ಕನ್ಡಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ಲಾವಣಿ ನೃತ್ಯ- ರಾಜ್ಯಾಧ್ಯಕ್ಷರ ಆಕ್ರೋಶದ ಪತ್ರ- ಎಚ್ಚೆತ್ತ ಜಿಲ್ಲಾಧ್ಯಕ್ಷರಿಂದ ವಿಷಾಧ

ವಿಜಯಪುರ: ನಗರದಲ್ಲಿ ಕನ್ನಡ(Kannada) ಸಾಹಿತ್ಯ(Literature) ಸಮ್ಮೇಳನದಲ್ಲಿ(Conference) ಮರಾಠಿ ಹಾಡಿನ ನೃತ್ಯ(Marathi Song Dance) ಆಯೋಜನೆಯಿಂದ ಸಿಟ್ಟಾದ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಅವರು ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅವರಿಗೆ ಖಡಕ್ಕಾಗಿ ಪತ್ರ ಬರೆದ ಘಟನೆ ನಡೆದಿದೆ.  ಈ ಪತ್ರದಿಂದ ಎಚ್ಚೆತ್ತುಕೊಂಡ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ವಿಷಾಧ ವ್ಯಕ್ತಪಡಿಸಿದ್ದಾರೆ. ವಿಜಯಪುರ ‌ಜಿಲ್ಲಾ 17 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ. 26 ಮತ್ತು 27ರಂದು ನಡೆದಿತ್ತು.  ಈ ಕಾರ್ಯಕ್ರಮದ ವೇದಿಕೆಯಲ್ಲಿ ಮರಾಠಿ ಲಾವಣಿ ನೃತ್ಯ ಆಯೋಜನೆ […]

ಅಗಸನಹಳ್ಳಿ ವಿಠೋಬಾ- ಮಾರುತಿ ದೇವಾಲಯ ಆವರಣದಲ್ಲಿ ಧರ್ಮಸಭೆ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಬಬಲೇಶ್ವರ(Babaleshwar) ತಾಲೂಕಿನ ಕಾಖಂಡಕಿ ಬಳಿ ಇರುವ ಅಗಸನಹಳ್ಳಿ(Agasanahalli) ಗ್ರಾಮದಲ್ಲಿ ಶ್ರೀ ವಿಠ್ಠಲ-ರುಕ್ಮಿಣಿ(Vithal-Rukmini) ಮೂರ್ತಿ ಪ್ರತಿಷ್ಛಾಪನೆ(Statue Installation) ಅಂಗವಾಗಿ ಕಳಸಾರೋಹಣ ಹಾಗೂ ಜ್ಞಾನೋಬ, ತುಕಾರಾಮ ಮಹಾರಾಜರ ಮೂರ್ತಿ ಪ್ರತಿಷ್ಠಾಪನಾ ಮತ್ತು ಶ್ರೀ ಗ್ರಂಥ ರಾಜ ಜ್ಞಾನೇಶ್ವರ ಪುರಾಣದ ಕಾರ್ಯಕ್ರಮ ನಡೆಯಿತು.  ಶ್ರೀ ವಿಠ್ಠಲ ಮಂದಿರ ದೇವಾಲಯ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಲಗೂರ ಲಿಂಗಾಯಿತ ಪಂಚಮಸಾಲಿ ಪೀಠಾಧ್ಯಕ್ಷ ಮತ್ತು ಬಬಲೇಶ್ವರ ಬ್ರಹನ್ಮಠದ ಡಾ. ಮಹಾದೇವ ಶಿವಾಚಾರ್ಯರು ಮಾತನಾಡಿದರು. ಪಂಡರಪುರದ ಶ್ರೀ ವಿಠಲನ ದೇವರ ಸ್ಮರಣೆಯೊಂದಿಗೆ […]

ಕತ್ನಳ್ಳಿ ಜಾತ್ರೆ ಭಕ್ತರಿಂದ, ಭಕ್ತರಿಗಾಗಿ, ಭಕ್ತರಿಗೋಸ್ಕರ ನಡೆಯುವ ಜಾತ್ರೆಗೆ ಭಕ್ತರನ್ನು ಆಹ್ವಾನಿಸಿದ ಸ್ವಾಮೀಜಿ

