Krishna Puje: ಉತ್ತರ ಕರ್ನಾಟಕದ ಜೀವನಾಡಿ- ಕೃಷ್ಣಾ ಸೇರಿ ಪಂಚ ನದಿಗಳ ಉಗಮಸ್ಥಾನ ಮಹಾಬಳೇಶ್ವರದಲ್ಲಿ ಪೂಜೆ ಸಲ್ಲಿಸಿದ ಬಸವ ನಾಡಿನ ರೈತರು
ಮಹೇಶ ವಿ. ಶಟಗಾರ ವಿಜಯಪುರ: ಕೃಷ್ಣಾ ಉತ್ತರ ಕರ್ನಾಟಕದ ಜೀವನದಿ. ಉತ್ತರ ಕರ್ನಾಟಕದಲ್ಲಿ ಮಳೆಯಾಗದಿದ್ದರೂ ಈ ನದಿ ರೈತರು, ಜನಜಾನುವಾರುಗಳಿಗೆ ಪ್ರತಿವರ್ಷ ನೀರೊದಗಿಸುತ್ತದೆ. ಈ ಬಾರಿಯೂ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಮಳೆ ಅಷ್ಟಕ್ಕಷ್ಟೆಯಾಗಿದ್ದರೂ, ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ತಮಗೆ ಜೀವಜಲ ನೀಡುವ ಕೃಷ್ಣಾ ನದಿಯ ಉಗಮಸ್ಥಾನ ಮಹಾರಾಷ್ಟ್ರದಲ್ಲಿ ಮಹಾಬಳೇಶ್ವರ ಪಂಚಗಂಗಾ ದೇವಸ್ಥಾನಕ್ಕೆ ತೆರಳಿದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಅನ್ನತಾದರು ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ […]
Jnanayogashram Gurupurnime: ಜಿಟಿಜಿಟಿ ಮಳೆಯ ಮಧ್ಯೆಯೂ ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಸಂಭ್ರಮದಿಂದ ನಡೆದ ಗುರು ಪೂರ್ಣಿಮೆ ಆಚರಣೆ
ವಿಜಯಪುರ: ಕಳೆದ ಎರಡು ದಿನಗಳಿಂದ ವಿಜಯಪುರ ನಗರ ಸೇರಿದಂತೆ ಜಿಲ್ಲಾದ್ಯಂತ ಜಿಟಿಜಿಟಿ ಮಳೆಯಾಗುತ್ತಿದೆ. ಇದರ ಮಧ್ಯೆಯೂ, ವಿಜಯಪುರ ನಗರದ ಜ್ಞಾನ ಯೋಗಾಶ್ರಮದಲ್ಲಿ ಅರ್ಥಪೂರ್ಣವಾಗಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು. ಬೆಳಿಗ್ಗೆ ಗುರು ಸ್ಮರಣೆಯೊಂದಿಗೆ ಸಾವಿರಾರು ಭಕ್ತರು ಮತ್ತು ನಾನಾ ಸ್ವಾಮೀಜಿಗಳ ಸಮ್ಮುಖದಲ್ಲಿ ಜಪಯೋಗ ಕಾರ್ಯಕ್ರಮ ನಡೆಯಿತು. ನಂತರ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಪ್ರವಚನ ಧ್ವನಿ ಸುರಳಿಯ ಮೂಲಕ ಆಶೀರ್ವಚನ ಕೇಳಿಸಲಾಯಿತು. ಪ್ರವಚನದ ಆಧಾರಿತ ಆಧ್ಯಾತ್ಮಿಕ ಗ್ರಂಥಗಳ ಬಿಡುಗಡೆ ಸಮಾರಂಭ ಗಮನ ಸೆಳೆಯಿತು. ಜ್ಞಾನ ಯೋಗಾಶ್ರಮದ ಪ್ರಣವ ಮಂಟಪದಲ್ಲಿ ಮಂತ್ರದೊಂದಿಗೆ […]
AP Govt Shrishail: ಆಂಧ್ರ ಪ್ರದೇಶ ಸರಕಾರ ದಿಂದ ಶ್ರೀಶೈಲಕ್ಕೆ ಪೀಠಕ್ಕೆ 10 ಎಕರೆ ಜಮೀನು ಮಂಜೂರು- ಡಾ. ಚನ್ನಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ
ವಿಜಯಪುರ: ಆಂಧ್ರ ಪ್ರದೇಶ ಸರಕಾರ ಶ್ರೀಶೈಲ ಪೀಠಕ್ಕೆ 10 ಎಕರೆ ಜಮೀನನ್ನು ಮಂಜೂರು ಮಾಡಿದೆ. ಅದರಲ್ಲಿ ಐದು ಎಕರೆ ಸ್ಥಳವನ್ನು ದೇವಾಸ್ಥಾನಕ್ಕೆ ಒಪ್ಪಿಸಿದೆ. ಇನ್ನುಳಿದ ಐದು ಎಕರೆ ಜಾಗದಲ್ಲಿ 100 ಬೆಡ್ ಸುಸಜ್ಜಿತ ಆಸ್ಪತ್ರೆ, ಪಾದಯಾತ್ರಿಕರಿಗೆ 500 ಕೋಣೆಗಳ ಯಾತ್ರಿ ನಿವಾಸ, 5000 ಕಂಬಗಳ ಮಂಟಪ ನಿರ್ಮಾಣ, ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ವಿಜಯಪುರ ನಗರದ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಶ್ರೀಶೈಲ […]
Halakatti Jatti: ಹಳಕಟ್ಟಿ ಅವರ ಜೀವನವೇ ಒಂದು ಸಂದೇಶ- ಅರವಿಂದ ಜತ್ತಿ
ವಿಜಯಪುರ: ವಚನಪಿತಾಮಹ ಡಾ. ಫ. ಗು.ಹಳಕಟ್ಟಿಯವರ ಆದರ್ಶಗಳು ಮತ್ತು ಸಮಾಜಮುಖಿ ಸರಳ ಜೀವನ ನಮ್ಮೆಲ್ಲರಿಗೂ ಒಂದು ಬಹುದೊಡ್ಡ ಸಂದೇಶ ಎಂದು ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು. ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ವಿಜಯಪುರದಲ್ಲಿರುವ ಅವರ ಕರ್ತೃ ಗದ್ದುಗೆಗೆ ಭೇಟಿ ನೀಡಿ ಗೌರವ ಸಮರ್ಪಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ನಮ್ಮೆಲ್ಲರಿಗೂ ಆದರ್ಶ ಪ್ರಾಯರಾದ ವಚನ ಪಿತಾಮಹ ಡಾ. […]
Halakatti Jayanti: ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಂದ ಹಳಕಟ್ಟಿಯವರಿಗೆ ನಮನ
ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಆವರಣದಲ್ಲಿರುವ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ವಚಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನದ ಅಂಗವಾಗಿ ಹಳಕಟ್ಟಿ ಪ್ರತಿಮೆಗೆ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮಾಲಾರ್ಪಣೆ ಮಾಡಿದರು. ನಂತರ ಹಳಕಟ್ಟಿ ಅವರ ಸಮಾಧಿಗೆ ತೆರಳಿ ಪುಷ್ಪನಮನ ಸಲ್ಲಿಸಿದರು. ಬಳಿಕ ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಸಂಶೋಧನ ಕೇಂದ್ರದಲ್ಲಿರುವ ಹಳಕಟ್ಟಿ […]
Mannettina Amavasye: ಬಸವ ನಾಡಿನಲ್ಲಿ ಗಮನ ಸೆಳೆದ ಮಣ್ಣೆತ್ತಿನ ಅಮವಾಸ್ಯೆ- ಮಣ್ಣಿನ ಮಕ್ಕಳ ಮನೆಯ ಅಲಂಕರಿಸಿದ ಮಣ್ಣೆತ್ತಿನ ಮೂರ್ತಿಗಳು
ವಿಜಯಪುರ: ಉತ್ತರ ಕರ್ನಾಟಕ ಎಂದರೆ ಸಾಕು ತರಹೇವಾರಿ ಸಂಪ್ರದಾಯಗಳು ಮತ್ತು ಆಚರಣೆಗೆ ಹೆಸರುವಾಸಿ. ಅದರಲ್ಲೂ ರೈತರು ತಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿರುವ ಹಾಗೂ ಜೀವನದಲ್ಲಿ ಹಾಸು ಹೊಕ್ಕಾಗಿರುವ ಕೃಷಿಗೆ ಸಂಬಂಧಿಸಿದ ಸಲಕರಣೆಗಳು, ಸಾಕು ಪ್ರಾಣಿಗಳ ಬಗ್ಗೆ ಹೊಂದಿರುವ ಅನೂನ್ಯತೆ ಅಪರಿಮಿತವಾಗಿರುತ್ತದೆ. ಅನ್ನದಾತರು ಕೈಗೊಳ್ಳುವ ಪ್ರಮುಖ ಕೃಷಿ ಚಟುವಟಿಕೆಗಳಿಗೆ ಎತ್ತುಗಳೇ ಆಧಾರ. ತಮ್ಮ ಬದುಕಿಗೆ ಆಸರೆಯಾಗುವ ಎತ್ತುಗಳನ್ನು ಪ್ರೀತಿಯಿಂದ ಪೂಜಿಸಿ ಸಂಭ್ರಮಿಸುವ ಹಬ್ಬವೇ ಮಣ್ಣೆತ್ತಿನ ಅಮವಾಸ್ಯೆ. ಇಂಥ ವಿಶಿಷ್ಠ ದ ಹಬ್ಬದ ಅಂಗವಾಗಿ ಮಣ್ಣಿನ ಎತ್ತುಗಳ ಮಾರಾಟ ಮತ್ತು […]
Amrut Bharati: ಹಲಸಂಗಿಯಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ- ಸಂಸದ ರಮೇಶ ಜಿಗಜಿಣಗಿ, ಶಾಸಕ ಡಾ. ದೇವಾನಂದ ಚವ್ಹಾಣ ಭಾಗಿ
ವಿಜಯಪುರ: ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆಯಿತು. ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಬಿಜೆಪಿ ಶಾಸಕ ರಮೇಶ ಜಿಗಜಿಣಗಿ ಮತ್ತು ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ ಉದ್ಘಾಟಿಸಿದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಡೆದ ಈ ಕಾರ್ಯಕ್ರಮ ಹಲಸಂಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ […]
Oxen Race: ಮೈ ನವಿರೇಳಿಸಿದ ಎತ್ತುಗಳ ಓಡಾಟ ಕಾರ ಹುಣ್ಣಿಮೆಯಾದ ಏಳನೇ ದಿನಕ್ಕೆ ಕಾಖಂಡಕಿಯಲ್ಲಿ ನಡೆದ ಆಚರಣೆ ಬಲು ರೋಚಕ
