Basaveshwar Jatre: ಬಸವಣ್ಣನ ತವರೂರಲ್ಲಿ ಅದ್ದೂರಿಯಾಗಿ ಬಸವೇಶ್ವರ ಜಾತ್ರೆ ಆಚರಿಸಲು ತೀರ್ಮಾನ

ವಿಜಯಪುರ: 12ನೇ ಶತಮಾನದ ಸಮಾಜ‌ ಸುಧಾರಕ‌ ಅಣ್ಣ ಬಸವಣ್ಣನವರ ತವರು ವಿಜಯಪುರ ಜಿಲ್ಲೆಯ ಬಸವನ‌ ಬಾಗೇವಾಡಿಯಲ್ಲಿ ಈ ಬಾರಿ ವಿಶ್ವಗುರು ಬಸವೇಶ್ವರ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಈ ವರ್ಷದ ಜಾತ್ರಾ ಕಮಿಟಿ ರಚನೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಶ್ರೀ ಬಸವೇಶ್ವರ ಜಾತ್ರಾ ಸಮಿತಿಯ ನೂತನ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಈ ವಿಷಯ ತಿಳಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ವಿಶ್ವಗುರು ಬಸವಣ್ಣನವರ ಜಾತ್ರೆಯು ಸರಳವಾಗಿ ಆಚರಿಸಲಾಗಿತ್ತು. ಆದರೆ, […]

Monsoon Festivals: ವಿಜಯಪುರ ಜಿಲ್ಲೆಯಲ್ಲಿ ಸಾಲು ಸಾಲು ಹಬ್ಬಗಳ ಸಂಭ್ರಮ ಗೋಂಧಳಿ ಸಮಾಜದ ದುರ್ಗಾದೇವಿ ಜಾತ್ರೆ ಬಲು ಅಂದ

ವಿಜಯಪುರ: ಮುಂಗಾರು ಆರಂಭವಾದರೆ ಸಾಕು ಬಸವ ನಾಡು ವಿಜಯಪುರದಲ್ಲಿ ಸಾಲು ಸಾಲು ಹಬ್ಬಗಳು ಒಂದೊಂದಾಗಿಯೇ ಬರುತ್ತವೆ.  ಇಲ್ಲಿನ ಜನರೂ ಅಷ್ಟೇ, ಈ ಹಬ್ಬಗಳನ್ನು ಸಂಭ್ರಮ ಮತ್ತು ಸಡಗರಗಳಿಂದ ಆಚರಿಸುತ್ತಾರೆ.  ಬಹುಷಃ ಇಡೀ ಕರ್ನಾಟಕದಲ್ಲಿ ವರ್ಷವಿಡೀ ಪ್ರತಿದಿನ ಒಂದಿಲ್ಲೋಂದು ಊರಲ್ಲಿ ಆಚರಣೆ, ಉತ್ಸವ, ಜಾತ್ರೆ ನಡೆಯುವ ಜಿಲ್ಲೆ ಎಂದರೆ ಅದು ವಿಜಯಪುರ ಎಂಬ ಮಾತಿದೆ.  ಅದಕ್ಕೆ ತಕ್ಕಂತೆ ಇಲ್ಲಿ ಆಚರಣೆಗಳೂ ನಡೆಯುವೆ.  ಆಷಾಢ ಮಾಸ ಆರಂಭವಾಗುತ್ತಿದ್ದಂತೆ ದೇವತೆಗಳ ಜಾತ್ರೆಗಳು ಸಾಲು ಸಾಲಾಗಿ ಬರುತ್ತವೆ.  ದುರ್ಗಾದೇವಿ, ಮರಗಮ್ಮ, ಹುಲಿಗೆಮ್ಮ, ಕೊಂತೆಮ್ಮ […]

Statues Procession: ಬಸವ ನಾಡಿನಲ್ಲಿ ಅದ್ದೂರಿಯಾಗಿ ನಡೆದ ಸಪ್ತ ಮಹಾತ್ಮರ ಪ್ರತಿಮೆಗಳ ಮೆರವಣಿಗೆ- ಶಾಸಕ ಯತ್ನಾಳ ಭಾಗಿ