ವಿಜಯಪುರ: ಇದು ಭಕ್ತರ(Devotees) ಜಾತ್ರೆ(Fair).  ಭಕ್ತರಿಗಾಗಿ ಇರುವ ಜಾತ್ರೆ. ಭಕ್ತರಿಗೆಗೋಸ್ಕರ ಆಯೋಜಿಸಲಾಗಿರುವ(Organised) ಜಾತ್ರೆ. ಇಲ್ಲಿ ಭಕ್ತರೇ ಸರ್ವಸ್ವ. ಭಕ್ತರೆ ಮಾಲೀಕರು‌‌(Owner). ಈ ಜಾತ್ರೆಗೆ ಬಸವ ನಾಡು(Basava Nadu), ದೇಶ-ವಿದೇಶಗಳ ಎಲ್ಲ ಭಕ್ತರು ಪರಿವಾರದೊಂದಿಗೆ ಬಂದು ಸದಾಶಿವನ ದರ್ಶನ, ಆಶೀರ್ವಾದ ಪಡೆದು ಎಲ್ಲರೂ ಉದ್ಧಾರವಾಗಬೇಕು. ಎಲ್ಲರೂ ಆಶೀರ್ವಾದ ಇರಲಿದೆ ಎಂದು ವಿಜಯಪುರ ಜಿಲ್ಲೆಯ ಸುಕ್ಷೇತ್ರ ಕತ್ನಳ್ಳಿ ಎಂದೇ ಹೆಸರಾಗಿರುವ ಕತಕನಹಳ್ಳಿ ಶ್ರೀ ಸದಾಶಿವ ಮಠಾಧೀಶ ಶ್ರೀ ಶಿವಯ್ಯ ಸ್ವಾಮೀಜಿ ಆಹ್ಬಾನ ನೀಡಿದ್ದಾರೆ. ಕತ್ನಳ್ಳಿಯಲ್ಲಿ ಮಾತನಾಡಿದ ಅವರು ಮಾಜಿ ಸಚಿವ […]

ಮಾರ್ಚ್ 27ರಂದು ಬಸವ ನಾಡಿನಲ್ಲಿ ಶ್ರೀ ಸಾಕ್ಷಿ ಪಂಚಾಂಗದ ದಶಮಾನೋತ್ಸವ ಕಾರ್ಯಕ್ರಮ

ವಿಜಯಪುರ: ಶ್ರೀಹಲಗಣೇಶ ಪ್ರಕಾಶನದ ಹೆಮ್ಮೆಯ ಪ್ರಕಟಣೆ ಶ್ರೀಸಾಕ್ಷಿ ಪಂಚಾಂಗದ ದಶಮಾನೋತ್ಸವ ಕಾರ್ಯಕ್ರಮ ವಿಜಯಪುರ ನಗರದಲ್ಲಿ ಮಾರ್ಚ್ 27ರಂದು ನಡೆಯಲಿದೆ ಎಂದು ಹಿರಿಯ ಪತ್ರಕರ್ತ ಗೋಪಾಲ ನಾಯಕ ಮತ್ತು‌‌ ಪಂಚಾಂಗಕರ್ತ ಗುರುರಾಜ ಆಚಾರ್ಯ ಹೆರಕಲ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 27ರಂದು ರವಿವಾರ ಬೆ. 10ಕ್ಕೆ ವಿಜಯಪುರ ನಗರದ ಪಿಡಿಜೆ ಹೈಸ್ಕೂಲ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಪಾಂಡುರಂಗ ಆಚಾರ್ಯ ಜಾಲಿಹಾಳ, ಮಧ್ವಾಚಾರ್ಯ ಮೊಕಾಶಿ, ಭೀಮಾಚಾರ್ಯ ಗೋಠೆ, ಕನ್ನೂರು […]

ಬಸವಣ್ಣನ ತವರಿನಲ್ಲಿ ರಾಜ್ಯಮಟ್ಟದ ಜಯಂತಿ ಆಚರಿಸಿ- ಸರಕಾರಕ್ಕೆ ಎಂ ಎಲ್ ಸಿ ಪ್ರಕಾಶ ರಾಠೋಡ ಒತ್ತಾಯ- ಸರಕಾರ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಭಕ್ತಿಭಂಡಾರಿ ಶ್ರೀ ಬಸವೇಶ್ವರ(Basaveshwar) ರಾಜ್ಯ ಮಟ್ಟದ(State Level) ಜಯಂತಿ(Jayatni) ಕಾರ್ಯಕ್ರಮವನ್ನು(Programme) ಅವರ ತವರು(Birth Place) ವಿಜಯಪುರದಲ್ಲಿ(Vijayapura) ಆಚರಿಸಬೇಕು ಎಂದು ವಿಧಾನ ಪರಿಷತ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಸರಕಾರವನ್ನು ಆಗ್ರಹಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಈ ಕುರಿತು ವಿಧಾನ ಪರಿಷತ್ತಿನಲ್ಲಿ ಶೂನ್ಯವೇಳೆಯಲ್ಲಿ ಪ್ರಕಾಶ ರಾಠೋಡ ಆಗ್ರಹಿಸಿದರು.  ಈ ಕುರಿತು ಪ್ರತಿಕ್ರಿಯೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ ಕುಮಾರ, ಅಣ್ಣ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ರಾಜ್ಯ ಮಟ್ಟದ ಅಣ್ಣ ಬಸವಣ್ಣನವರ ಜಯಂತೋತ್ಸವ […]

