Tiranga Campaign: ಹರ್ ಘರ್ ತಿರಂಗಾ- ಗಮನ ಸೆಳೆದ ಶಾಂತಿ ನಿಕೇತನ ಶಾಲೆಯ ಮಕ್ಕಳ ತ್ರಿವರ್ಣ ಧ್ವಜ ಯಾತ್ರೆ
ವಿಜಯಪುರ: ದೇಶಾದ್ಯಂತ ಈಗ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಮತ್ತು ಸಡಗರ ಮನೆ ಮಾಡಿದೆ. ಪ್ರತಿ ಮನದಲ್ಲಿಯೂ ದೇಶಪ್ರೇಮ ತುಂಬಿ ತುಳುಕುತ್ತಿದ್ದು, ಎಲ್ಲರೂ ತ್ರಿವರ್ಣ ಧ್ವಜದತ್ತ ಗಮನ ಹರಿಸಿದ್ದಾರೆ. ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬಸವ ನಾಡು ವಿಜಯಪುರ ನಗರದಲ್ಲಿ ಶಾಂತಿ ನಿಕೇತನ ಶಾಲೆಯ ವಿದ್ಯಾರ್ಥಿಗಳು ನಡೆಸಿದ ತಿರಂಗಾ ಯಾತ್ರೆ ಗಮನ ಸೆಳೆಯಿತು. ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಚಾಲನೆ ನೀಡಿದ ಈ ತಿರಂಗಾ ಯಾತ್ರೆಯಲ್ಲಿ ಪಾಲ್ಗೋಂಡ ಸಾವಿರಾರು ವಿದ್ಯಾರ್ಥಿಗಳು ವಂದೇ ಮಾತರಂ.. ಭಾರತ […]
Tiranga CEO: ಹರ್ ಘರ್ ತಿರಂಗಾ ಅಭಿಯಾನ- ವಿಜಯಪುರ ಜಿ. ಪಂ. ನಲ್ಲಿ ರಾಷ್ಟಧ್ವಜ ವಿತರಣೆಗೆ ಸಿಇಓ ರಾಹುಲ ಶಿಂಧೆ ಚಾಲನೆ
ವಿಜಯಪುರ: 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿ ಮತ್ತು ರಾಷ್ಟ್ರಧ್ವಜ ವಿತರಣೆ ಕಾರ್ಯಕ್ರಮಕ್ಕೆ ವಿಜಯಪುರ ಜಿ. ಪಂ. ಸಿಇಓ ರಾಹುಲ ಶಿಂಧೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ಮತ್ತು ತಾಲೂಕು ಕಚೇರಿಗಳ ಸಿಬ್ಬಂದಿಯು ಆ. 13 ರಿಂದ 15ರ ವರೆಗೆ ತಂತಮ್ಮ ಮನೆಗಳ ಮೇಲೆ ಸರಿಯಾದ ರೀತಿಯಲ್ಲಿ ರಾಷ್ಟ್ರಧ್ವಜ ಹಾರಿಸಬೇಕು. ಅಮೃತ ಮಹೋತ್ಸವದ ಸಂಭ್ರಮಾಚರಣೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಂಗೋಲಿ […]
Raksha Bandhan: ರವೀಂದ್ರನಾಥ ಠಾಗೋರ ಶಾಲೆಯಲ್ಲಿ ರಕ್ಷಾ ಬಂಧನ ಸಂಭ್ರಮ
ವಿಜಯಪುರಛ ಅಣ್ಣ-ತಂಗಿ, ಅಕ್ಕ-ತಮ್ಮಂದಿರ ಪ್ರೀತಿ ಮತ್ತು ಬಾಂಧವ್ಯವನ್ನು ಬೆಸೆಯುವ ರಕ್ಷ ಬಂಧನ ಹಬ್ಬವನ್ನು ನಗರದ ರವೀಂದ್ರಾನಾಥ ಠಾಗೋರ ಶಾಲೆಯಲ್ಲಿ ವಿದ್ಯಾರ್ಥಿಗಳು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು. ರವೀಂದ್ರನಾಥ ಠಾಗೋರ್ ಶಾಲೆಯಲ್ಲಿ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಶಾಲಾ ಸಮವಸ್ತ್ರದ ಬದಲು ಬಣ್ಮ ಬಣ್ಮದ ಬಟ್ಟೆ ಧರಿಸಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಹೋದರ ಸಹೋದರಿಯರ ಬಾಂಧವ್ಯಕ್ಕೆ ಸಾಕ್ಷಿಯಾದರು.
