ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶ್ರೀ ಭಗಿರಥ ಜಯಂತಿ ಆಚರಣೆ
ವಿಜಯಪುರ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ಭಗಿರಥ ಜಯಂತಿಯನ್ನು ಆಚರಿಸಲಾಯಿತು. ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಭಗೀರಥ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಶ್ರೀ ಭಗಿರಥ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಅಯ್ಯೂಬ ದ್ರಾಕ್ಷಿ, ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಜಕ್ಕಪ್ಪ ಯಡವೆ, […]
ವಿದ್ಯಾರ್ಥಿಯನ್ನು ಶೈಕ್ಷಣಿಕವಾಗಿ ದತ್ತು ಪಡೆದು ಬಸವ ಜಯಂತಿ ಆಚರಿಸಿದ ಶರಣ ಸಂಗಮೇಶ ಬಬಲೇಶ್ವರ ದಂಪತಿ
ವಿಜಯಪುರ: ನಗರದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟಿನ ಸಂಸ್ಥಾಪಕ ಮತ್ತು ಶರಣ ಸಂಗಮೇಶ ಬಬಲೇಶ್ವರ ದಂಪತಿ ಬಡ ವಿದ್ಯಾರ್ಥಿಯೊಬ್ಬನನ್ನು ಶೈಕ್ಷಣಿಕವಾಗಿ ದತ್ತು ಪಡೆದು ಬಸವ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ನಗರದಲ್ಲಿರುವ ಟ್ರಸ್ಚಿನ ಕಾರ್ಯಾಲಯದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿದ್ಯಾರ್ಥಿ ಅಶೋಕ ಜಾಧವ ಅವರನ್ನು ದತ್ತು ಪಡೆದು ಸಂಗಮಶ ಮತ್ತು ಅವರ ಪತ್ನಿ ಶ್ವೇತಾ ಬಬಲೇಶ್ವರ ದಂಪತಿ ಬಸವೇಶ್ವರರ ಆಶಯಗಳಿಗೆ ತಕ್ಕಂತೆ ಸಮಾಜಮುಖಿ ಕಾರ್ಯ ಮಾಡಿದರು. ದತ್ತು ಪಡೆಯಲು […]
ಬಸವ ನಾಡಿನಲ್ಲಿ ಜಿಲ್ಲಾಡಳಿತದಿಂದ ಬಸವ ಜಯಂತಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರ ಮತ್ತು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಲೋಕಸಭೆ ಚುನಾವಣೆ ಹಿನ್ನೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ತಹಸೀಲ್ದಾರ ಕವಿತಾ ಅವರು ಬಸವಣ್ಣ ಮತ್ತು ಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು. ಇದಕ್ಕೂ ಮೊದಲು […]
ಬಿಜೆಪಿಗೂ ಜೈನ ಸಮುದಾಯಕ್ಕೂ ಜನಸಂಘ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ- ಪ್ರಕಾಶ ಅಕ್ಕಲಕೋಟ
