Journalists Felicitation: ಹಿರಿಯ ಪತ್ರಕರ್ತರಾದ ಶ್ರೀರಾಮ ಪಿಂಗಳೆ, ಗೋಪಾಲ ನಾಯಕ, ರಫಿ ಭಂಡಾರಿ ಅವರಿಗೆ ಕಾನಿಪ ದಿಂದ ಸನ್ಮಾನ

ವಿಜಯಪುರ: ದೇಶಾದ್ಯಂತ ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ ಸಂಭ್ರಮದಿಂದ ನಡೆಯುತ್ತಿದೆ.  ಇದರ ಅಂಗವಾಗಿ ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಶ್ರೀರಾಮ ಪಿಂಗಳೆ ಅವರಿಗೆ ಸನ್ಮಾನ ಜಿಲ್ಲೆಯ ಹಿರಿಯ ಪತ್ರಕರ್ತ 91 ವರ್ಷದ ಶ್ರೀರಾಮ ಪಿಂಗಳೆ ಅವರ ಮನೆಗೆ ತೆರಳಿದ ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮತ್ತು ಪದಾಧಿಕಾರಿಗಳು ಶ್ರೀರಾಮ ಪಿಂಗಳೆ ದಂಪತಿಯನ್ನು ಪ್ರೀತಿಯಿಂದ ಗೌರವಿಸಿ ರಾಷ್ಟ್ರಧ್ವಜ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ನಿವೃತ್ತ ವಾರ್ತಾಧಿಕಾರಿ ಪಿ. […]

Freedom Malagatti: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರ ಸ್ಮರಣೆ ಅಗತ್ಯ- ಕ್ಯಾ. ಮಹೇಶ ಮಾಲಗತ್ರಿ

ವಿಜಯಪುರ:  ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಾಯಕರು ನಮಗೆಲ್ಲ ಸ್ಪೂರ್ತಿಯಾಗಬೇಕು ಎಂದು ವಿಜಯಪುರ ಎಸಿ ವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗತ್ತಿ ಹೇಳಿದರು. ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಎಸ್ ಆವರಣದ ಶಿಕ್ಷಣ ಸಂಸ್ಥೆಗಳ ಸಮೂಹದ ವತಿಯಿಂದ ಆಯೋಜಿಸಲಾಗಿದ್ದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಚ್ರಧ್ವಜವನ್ನು ಹಾರಿಸಿ ಮತ್ತು ರಾಷ್ಚ್ರಕ್ಕೆ ಮತ್ತು ರಾಷ್ಟ್ರಧ್ವಜಕ್ಕೆ ಗೌರವಿಸೋಣ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಅವರು ಧ್ವಜಾರೋಹಣ ನೆರವೇಹಿಸಿ ಮಾತನಾಡಿದರು. ದೇಶಕ್ಜೆ ಸ್ವಾತಂತ್ರ್ಯ ತಂದುಕೊಟ್ಡ ಮಹಾತ್ಮಾ ಗಾಂಧಿ, ಜವಾಹರಲಾಲ ನೆಹರು, ಸುಭಾಷ […]

Flag Yatnal: ರಾಷ್ಟ್ರ ಧ್ವಜಕ್ಕಿಂತ ಬೇರೆ ಯಾವ ಧ್ವಜವೂ ದೊಡ್ಡದಲ್ಲ- ಶಾಸಕ ಯತ್ನಾಳ

ವಿಜಯಪುರ: ವಿಜಯಪುರ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ, ದೇಶ ವಿಭಜನೆಯ ಘೋರ ನೆನಪಿನ ದಿನಾಚರಣೆ ಕಾರ್ಯಕ್ರಮ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆಯಿತು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ‌ ಯತ್ನಾಳ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ‌ದೇಶಕ್ಕೆ ಮಾನ್ಯ ನರೇಂದ್ರ ಮೋದಿಜಿಯವರು ಪ್ರಧಾನ ಮಂತ್ರಿಗಳಾಗಿರುವುದು ನಮ್ಮೆಲ್ಲರ ಸುದೈವವಾಗಿದೆ. ಭಾರತ ದೇಶದ ಅಭಿವೃದ್ಧಿಯ ಮಾದರಿಯು ಈಗ ಇತರರಿಗೆ ಮಾದರಿಯಾಗಿದೆ ಎಂದು ತಿಳಿಸಿದರು. ದೇಶಕ್ಕಾಗಿ ಅನೇಕ ಮಹಾತ್ಮರು ಪ್ರಾಣ ತ್ಯಾಗ […]

Basavana Bagewadi Tiranga: ಬಸವಣ್ಣನ ಜನ್ಮಸ್ಥಳದಲ್ಲಿ ತಲೆಯ ಮೇಲೆ ರೊಟ್ಟಿ ಬುತ್ತಿ, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಸಂಚರಿಸಿ ಜಾತ್ರೆಗೆ ಮೆರಗು ನೀಡಿದ ಮಹಿಳೆಯರು