Amrut Mahotsav: ಅಮೃತ ಮಹೋತ್ಸವ: ಪರಿಸರ ಸ್ನೇಹಿ ವಾಹನ ಸೇವೆಗೆ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಚಾಲನೆ
ವಿಜಯಪುರ: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಹರ್ ಘರ್ ತಿರಂಗಾ ಕಾರ್ಯಕ್ರಮ ವಿಜಯಪುರ ಹೋಟೆಲ್ ಮಯೂರ ಆದಿಲ್ ಶಾಹಿ ವಿಜಯಪುರ ಆವರಣದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಐತಿಹಾಸಿಕ ವಿಜಯಪುರ ಮಹಾನಗರಕ್ಕೆ ಪರಿಸರ ಸ್ನೇಹಿ ಹಾಗೂ ಪ್ರವಾಸಿಗರ ಆಪ್ತನಾಗಿ ವಿದ್ಯುತ್ ಕಾರು ಮತ್ತು ಆಟೋ ಸೇವೆಯ ಎಲೆಕ್ಟ್ರಿಕಲ್ ಟ್ಯಾಕ್ಸಿ ಸೇವೆಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಚಾಲನೆ ನೀಡಿದರು. […]
Person Worship: ವ್ಯಕ್ತಿಪೂಜೆ ಮಿತಿ ಮೀರಿದರೆ ವ್ಯಕ್ತಿ, ಆತನ ಸಂಘ, ಪಕ್ಷ ಹಾಳಾಗುತ್ತವೆ- ಸು. ರಾಮಣ್ಣ
ವಿಜಯಪುರ: ವ್ಯಕ್ತಿಪೂಜೆ ಮಿತಿ ಮೀರಿದರೇ ಆ ವ್ಯಕ್ತಿಯ ಜೊತೆಗೆ ಆತನ ಸಂಘ ಮತ್ತು ಪಕ್ಷವೂ ಹಾಳಾಗಿ ಹೋಗುತ್ತದೆ. ಈ ಹಿನ್ನೆಲೆಯಲ್ಲಿಯೇ ಆರ್ ಎಸ್ ಎಸ್ ಮೊದಲ ಸರಸಂಘಚಾಲಕ ಡಾ. ಕೇಶವ ಬಲರಾಮ ಹೆಗಡೆವಾರ ವ್ಯಕ್ತಿ ಪೂಜೆಯನ್ನು ವಿರೋಧಿಸಿದ್ದರು ಎಂದು ಆರ್ ಎಸ್ ಎಸ್ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದ್ದಾರೆ. ವಿಜಯಪುರದಲ್ಲಿ ವೀರಶೈವ ಲಿಂಗಾಯಿತ ಸಮುದಾಯ ಭವನದಲ್ಲಿ ನಡೆದ ಮರಾಠಿ ಪುಸ್ತಕ ರಂಗಾ ಹರಿ ಚಂದ್ರಶೇಖರ ಭಂಡಾರಿ ಅವರು ಕನ್ನಡಕ್ಕೆ ಅನುವಾದಸಿರುವ ಕೃತಿಯನ್ನು […]
Raksha Bandhan: ಪತ್ರಕರ್ತರಿಗೆ ರಾಖಿ ಕಟ್ಟಿದ ಬ್ರಹ್ಮಕುಮಾರಿ ಈಶ್ವರಿಯ ವಿವಿ ಸಹೋದರಿಯರು