ವಿಜಯಪುರ: ಬಿಜೆಪಿಗೂ ಜೈನ ಸಮುದಾಯಕ್ಕೂ ಜನಸಂಘ ಕಾಲದಿಂದ ಅವಿನಾಭಾವ ಸಂಬಂಧವಿದ್ದು, ಇಂದಿಗೂ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತಾ ನಮಗೆ ಬೆನ್ನೆಲುಬಾಗಿ ನಿಂತಿದೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಹೇಳಿದ್ದಾರೆ. ನಗರದ ಬಿಜೆಪಿ ಚುನಾವಣೆ ಕಾರ್ಯಾಲಯದಲ್ಲಿ ನಡೆದ ಭಗವಾನ್ ಮಹಾವೀರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿಯೇ ಅತೀ ಹೆಚ್ಚು ಶ್ರೀಮಂತಿಕೆ ಸಮಾಜವಾಗಿದ್ದರೂ ಜೈನರು ತಮ್ಮ ಶೇ. 70 ರಷ್ಟು ಆದಾಯವನ್ನು ಸಮಾಜಕ್ಕೆ ಅರ್ಪಿಸುವ ಹೃದಯಶ್ರೀಮಂತಿಕೆ ಹೊಂದಿದ್ದಾರೆ. ದೇಶದಲ್ಲಿಯೇ ಅತೀ ಹೆಚ್ಚು […]
ಅಂಬೇಡ್ಕರ ಜಯಂತಿ: ಸಚಿವ ಎಂ. ಬಿ. ಪಾಟೀಲ ಅವರಿಂದ ಸಂವಿಧಾನ ಶಿಲ್ಪಿಯ ಪುತ್ಥಳಿಗೆ ಗೌರವ ನಮನ
ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 133ನೇ ಜನ್ಮದಿನದ ಅಂಗವಾಗಿ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ. ಇಂದು ರವಿವಾರ ನಗರದ ಅಂಬೇಡ್ಕರ್ ಚೌಕಿಗೆ ತೆರಳಿದ ಸಚಿವರು, ಜಯಂತಿ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಪ್ರೊ. ರಾಜು ಆಲಗೂರ, ಷಹಜಹಾನ್ ಮುಲ್ಲಾ, […]
ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಕೊಡುಗೆ ಅಪಾರ- ಶಾಸಕ ಬಸನಗೌಡ ಪಾಟೀಲ ಯತ್ನಾಳ
ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ ಮಹಾನ್ ನಾಯಕರಾದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿಗೆ ಮಾದರಿಯಾದ ಸಂವಿಧಾನದ ನೀಡಿದ್ದಾರೆ. ದೇಶಕ್ಕೆ ನೀಡಿರುವ ಕೊಡುವೆ ಅಪಾರವಾದದ್ದು. ಆ ಕೊಡುಗೆಗಳನ್ನು ಸ್ಮರಿಸುವ ಹಾಗೂ ಅವರ ಉದ್ದೇಶಗಳನ್ನು ಈಡೇರಿಸುವ ಕೆಲಸವನ್ನು ಭಾರತೀಯ ಜನತಾ ಪಾರ್ಟಿ […]
ಅಂಬೇಡ್ಕರ್ ಅವರನ್ನು ಪ್ರತಿನಿತ್ಯ ಸ್ಮರಿಸುವ ಕಾರ್ಯವಾಗಬೇಕು- ಡಿಸಿ ಟಿ. ಭೂಬಾಲನ್
ವಿಜಯಪುರ: ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ರಚಿಸಿದ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರು ಪ್ರತಿನಿತ್ಯ ಸ್ಮರಿಸಿ ಅವರ ಸಂದೇಶಗಳನ್ನು ಪಾಲಿಸುವುದರ ಮೂಲಕ ಸಂವಿಧಾನವನ್ನು ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕರೆ ನೀಡಿದರು. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಡಳಿತದ ವತಿಯಿಂದ ರವಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಹಮ್ಮಿಕೊಂಡ ಜಯಂತಿ ಕಾರ್ಯಕ್ರಮದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಡಾ.ಬಾಬಾಸಾಹೇಬ್ ಅಂಬೇಡ್ಕರವರು ಬಡವರು, ಪರಿಶಿಷ್ಟ ಜಾತಿ, […]
