Devanand Birthday: ಜನ್ಮದಿನ ಹಿನ್ನೆಲೆ- ಪತ್ನಿ ಜೊತೆ ಚಾಮುಂಡಿದೇವಿ ದರ್ಶನ ಪಡೆದ ಶಾಸಕ ಡಾ. ದೇವಾನಂದ ಚವ್ಹಾಣ

ಮೈಸೂರು: ಜನ್ಮದಿನದ ಅಂಗವಾಗಿ ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಮೈಸೂರಿಗೆ ತೆರಳಿ ಚಾಮುಂಡಿದೇವಿ ದರ್ಶನ ಪಡೆದಿದ್ದಾರೆ. ಡಾ. ದೇವಾನಂದ ಚವ್ಹಾಣ 52ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಪತ್ನಿ ಡಾ. ಸುನಿತಾ ಜೊತೆ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವಿಯ ದರ್ಶನ ಪಡೆದರು‌.

Temples Grant: ಸಚಿವ ಕಾರಜೋಳ ಮನವಿಗೆ ಸಿಎಂ ಸ್ಪಂದನೆ- ನಾಗಠಾಣ, ವಿಜಯಪುರ ತಾಲೂಕಿನ ದೇವಸ್ಥಾನಗಳ ಅಭಿವೃದ್ಧಿಗೆ ₹2 ಕೋ. ಬಿಡುಗಡೆ- ಉಮೇಶ ಕಾರಜೋಳ

ವಿಜಯಪುರ: ನಾಗಠಾಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಚಡಚಣ ಹಾಗೂ ವಿಜಯಪುರ ತಾಲೂಕಿನ ನಾನಾ ದೇವಾಲಯಗಳ ಅಭಿವೃದ್ಧಿಗೆ ರೂ. 2 ಕೋ. ಅನುದಾನ ಬಿಡುಗಡೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾಡಿದ ಮನವಿಗೆ ಸಿಎಂ‌ ಸ್ಪಂದಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಚಿವರ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿ ರೂ. 2 ಕೋ. ಹಣ ಬಿಡುಗಡೆ ಮಾಡಿದ್ದಾರೆ. ಈ ಎಲ್ಲ ದೇವಾಲಯಗಳಿಗೆ ಆರ್ಥಿಕ ಇಲಾಖೆಯು […]

ಚಂದ್ರಕಾಂತ ಬಿಜ್ಜರಗಿ ರಚಿತ ಹಾಲುಮತ ಧರ್ಮಗ್ರಂಥ ಬಿಡುಗಡೆ

ವಿಜಯಪುರ: ಹಾಲುಮತ ಸಮಾಜದ ಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಚಂದ್ರಕಾಂತ ಬಿಜ್ಜರಗಿ ಅವರು ರಚಿಸಿರುವ ಹಾಲುಮತ ಧರ್ಮಗ್ರಂಥ ಬಿಡಗಡೆ ಕಾರ್ಯಕ್ರಮ ಬಸವ ನಾಡು ವಿಜಯಪುರದಲ್ಲಿ ನಡೆಯಿತು. ತಿಂಥನಿ ಕಾಗಿನೆಲೆ ಶ್ರೀ ಸಿದ್ಧರಾಮಾನಂದ ಮಹಾಸ್ವಾಮೀಜಿ, ಮೈಸೂರಿನ ಶ್ರೀ ಶಿವಾನಂದ ಮಹಾಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಾಲುಮತದ ಜಡೆಸಿದ್ಧರು, ಕಾಗಿನೆಲೆ ಶಾಖಾಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ನಾಗಠಾಣ ಮೂಲಪೀಠದ ಮಾಳಿಂಗರಾಯ ಮಹಾರಾಜರು, ಪಟ್ಟದ ಗುರುಗಳು ಗ್ರಂಥ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಗ್ರಂಥ ರಚಿಸಿದ ಚಂದ್ರಕಾಂತ ಬಿಜ್ಜರಗಿ ಅವರನ್ನೂ […]