ವಿಜಯಪುರ: ಬಸವ ನಾಡು ವಿಜಯಪುರ ನಗರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಸಪ್ತ ಮಹಾತ್ಮರ ಮೂರ್ತಿಗಳ ಭವ್ಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.  ಪ್ರಮುಖ ರಸ್ತೆಯಾದ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಎಲ್ಲಿ ನೋಡಿದರೂ ಜನಸಾಗರ ಕಂಡು ಬಂದಿತು.  ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೋಂಡ ಜನರು ಅಭೂತಪೂರ್ವ ಮೆರವಣಿಗೆಗೆ ಸಾಕ್ಷಿಯಾದರು.  ಡೊಳ್ಳು ಕುಣಿತ, ಲಂಬಾಣಿ ನೃತ್ಯ ಸೇರಿದಂತೆ ನಾನಾ ಜನಪದ ಕಲಾ ತಂಡಗಳ ಸಾಂಸ್ಕೃತಿಕ ಶ್ರೀಮಂತಿಕೆಯ ಮಧ್ಯದಲ್ಲಿ ಮಹಾತ್ಮರ ಮೂರ್ತಿಗಳನ್ನು ಹೊತ್ತ ಸಾಲಂಕೃತ ವಾಹನಗಳು ಸಾಗಿದ್ದು ಗಮನ ಸೆಳೆಯಿತು.  ಈ ಕಾರ್ಯಕ್ರಮದ ರೂವಾರಿ ಮತ್ತು ವಿಜಯಪುರ […]

KSAWU Music Programme: ಮಹಿಳಾ ವಿವಿಯಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಂಗೀತ ವಿಭಾಗ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ನಗರದ ದೃಷ್ಟಿ ಫೌಂಡೇಶನ್ ಮತ್ತು ಭಾರತ ಸಂಸ್ಕೃತಿ ಸಚಿವಾಲಯ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಧಾರವಾಡದ ಪ್ರಖ್ಯಾತ ಗಾಯಕಿ ವಿದುಷಿ ಸುಜಾತಾ ಗುರವ ಅವರು ವಿವಿಯ ಜ್ಞಾನವಾಹಿನಿ ಸ್ಟುಡಿಯೋದಲ್ಲಿ ಹಿಂದುಸ್ಥಾನಿ ಗಾಯನವನ್ನು ನಡೆಸಿಕೊಟ್ಟರು.   ಈ ಕಾರ್ಯಕ್ರಮದಲ್ಲಿ ದೃಷ್ಟಿ ಫೌಂಡೇಶನ್‌ನ ಸಂಯೋಜಕರಾದ ಡಾ.ಪಿ.ಬಿ.ಕುಲಕರ್ಣಿ ಹಾಗೂ ಮೀನಾ ಅಥಣಿ, ಧಾರವಾಡದ ಸಮಾಜ ಸೇವಕ ಗೋಪಾಲ […]

Kashi Pilgrons: ಕಾಶಿ ಯಾತ್ರಾರ್ಥಿಗಳಿಗೆ ರೂ. 5 ಸಾವಿರ ಸಹಾಯಧನ ಯೋಜನೆ ಜಾರಿ- ಫಲಾನುಭವಿಗಳಿಗೆ ಚೆಕ್ ವಿತರಿಸಿದ ಸಿಎಂ

ಬೆಂಗಳೂರು: ರಾಜ್ಯದಿಂದ ಕಾಶಿ ಯಾತ್ರೆಗೆ ತೆರಳುವವರಿಗೆ ರಾಜ್ಯ ಸರ್ಕಾರ ತಲಾ ರೂ. 5 ಸಾವಿರ ಸಹಾಯಧನ ಯೋಜನೆಯನ್ನು ಘೋಷಣೆ ಮಾಡಿದೆ. ಈ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಬೆಂಗಳೂರಿನ ವಿಧಾನಸೌಧದಲ್ಲಿ ಯೋಜಿಸಲಾಗಿದ್ದ ಸಮಾರಂಭದಲ್ಲಿ ಕಾಶಿ ಯಾತ್ರಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಣೆ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಮುಜರಾಯಿ ಇಲಾಖೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಇದೊಂದು ಹೊಸ ಕಾರ್ಯಕ್ರಮ. ಇತ್ತಿಚೇಗೆ ಕಾಶಿಯನ್ನು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಪೂರ್ಣವಾಗಿ ನವೀಕರಣ […]

