Kanaka Jayanti: ಬಿ ಎಲ್ ಡಿ ಇ ಡೀಮ್ಡ್ ವಿವಿಯಲ್ಲಿ ಕನಕದಾಸ ಜಯಂತಿ ಆಚರಣೆ
ವಿಜಯಪುರ: ದಾಸ ಸಾಹಿತ್ಯಕ್ಕೆ ದಾಸಶ್ರೇಷ್ಠ ಕನಕದಾಸರು ನೀಡಿರುವ ಕೊಡುಗೆ ಅಪಾರ ಎಂದುಬಿ.ಎಲ್.ಡಿ.ಇ. (ಡೀಮ್ಡ್ ವಿಶ್ವವಿದ್ಯಾಲಯ)ಯ ರಿಜಿಸ್ಟಾರ ಡಾ. ಆರ್.ವಿ.ಕುಲಕರ್ಣಿ ಹೇಳಿದರು. ವಿವಿಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕನಕದಾಸರು ರಚಿಸಿರುವ ದಾಸಸಾಹಿತ್ಯ, ಕೀರ್ತನೆಗಳು ಮತ್ತು ಭಕ್ತಿಪಂಥಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ. ಎಸ್. ವಿ. ಪಾಟೀಲ, ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರು ಡಾ. ವಿಜಯಕುಮಾರ ಕಲ್ಯಾಪ್ಪಗೋಳ, ಪರೀಕ್ಷಾ ನಿಯಂತ್ರಕ […]
Kanakadas, Obavva Jayanti: ಬಸವ ನಾಡಿನಲ್ಲಿ ಕನಕದಾಸ, ಒನಕೆ ಓಬವ್ವ ಜಯಂತಿ ಆಚರಣೆ
ವಿಜಯಪುರ: ಜಾತಿ, ಮತ ವ್ಯವಸ್ಥೆಯನ್ನು ಬದಿಗಿಟ್ಟು ತಮ್ಮ ವೈಚಾರಿಕ ಮನೋಭಾವದಿಂದ ದಾಸ್ ಸಾಹಿತ್ಯಕ್ಕೆ ವೈಚಾರಿಕೆ ನೆಲೆಗಟ್ಟನ್ನು ಒದಗಿಸಿಕೊಟ್ಟವರು ಸಂತ ಕನಕದಾಸರು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಹೇಳಿದರು. ವಿಜಯಪುರದಲ್ಲಿ ಜಿಲ್ಲಾಡಳಿತ, ಜಿ. ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಸಂತ ಶ್ರೇಷ್ಠ ಭಕ್ತ ಕನಕದಾಸ ಹಾಗೂ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರೂ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. […]
Kashi Darshan PM Modi: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಬೆಂಗಳೂರು: ರಾಜ್ಯದ ಬಹುನಿರೀಕ್ಷಿತ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ವಿಶೇಷ ರೈಲಿಗೆ ಹಸಿರು ನಿಶಾನೆ ತೋರುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಂದು ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಿದರು. ಎಂಟು ದಿನಗಳ ಕಾಶಿ ದರ್ಶನದ ಈ ರೈಲು ವಾರಣಾಸಿ, ಪ್ರಯಾಗ್ ರಾಜ್, ಅಯೋಧ್ಯಾ ಮುಂತಾದ ಪವಿತ್ರ ಸ್ಥಳಗಳಿಗೆ ಯಾತ್ರಿಕರನ್ನು ಕರೆದೊಯ್ಯುತ್ತದೆ. ಮುಜರಾಯಿ ಇಲಾಖೆ ಭಾರತ ಸರ್ಕಾರದ ಸಹಯೋಗದಲ್ಲಿ ಈ ಕಾಶಿ ದರ್ಶನ ಯಾತ್ರೆ ಆಯೋಜಿಸಲಾಗಿದೆ. ಈ ಯಾತ್ರೆಗೆ ಒಟ್ಟು ವೆಚ್ಚ 20,000 […]
Shreeshail Padayatre: ಶ್ರೀಶೈಲ ಜಗದ್ಗುರುಗಳು ಶೋಭಾ ಯಾತ್ರೆ ಬಸವ ನಾಡಿಗೆ ಆಗಮನ- ಶಾಲೆಗಳಲ್ಲಿ ಧ್ಯಾನ ಆದೇಶ ಸ್ವಾಗತಿಸಿದ ಶ್ರೀಗಳು