ವಿಜಯಪುರ: ದೇಶಾದ್ಯಂತ ಈಗ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಮನೆ ಮಾಡಿದೆ.  ಇತ್ತ ಇದೇ ಸಮಯದಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಅಣ್ಣ ಬಸವಣ್ಣನ ಜಾತ್ರೆಯೂ ಕೂಡ ಆರಂಭವಾಗಿದೆ. ಈ ಜಾತ್ರೆಗೆ ಬಸವನ ಬಾಗೇವಾಡಿ ಪಟ್ಟಣದ ಯುವತಿಯರು ಮತ್ತು ಮಹಿಳೆಯರು ಜಾತ್ರೆಯ ದಾಸೋಹಕ್ಕೆ ನೆರವಾಗಲು ತಂತಮ್ಮ ಮನೆಗಳಲ್ಲಿ ರೊಟ್ಟಿಯನ್ನು ಮಾಡಿ ಜಾತ್ರಾ ಸಮಿತಿಯವರಿಗೆ ನೀಡುತ್ತಿದ್ದಾರೆ.  ಈ ಸಮಯದಲ್ಲಿಯೂ ದೇಶಪ್ರೇಮ ಮೆರೆದ ಮಹಿಳೆಯರು ಬಸವನ ಬಾಗೇವಾಡಿ ಪಟ್ಟಣಾದ್ಯಂತ ತಲೆಯ ಮೇಲೆ ರೊಟ್ಟಿಯ ಬುತ್ತಿ ಹೊತ್ತುಕೊಂಡು ಕೈಯಲ್ಲಿ […]

Tiranga Umesh Karajol: ಕನ್ನೂರಿನಲ್ಲಿ ಗ್ರಾಮಸ್ಥರೊಂದಿಗೆ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಬಿಜೆಪಿ ಯುವ ಧುರೀಣ ಉಮೇಶ ಕಾರಜೋಳ

ವಿಜಯಪುರ: ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ವಿಜಯಪುರ ಜಿಲ್ಲೆಯ ಕನ್ನೂರಿನಲ್ಲಿ ನಡೆದ ಹರ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಧುರೀಣ ಉಮೇಶ ಕಾರಜೋಳ ಪಾಲ್ಗೋಂಡರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷರೂ ಆಗಿರುವ ಅವರು, ಕನ್ನೂರಿನಲ್ಲಿ ಕಲ್ಲಪ್ಪ ಬೆಳ್ಳುಂಡಗಿ ಅವರ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರೊಂದಿಗೆ ಪ್ರತ್ಯೇಕವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೋಂಡರು. ಬಳಿಕ ಮಾತನಾಡಿದ ಅವರು, ರಾಷ್ಟ್ರಧ್ವಜ ನಮ್ಮ ದೇಶಾಭಿಮಾನದ ಪ್ರತೀಕ,  ನಮ್ಮ ದೇಶದ ಗೌರವದ ಸಂಕೇತ.  ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಮನೆ-ಮನೆಯಲ್ಲಿಯೂ ರಾಷ್ಟ್ರಧ್ವಜ […]

Har Ghar Tiranga: ಮನೆ ಮನಗಳಲ್ಲಿ ರಾರಾಜಿಸುತ್ತಿವೆ ತ್ರಿವರ್ಣ ಧ್ವಜಗಳು- ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಬಲು ಜೋರು

ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಈ ಬಾರಿ ಮೂರು ದಿನಗಳ ಕಾಲ ಮನೆಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಿದೆ.  ಅಲ್ಲದೇ, ಈ ಅಮೃತ ಮಹೋತ್ಸವ ಸದಾಕಾಲ ನೆನಪಿನಲ್ಲಿ ಉಳಿಯುವಂತಾಗಲು ನಾನಾ ಕಾರ್ಯಕ್ರಮಗಳನ್ನೂ ಆಯೋಜಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿಯೂ ಮನೆಮನೆಗಳಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿವೆ.  ವಿಜಯಪುರ ನಗರದಲ್ಲಿಯೂ ಎಲ್ಲ ಕಡೆಗಳಲ್ಲಿ ಸಾರ್ವಜನಿಕರೂ ಕೂಡ ತಂತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಭಕ್ತಿಗೆ ಮೆರಗು ನೀಡಿದ್ದಾರೆ.  […]

Tiranga Campaign: ಹರ್ ಘರ್ ತಿರಂಗಾ- ಗಮನ ಸೆಳೆದ ಶಾಂತಿ ನಿಕೇತನ ಶಾಲೆಯ ಮಕ್ಕಳ ತ್ರಿವರ್ಣ ಧ್ವಜ ಯಾತ್ರೆ

