Vishwakarna Jayanti: ವಿಜಯಪುರ ಜಿಲ್ಲಾಡಳಿತದಿಂದ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ

ವಿಜಯಪುರ: ಜಿಲ್ಲಾಡಳಿತ, ಜಿ. ಪಂ. ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಜಯಪುರ ನಗರದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ಬೆಳಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ವಿಶ್ವಕರ್ಮ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಚಾಲನೆ ನೀಡಿದರು. ನಂತರ ಮೆರವಣಿಗೆಯು ಜಾನಪದ ಕಲಾ ತಂಡಗಳೊಂದಿಗೆ ಗಾಂಧಿ ಚೌಕ್, ಶ್ರೀ ಬಸವೇಶ್ವರ ವೃತ್ತ, ಡಾ. ಬಿ. ಆರ್. ಅಂಬೇಡ್ಕರ್ ವೃತ್ತ, ಶ್ರಿ ಕನಕದಾಸ ವೃತ್ತದ ಮೂಲಕ ನಗರದ ಕಂದಗಲ್ ಶ್ರೀ ಹನುಮಂತರಾಯ […]

Ambedkar Programme: ಎಸ್ ಬಿ ಆರ್ಟ್ಸ್ ಆ್ಯಂಡ್ ಕೆಸಿಪಿ ಸಾಯಿನ್ಸ್ ಕಾಲೇಜಿನಲ್ಲಿ ಡಾ. ಅಂಬೇಡ್ಕರ್ ಓದು ಕಾರ್ಯಕ್ರಮ

ವಿಜಯಪುರ:  ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಶಿಕ್ಷಣ ಮತ್ತು ಗ್ರಂಥಾಲಯಗಳ ಕುರಿತು ಹೊಂದಿದ್ದ ನಿಲುವುಗಳು ಇಂದಿನ ಸಮಾಜ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ದಾರಿದೀಪವಾಗಿವೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ದೊಡ್ಡಮನಿ ಹೇಳಿದರು. ನಗರದ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಡಾ. ಅಂಬೇಡ್ಕರ್ ಓದು ಎಂಬ ಅಭಿಯಾನದಡಿ ಡಾ.ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಪರಿಚಯ ಕುರಿತು ಕಾಲೇಜು […]

Hindi Language: ಭಾವನೆಗಳನ್ನು ವ್ಯಕ್ತಗೊಳಿಸಲು ಹಿಂದಿ ಭಾಷೆ ಸಹಕಾರಿಯಾಗಿದೆ- ಮೇ. ರಾಜೇಂದ್ರ ಸಿಂಗ್

ವಿಜಯಪುರ: ಭಾವನೆಗಳನ್ನು ವ್ಯಕ್ತಗೊಳಿಸಲು ಹಿಂದಿ ಭಾಷೆಯು ಸಹಕಾರಿಯಾಗಿದೆ.  ದೇಶಾದ್ಯಂತ ಹಿಂದಿ ಸಂವಹನ ಭಾಷೆಯಾಗಿ ಬೆಳೆದಿದೆ ಎಂದು ವಿಜಯಪುರ ಎನ್ ಸಿ ಸಿ ಚೀಫ್ ಹವಾಲ್ದಾರ ಮೇ. ರಾಜೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ವಿಜಯಪುರ ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗವು ಆಯೋಜಿಸಿದ್ದ ಹಿಂದಿ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 14ನೇ ಸೆಪ್ಟೆಂಬರ್ 1949 ರಂದು ಹಿಂದಿಯನ್ನು ರಾಷ್ಟ್ರಭಾಷೆ ಎಂದು ಸೂಚಿಸಲು ಒಪ್ಪಿದರು.  ಆದರೆ, ದಕ್ಷಿಣ ಭಾರತೀಯರು ಒಪ್ಪದ ಕಾರಣ ಹಿಂದಿ ರಾಜ್ಯ ಭಾಷೆಯಾಗಿಯೇ ಉಳಿಯಿತು.  […]

Premanand Devotion: ಶ್ರೀ ಸಿದ್ಧರಾಮೇಶ್ವರನಿಗೆ ಆರು ವರ್ಷಗಳಿಂದ ಭಕ್ತಿ ಸೇವೆ ಮಾಡುತ್ತ ಸಂತಸದಿಂದಿರುವ ಪ್ರೇಮಾನಂದ- ಗಮನ ಸೆಳೆಯುತ್ತಿದೆ ಹತ್ತಿ ಗೆಳೆಯರ ಬಳಕದ ಕಾಯಕ