ಮಗು ಸಾತ್ವಿಕ, ಪೋಷಕರು, ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೋಂಡವರಿಗೆ ಲಚ್ಚಾಣದಲ್ಲಿ ಸನ್ಮಾನ
ವಿಜಯಪುರ: ತೆರೆದ ಕೊಳವೆ ಭಾವಿಗೆ ತಲೆ ಕೆಳಗಾಗಿ ಬಿದ್ದು 20 ಗಂಟೆಗಳ ನಂತರ ಸಾವನ್ನು ಜಯಿಸಿ ಬಂದ 13 ತಿಂಗಳ ಮಗು ಸಾತ್ವಿಕ ಮುಜಗೊಂಡ ಮತ್ತು ಆತನ ಪೋಷಕರನ್ನು ಇಂಡಿ ತಾಲೂಕಿನ ಸುಕ್ಷೇತ್ರ ಲತ್ಚಾಣದಲ್ಲಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಆಶೀರ್ವದಿಸಲಾಯಿತು. ಲಚ್ಯಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ರಾತ್ರಿ ನಡೆದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಬಂಥನಾಳದ ಡಾ. ವೃಷಭಲಿಂಗ ಮಹಾಶಿವಹಿಗಳ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರವಚನಕಾರ ಮಹಾಂತೀಯ ಶಾಸ್ತ್ರಗಳು ಸನ್ಮಾನಿಸಿ ಗೌರವಿಸಿದರು. ಈ […]
ಕತಕನಹಳ್ಳಿ ಜಾನುವಾರು ಜಾತ್ರೆ ಪ್ರಾರಂಭ- ಶಾಸಕ ಸುನೀಲಗೌಡ ಪಾಟೀಲ ಚಾಲನೆ
ವಿಜಯಪುರ: ತಾಲೂಕಿನ ಸುಕ್ಷೇತ್ರ ಕತಕನಹಳ್ಳಿ ಶ್ರೀ ಗುರುಚಕ್ರವರ್ತಿ ಸದಾಶಿವ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಜಾನುವಾರು ಜಾತ್ರೆಗೆ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಚಾಲನೆ ನೀಡಿದರು. ಮಠದ ಶ್ರೀ ಶಿವಯ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುನೀಲಗೌಡ ಪಾಟೀಲ ಜಾನುವಾರು ಜಾತ್ರೆ ಉದ್ಘಾಟಿಸಿದರು. ಅಲ್ಲದೇ, ಗೋಮಾತೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಉದ್ಯಮಿ ಬಾಬುಗೌಡ ಬಿರಾದಾರ, ಮುಖಂಡರಾದ ಬಸವರಾಜ ಕೌಲಗಿ, ಡಾ. ಗಂಗಾಧರ ಸಂಬಣ್ಣಿ, ಸಂಗಮೇಶ […]
ಬಾಹುಬಲಿಗೆ ನೈವೇದ್ಯ ಕಟಂಬಲಿ- ಬಸವ ನಾಡಿನಲ್ಲಿ ವಿಶಿಷ್ಠ ಜಾತ್ರೆಗೆ ಸಾಕ್ಷಿಯಾದ ರಂಭಾಪುರ ಜನತೆ
ವಿಜಯಪುರ: ದೇಶದಲ್ಲಿಯೇ ಅತೀ ಹೆಚ್ಚು ಜಾತ್ರೆ ನಡೆಯುವ ಜಿಲ್ಲೆ ಬಸವನಾಡಿನ ವಿಜಯಪುರ. ಈ ಲ್ಲೆಯಲ್ಲಿ ಪ್ರತಿದಿನ ಒಂದಿಲ್ಲೋಂದು ಊರಿನಲ್ಲಿ ಒಂದಿಲ್ಲೋಂದು ಜಾತ್ರೆಗಳು, ದೇವಸ್ಥಾನದ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಒಂದೊಂದು ಊರಿನಲ್ಲಿ ಒಂದು ವಿಶೇಷ ಜಾತ್ರೆಗಳು ನಡೆಯುತ್ತವೆ. ಕೆಲವು ಜಾತ್ರೆಗಳನ್ನು ಊರಿನ ಗ್ರಾಮಸ್ಥರೆಲ್ಲರೂ ಸೇರಿ ಆಚರಿಸಿದರೆ, ಮತ್ತೆ ಹಲವು ಜಾತ್ರೆಗಳನ್ನು ಒಂದೊಂದು ಕುಟುಂಬಗಳು ಕಾರ್ಯಕ್ರಮದ ರೂಪದಲ್ಲಿ ಆಚರಿಸುತ್ತವೆ. ಇಂಥ ವಿಶೇಷ ಜಾತ್ರೆಯೊಂದು ಗುಮ್ಮಟ ನಗರಿ ವಿಜಯಪುರದ ಹೊರಭಾಗದಲ್ಲಿರುವ ರಂಭಾಪುರ ಗ್ರಾಮದಲ್ಲಿ ನಡೆಯಿತು. […]