ವಿಜಯಪುರ: ದೇಶಾದ್ಯಂತ ಈಗ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಮತ್ತು ಸಡಗರ ಮನೆ ಮಾಡಿದೆ.  ಪ್ರತಿ ಮನದಲ್ಲಿಯೂ ದೇಶಪ್ರೇಮ ತುಂಬಿ ತುಳುಕುತ್ತಿದ್ದು, ಎಲ್ಲರೂ ತ್ರಿವರ್ಣ ಧ್ವಜದತ್ತ ಗಮನ ಹರಿಸಿದ್ದಾರೆ.  ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬಸವ ನಾಡು ವಿಜಯಪುರ ನಗರದಲ್ಲಿ ಶಾಂತಿ ನಿಕೇತನ ಶಾಲೆಯ ವಿದ್ಯಾರ್ಥಿಗಳು ನಡೆಸಿದ ತಿರಂಗಾ ಯಾತ್ರೆ ಗಮನ ಸೆಳೆಯಿತು. ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಚಾಲನೆ ನೀಡಿದ ಈ ತಿರಂಗಾ ಯಾತ್ರೆಯಲ್ಲಿ ಪಾಲ್ಗೋಂಡ ಸಾವಿರಾರು ವಿದ್ಯಾರ್ಥಿಗಳು ವಂದೇ ಮಾತರಂ.. ಭಾರತ […]

Tiranga CEO: ಹರ್ ಘರ್ ತಿರಂಗಾ ಅಭಿಯಾನ- ವಿಜಯಪುರ ಜಿ. ಪಂ. ನಲ್ಲಿ ರಾಷ್ಟಧ್ವಜ ವಿತರಣೆಗೆ ಸಿಇಓ ರಾಹುಲ ಶಿಂಧೆ ಚಾಲನೆ

ವಿಜಯಪುರ: 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿ ಮತ್ತು ರಾಷ್ಟ್ರಧ್ವಜ ವಿತರಣೆ ಕಾರ್ಯಕ್ರಮಕ್ಕೆ ವಿಜಯಪುರ ಜಿ. ಪಂ. ಸಿಇಓ ರಾಹುಲ ಶಿಂಧೆ ಚಾಲನೆ ನೀಡಿದರು.  ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ಮತ್ತು ತಾಲೂಕು ಕಚೇರಿಗಳ ಸಿಬ್ಬಂದಿಯು ಆ. 13 ರಿಂದ 15ರ ವರೆಗೆ ತಂತಮ್ಮ ಮನೆಗಳ ಮೇಲೆ ಸರಿಯಾದ ರೀತಿಯಲ್ಲಿ ರಾಷ್ಟ್ರಧ್ವಜ ಹಾರಿಸಬೇಕು.  ಅಮೃತ ಮಹೋತ್ಸವದ ಸಂಭ್ರಮಾಚರಣೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಂಗೋಲಿ […]

Raksha Bandhan: ರವೀಂದ್ರನಾಥ ಠಾಗೋರ ಶಾಲೆಯಲ್ಲಿ ರಕ್ಷಾ ಬಂಧನ ಸಂಭ್ರಮ

ವಿಜಯಪುರಛ ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಪ್ರೀತಿ ಮತ್ತು ಬಾಂಧವ್ಯವನ್ನು ಬೆಸೆಯುವ ರಕ್ಷ ಬಂಧನ ಹಬ್ಬವನ್ನು ನಗರದ ರವೀಂದ್ರಾನಾಥ ಠಾಗೋರ ಶಾಲೆಯಲ್ಲಿ ವಿದ್ಯಾರ್ಥಿಗಳು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು. ರವೀಂದ್ರನಾಥ ಠಾಗೋರ್ ಶಾಲೆಯಲ್ಲಿ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಶಾಲಾ ಸಮವಸ್ತ್ರದ ಬದಲು ಬಣ್ಮ ಬಣ್ಮದ ಬಟ್ಟೆ ಧರಿಸಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಹೋದರ ಸಹೋದರಿಯರ ಬಾಂಧವ್ಯಕ್ಕೆ ಸಾಕ್ಷಿಯಾದರು.    

Amrut Mahotsav: ಅಮೃತ ಮಹೋತ್ಸವ: ಪರಿಸರ ಸ್ನೇಹಿ ವಾಹನ ಸೇವೆಗೆ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಚಾಲನೆ

ವಿಜಯಪುರ: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಹರ್ ಘರ್ ತಿರಂಗಾ ಕಾರ್ಯಕ್ರಮ ವಿಜಯಪುರ ಹೋಟೆಲ್ ಮಯೂರ ಆದಿಲ್ ಶಾಹಿ ವಿಜಯಪುರ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಐತಿಹಾಸಿಕ ವಿಜಯಪುರ ಮಹಾನಗರಕ್ಕೆ ಪರಿಸರ ಸ್ನೇಹಿ ಹಾಗೂ ಪ್ರವಾಸಿಗರ ಆಪ್ತನಾಗಿ ವಿದ್ಯುತ್ ಕಾರು ಮತ್ತು ಆಟೋ ಸೇವೆಯ ಎಲೆಕ್ಟ್ರಿಕಲ್ ಟ್ಯಾಕ್ಸಿ ಸೇವೆಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಚಾಲನೆ ನೀಡಿದರು. […]