ವಿಜಯಪುರ: ಭಕ್ತರು ತಮ್ಮಿಷ್ಟದ ದೇವರಿಗೆ ನಾನಾ ರೀತಿಯಲ್ಲಿ ಸೇವೆ ಸಲ್ಲಿಸುವುದು ವಾಡಿಕೆ.  ಆದರೆ, ಬಸವ ನಾಡಿನ ಈ ಗೆಳೆಯರ ಬಳಗದ ಕಾಯಕ ಸತತ ಆರು ವರ್ಷಗಳಿಂದ ಪ್ರತಿ ವಾರ ತಪ್ಪದೆ ಸಾಗಿದೆ.  ದೇವರು ಮತ್ತು ಸಮಾಜ ಸೇವೆಯ ಮಾಡುವ ಮೂಲಕ ಸಂತಸ ಪಡುತ್ತಿರುವ ಪ್ರೇಮಾನಂದನ ಸ್ಟೋರಿ ಇಲ್ಲಿದೆ. ಗೆಳೆಯರ ಬಳಗದ ಹೆಸರಿನಲ್ಲಿ ಯುವಪಡೆ ಮೋಜು ಮಸ್ತಿಯಲ್ಲಿ ತೊಡಗುವ ಹಲವಾರು ಉದಾಹರಣೆಗಳಿಗೆ ಅಪವಾದವಾಗಿದೆ ಬಸವ ನಾಡಿನ ಈ ಸ್ನೇಹಿತರ ಸ್ಟೋರಿ. ಸತತ 350 ವಾರ ಅಂದರೆ ಕಳೆದ ಆರು […]

Saint Heritage: ಭಾರತೀಯ ಸಂತ ಪರಂಪರೆಯಲ್ಲಿ ಬಂಥನಾಳ ಲಚ್ಯಾಣ ಪರಂಪರೆಗೆ ಮಹತ್ವದ ಸ್ಥಾನವಿದೆ- ಗುರುಸಂಗನ ಬಸವ ಶ್ರೀ

ವಿಜಯಪುರ: ಭಾರತೀಯ ಸಂತ ಪರಂಪರೆಯಲ್ಲಿ ಬಂಥನಾಳ- ಲಚ್ಶಾಣ ಪರಂಪರೆಗೆ ಮಹತ್ವದ ಸ್ಥಾನವಿದೆ ಎಂದು ಯರನಾಳದ ಗುರುಸಂಗನಬಸವ ಶ್ರೀಗಳು ಹೇಳಿದರು. ವಿಜಯಪುರ ತಾಲೂಕಿನ ಕಗ್ಗೊಡ ಗ್ರಾಮದಲ್ಲಿ ಸಿದ್ಧಲಿಂಗ ಮಹಾರಾಜರ ಮಠದಲ್ಲಿ ಆಯೋಜಿಸಲಾಗಿದ್ದ ಲಚ್ಶಾಣ ಸಿದ್ಧಲಿಂಗ ಮಹಾರಾಜರ ಜೀವನದರ್ಶನ ಪ್ರವಚನ ಮಂಗಲ ಹಾಗೂ ಶ್ರೀಮಠದ ಮಾಧವಾನಂದ ಮಹಾರಾಜರು ಲೋಕ ಕಲ್ಶಾಣಾರ್ಥವಾಗಿ 41ದಿನಗಳ ಕಾಲ ಕೈಗೊಂಡಿದ್ದ ಅನುಷ್ಠಾನ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು. ಬಂಥನಾಳದ ಶಂಕರಲಿಂಗ ಮಹಾರಾಜರ ಪ್ರೀತಿಯ ಶಿಷ್ಯರಾಗಿದ್ದ ಲಚ್ಶಾಣದ ಸಿದ್ಧಲಿಂಗ ಮಹಾರಾಜರು ಹಲವು ಪವಾಡಗಳನ್ನು ಮಾಡಿ ಭಕ್ತರಿಗೆ ನೆರವಾಗಿದ್ದರು […]

Yatnal Appreciation: ಶ್ರೀ ಶಂಕರಲಿಂಗ ಗಜಾನನ ತರುಣ ಮಂಡಳಿ ಸೇವೆಯನ್ನು ಶ್ಲಾಘಿಸಿದ ಶಾಸಕ ಯತ್ನಾಳ

