಸವರಾಜ ತೇಲಿ ಚಾಲನೆ ನೀಡಿದರು. ಸುಕ್ಷೇತ್ರ ಗುಡ್ಡಾಪುರದಲ್ಲಿ ಪ್ರತಿ ವರ್ಷ ಚಟ್ಟಿ ಅಮವಾಸ್ಯೆಯಂದು ದಾನಮ್ಮದೇವಿ ಜಾತ್ರೆ ನಡೆಯುತ್ತದೆ.  ಈ ಕಾರ್ಯಕ್ರಮಕ್ಕೆ ತೆರಳಿದ ಸಾಂಗಲಿ ಎಸ್ಪಿ ಮತ್ತು ವಿಜಯಪುರ ಜಿಲ್ಲಾಧಿಕಾರಿಗಳು ದಾನಮ್ಮದೇವಿಗೆ ಪೂಜೆ ಸಲ್ಲಿಸಿದರು.  ಡಾ. ದಾನಮ್ಮನವರ ಕುಂಬಳಕಾಯಿಯನ್ನು ನಿವಾಳಿಸಿದರು.  ಈ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿಯ […]

Muragod Padayatre: ಬಸವ ನಾಡಿನಿಂದ ಮುರಗೋಡ ಅವತಾರ ಜಯಂತಿ ಶೈವಾಗಮೋಕ್ಷ ಮಹೋತ್ಸವಕ್ಕೆ ಪಾದಯಾತ್ರೆ ಬೆಳೆಸಿದ ಭಕ್ತರು

ವಿಜಯಪುರ: ಶ್ರೀ ಕ್ಷೇತ್ರ ಕೆಂಗೆರಿ ಮುರಗೋಡದಲ್ಲಿ ಶ್ರೀ ಶಿವ ಚಿದಂಂಬರ ಮಹಾಸ್ವಾಮೀಗಳ 264ನೇ ಅವತಾರ ಜಯಂತಿ ಶೈವಾಗಮೋಕ್ಷ ಮಹೋತ್ಸವ ನ. 29 ರಂದು ನಡೆಯಲಿದ್ದು, ಈ ಉತ್ಸವದಲ್ಲಿ ಪಾಲ್ಗೋಳ್ಳಲು ಬಸವ ನಾಡು ವಿಜಯಪುರದಿಂದ ಭಕ್ತರು ಪಾದಯಾತ್ರೆ ಬೆಳೆಸಿದರು. ಪ್ರತಿವರ್ಷ ಈ ಮಹೋತ್ವಸ ನಡೆಯುತ್ತಿದೆ.  ಇದರ ಅಂಗವಾಗಿ ಶ್ರೀ ಚಿದಂಬರೇಶ್ವರ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ವಿಜಯಪುರ ಚಿದಂಬರ ದೇವಸ್ಥಾನದಿಂದ ಶ್ರೀ ಕ್ಷೇತ್ರ ಮುರಗೋಡಕ್ಕೆ ಪಾದಯಾತ್ರೆಯಲ್ಲಿ ಭಕ್ತರು ತೆರಳಿದರು.  ವಿಜಯಪುರ ನಗರದಿಂದ ಹಲಗಣಿ, ಮುದೋಳ, ಯರಗಟ್ಟಿ, ಹಲಕಿ ಕ್ರಾಸ್ ಮೂಲಕ […]

Street Play: ಸರಕಾರಿ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸುವ ವಾರ್ತಾ ಇಲಾಖೆಯಿಂದ ಬೀದಿನಾಟಕ-ಜಾನಪದ ಕಲಾ ತಂಡಗಳ ಆಯ್ಕೆ

ವಿಜಯಪುರ: ಸರಕಾರದ ನಾನಾ ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ಮತ್ತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬುಧವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ವಾರ್ತಾ ಇಲಾಖೆಯಿಂದ ಬೀದಿ ನಾಟಕ- ಜಾನಪದ ಕಲಾ ತಂಡಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ, ಸರಕಾರದ ಜನಪ್ರಿಯ ಮತ್ತು ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಹಾಗೂ ಮನವರಿಕೆ ಮಾಡಿಕೊಡುವಲ್ಲಿ ಕಲಾತಂಡಗಳ […]