ಕೋವಿಡ್ ಮಾರ್ಗಸೂಚಿಯನ್ವಯ ಅರ್ಥಪೂರ್ಣವಾಗಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆಗೆ ನಿರ್ಧಾರ

ವಿಜಯಪುರ: ಏ. 14 ರಂದು ವಿಜಯಪುರ(Vijayapura) ಜಿಲ್ಲಾಡಳಿತದ(District Administration) ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ(Bharat Ratna) ಡಾ. ಬಾಬಾಸಾಹೇಬ ಅಂಬೇಡ್ಕರ(Dr. Babasaheb Ambedkar) ಅವರ ಜಯಂತಿಯನ್ನು(Birth Anniversary) ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರ ಅಧ್ಯಕ್ಷತೆಯಲ್ಲಿ ಡಿಸಿ ಕಚೇರಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಮತ್ತು ಮುಖಂಡರು, ಗಣ್ಯರೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ […]

ಬಸವ ನಾಡಿನಲ್ಲಿ ರಂಗಪಂಚಮಿ ರಂಗಿನಲ್ಲಿ ಮಿಂದೆದ್ದು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದ ಕಮಲ ಪಡೆಯ ಕಲಿಗಳು

ವಿಜಯಪುರ: ಬಸವನಾಡು(Basavanadu) ಖ್ಯಾತಿಯ ವಿಜಯಪುರದಲ್ಲಿ ಹೋಳಿ ಹುಣ್ಣಿಮೆಯಾಗಿ(Holi Honnime) ಐದನೇ ದಿನಕ್ಕೆ ನಡೆಯುವ ರಂಗ ಪಂಚಮಿ(Ranga Panchami), ಬಣ್ಣದಾಟ(Colour Celebration) ಗಮನ ಸೆಳೆಯಿತು.  ಹಿರಿಯರು, ಕಿರಿಯರೆನ್ನದೆ, ಮಹಿಳೆಯರು(Women) ಪುರುಷರೆನ್ನದೇ(Men) ಎಲ್ಲರೂ ಸಾಮೂಹಿಕವಾಗಿ ಬಣ್ಮದಾಟದಲ್ಲಿ ತೊಡಗುವ ಮೂಲಕ ರಂಗ ಪಂಚಮಿಗೆ ರಂಗೀನ ಮೆರಗು ನೀಡಿದರು. ಮಾನವೀಯ ಮೌಲ್ಯಗಳನ್ನು ಸಾರುವ, ದುಷ್ಟ ವಿಚಾರಗಳನ್ನು ಸುಡುವ ಹೋಳಿ ಹಣ್ಣಿಮೆಯ ರಂಗಮ ಪಂಚಮಿ ಪ್ರತಿಯೊಂದು ಮನಸ್ಸನು ಸಂತಸದ ಅಲೆಯಲ್ಲಿ ತೇಲುವಂತೆ ಮಾಡಿತು.  ಜಾತಿ- ಭೇದಗಳಿಲ್ಲದೇ ಜನರು ರಂಗ ಪಂಚಮಿ ಸಂಭ್ರಮದಲ್ಲಿ ತೇಲಾಡಿದರು.  ಬಸವ […]

ಮೊಸರ ನಾಡಿನಲ್ಲಿ ಹೋಳಿ ಆಚರಣೆಯಲ್ಲಿ ಬಣ್ಣದಲ್ಲಿ ಮಿಂದೆದ್ದು ಕುಣಿದ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ

ವಿಜಯಪುರ: ಜನರ ಮನಸ್ಸನ್ನು ರಂಗು ರಂಗೀನವಾಗಿಸುವ ಹಬ್ಬ ಹೋಳಿ ಹುಣ್ಣಿಮೆ.  ಈ ಹುಣ್ಣಿಮೆಯಾದ ಎರಡು ದಿನಗಳ ನಂತರ ಬಸವ ನಾಡು ವಿಜಯಪುರ ಜಿಲ್ಲೆಯ ಮೊಸರ ನಾಡು ಕೊಲ್ಹಾರದಲ್ಲಿ ಈ ಬಾರಿ ನಡೆದ ಬಣ್ಣದಾಟ ಗಮನ ಸೆಳೆಯಿತು. ಆಲಮಟ್ಟಿ ಜಲಾಷಯ ನಿರ್ಮಾಣದಿಂದ ಮುಳುಗಡೆಯಾಗಿರುವ ಹಳೆಯ ಕೊಲ್ಹಾರದಲ್ಲಿ ಈ ಹಿಂದೆ ಪರಂಪರಾಗತವಾಗಿ ಯಾವುದೇ ಭೇದ ಭಾವವಿಲ್ಲದೇ ಎಲ್ಲರೂ ಕೂಡಿಕೊಂಡು ಸಂಭ್ರಮದಿಂದ ಹೋಳಿ ಹಬ್ಬದ ಬಣ್ಣದಾಟ ಆಡುತ್ತಿದ್ದರು.  ಆದರೆ, ಕಳೆದ ಹಲವು ವರ್ಷಗಳಿಂದ ಸಾಮೂಹಿಕವಾಗಿ ನಡೆಯುವ ಈ ಆಚರಣೆಗೆ ಮರೆಯಾಗಿತ್ತು. ಈ […]