ವಿಜಯಪುರ: ನಗರದ ಜೋರಾಪುರ ಪೇಠದ ಶ್ರೀ ಶಂಕರಲಿಂಗ ಗಜಾನನ ತರುಣ ಮಂಡಳಿ ಪ್ರತಿಷ್ಠಾಪಿಸಿದ್ದ ಸಂಕಲ್ಪ ಸಿದ್ಧಿ ಗಣಪತಿಯ ವಿಸರ್ಜನೆ ಮೆರವಣಿಗೆಯನ್ನು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದೇಶೀಯ ಕಲೆ, ಸಾಂಸ್ಕೃತಿಕ ಬಿಂಬವಾದ ಲೇಜಿಮ್ ನ್ನು ಮಂಡಳಿಯ ಕಾರ್ಯಕರ್ತರು ತರಬೇತಿ ಪಡೆದು ಮೆರವಣಿಗೆಯಲ್ಲಿ ಪ್ರದರ್ಶನ ನೀಡುತ್ತಿರುವುದು ಇತರರಿಗೆ ಮಾದರಿಯಾಗಿದೆ.  ಅಲ್ಲದೆ, ಏಳು ದಿನಗಳ ಕಾಲ ಅನೇಕ ಸಾಮಾಜಿಕ ಸಾಂಸ್ಕೃತಿಕ ಮತ್ತು ಉಚಿತ ಲಸಿಕಾ ಮೇಳ ,ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ,ಆರೋಗ್ಯ ಅರಿವು […]

Teachers Day: ಪ್ರೇರಣಾ ಶಿಕ್ಷಣ ಸಂಸ್ಥೆಯಲ್ಲಿ ಗಮನ ಸೆಳೆದ ಶಿಕ್ಷಕರ ದಿನಾಚರಣೆ

ವಿಜಯಪುರ: ನಗರದ ಹೊರ ವಲಯದಲ್ಲಿರುವ ಪ್ರೇರಣಾ ಶಿಕ್ಷಣ ಸಂಸ್ಥೆಯಲ್ಲಿಶಿಕ್ಷಕರ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ನಿರಾಶ್ರೀತರ ಕೇಂದ್ರದಲ್ಲಿರುವ ಹಿರಿಯರನ್ನು ಕರೆಯಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾತೃ ದೇವೋ ಭವ, ಪಿತೃ ದೇವೋ ಭವ, ಮನೆಯೇ ಮೊದಲ ಪಾಠಶಾಲೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಈ ವಿಶೇಷ ಕಾರ್ಯಕ್ರಮ ಯಶಸ್ವಿಯಾಯಿತು. ಮಕ್ಕಳಲ್ಲಿ ತಂದೆ ತಾಯಿ ಎಂದರೇನು? ಅವರಿಗೆ ಯಾವ ರೀತಿಯ ಗೌರವ‌, ಆರೈಕೆ ಮಾಡಬೇಕು? ಇರದಿದ್ದರೆ ಅವರಿಗೆ ಆಗುವ ತೊಂದರೆ ಏನು ಎಂಬುದನ್ನು ನಿರಾಶ್ರೀತರ ಕೇಂದ್ರದ […]

Ganesh Immerision:l DC: ಸೆ.4ರಿಂದ ಗಣಪತಿ ವಿಗ್ರಹ ವಿಸರ್ಜನೆ- ತಾತ್ಕಾಲಿಕ ಹೊಂಡಗಳ ನಿರ್ಮಾಣ ವ್ಯವಸ್ಥೆ ಪರಿಶೀಲಿಸಿದ ಜಿಲ್ಲಾಧಿಕಾರಿ