Basaveshwar Jatre: ಜಾತ್ರೆಗಳು ಭಾರತೀಯ ಸಂಸ್ಕೃತಿಯ ಪ್ರತೀಕ- ಶಾಸಕ ಡಾ. ದೇವಾನಂದ ಚವ್ಹಾಣ

ವಿಜಯಪುರ: ಜಾತ್ರೆಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ನಾಗಠಾಣ(ಮೀ) ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಹೇಳಿದ್ದಾರೆ. ವಿಜಯಪುರ ತಾಲೂಕಿನ ಮಖಣಾಪುರ ಗ್ರಾಮದ ಜಮಾದಾರ ದೊಡ್ಡಿಯಲ್ಲಿ ಕನ್ನೂರ ರಸ್ತಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಎರಡನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಬ್ಬ ಹರಿದಿನಗಳನ್ನು ಆಚರಿಸಿ ಸಂಭ್ರಮಿಸುವುದು ನಮ್ಮಲ್ಲಿ ರೂಡಿಯಾಗಿದೆ.  ಈ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಈಗ ಭಕ್ತಿಪೂರ್ವಕವಾಗಿ ಬಸವೇಶ್ವರ ಜಾತ್ರೆಯಲ್ಲಿ ಪಾಲ್ಗೋಂಡಿರುವುದು ದೈವಭಕ್ತಿಗೆ ಸಾಕ್ಷಿಯಾಗಿದೆ.  ಇಂಥ ಸುವಿಚಾರಗಳು ಅಭಿವೃದ್ಧಿಗೆ ಪೂರಕವಾಗಿವೆ ಎಂದು ಹೇಳಿದರು. ಬಂಜಾರಾ […]

Old Age Homes: ವೃದ್ಧಾಶ್ರಮಗಳು ಕಡಿಮೆಯಾಗಲಿ- ಮಕ್ಕಳ ಸಾಹಿತಿ ಗೌರಮ್ಮ ಬಬಲೇಶ್ವರ

ವಿಜಯಪುರ: ವೃದ್ಧಾಶ್ರ್ಮಗಳು ಕಡಿಮೆಯಾಗಬೇಕು ಎಂದು ಮಕ್ಕಳ ಸಾಹಿತಿ ಗೌರಮ್ಮ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ. ವಿಜಯಪುj ನಗರದ ವಿಜಯಪುರ ನಗರದ ಶುಭವಾಸ್ತು ನಗರದ ಬಸವೇಶ್ವರ ಭವನದಲ್ಲಿ ನಡೆದ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಯುವ ಪ್ರತಿಭೆ, ಮಕ್ಕಳಿಗೆ ಆರೋಗ್ಯಪೂರ್ಣ ಶಿಕ್ಷಣ ನೀಡಿದರೆ ಸಮೃದ್ಧ ಹಾಗೂ ಬಲಾಢ್ಯ ರಾಷ್ಟ್ರ ಕಟ್ಟಲು ಸಾಧ್ಯ.  ಆದ್ದರಿಂದ ಪಾಲಕರು ತಂತಮ್ಮ ಮಕ್ಕಳಿಗೆ ಈ ನಿಟ್ಟಿನಲ್ಲಿ ಬೆಳೆಸಲು ಮುಂದಾಗಬೇಕು.  ಬೇರೆ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಕೆ ಮಾಡಬಾರದು.  ಒತ್ತಡವನ್ನೂ ಹೇರದೆ ಮಕ್ಕಳನ್ನು ಸಾಕಿ […]

Kanaka Jayanti: ಬಿ ಎಲ್ ಡಿ ಇ ಡೀಮ್ಡ್ ವಿವಿಯಲ್ಲಿ ಕನಕದಾಸ ಜಯಂತಿ ಆಚರಣೆ

ವಿಜಯಪುರ: ದಾಸ ಸಾಹಿತ್ಯಕ್ಕೆ ದಾಸಶ್ರೇಷ್ಠ ಕನಕದಾಸರು ನೀಡಿರುವ ಕೊಡುಗೆ ಅಪಾರ ಎಂದುಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ)ಯ ರಿಜಿಸ್ಟಾರ ಡಾ. ಆರ್.ವಿ.ಕುಲಕರ್ಣಿ ಹೇಳಿದರು. ವಿವಿಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕನಕದಾಸರು ರಚಿಸಿರುವ ದಾಸಸಾಹಿತ್ಯ, ಕೀರ್ತನೆಗಳು ಮತ್ತು ಭಕ್ತಿಪಂಥಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ. ಎಸ್. ವಿ. ಪಾಟೀಲ, ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರು ಡಾ. ವಿಜಯಕುಮಾರ ಕಲ್ಯಾಪ್ಪಗೋಳ, ಪರೀಕ್ಷಾ ನಿಯಂತ್ರಕ […]

Kanakadas, Obavva Jayanti: ಬಸವ ನಾಡಿನಲ್ಲಿ ಕನಕದಾಸ, ಒನಕೆ ಓಬವ್ವ ಜಯಂತಿ ಆಚರಣೆ

ವಿಜಯಪುರ: ಜಾತಿ, ಮತ ವ್ಯವಸ್ಥೆಯನ್ನು ಬದಿಗಿಟ್ಟು ತಮ್ಮ ವೈಚಾರಿಕ ಮನೋಭಾವದಿಂದ ದಾಸ್ ಸಾಹಿತ್ಯಕ್ಕೆ ವೈಚಾರಿಕೆ ನೆಲೆಗಟ್ಟನ್ನು ಒದಗಿಸಿಕೊಟ್ಟವರು ಸಂತ ಕನಕದಾಸರು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಹೇಳಿದರು. ವಿಜಯಪುರದಲ್ಲಿ ಜಿಲ್ಲಾಡಳಿತ, ಜಿ. ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಸಂತ ಶ್ರೇಷ್ಠ ಭಕ್ತ ಕನಕದಾಸ ಹಾಗೂ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರೂ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. […]