Datti Upanyas: ಶರಣರ ಆಶಯದಂತೆ ಬದುಕು ರೂಪಿಸಿಕೊಳ್ಳಿ-ರಾಜೇಂದ್ರಕುಮಾರ ಬಿರಾದಾರ

ವಿಜಯಯಪುರ: 12ನೇ ಶತಮಾನ ಬದಲಾವಣೆಯ ಯುಗ.  ಕ್ರಾಂತಿಯ ಪರ್ವ.  ಅಂದಿನ ಶರಣರು ಮಾಡಿದ ಮಹಾಕಾರ್ಯಗಳನ್ನು ಶಿಲಾಲಿಪಿಗಳಲ್ಲಿ ಬರೆಸಲಿಲ್ಲ.  ಇತಿಹಾಸವನ್ನು ರಚಿಸಲಿಲ್ಲ.  ಆದರೆ ಅಂದಿನ ಕ್ರಾಂತಿಗೆ ಶರಣ-ಶರಣೆಯರು ರಚಿಸಿದ ವಚನಗಳೇ ಎಲ್ಲದಕ್ಕೂ ಆಧಾರ ಮತ್ತು ನಂತರ ಕವಿ, ಸಾಹಿತಿಗಳ ರಚಿಸಿದ ಕಾವ್ಯಗಳು ಸಹ ಉಪಯುಕ್ತ ಮಾಹಿತಿಯಾಗಿದೆ ಎಂದು ಉಪನ್ಯಾಸಕ ರಾಜೇಂದ್ರಕುಮಾರ ಬಿರಾದಾರ ಹೇಳಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ವೇದಿಕೆ ಹಾಗೂ ದರ್ಬಾರ ಕಲಾ, ವಾಣಿಜ್ಯ, ಬಿಸಿಎ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ನಡೆದ ದತ್ತಿ ಕಾರ್ಯಕ್ರಮದಲ್ಲಿ ಶರಣೆ ಅಕ್ಕ […]

Danammadevi Prasad Samiti: ದಾನಮ್ಮದೇವಿ ಪ್ರಸಾದ ಸಮಿತಿ, ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿಯಿಂದ ಗುಡ್ಡಾಪುರ ಪಾದಯಾತ್ರಿಗಳಿಗೆ ಪ್ರಸಾದ ವಿತರಣೆ

ವಿಜಯಪುರ: ಉತ್ತರ ಕರ್ನಾಟಕದ ಆರಾಧ್ಯದೈವ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಗುಡ್ಡಾಪುರ ದಾನಮ್ಮದೇವಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದ್ದು, ವಿಜಯಪುರದಿಂದ ಲಕ್ಷಾಂತರ ಭಕ್ತರು ಪಾದಯಾತ್ರೆಯಲ್ಲಿ ತಾಯಿಯ ದರ್ಶನಕ್ಕೆ ತೆರಳುತ್ತಿದ್ದಾರೆ. ಈ ಪಾದಯಾತ್ರಿಗಳಿಗೆ ಬೀಳ್ಕೋಡುಗೆ ಸಮಾರಂಭ ವಿಜಯಪುರ ನಗರದ ಗ್ರಾಮದೇವತೆ ಶ್ರೀ ಸಿದ್ಧೇಶ್ವದ ದೇವಸ್ಥಾನದ ಎದುರು ನಡೆಯಿತು.  ದಾನಮ್ಮದೇವಿ ಪ್ರಸಾದ ಸೇವಾ ಸಮಿತಿ ಹಾಗೂ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ದೇವರ ಹಿಪ್ಪರಗಿಯ ಶ್ರೀ ಶಿವಯೋಗಿ ಮಹಾಸ್ವಾಮಿಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ […]