Temple Prasad: ಅಡವಿಶಂಕಲಿಂಗ ದೇವಸ್ಥಾನದಲ್ಲಿ ಕಳೆದ 29 ವಾರದಿಂದ ಪ್ರತಿ ಸೋಮವಾರ ಸದ್ದಿಲ್ಲದೇ ನಡೆಯುತ್ತಿದೆ ಭಕ್ತರಿಂದ ಪ್ರಸಾದ ವಿತರಣೆ

ವಿಜಯಪುರ: ಬಸವ ನಾಡು ವಿಜಯಪುರ ನಗರದ ಅಡವಿ ಶಂಕರಲಿಂಗ ದೇವಸ್ಥಾನದಲ್ಲಿ ಕಳೆದ 29 ವಾರಗಳಿಂದ ಪ್ರತಿ ಸೋಮವಾರ ಸದ್ದಿಲ್ಲದೇ ಭಕ್ತರ ತಂಡವೊಂದು ಪ್ರಸಾದ ವಿತರಿಸುವ ಮೂಲಕ ದೇವರ ಸೇವೆ ಮಾಡುತ್ತಿದೆ.  ಉದ್ಯಮಿ ಉಮಾಕಾಂತ ಲೋಣಿ ಅವರು 7ನೇ ಮಾರ್ಚ್ 2002 ರಿಂದ ಈ ಸೇವೆ ಆರಂಭಿಸಿದ್ದಾರೆ. ಪ್ರತಿ ಸೋಮವಾರಕ್ಕೊಮ್ಮೆ ಉಮಾಕಾಂತ ಲೋಣಿ ಅವರ ಅಧ್ಯಕ್ಷತೆಯಲ್ಲಿ ಅವರ ಸ್ನೇಹಿತರು ಕೂಡಿಕೊಂಡು ಶ್ರೀ ಅಡವಿಶಂಕರಲಿಂಗ ಅನ್ನದಾಸೋಹ ಸಮಿತಿ ಹೆಸರಿನಲ್ಲಿ ಈ ಪ್ರಸಾದ ವಿತರಣೆ ಮಾಡುತ್ತಿದ್ದಾರೆ.  ಪ್ರತಿ ಸೋಮವಾರ ಬೆಳಿಗ್ಗೆ ದೇವಸ್ಥಾನಕ್ಕೆ […]

Gokulastami Karjol: ಮೊಮ್ಮಕ್ಕಳೊಂದಿಗೆ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ಸಚಿವ ಗೋವಿಂದ ಕಾರಜೋಳ

ಬೆಂಗಳೂರು: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಮ್ಮ ಮೊಮ್ಮಕ್ಕಳೊಂದಿಗೆ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ. ಬೆಂಗಳೂರಿನಲ್ಲಿರುವ ಸಚಿವರ ನಿವಾಸದಲ್ಲಿ ಮೊಮ್ಮಕ್ಕಳಾದ ಓಂ, ಆದ್ಯ ಮತ್ತು ಅನ್ವದಾ ಅವರು ಕೃಷ್ಣ ಮತ್ತು ರಾಧೆಯರ ವೇಷ ಧರಿಸಿದ್ದರು.  ಈ ಸಂದರ್ಭದಲ್ಲಿ ಮೊಮ್ಮಕ್ಕಳೊಂದಿಗೆ ಬೆರೆತ ಸಚಿವ ಗೋವಿಂದ ಕಾರಜೋಳ ಗೋಕುಲಾಷ್ಟಮಿ ಸಂಭ್ರಮದಲ್ಲಿ ಪಾಲ್ಗೋಂಡು ಸಂತಸ ಪಟ್ಟರು. ಕಿರಿಯ ಮೊಮ್ಮಗಳು ಅನ್ವದಾಳನ್ನು ಎತ್ತಿಕೊಂಡು ಉಳದ ಇಬ್ಬರು ಮೊಮ್ಮಕ್ಕಳೊಂದಿಗೆ ಭಾವಚಿತ್ರ ತೆಗೆಸಿಕೊಂಡಿದ್ದು ವಿಶೇಷವಾಗಿತ್ತು.

