Kore Guruvandane: ಜ್ಞಾನಯೋಗಾಶ್ರಮದಲ್ಲಿ ಬಿ. ಎಂ. ಕೋರ ಪ್ರತಿಷ್ಠಾನದಿಂದ ಗುರುವಂದನೆ, ಮಣ್ಣು ಉಳಿಸಿ ಕಾರ್ಯಕ್ರಮ

ವಿಜಯಪುರ: ನಗರದ ಜ್ಞಾನಯೋಗಾಶ್ರಮದಲ್ಲಿ ಲೋಣಿ ಬಿ. ಕೆ. ಗ್ರಾಮದ ಬಿ. ಎಂ. ಕೋರೆ ಪ್ರತಿಷ್ಠಾನದ ವತಿಯಿಂದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಗುರುವಂದನೆ ಮತ್ತು ಮಣ್ಣು ಉಳಿಸಿ ಅಭಿಯಾನ ಕಾರ್ಯಕ್ರಮ ನಡೆಯಿತು.  ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಮಣ್ಣು ಉಳಿಸಲು ನಾಗರೀಕ ಸಮಾಜ ಕೈಜೋಡಿಸಬೇಕು ಎಂದು ಹೇಳಿದರು. ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗಳ ಕುರಿತು ಸವಿವರ ಮಾಹಿತಿ ನೀಡಿದ ಅವರು, ಮಣ್ಣು ಉಳಿದರೆ ಜೀವ ಸಂಕುಲ ಉಳಿಯಲು ಸಾಧ್ಯ.  ರೇಲ್ವೆ ಇಲಾಖೆಯ ಮುತ್ತಣ ಬಿರಾದಾರ […]

Dasara Padayatre: ಬಸವ ನಾಡಿನಲ್ಲಿ ದಸರಾ ಸಂಭ್ರಮ- ಮಹಿಳೆಯರಿಂದ ದುರ್ಗಾ ದೌಡ್- ಗಮನ ಸೆಳೆದ ಅಪ್ಪು ಪಟ್ಟಣಶೆಟ್ಟಿ ಸರಳತೆ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲಾದ್ಯಂತ ಎಲ್ಲ ಕಡೆಗಳಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದೆ.  ನಾಡಹಬ್ಬದ ಅಂಗವಾಗಿ ನಾನಾ ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ಧಾರ್ಮಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ತರಹೇವಾರಿ ಪೂಜೆಗಳು ನಡೆಯುತ್ತಿವೆ. ಈ ಮಧ್ಯೆ ದಸರಾ ಅಂಗವಾಗಿ ಹಿಂದೂ ಸಂಘಟನೆಯ ಮಹಿಳಾ ನಾಯಕರು ದುರ್ಗಾ ದೌಡ ಪಾದಯಾತ್ರೆ ನಡೆಸಿದ್ದಾರೆ. ವಿಜಯಪುರ ನಗರದ ಸಾವಿರಾರು ಜನ ಮಹಿಳಾ ಕಾರ್ಯಕರ್ತರು ದುರ್ಗಾದೇವಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ‌.  ದಿಶಾ ಫೌಂಡೇಶನ್ ನಾಯಕಿ ಮಂಚಾಲೇಶ್ವರ ನೇತೃತ್ವದಲ್ಲಿ […]

Border Somashekhar: ಗಡಿಭಾಗದ ಗ್ರಾಮಗಳಿಗೆ ಕಡ್ಡಾಯ ಭೇಟಿ ನೀಡಿ- ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾ ರದ ಅಧ್ಯಕ್ಷ ಡಾ. ಸಿ. ಸೋಮಶೇಖರ ಸೂಚನೆ

ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಸಭೆ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸಿ. ಸೋಮಶೇಖರ, ವಿಜಯಪುರ ಜಿಲ್ಲೆಯಲ್ಲಿ ಕೆಲಸ ಮಾಡುವುದು ಅಧಿಕಾರಿಗಳಿಗೆ ಒಂದು ಸುಯೋಗವಿದ್ದಂತೆ.  ಗಡಿಭಾಗದ ಜನರನ್ನು ಸಹ ನಾವು ಪ್ರೀತಿಸಬೇಕು.  ಗಡಿ ಭಾಗದಲ್ಲಿನ ಜನರಲ್ಲಿ ಪ್ರೀತಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಡಿಭಾಗದ ಗ್ರಾಮಗಳಿಗೆ ಕಡ್ಡಾಯ ಭೇಟಿ ನೀಡಿ ಸ್ಪಂದನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗ್ರಾ. […]

CM Alamatti Bagin: ಆಲಮಟ್ಡಿ ಜಲಾಷಯಕ್ಕೆ ಸಿಎಂ‌ ಬಸವರಾಜ ಬೊಮ್ಮಾಯಿ ಗಂಗಾಪೂಜೆ, ಬಾಗೀನ ಸಲ್ಲಿಕೆ