Kashi Darshan PM Modi: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಬೆಂಗಳೂರು: ರಾಜ್ಯದ ಬಹುನಿರೀಕ್ಷಿತ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್  ವಿಶೇಷ ರೈಲಿಗೆ ಹಸಿರು ನಿಶಾನೆ ತೋರುವುದರ ಮೂಲಕ  ಪ್ರಧಾನಿ ನರೇಂದ್ರ ಮೋದಿ ಇಂದು ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಿದರು. ಎಂಟು ದಿನಗಳ ಕಾಶಿ ದರ್ಶನದ ಈ ರೈಲು ವಾರಣಾಸಿ, ಪ್ರಯಾಗ್ ರಾಜ್, ಅಯೋಧ್ಯಾ ಮುಂತಾದ ಪವಿತ್ರ ಸ್ಥಳಗಳಿಗೆ ಯಾತ್ರಿಕರನ್ನು ಕರೆದೊಯ್ಯುತ್ತದೆ. ಮುಜರಾಯಿ ಇಲಾಖೆ ಭಾರತ ಸರ್ಕಾರದ ಸಹಯೋಗದಲ್ಲಿ ಈ ಕಾಶಿ ದರ್ಶನ ಯಾತ್ರೆ ಆಯೋಜಿಸಲಾಗಿದೆ. ಈ ಯಾತ್ರೆಗೆ ಒಟ್ಟು ವೆಚ್ಚ 20,000 […]

Shreeshail Padayatre: ಶ್ರೀಶೈಲ ಜಗದ್ಗುರುಗಳು ಶೋಭಾ ಯಾತ್ರೆ ಬಸವ ನಾಡಿಗೆ ಆಗಮನ- ಶಾಲೆಗಳಲ್ಲಿ ಧ್ಯಾನ ಆದೇಶ ಸ್ವಾಗತಿಸಿದ ಶ್ರೀಗಳು

ವಿಜಯಪುರ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕೈಗೊಂಡಿರುವ ಪಾದಯಾತ್ರೆ ಬಸವ ನಾಡು ವಿಜಯಪುರ ಜಿಲ್ಲೆಯನ್ನು ಪ್ರವೇಶಿಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಆರಂಭವಾಗಿರುವ ಈ ಪಾದಯಾತ್ರೆ ವಿಜಯಪುರ ನಗರ ಪ್ರವೇಶಿಸುತ್ತಿದ್ದಂತೆ ಅವರನ್ನು ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಧ್ಯಾನ ಮಾಡುವಂತೆ ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ಸ್ವಾಗತಿಸುವುದಾಗಿ ತಿಳಿಸಿದರು. ಧ್ಯಾನ ಎನ್ನುವುದು ಮನುಷ್ಯರ ಆರೋಗ್ಯಕ್ಕೆ ಟಾನಿಕ್ ಆಗಿದೆ.  ಯಾವುದೇ ಕ್ಷೇತ್ರವಿರಲಿ ಧ್ಯಾನ ಎನ್ನುವದು ಮಾನವರಿಗೆ ಉಪಯೋಗಿಯಾಗಿದೆ.  […]

Shrishail Seer Padayatre: ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ ನ. 6 ರಂದು ಬಸವ ನಾಡಿಗೆ ಆಗಮನ

ವಿಜಯಪುರ:  ಶ್ರೀಶೈಲದ ಡಾ. ಚನ್ನಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಶ್ರೀ ಕ್ಷೇತ್ರ ಯಡೂರದಿಂದ ಶ್ರೀಶೈಲ ಕ್ಷೇತ್ರದ ವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಈ ಪಾದಯಾತ್ರೆಯು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮಕ್ಕೆ ಆಗಮಿಸಲಿದೆ.  ಅಂದು ಬೆ. 7 ಕ್ಕೆ ಸಾರವಾಡದಿಂದ ಹೊರಟು ಮಧ್ಯಾಹ್ನ ವಿಜಯಪುರದ ಮಿಲನ ಪೇಟ್ರೋಲ್ ಪಂಪನಲ್ಲಿ ಭೋಜನ ಮುಗಿಸಿ, ಜೋರಾಪೂರದ ಶಂಕರಲಿಂಗ ದೇವಸ್ಥಾನಕ್ಕೆ ತೆರಳಲಿದೆ. ಅಲ್ಲಿಂದ ವಿಜಯಪುರ ನಗರದ ಗ್ರಾಮದೇವತೆ ಶ್ರೀ ಸಿದ್ದೇಶ್ವರ […]