ವಿಜಯಪುರ: ಸೆ. 4, 6, 8 ಮತ್ತು 10ರಂದು ಗಣೇಶ ವಿಗ್ರಹಗಳ ವಿಸರ್ಜನೆ ನಡೆಯುವ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ನಗರದ ನಾನಾ ಕಡೆ ಸಂಚರಿಸಿ, ತಾತ್ಕಾಲಿಕ ಹೊಂಡ ನಿರ್ಮಾಣದ ವ್ಯವಸ್ಥೆಯನ್ನು ಪರಿಶೀಲಿಸಿದರು. ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕೆ ಅವರೊಂದಿಗೆ ನಗರದ ವಾರ್ಡ 31ರಲ್ಲಿನ ತಾಜಬಾವಡಿ ಸೇರಿದಂತೆ ನಾನಾ ಕಡೆ ತೆರಳಿ, ಮಹಾನಗರ ಪಾಲಿಕೆಯಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ ಹೊಂಡಗಳ ಹಾಗೂ ಸಂಚಾರಿ ಗಣೇಶ ಮೂರ್ತಿ ವಿಸರ್ಜನೆ ವಾಹನ ವ್ಯವಸ್ಥೆಯ ಸಮಗ್ರ ಮಾಹಿತಿ […]

School Ganesha: ಗಣೇಶನ ವಿಚಾರಕ್ಕೆ ಗದ್ದಲ- ಶಾಲೆಯ ಹೊರಗೆ ಪಾಠ ಕೇಳಿದ ವಿದ್ಯಾರ್ಥಿಗಳು- ಪೊಲೀಸರ ಮಧ್ಯಸ್ಥಿಕೆಯಿಂದ ಬಗೆಹರಿದ ಸಮಸ್ಯೆ

ವಿಜಯಪುರ: ಸರಕಾರಿ ಶಾಲೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ವಿಚಾರ ತಾರಕಕ್ಕೇರಿ ವಿದ್ಯಾರ್ಥಿಗಳು ಶಾಲೆಗೆ ಕೀಲಿ ಹಾಕಿ ಪ್ರತಿಭಟನೆ ಮಾಡಿದ ಘಟನೆ ಬಸವ ನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರಿನಲ್ಲಿ ನಡೆದಿದೆ. ಅಷ್ಟೇ ಅಲ್ಲ,ವಿದ್ಯಾರ್ಥಿಗಳು ಶಾಲೆಯ ಹೊರಗಡೆ ಮರದ ಕೆಳಗಡೆ ಕುಳಿತು ಪಾಠ ಆಲಿಸಿದ್ದಾರೆ. ಯಲಗೂರು ಸರಕಾರಿ ಪ್ರೌಢ ಶಾಲೆಯಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡದೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಜೊತೆ ಸೇರಿದ ಪೋಷಕರು ಕೂಡ ಪ್ರತಿಭಟನೆ ನಡೆಸಿದ್ದಾರೆ. ಈ ಶಾಲೆಯಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿ ಆಚರಣೆ […]

Eco Friebdly Ganesh: ಬಸವ ನಾಡಿನಲ್ಲಿ ಸದ್ದಿಲ್ಲದೆ ನಡೆಯಿತು 2000 ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಉಚಿತ ವಿತರಣೆ

ವಿಜಯಪುರ- ಬಸವನಾಡು ವಿಜಯಪುರ ನಗರದಲ್ಲಿ ಗಣೇಶೋತ್ಸವ ಸಂಭ್ರಮ ಜೋರಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಂಕಾಗಿದ್ದ ಸಾರ್ವಜನಿಕ ಗಣೇಶ ಉತ್ಸವಕ್ಕೆ ಈಗ ನಿಷೇಧ ತೆರವಾಗಿರುವುದು ವರದಾನವಾಗಿದೆ. ಇದರ ಜೊತೆಯಲ್ಲಿಯೇ ವಿಜಯಪುರ ನಗರದಲ್ಲಿ ಪರಿಸರಕ್ಕೆ ಪೂರಕವಾದ ಕಾರ್ಯವೊಂದು ಸದ್ದಿಲ್ಲದೆ ನಡೆಯುತ್ತಿದೆ. ಕಳೆದ ವರ್ಷ ಆರಂಭವಾದ ಈ ಕಾರ್ಯ ಎರಡನೇ ವರ್ಷವಾದ ಈ ಬಾರಿ ಮತ್ತಷ್ಟು ವೇಗ ಪಡೆದಿದ್ದು ಸಾರ್ವಜನಿಕರಿಗೂ ಖುಷಿ ತಂದಿದೆ. ಗಣೇಶ್ ಚತುರ್ಥಿ ಅಂಗವಾಗಿ ಕಳೆದ ವರ್ಷದಿಂದ ವಿಜಯಪುರ ನಗರದಲ್ಲಿ ಶ್ರೀ ಗಜಾನನ ಮಹಾಮಂಡಳ ವತಿಯಿಂದ […]