ವಿಜಯಪುರ: ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರು ಜಲಾಷಯಕ್ಕೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ್ದಾರೆ. ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಅವರು ಆಲಮಟ್ಟಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರಕ್ಕೆ ತೆರಳಿ ಕೃಷ್ಣಾ ನದಿಗೆ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.   ಈ ಸಂದರ್ಭದಲ್ಲಿ ನೀರಾವರಿ ಸಚಿವ ಗೋವಿಂದ ಕಾರಜೋಳ, ಮುದ್ದೇಬಿಹಾಳ ಶಾಸಕ ನಡಹಳ್ಳಿ, ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ […]

Nadadevi Procession: ಬಸವ ನಾಡಿನಲ್ಲಿ ಶ್ರೀ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿ ವತಿಯಿಂದ ನಾಡದೇವಿ ಬೆಳ್ಳಿ ಮೂರ್ತಿ ಮೆರವಣಿಗೆ

ವಿಜಯಪುರ: ಬಸವ ನಾಡು ವಿಜಯಪುರ ನಗರದಲ್ಲಿ ಶ್ರೀ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿ ವತಿಯಿಂದ 101 ಕೆಜಿ ಬೆಳ್ಳಿ ನಾಡದೇವಿ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.  ನಾಗಠಾಣದ ಶ್ರೀ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಾಡದೇವಿ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿದರು.  ನಗರದ ರಾಮಮಂದಿ ರಸ್ತೆಯಲ್ಲಿರುವ ನಾಡದೇವಿ ಮೂರ್ತಿ ಪ್ರತಿಷ್ಠಾಪನೆ ಸ್ಥಳದಿಂದ ಆರಂಭವಾದ ಈ ಮೆರವಣಿಗೆಯ ನೇತೃತ್ವವನ್ನು ಮಂಡಳಿಯ ಅಧ್ಯಕ್ಷ ಗುರು ಗಚ್ಚಿನಮಠ ವರಿಸಿದ್ದರು. ನಾನಾ ವಾದ್ಯಮೇಳದೊಂದಿಗೆ ಆರಂಭವಾದ ಮೆರವಣಿಗೆ […]

Tamba Dasara: ತಾಂಬಾದಲ್ಲಿ ಗಮನ ಸೆಳೆದ ದಸರಾ ಆಚರಣೆ ಇಲ್ಲಿಯ ವಿಶೇಷತೆ ಏನು ಗೊತ್ತಾ

ವಿಜಯಪುರ: ದಸರಾ ಎಂದಾಕ್ಷಣ ನಾಡಿನ ಬಹುತೇಕ ಜನರಿಗೆ ನೆನಪಿಗೆ ಬರುವುದು ವಿಶ್ವವಿಖ್ಯಾತ ಮೈಸೂರು ದಸರಾ ಮಾತ್ರ.  ಆದರೆ, ಮೈಸೂರಿನಲ್ಲಿ ನಡೆಯುವಷ್ಟು ಅದ್ಧೂರಿಯಲ್ಲದಿದ್ದರೂ ಅದರಂತೆಯೆ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಬಸವ ನಾಡಿನ ದಸರಾ ಗಮನ ಸೆಳೆಯುತ್ತಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಾಂಬಾದಲ್ಲಿ ದಸರಾ ಅಂಗವಾಗಿ ನಡೆಯುವ ತರಹೇವಾರಿ ಕಾರ್ಯಕ್ರಮಗಳು ಜನಮನ ಸೂರೆಗೊಳ್ಳುತ್ತಿವೆ.  ನಾಡಹಬ್ಬ ದಸರಾ ಅಂಗವಾಗಿ ತಾಂಬಾದಲ್ಲಿ ನಡೆಯುವ ಉತ್ಸವಕ್ಕೆ ಗ್ರಾಮೀಣ ದಸರಾ, ಜಾನಪದ ದಸರಾ, ಉತ್ತರ ಕರ್ನಾಟಕದ ದಸರಾ ಎಂದೇ ಹೆಸರಾಗಿರುವ ಈ ಕಾರ್ಯಕ್ರಮ ಅದ್ಧೂರಿಯಾಗಿ […]

Dasara President: ನಾಡಹಬ್ಬ ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿ- ಕನ್ನಡ ನಾಡನ್ನುಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠವಾಗಿರಬೇಕು‌ ಎಂದ ಸಿಎಂ