ವಿಜಯಪುರ: ರಸ್ತೆ ಪಕ್ಕದಲ್ಲಿ ಎಲ್ಲಿ ನೋಡಿದರೂ ಜನಜಂಗುಳಿ. ಬಹುತೇಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದರೆ, ಹಲವರು ನಾನಾ ಅಂಗಡಿಗಳು ಮನೆಗಳ ಜಗುಲಿಗಳ ಮೇಲೆ ನಿಂತಿದ್ದರು. ಒಂದೊಂದಾಗಿ ಎತ್ತುಗಳು ಓಡಾಡುತ್ತಿದ್ದರೆ, ಕಟ್ಟಿರುವ ಹಗ್ಗಗಳದ ಅವುಗಳನ್ನು ಯಿವಕರು ನಿಭಾಯಿಸುತ್ತಿದ್ದರು. ಮೈ ನವಿರೇಳಿಸುವ ಈ ದೃಷ್ಯ ಕಂಡು ಬಂದದ್ದು ಬಸವ ನಾಡು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ. ಕೇಕೆ ಹಾಕುತ್ತ ಶಿಳ್ಳೆಯ ಶಬ್ದ ಮಾಡುತ್ತ ಒಂದೆಡೆ ದಿಕ್ಕಾ ಪಾಲಾಗಿ ಜನರು ಓಡುತ್ತಿದ್ದರು. ಮತ್ತೊಂದೆಡೆ ಸುರಕ್ಷಿತ ಸ್ಥಳ ಹುಡುಕುತ್ತಾ ಕೆಲವರು ಪರದಾಡುತ್ತಿದ್ದರು. […]
Father’s Day: ಪ್ರೇರಣಾ ಪಬ್ಲಿಕ್ ಸ್ಕೂಲಿನಲ್ಲಿ ತಂದೆಯ ಪಾದಪೂಜೆ ಮಾಡಿದ ಮಕ್ಕಳು
ವಿಜಯಪುರ: ವಿಶ್ವ ಅಪ್ಪಂದಿರ ದಿನಾಚರಣೆ ಅಂಗವಾಗಿ ಬಸವ ನಾಡು ವಿಜಯಪುರದ ಪ್ರೇರಣಾ ಪಬ್ಲಿಕ್ ಸ್ಕೂಲಿನಲ್ಲಿ ವಿನೂತನ ಕಾರ್ಯಕ್ರಮ ನಡೆಯಿತು. ಗುರುಗಳ, ಮಾತೆ ಪಾದಪೂಜೆ ನಡೆಸುವುದು ಇತ್ತೀಚೆಗೆ ಮಾಮೂಲಾಗಿದೆ. ಆದರೆ, ಈ ಶಾಲೆಯಲ್ಲಿ ಮಕ್ಕಳು ಅಂದರೆ ಇಲ್ಲಿನ ವಿದ್ಯಾರ್ಥಿಗಳು ತಂತಮ್ನ ಅಪ್ಪಂದಿರ ಪಾದಪೂಜೆ ಮಾಡುವ ಮೂಲಕ ಗಮನ ಸೆಳೆದರು. ತಂದೆಯ ಪಾದಗಳನ್ನು ಜಲದಿಂದ ಸ್ವಚ್ಛಗೊಳಿಸಿದ ಮಕ್ಕಳು ನಂತರ ಆ ಪಾದಗಳಿಗೆ ವಿಭೂತಿ ಮತ್ತು ಕುಂಕುಮ ಹಚ್ಚಿ ಪುಷ್ಪ ಸಮರ್ಪಿಸಿ ಪೂಜೆ ಮಾಡುವ ಮೂಲಕ ಧನ್ಯತೆ ತೋರಿದರು. ಮಕ್ಕಳು […]
Governor Vachana Shila Mantap: ಬಸವ ನಾಡಿನಲ್ಲಿ ವಚನ ಶಿಲಾ ಮಂಟಪ ಲೋಕಾರ್ಪಣೆ ಮಾಡಿದ ರಾಜ್ಯಪಾಲ ಥಾವರ ಚಂದ ಗೆಲ್ಹೋಟ್
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ನಿರ್ಮಿಸಲಾಗಿರುವ ವಚನ ಶಿಲಾ ಮಂಟಪವನ್ನು ರಾಜ್ಯಪಾಲ ಥಾವರ ಚಂದ ಗೆಹ್ಲೋಟ್ ಲೋಕಾರ್ಪಣೆ ಮಾಡಿದ್ದಾರೆ. ಇಂಗಳೇಶ್ವರ ಮಠದ ಹಿರಿಯ ಶ್ರೀಗಳಾದ, ಚನ್ನಬಸವ ಸ್ವಾಮೀಜಿ ಸೇರಿದಂತೆ ನಾನಾ ಮಠಾಧೀಶರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮಕ್ಕೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಬಳಿಕ ಮಾತನಾಡಿದ ಅವರು, ವಿಶ್ವಕ್ಕೆ ಸಮಾನತೆ ಸಾರಿದ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಅಣ್ಣ ಬಸವಣ್ಣನವರ ವಚನಗಳು ಈ ವಚನ […]