BVVS Celebration: ಬಾಗಲಕೋಟೆ ಹೋಮಿಯೋಪಥಿ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬಾಗಲಕೋಟೆ: ನಗರದ ಬಿ ವಿ ವಿ ಎಸ್ ಹೋಮಿಯೋಪಥೊಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಿಕಾಜು೯ನ ಸಾಸನೂರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯ ಚಂದ್ರಶೇಖರ ಶೆಟ್ಟರ ಮಾತನಾಡಿದರು. ಪ್ರಾಚಾರ್ಯ ಡಾ. ಅರುಣ ಹೂಲಿ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ರವಿ ಕೋಟೆಣ್ಣವರ ಮಾರ್ಗದಥಶನದಲ್ಲಿ ವಿದ್ಯರ್ಥಿಗಳು ಆಕಷ೯ಕ ಪಥಸಂಚಲನದೊಂದಿಗೆ ಧ್ವಜವಂದನೆ ಮಾಡಿದರು. ಡಾ. ಪ್ರದೀಪ ರೆಡ್ಡಿಯವರ ಮಾರ್ಗದರನದಲ್ಲಿನದಲ್ಲಿ ವೈದ್ಯ ವಿದ್ಯಾರ್ಥಿಗಳು ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿದ್ಯಾರ್ಥಿನಿ ದಕ್ಷತಾ ಹೊರಟ್ಟಿ ನಿರೂಪಿಸಿದರು. ಉಪನ್ಯಾಕಡಾ. ಮಿಲಿಂದ ಬೆಳಗಾಂವಕರ, ಡಾ. ವಿಜಯಲಕ್ಷ್ಮಿ. […]

DC Office Flag: ಸಾರ್ವಜನಿಕ ಸೇವಾ ಮನೋಭಾವ ಹೊಂದಲು ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಕರೆ

ವಿಜಯಪುರ: ಅಧಿಕಾರಿಗಳು ಮತ್ತು ಸಿಬ್ಬಂದಿಯು ಸೇವಾ ಮನೋಭಾವದೊಂದಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಕರೆ ನೀಡಿದ್ದಾರೆ.  ಜಿಲ್ಲಾಡಳಿತ ಭವನದಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಸಹ ಈ ಜಗತ್ತು ಬದಲಾಗಬೇಕು ಎಂದು ಬಯಸುತ್ತಾರೆ. ಹಾಗೆ ಹೇಳುವ ನಾವುಗಳು ನಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನರಿಯಬೇಕು. ಧೈರ್ಯ ಸಾಹಸ ಶಕ್ತಿ ಇರುವ ಕಡೆಗೆ ದೌರ್ಬಲ್ಯ ಸುಳಿಯುವುದಿಲ್ಲ. ಆತ್ಮವಿಶ್ವಾಸವೊಂದಿದ್ದರೆ ಬೆಟ್ಟದಂತಹ ಕಷ್ಟವನ್ನೂ ಎದುರಿಸಬಹುದಾಗಿದೆ ಎಂದ ಜಿಲ್ಲಾಧಿಕಾರಿಗಳು, ಸೇವೆಯೇ ನನ್ನ ಧರ್ಮ, ನನ್ನ ಕರ್ತವ್ಯ ಎಂಬುದನ್ನು ಪ್ರತಿಯೊಬ್ಬರು […]

ZP Flag: ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ರಾಹುಲ ಶಿಂಧೆ ಧ್ವಜಾರೋಹಣ

ವಿಜಯಪುರ: ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿ. ಪಂ. ಸಿಇಓ ರಾಹುಲ್ ಶಿಂಧೆ ಅವರು ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಜಿ. ಪಂ. ಆವರಣದಲ್ಲಿ ಹಬ್ಬದ ಸಂಭ್ರಮ ಕಂಡು ಬಂದಿತು. ಕಚೇರಿಯ ಮಹಿಳಾ ನೌಕರರು ಬಣ್ಣಬಣ್ಣದ ರಂಗೋಲಿ ಬಿಡಿಸಿದ್ದರು. ಆವರಣದ ಎಲ್ಲ ದಿಕ್ಕುಗಳಲ್ಲಿ ತ್ರಿವರ್ಣದ ಬಲೂನ್‌ಗಳನ್ನು ಅಳವಡಿಸಿ ಕಚೇರಿಯನ್ನು ಸೌಂದರ್ಯೀಕರಣಗೊಳಿಸಲಾಗಿತ್ತು. ಧ್ವಜಾರೋಹಣ ಸಂದರ್ಭದಲ್ಲಿ ತ್ರಿವರ್ಣದ ಬಲೂನ್‌ಗಳನ್ನು ಆಕಾಶದತ್ತ ಹಾರಿಸಿ ಸಂಭ್ರಮಿಸಲಾಯಿತು. ಬಳಿಕ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ […]

Indepenence Day Celebrated: ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಗುಣ ನಿಯಂತ್ರಣ ತರಬೇತಿ ಕಟ್ಟಡದಲ್ಲಿ ಸ್ವಾತಂತ್ರ್ಯ ದಿನಾಚರಣೆ

ವಿಜಯಪುರ: ನಗರದ ಸಂಜೀವಿನಿ ಆಸ್ಪತ್ರೆಯ ಹತ್ತಿರ ವಿಜಯಪುರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಗುಣ ನಿಯಂತ್ರಣ ತರಬೇತಿ ಕಟ್ಟಡದ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕರ್ಮ ನಡೆಯಿತು.  ಸಂಸ್ಥೆಯ ಅಧ್ಯಕ್ಷ ವಿಜುಗೌಡ ಎಸ್. ಪಾಟೀಲ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಯೋಧರು ಹಾಗೂ ಅವರ ಬಲಿದಾನವನ್ನು ಸ್ಮರಿಸಿದರು.  ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯು ರಾಜ್ಯದಲ್ಲಿ ರೈತರಿಗೆ ಪ್ರಮಾಣಿತ ಬಿತ್ತನೆ […]

School Celebration: ಶಾಂತಿನಿಕೇತನ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ವಿಜಯಪುರ: ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.  ನಿವೃತ್ತ ಸೈನಿಕ ಸುಭಾಸ ಸಜ್ಜನ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು,  ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನಿಯರನ್ನು ನಾವೆಲ್ಲರೂ ನೆನೆಯಬೇಕು.  ಎಲ್ಲರೂ ದೇಶ ಸೇವೆಗಾಗಿ ದುಡಿಯಬೇಕು ಎಂದು ಹೇಳಿದರು. ಸಂಸ್ಥೆಯ  ಅಧ್ಯಕ್ಷೆ ಶೀಲಾ ಬಿರಾದಾರ ಮಾತನಾಡಿ, ಪ್ರತಿಯೊಬ್ಬರು ಕುಟುಂಬ, ಪಾಲಕರು, ಸ್ನೇಹಿತರು, ಅಜ್ಜ-ಅಜ್ಜಿ, ಸಮಾಜವನ್ನು ಪ್ರೀತಿಸುವ, ಸ್ನೇಹದಿಂದ ಕಾಣುವ ಗುಣವನ್ನು ಬೆಳೆಸಿಕೊಳ್ಳಬೇಕು.  ವಿದ್ಯಾರ್ಥಿಗಳು ದೇಶಭಕ್ತಿ, ದೇಶಸೇವೆ ಮಾಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.  ಸೈನಿಕರು ತಮ್ಮ ವೈಯಕ್ತಿಕ ಜೀವನವನ್ನು […]

BJP Independence Day: ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯೋತ್ಸವ- ಧ್ವಜಾರೋಹಣ ಮಾಡಿದ ಆರ್. ಎಸ್. ಪಾಟೀಲ ಕೂಚಬಾಳ

ವಿಜಯಪುರ: ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಧ್ವಜಾರೋಹಣ ನೆರವೇರಿಸಿದರು.  ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ರಕ್ತವನ್ನೇ ಹರಿಸಿದ್ದಾರೆ,  ಅವರೆಲ್ಲರ ತ್ಯಾಗ, ಬಲಿದಾನದ ಫಲವಾಗಿ ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ,  ಅವರಿಗೆ ನಾವು ಸದಾ ಋಣಿಯಾಗಿರಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಅಪ್ಪು […]

Congress Celebration: ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿಬಾಚರಣೆ- ವೈಜನಾಥ ಕರ್ಪೂರಮಠ ಧ್ವಜಾರೋಹಣ

ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ರವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ, ಡಾ. ಬಿ. ಆರ್. ಅಂಬೇಡ್ಕರ, ಜವಾಹರಲಾಲ ನೆಹರು ಹಾಗೂ ಇನ್ನೂ ಅನೇಕ ಮಹಾಪುರುಷರು ಈ ದೇಶಕ್ಕಾಗಿ ಮಾಡಿದ ತ್ಯಾಗ ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇದನ್ನು ಏಕತೆ ಹಾಗೂ ಸಾಮರಸ್ಯದಿಂದ ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದರು. ಸ್ವಾತಂತ್ರ್ಯದ ಹೋರಾಟದಲ್ಲಿ ಕಾಂಗ್ರೆಸ್ಸಿನ ಪಾತ್ರ ಪ್ರಮುಖವಾಗಿದೆ. ಇಂದು ಸರಕಾರದ […]

Independence Day Katti: ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿಜಯಪುರ ಕೊಡುಗೆ ಅಪಾರ: ಉಮೇಶ ಕತ್ತಿ

ವಿಜಯಪುರ: ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ವಿಜಯಪುರ ಜಿಲ್ಲೆಯು ಮಹತ್ತರ ಕೊಡುಗೆ ನೀಡಿದೆ ಎಂದು ಅರಣ್ಯ ಹಾಗೂ ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಹೇಳಿದರು. ವಿಜಯಪುರ ನಗರದಲ್ಲಿ ಜಿಲ್ಲಾಡಳಿತದಿಂದ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣದ ನೆರವೇರಿಸಿ ಅವರು ಮಾತನಾಡಿದರು. ನುಡಿದಂತೆ ನಡೆದ ಬಸವಾದಿ ಶರಣರು, ಸಂತರು, ಸೂಫಿಗಳು, ದಾರ್ಶನಿಕರು ಮತ್ತು ಕೆಚ್ಚೆದೆಯ ದೇಶಪ್ರೇಮಿಗಳು ಜನಿಸಿ, ಬಾಳಿ-ಬದುಕಿ, […]