ಮೈಸೂರು:: ನಾಡಹಬ್ಬ ದಸರಾಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೈಸೂರು ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಚಾಲನೆ ನೀಡಿದರು. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ 2022ರ ದಸರಾ ಮಹೋತ್ಸವ ರಾಷ್ಟ್ರಪತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ರಾಜ್ಯದ ಸಚಿವರಾದ ಎಸ್. ಟಿ. ಸೋಮಶೇಖರ್ ಹಾಗೂ ವಿ. ಸುನಿಲ್ ಕುಮಾರ್ ಉಪಸ್ಥಿತರಿದ್ದರು. ಕನ್ನಡ ನಾಡನ್ನು ಎಲ್ಲ ಕ್ಷೇತ್ರಗಳಲ್ಲಿ ಶ್ರೇಷ್ಠವಾಗಿಸಬೇಕು ಎಂದ […]

Janapad Utsav: ಬಸವ ನಾಡಿನಲ್ಲಿ ಜನಪರ ಉತ್ಸವದಲ್ಲಿ ದೇಶಿಕಲೆಗಳ ಅನಾವರಣ

ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಜಯಪುರದಲ್ಲಿ ಆಯೋಜನೆ ಮಾಡಿದ್ದ ಜನಪರ ಉತ್ಸವವು ದೇಶಿ ಕಲೆಗಳನ್ನು ಅನಾವರಣಕ್ಕೆ ಮತ್ತೊಮ್ಮೆ ವೇದಿಕೆಯನ್ನು ಒದಗಿಸಿತು. ನಗರದ ಆನಂದ ಮಹಲ್‌ನ ಆವರಣದಲ್ಲಿ ಆಯೋಜನೆ ಮಾಡಿದ್ದ ಜನಪದ ಉತ್ಸವಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ದಂಪತಿ ಸಮೇತ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಸೇರಿದಂತೆ ಇನ್ನೀತರ ಅಧಿಕಾರಿಗಳು, ಶ್ವೇತಾ ದಾನಮ್ಮನವರ ಹಾಗೂ ಇನ್ನೀತರರು ಜನಪರ […]

Janapada University: ಜನಪದ ವಿವಿ ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾವಣೆ ಆಗಲಿ- ಗೋವಿಂದ ಕಾರಜೋಳ

ಬೆಂಗಳೂರು: ಹಾವೇರಿಯಲ್ಲಿರುವ ಜನಪದ ವಿಶ್ವವಿದ್ಯಾಲಯವನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಬೇಕು. ಆಗ ಮಾತ್ರ ಅಲ್ಲಿ ಚಟುವಟಿಕೆಗಳು ನಡೆಯುತ್ತವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು. ವಿಧಾನ ಪರಿಷತ್‌ನಲ್ಲಿ ನಡೆದ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಅವರು, ಜಾನಪದ ವಿಶ್ವವಿದ್ಯಾಲಯ ನನ್ನ ಕಾಲದಲ್ಲಿಯೇ ಪ್ರಾರಂಭ ಆಯ್ತು. ಕರ್ನಾಟಕದ ಮಧ್ಯಭಾಗದಲ್ಲಿ ಇರಬೇಕು ಎಂದು ಹಾವೇರಿಯಲ್ಲಿ ಜಾನಪದ ವಿವಿಯನ್ನು ಪ್ರಾರಂಭಿಸಲಾಯ್ತು. ಕೆಲವರ ತಲೆಯಲ್ಲಿ ಏನಿತ್ತು ಅಂದ್ರೇ ವಿಶ್ವವಿದ್ಯಾಲಯ ಎಂದು ಬಂದುಬಿಟ್ಟರೇ ಉನ್ನತ ಶಿಕ್ಷಣ ಇಲಾಖೆಯಲ್ಲಿಯೇ […]

Banjara Karajol: ಬಂಜಾರ ಸಮುದಾಯದ ಸಂಸ್ಕೃತಿ ಶ್ರೀಮಂತವಾಗಿದೆ- ಉಮೇಶ ಕಾರಜೋಳ

ವಿಜಯಪುರ: ಬಂಜಾರಾ ಸಮುದಾಯ ವಿಶಿಷ್ಠ ಭಾಷೆ ಮತ್ತು ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ ಎಂದು ಬಂಜಾರಾ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ. ವಿಜಯಪುರ ತಾಲೂಕಿನ ಮಖಣಾಪುರ ಗ್ರಾಮದ ಎಲ್. ಟಿ.-2 ರಲ್ಲಿ ಬಂಜಾರಾ ಗಬ್ರು ಸೇವಾ ಸಂಘದ ಲಾಂಛನ ಬಿಡುಗಡೆ ಮತ್ತು ಕಚೇರಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಬಂಜಾರಾ ಸಮುದಾಯದ ಸಂತ ಸೇವಾಲಾಲ ಮಹಾರಾಜರು ಸಮಾಜ ಸುಧಾರಕರಾಗಿ ಜನಾಂಗದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಸೇವಾಲಾಲ್ ಮಹಾರಾಜರು ಸಮಾಜದಲ್ಲಿನ ಮೌಡ್ಯತೆ ತೊಡೆದು ಹಾಕಿದ ಸಂತರು ಅವರಂತೆ […]