ವಿಜಯಪುರ: ಒಡಹುಟ್ಟಿದವರು ಮಾತ್ರ ಸಹೋದರರು ಅಲ್ಲ. ರಕ್ಷಣೆ ಕೊಡುವವರೂ ಎಲ್ಲರೂ ಸಹೋದರ ಬಾಂಧವರೇ ಎಂದು ಬಿ. ಕೆ. ಸರೋಜಿನಿ ಹೇಳಿದರು. ವಿಜಯಪುರ ನಗರದ ಹುತಾತ್ಮ ವೃತ್ತದಲ್ಲಿ ಗುರುವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಪತ್ರಕರ್ತರಿಗೆ ಆಯೋಜಿಸಲಾದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ರಾಖಿ ಕಟ್ಟಿ ಅವರು ಮಾತನಾಡಿದರು. ಮಾತು ಎಲ್ಲರ ಜೀವನ ಪರಿವರ್ತನೆ ಮಾಡುವಂತಿರಬೇಕು. ಸಮಯದ ಜಾಗೃತೆ ಇರಬೇಕು. ಸಮಯ ಹೋದರೆ ಮರಳಿ ಬರುವುದಿಲ್ಲ. ಪಂಚಭೂತವಾದ ಕೆಟ್ಟಗುಣಗಳನ್ನು ದಾನವಾಗಿ ಭಗವಂತನಿಗೆ ಕೊಡಬೇಕು. ರಕ್ಷಾ ಬಂಧನ ಕೇವಲ […]
Nalatwad Moharrum: ಬಸವ ನಾಡಿನ ವೈಶಿಷ್ಠ್ಯ- ಅಗ್ನಿಯಲ್ಲಿ ಹಾಯ್ದು ಮೊಹಂ ಉತ್ಸವದಲ್ಲಿ ಪಾಲ್ಗೋಂಡ ಬಾಂಧವರು
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆ ತರಹೇವಾರಿ ಜಾತ್ರೆ, ಸಂಪ್ರದಾಯ, ಆಚರಣೆ, ಕೋಮು ಸೌಹಾರ್ದತೆಗೆ ಹೆಸರುವಾಸಿ. ರಾಜ್ಯ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಈ ಜಿಲ್ಲೆಯಲ್ಲಿ ಹಬ್ಬಗಳು, ಆಚರಣೆಗಳು, ಜಾತ್ರೆಗಳು, ಉತ್ಸವಗಳು ಅತೀ ಹೆಚ್ಚು. ಪ್ರತಿ ದಿನವೂ ಒಂದಿಲ್ಲೊಂದು ಗ್ರಾಮಗಳಲ್ಲಿ ಜಾತ್ರೆ, ಉತ್ಸವ, ಹಬ್ಬಗಳು, ಕಾರ್ಯಕ್ರಮಗಳ ನಡೆದೇ ಇರುತ್ತವೆ. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಸಾರ್ಜಜನಿಕವಾಗಿ ಆಚರಿಸಲಾಗುವು ಜಾತ್ರೆಗಳು, ಹಬ್ಬ, ಹರಿದಿನಗಳು, ಉತ್ಸವಗಳಿಗೆ ಮಂಕು ಕವಿದಿತ್ತು. ಆದರೆ, ಈ ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿದ್ದ ಆತಂಕ ಬಹುತೇಕ ಕಡಿಮೆಯಾಗಿರುವ […]
Moharrum Celebraton: ಬಸವ ನಾಡಿನಲ್ಲಿ ಮೊಹರಂ ಸಂಭ್ರಮ- ಗಮನ ಸೆಳೆಯುತ್ತಿದ್ದಾರೆ ಹುಲಿವೇಷಧಾರಿಗಳು
ವಿಜಯಪುರ: ಶರಣರ ನಾಡು. ಸೂಫಿ ಸಂತರ ಬೀಡು. ಬಸವ ನಾಡು ವಿಜಯಪುರ ಈಗ ಭಾವೈಕ್ಯತೆಗೆ ಪ್ರತೀಕವಾಗಿರುವ ಮೊಹರಂ ಸಂಭ್ರಮದಲ್ಲಿದೆ. ಮೊಹರಂ ಅಂಗವಾಗಿ ಹಿಂದೂ ಮಕ್ಕಳು ಮತ್ತು ಯುವಕರೂ ಕೂಡ ಹುಲಿವೇಷ ಹಾಕುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಕಳೆಗುಂದಿದ್ದ ಆಚರಣೆಗೆ ಈಗ ಗತವೈಭವಕ್ಕೆ ಮರಳುತ್ತಿದೆ. ಐತಿಹಾಸಿಕ ವಿಜಯಪುರ ನಗರದಲ್ಲಿ ಮೊಹರಂ ಹಬ್ಬದ ಅಂಗವಾಗಿ ಹುಲಿ ವೇಷಧಾರಿಗಳಿಗೆ ಬಣ್ಣ ಹಚ್ಚುವ ಕೆಲಸವೂ ಜೋರಾಗಿತ್ತು. ವಿಜಯಪುರ ನಗರದ ಉಪ್ಪಲಿ ಬುರುಜ್ ಹತ್ತಿರದ ಕಲಾವಿದ ನಾರಾಯಣ ಕಾಳೆ ಇವರ ನೇತೃತ್ವದಲ್ಲಿ […]
Har Ghar Tiranga: ಗ್ರಾ. ಪಂ. ಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಜಿ. ಪಂ. ಸಿಇಓ ರಾಹುಲ್ ಶಿಂಧೆ ಚಾಲನೆ
ವಿಜಯಪುರ: ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕಣಾಕಾರಿ ರಾಹುಲ ಶಿಂಧೆ ಅವರು ವಿಜಯಪುರ ತಾಲೂಕಿನ ನಾನಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ತಿಡಗುಂದಿ ಗ್ರಾಮ ಪಂಚಾಯಿತಿ, ಇಂಡಿ ತಾಲೂಕಿನ ಹೊರ್ತಿ ಮತ್ತು ಝಳಕಿ ಗ್ರಾಮ ಪಂಚಾಯಿತಿ ಹಾಗೂ ಚಡಚಣ ತಾಲೂಕಿನ ಬರಡೋಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ರಾಷ್ಟ್ರಧ್ವಜ ವಿತರಣೆ ಮಾಡಿದರು. ಸರಕಾರದ ನಿಯಮದಂತೆ ಪ್ರತಿ ಮನೆ-ಮನೆಯಲ್ಲಿಯೂ […]
Kasapa Joshi: ಕಸಾಪ ರಾಜ್ಯಾಧ್ಯಕ್ಷ ನಾ. ಡಾ. ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವ ದರ್ಜೆಗೆ ಸಮನಾದ ಸ್ಥಾನಮಾನ- ಹಾಸಿಂಪೀರ ವಾಲಿಕಾರ ಅಭಿನಂದನೆ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವರ ದರ್ಜೆಗೆ ಸಮನಾದ ಸ್ಥಾನಮಾನ ನೀಡಿ ಸರಕಾರ ಆದೇಶ ನೀಡಿದೆ. ಈ ತಕ್ಷಣದಿಂದಲೇ ಜಾರಿಗೆ ಬರುವಂತ ಸರಕಾರ ಈ ಆದೇಶ ಹೊರಡಿಸಿದೆ. ಹಾಸಿಂಪೀರ ವಾಲಿಕಾರ ಅಭಿನಂದನೆ ಕನ್ನಡ ಸಾಹಿತ್ಯ ಪರಿಷತ ರಾಜ್ಯಾಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಿ ಸರಕಾರ ಗೌರವಿಸಿರುವುದಕ್ಕೆ ಕನ್ನಡ ಸಾಹಿತ್ಯ ಪರಿಷತ ವಿಜಯಪುರ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿನಂದನೆ ಸಲ್ಲಿಸಿದ್ದಾರೆ.