Collage Gurupurnime: ಬಿ ಎಲ್ ಡಿ ಇ ನರ್ಸಿಂಗ್ ಕಾಲೇಜಿನಲ್ಲಿ ಗುರು ಪೂರ್ಣಿಮೆ ಆಚರಣೆ

ವಿಜಯಪುರ, 14: ಸಮಾಜದ ಅಂಕುಕೊಂಕುಗಳನ್ನು ತಿದ್ದಿ ವಿದ್ಯಾರ್ಥಿಗಳಿಗೆ ನಿಸ್ವಾರ್ಥ ಸೇವೆ ನೀಡುವ ಮೂಲಕ ಗುರು ಸಮಾಜ ಕಟ್ಟುವ ಕೆಲಸದಲ್ಲಿ ಮಹತ್ವದ ಕೆಲಸ ಮಾಡುತ್ತಾನೆ ಎಂದು ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ ಶಾಲ್ಮೂನ್ ಚೋಪಡೆ ಹೇಳಿದರು. ಅವರು ಕಾಲೇಜಿನಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮಕ್ಕೆ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ.  ಹೀಗೆ […]

Krishna Puje: ಉತ್ತರ ಕರ್ನಾಟಕದ ಜೀವನಾಡಿ- ಕೃಷ್ಣಾ ಸೇರಿ ಪಂಚ ನದಿಗಳ ಉಗಮಸ್ಥಾನ ಮಹಾಬಳೇಶ್ವರದಲ್ಲಿ ಪೂಜೆ ಸಲ್ಲಿಸಿದ ಬಸವ ನಾಡಿನ ರೈತರು

ಮಹೇಶ ವಿ. ಶಟಗಾರ ವಿಜಯಪುರ: ಕೃಷ್ಣಾ ಉತ್ತರ ಕರ್ನಾಟಕದ ಜೀವನದಿ.  ಉತ್ತರ ಕರ್ನಾಟಕದಲ್ಲಿ ಮಳೆಯಾಗದಿದ್ದರೂ ಈ ನದಿ ರೈತರು, ಜನಜಾನುವಾರುಗಳಿಗೆ ಪ್ರತಿವರ್ಷ ನೀರೊದಗಿಸುತ್ತದೆ.  ಈ ಬಾರಿಯೂ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಮಳೆ ಅಷ್ಟಕ್ಕಷ್ಟೆಯಾಗಿದ್ದರೂ, ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.  ಹೀಗಾಗಿ ತಮಗೆ ಜೀವಜಲ ನೀಡುವ ಕೃಷ್ಣಾ ನದಿಯ ಉಗಮಸ್ಥಾನ ಮಹಾರಾಷ್ಟ್ರದಲ್ಲಿ ಮಹಾಬಳೇಶ್ವರ ಪಂಚಗಂಗಾ ದೇವಸ್ಥಾನಕ್ಕೆ ತೆರಳಿದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಅನ್ನತಾದರು ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ […]

Jnanayogashram Gurupurnime: ಜಿಟಿಜಿಟಿ ಮಳೆಯ ಮಧ್ಯೆಯೂ ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಸಂಭ್ರಮದಿಂದ ನಡೆದ ಗುರು ಪೂರ್ಣಿಮೆ ಆಚರಣೆ