ವಿಜಯಪುರ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕೈಗೊಂಡಿರುವ ಪಾದಯಾತ್ರೆ ಬಸವ ನಾಡು ವಿಜಯಪುರ ಜಿಲ್ಲೆಯನ್ನು ಪ್ರವೇಶಿಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಆರಂಭವಾಗಿರುವ ಈ ಪಾದಯಾತ್ರೆ ವಿಜಯಪುರ ನಗರ ಪ್ರವೇಶಿಸುತ್ತಿದ್ದಂತೆ ಅವರನ್ನು ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಧ್ಯಾನ ಮಾಡುವಂತೆ ರಾಜ್ಯ ಸರಕಾರ ಹೊರಡಿಸಿರುವ ಆದೇಶವನ್ನು ಸ್ವಾಗತಿಸುವುದಾಗಿ ತಿಳಿಸಿದರು. ಧ್ಯಾನ ಎನ್ನುವುದು ಮನುಷ್ಯರ ಆರೋಗ್ಯಕ್ಕೆ ಟಾನಿಕ್ ಆಗಿದೆ. ಯಾವುದೇ ಕ್ಷೇತ್ರವಿರಲಿ ಧ್ಯಾನ ಎನ್ನುವದು ಮಾನವರಿಗೆ ಉಪಯೋಗಿಯಾಗಿದೆ. […]
Shrishail Seer Padayatre: ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ ನ. 6 ರಂದು ಬಸವ ನಾಡಿಗೆ ಆಗಮನ
ವಿಜಯಪುರ: ಶ್ರೀಶೈಲದ ಡಾ. ಚನ್ನಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಶ್ರೀ ಕ್ಷೇತ್ರ ಯಡೂರದಿಂದ ಶ್ರೀಶೈಲ ಕ್ಷೇತ್ರದ ವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಈ ಪಾದಯಾತ್ರೆಯು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮಕ್ಕೆ ಆಗಮಿಸಲಿದೆ. ಅಂದು ಬೆ. 7 ಕ್ಕೆ ಸಾರವಾಡದಿಂದ ಹೊರಟು ಮಧ್ಯಾಹ್ನ ವಿಜಯಪುರದ ಮಿಲನ ಪೇಟ್ರೋಲ್ ಪಂಪನಲ್ಲಿ ಭೋಜನ ಮುಗಿಸಿ, ಜೋರಾಪೂರದ ಶಂಕರಲಿಂಗ ದೇವಸ್ಥಾನಕ್ಕೆ ತೆರಳಲಿದೆ. ಅಲ್ಲಿಂದ ವಿಜಯಪುರ ನಗರದ ಗ್ರಾಮದೇವತೆ ಶ್ರೀ ಸಿದ್ದೇಶ್ವರ […]
Rajyotsava Inamadar: ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು- ಡಾ. ಅರುಣ ಇನಾಮದಾರ
ವಿಜಯಪುರ: ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮತವಾಗದೇ ನಿತ್ಯೋತ್ಸವ ಆಗಬೇಕು ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಇನಾಮದಾರ ಹೇಳಿದರು. ಬಿ ಎಲ್ ಡಿ ಇ ಡೀಮ್ಡ್ ವಿವಿಯಲ್ಲಿ ನಡೆದ 67ನೇ ಕರ್ನಾಟಕ ರಾಜ್ಯೋತ್ಸವವನ್ನು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಆಲೂರು ವೆಂಕಟರಾಯರು ಸೇರಿದಂತೆ ಇತರ ಮಹನೀಯರ ಕೊಡುಗೆ ಅನನ್ಯ. ಎಲ್ಲ ವೈದ್ಯಕೀಯ ವಿಭಾಗದ ವೈದ್ಯರು ರೋಗಿಗಳೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕು ಎಂದು ಡಾ. ಅರುಣ ಇನಾಮದಾರ ಹೇಳಿದರು. […]
Rajyotsava Award: ಪ್ರದೀಪ ಕುಲಕರ್ಣಿ, ಸಚ್ಚೇಂದ್ರ ಲಂಬು, ಅನ್ನಪೂರ್ಣ ಭೋಸ್ಲೆ ಸೇರಿ 20 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
ವಿಜಯಪುರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದ್ದು, ಪತ್ರಕರ್ತರಾದ ಪ್ರದೀಪ ಕುಲಕರ್ಣಿ, ಸಚ್ಚೆಂದ್ರ ಲಂಬು, ಕ್ರಿಕೆಟ್ ಆಟಗಾರ್ತಿ ಅನ್ನಪೂರ್ಣ ಭೋಸಲೆ ಸೇರಿದಂತೆ ಒಟ್ಟು 20 ಜನರಿಗೆ ಈ ಬಾರಿ ಪ್ರಶಸ್ತಿ ಪ್ರಕಟಿಸಲಾಗಿದೆ. ಮಂಗಳವಾರ ನಗರದಲ್ಲಿರುವ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಮತ್ತು ನಾನಾ ಜನಪ್ರತಿನಿಧಿಗಳು ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ನಾನಾ ಕ್ಷೇತ್ರಗಳ ಪ್ರಶಸ್ತಿ ಪುರಸ್ಕೃತರು, ಅವರ ಊರುಗಳ ಮಾಹಿತಿ ಇಲ್ಲಿದೆ ಹೆಸರುಗಳು ಇಲ್ಲಿವೆ ಸಾಹಿತ್ಯ ವಿವೇಕಾನಂದ ಕಾಸಪ್ಪ ಕಲ್ಯಾಣಶೆಟ್ಟಿ- […]
Deepavali Celebration: ಬಸವ ನಾಡಿನಲ್ಲಿ ದೀಪಾವಳಿ ಸಂಭ್ರಮ- ಪಟಾಕಿಗಳ ಮಾರಾಟ, ಖರೀದಿ ಜೋರು
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ, ಸಡಗರ ಮನೆ ಮಾಡಿದೆ. ಬೆಳಿಗ್ಗೆಯಿಂದಲೇ ಹಿಂದೂಗಳು ಪವಿತ್ರ ದೀಪಾವಳಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದು, ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಿದ್ದಾರೆ. ಈ ಮಧ್ಯೆ, ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಸಾಕಷ್ಟು ಕಡಿಮೆಯಾಗಿದ್ದ ಪಟಾಕಿಗಳ ಮಾರಾಟ ಮತ್ತು ಖರೀದಿ ಈ ಬಾರಿ ಮತ್ತೆ ಗತವೈಭವಕ್ಕೆ ಮರಳಿದೆ. ವಿಜಯಪುರ ನಗರದ ವಿಠ್ಠಲ ಮಂದಿರ ರಸ್ತೆಯಲ್ಲಿರುವ ಪಟಾಕಿ ಅಂಗಡಿಗಳಲ್ಲಿ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. ಕೊರೊನಾ ಸೋಂಕಿನ ಭಯದಿಂದ ಕಳೆದ […]
Chennamma Jayanti:: ವಿಜಯಪುರ ಜಿಲ್ಲಾಡಳಿತದಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ
ವಿಜಯಪುರ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಅರ್ಥಪೂರ್ಣ, ಅತ್ಯಂತ ಸರಳವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪ ನಮನ ಸಲ್ಲಿಸಿದರು. ನಂತರ ಎಲ್ಲರಿಗೂ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಶುಭಾಶಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಜಿಲ್ಲಾ ಪಂಚಮಸಾಲಿ […]
Short Film Shooting: ಕಥೆಗಾರ ಡಾ. ಚನ್ನಪ್ಪ ಕಟ್ಟಿ ಅವರ ಊದ್ರ್ವರೇತ ಕಥೆಯಾಧಾರಿತ ಕಿರು ಚಲನಚಿತ್ರ ಶೂಟಿಂಗ್ ಆರಂಭ
ವಿಜಯಪುರ: ಜಿಲ್ಲೆ ಸಿಂದಗಿಯ ಕಥೆಗಾರ ಡಾ. ಚನ್ನಪ್ಪ ಕಟ್ಟಿ ಅವರ’ಊದ್ರ್ವರೇತ ಕಥೆಯಾಧಾರಿತ ಕಿರು ಚಲನಚಿತ್ರದ ಚಿತ್ರೀಕರಣ ವಿಜಯಪುರ ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಆವರಣದಲ್ಲಿರುವ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸಭಾ ಭವನದಲ್ಲಿ ಪ್ರಾರಂಭವಾಯಿತು. ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ ಅವರು ಪೂಜೆ ಮಾಡುವ ಮೂಲಕ ಕಿಚು ಚಲನಚಿತ್ರ ಶೂಟಿಂಗ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಾ. ಎಸ್. ಬಿ. ಮಾಡಗಿ ಕ್ಲ್ಯಾಪ್ ಮಾಡಿದರು. […]