ಯುಗಾದಿ ಹಬ್ಬದ ಅಂಗವಾಗಿ ಬಸವ ನಾಡಿನಿಂದ ಶ್ರೀಶೈಲ ಶ್ರೀಮಲ್ಲಿಕಾರ್ಜುನ ಜಾತ್ರೆಗೆ ವಿಶೇಷ ಸಾರಿಗೆ ವ್ಯವಸ್ಥೆ

ವಿಜಯಪುರ: ಯುಗಾದಿ(Ugadi) ಅಂಗವಾಗಿ ಉತ್ತರ ಕರ್ನಾಟಕದ(North Karnataka) ಅದರಲ್ಲೂ ವಿಜಯಪುರ ಜಿಲ್ಲೆಯಿಂದ(Vijayapura District) ಸಾವಿರಾರು ಭಕ್ತರು(Devotees) ನೆರೆ ರಾಜ್ಯದ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ(Shrishail Mallayya Darshana) ತೆರಳುತ್ತಾರೆ.  ಪಾದಯಾತ್ರೆಯ(Padayatre) ಮೂಲಕವೂ ಭಕ್ತರು ದೇವರ ದರ್ಶನಕ್ಕೆ ತೆರಳುತ್ತಾರೆ.  ಶ್ರೀಶೈಲದಲ್ಲಿ ಮಾ. 25 ರಿಂದ ಏ. 4ರ ವರೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ(Festival) ನಡೆಯುತ್ತೆದೆ.  ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ತೆ ಯಾತ್ರಾರ್ಥಿಗಳಿಗಾಗಿ ವಿಶೇಷ ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ ಎಂದು […]

ಬಸವ ನಾಡಿನಲ್ಲಿ ಹೋಳಿ ಸಂಭ್ರಮ- ಕಾಮಣ್ಮನ ಮೂರ್ತಿ ದಹಿಸಿ ಶ್ರೀಶೈಲಕ್ಕೆ ಪಾದಯಾತ್ರೆ ತೆರಳಿದ ಮಲ್ಲಯ್ಯನ ಭಕ್ತರು- ಹಾಡು ಹೇಳಿ ರಂಜಿಸಿದ ಮಾಜಿ ಸಚಿವ

ವಿಜಯಪುರ: ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯಲ್ಲಿ ಬಣ್ಣಗಳ ಹಬ್ಬ ಹೋಳಿ(Colour Festival Holi) ಸಂಭ್ರಮ ಮನೆ ಮಾಡಿದೆ.  ಹೋಳಿ ಹಬ್ಬದ ಅಂಗವಾಗಿ ಆಚರಿಸಲಾಗುವ ಕಾಮಣ್ಣನ(Kamanna) ಮೂರ್ತಿ ದಹನ ಕಾರ್ಯಕ್ರಮ(Idol Brun Programme) ಜಿಲ್ಲಾದ್ಯಂತ ತಡರಾತ್ರಿಯವರೆಗೆ ವಿಜೃಂಭಣೆಯಿಂದ ನಡೆಯಿತು.  ಗಲ್ಲಿಗಲ್ಲಿಗಳಿಂದ ಹಿಡಿದು ಹಳ್ಳಿಯಿಂದ(Vijjages) ನಗರ ಪ್ರದೇಶಗಳ(Cities) ವರೆಗೆ ನಡೆದ ಆಚರಣೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೋಂಡರು.  ಮಕ್ಕಳಿಂದ ಹಿಡಿದು ಯುವಕರು ಮತ್ತು ಹಿರಿಯರೂ ಕೂಡ ಹೋಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು.  ಗುರುವಾರ ತಡರಾತ್ರಿಯವರೆಗೆ ನಾನಾ ಕಡೆಗಳಲ್ಲಿ ಹೋಳಿಯನ್ನು ಆಚರಿಸಲಾಯಿತು.  […]