ವಿಜಯಪುರ: ಕಳೆದ ಎರಡು ದಿನಗಳಿಂದ ವಿಜಯಪುರ ನಗರ ಸೇರಿದಂತೆ ಜಿಲ್ಲಾದ್ಯಂತ ಜಿಟಿಜಿಟಿ ಮಳೆಯಾಗುತ್ತಿದೆ.  ಇದರ ಮಧ್ಯೆಯೂ, ವಿಜಯಪುರ ನಗರದ ಜ್ಞಾನ ಯೋಗಾಶ್ರಮದಲ್ಲಿ ಅರ್ಥಪೂರ್ಣವಾಗಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು. ಬೆಳಿಗ್ಗೆ ಗುರು ಸ್ಮರಣೆಯೊಂದಿಗೆ ಸಾವಿರಾರು ಭಕ್ತರು ಮತ್ತು ನಾನಾ ಸ್ವಾಮೀಜಿಗಳ ಸಮ್ಮುಖದಲ್ಲಿ ಜಪಯೋಗ ಕಾರ್ಯಕ್ರಮ ನಡೆಯಿತು.  ನಂತರ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಪ್ರವಚನ ಧ್ವನಿ ಸುರಳಿಯ ಮೂಲಕ ಆಶೀರ್ವಚನ ಕೇಳಿಸಲಾಯಿತು.  ಪ್ರವಚನದ ಆಧಾರಿತ ಆಧ್ಯಾತ್ಮಿಕ ಗ್ರಂಥಗಳ ಬಿಡುಗಡೆ ಸಮಾರಂಭ ಗಮನ ಸೆಳೆಯಿತು. ಜ್ಞಾನ ಯೋಗಾಶ್ರಮದ ಪ್ರಣವ ಮಂಟಪದಲ್ಲಿ ಮಂತ್ರದೊಂದಿಗೆ […]

AP Govt Shrishail: ಆಂಧ್ರ ಪ್ರದೇಶ ಸರಕಾರ ದಿಂದ ಶ್ರೀಶೈಲಕ್ಕೆ ಪೀಠಕ್ಕೆ 10 ಎಕರೆ ಜಮೀನು ಮಂಜೂರು- ಡಾ. ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ

ವಿಜಯಪುರ: ಆಂಧ್ರ ಪ್ರದೇಶ ಸರಕಾರ ಶ್ರೀಶೈಲ ಪೀಠಕ್ಕೆ 10 ಎಕರೆ ಜಮೀನನ್ನು ಮಂಜೂರು ಮಾಡಿದೆ. ಅದರಲ್ಲಿ ಐದು ಎಕರೆ ಸ್ಥಳವನ್ನು ದೇವಾಸ್ಥಾನಕ್ಕೆ ಒಪ್ಪಿಸಿದೆ. ಇನ್ನುಳಿದ ಐದು ಎಕರೆ ಜಾಗದಲ್ಲಿ 100 ಬೆಡ್ ಸುಸಜ್ಜಿತ ಆಸ್ಪತ್ರೆ, ಪಾದಯಾತ್ರಿಕರಿಗೆ 500 ಕೋಣೆಗಳ ಯಾತ್ರಿ ನಿವಾಸ, 5000 ಕಂಬಗಳ ಮಂಟಪ ನಿರ್ಮಾಣ, ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ವಿಜಯಪುರ ನಗರದ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಶ್ರೀಶೈಲ […]

Halakatti Jatti: ಹಳಕಟ್ಟಿ ಅವರ ಜೀವನವೇ ಒಂದು ಸಂದೇಶ- ಅರವಿಂದ ಜತ್ತಿ

ವಿಜಯಪುರ: ವಚನಪಿತಾಮಹ ಡಾ. ಫ. ಗು.‌ಹಳಕಟ್ಟಿಯವರ ಆದರ್ಶಗಳು ಮತ್ತು ಸಮಾಜಮುಖಿ ಸರಳ ಜೀವನ ನಮ್ಮೆಲ್ಲರಿಗೂ ಒಂದು ಬಹುದೊಡ್ಡ ಸಂದೇಶ ಎಂದು ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು‌. ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ವಿಜಯಪುರದಲ್ಲಿರುವ ಅವರ ಕರ್ತೃ ಗದ್ದುಗೆಗೆ ಭೇಟಿ ನೀಡಿ ಗೌರವ ಸಮರ್ಪಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ನಮ್ಮೆಲ್ಲರಿಗೂ ಆದರ್ಶ ಪ್ರಾಯರಾದ ವಚನ ಪಿತಾಮಹ ಡಾ. […]